09/04/2026
ಕರ್ಕಿ ನವ ಚೇತನ ಫೌಂಡೇಶನ್ ಮತ್ತು ಶಿರೂರು ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ & ಶ್ರೀ ಆದಿಶಕ್ತಿ ಮಹಿಳಾ ಮಂಡಳ ಇವರ ಸಂಯುಕ್ತ ಆಶ್ರಯದಲ್ಲಿ ಜಯ ಪ್ರಿಯ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ಅವರ ವತಿಯಿಂದ ರವಿವಾರ 05/04/2026 ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುತ್ತದೆ, ಈ ಶಿಬಿರದಲ್ಲಿ ಸುಮಾರು 60 ಕ್ಕಿಂತ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ಮಾಡಿ ತುಂಬಾ ವ್ಯವಸ್ಥಿತವಾಗಿ ಮತ್ತು ಉತ್ತಮವಾಗಿ ಕಣ್ಣು ತಪಾಸಣೆ ಮಾಡಿ ಅವರಿಗೆ ಕಣ್ಣಿನ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಿದ್ದು ತುಂಬಾ ಅನುಕೂಲವಾಗಿರುತ್ತದೆ, ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಸರ್ವ ಸದಸ್ಯರು ಶಿರೂರ್ ಪಾರ್ಕ್ ಸುತ್ತಮುತ್ತಲಿನ ಜನರು & ಆಸ್ಪತ್ರೆಯ ವೈದ್ಯರ ತಂಡ ಮತ್ತು ಸಿಬ್ಬಂದಿ ವರ್ಗದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು.