ನಮ್ಮ ಸಂಸ್ಥೆಯ ಪ್ರವರ್ತಕರಾದ ಗೀತಾ ಮತ್ತು ಆನಂದ ಅವರ ಕನಸಿನ ಕೂಸಾದ ಗೀತಾನಂದ ಇದು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನಾಣ್ಣುಡಿಯಂತೆ ಸಮಾಜದಿಂದ ಪಡೆದದ್ದನು ಸಮಾಜಕ್ಕೆಮರಳಿ ನೀಡುವ ನಮ್ಮ ಸಾಮಾಜಿಕ ಕಳಕಳಿಯ ಅನುಷ್ಠಾನದ ಉದ್ದೇಶದಿಂದ 2010 ರಲ್ಲಿ ಜನನವಾಯಿತು. ತಂದೆಯ ಸ್ಥಾನದಲ್ಲಿ ನಿಂತು ಅದನ್ನು ಸಾಕಿ ಸಲುಹಿ ಅಕ್ಕರೆ ಆರೈಕೆಯಿಂದ ಬೆಳಸಿದ ಕೀರ್ತಿ ಜನತಾ ಫಿಶ್ ಮೀಲ್ ಅಂಡ್ ಆಯಿಲ್ ಪ್ರಾಡಕ್ಟ್ಸ್ ಸಲ್ಲುತದೆ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಅನ್ನುವಂತೆ ತನ್ನ ಈ ೭ ವರುಷದ ಕಿರು ಅವಧಿಯ
ಲ್ಲಿ ಅದು ಬೆಳೆದಿರುವ ರೀತಿ ಪ್ರಶಂಸನೀಯ.
ತಾನು ಬೆಳೆದು ತನ್ನವರು ಬೆಳೆಯಲಿ ಅನ್ನುವ ನಿಟ್ಟಿನಿಂದ ನೆಟ್ಟ ಸಸಿ ಗೀತಾನಂದ ಈ ಸಣ್ಣ ಪ್ರಾಯದಲ್ಲೇ ಉಸಿರಾಟಕ್ಕೆ ಶುದ್ಧ ಗಾಳಿ ನೀಡುವ ನಿಟ್ಟಿನಲ್ಲಿ ಅನೇಕ ರೀತಿಯ ಸಸಿಗಳನ್ನು ತನ್ನ ಸುತ್ತ ಮುತ್ತಲಿನ ಪರಿಸರ ತನ್ನ ನರ ಹೊರೆಯ ಶಾಲೆ ಕಾಲೇಜುಗಳಲ್ಲಿ ಬೆಳಸಿ. ಕೆಲವು ಕಡೆ ಅವುಗಳಿಗೆ ಪೋಷಣೆಯನ್ನು ಸಹ ಮಾಡಿಕೊಂಡು ಬಂದಿದೆ.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಉತ್ತಮ ಆರೋಗ್ಯವೆಂಬ ಹಣ್ಣು ಸಿಗಬೇಕು ಅನ್ನೋ ದೃಷ್ಟಿ ಇಂದ ಆರೋಗ್ಯದ ಬಗ್ಗೆ ಅರಿವು ಉಚಿತ ವೈದ್ಯಕೀಯ ಉಪಕರಣ ಮತ್ತು ವೈದ್ಯಕೀಯ ನೆರವನ್ನ ಅಗತ್ಯಕ್ಕೆ ಅನುಗುಣವಾಗಿ ಕೊಡುತ್ತಿದೆ.
ನಮ್ಮ ಊರಿನ ವಿದ್ಯಾರ್ಥಿಗಳಿಗೆ ನೆರವು ಆಗೋ ದೃಷ್ಟಿ ಇಂದ ಕಲಿಕೆಗೆ ವಿದ್ಯಾರ್ಥಿ ವೇತನ, ಕಲೆ ಕ್ರೀಡೆಗೆ ಪ್ರೋತ್ಸಹ ಧನ ಅತಿಥಿ ಅಧ್ಯಾಪಕರಿಗೆ ಗೌರವ ಧನ ಅನ್ನೋ ಚೈತನ್ಯ ಕೊಟ್ಟು ಬಿಸಿಲಿನಿಂದ ಬಳಲಿ ನೆರಳಿಗೆ ಬಂದಾಗ ಸಿಗುವ ಚೈತನ್ಯವನ್ನು ಕೊಡುತ್ತಿದೆ.
ತನ್ನ ಊರಲ್ಲಿ ನಡೆಯುವ ಕಲೆ ಕ್ರೀಡೆ ಸಾಂಸ್ಕ್ರತಿಕ ಹಾಗು ಧಾರ್ಮಿಕ ಕಾರ್ಯಗಳಲ್ಲಿ ಇದು ಬಹು ಮಹತ್ತರವಾದ ಕೊಡುಗೆಯೆನ್ನು ಕೊಟ್ಟು ನಮ್ಮೂರಿನ ಅಪರೂಪದ ಕಲೆ ಸಂಸ್ಕೃತಿ ಕ್ರೀಡೆ ಇವುಗಳ್ಳನು ಮುಂದಿನ ಜನಾಂಗಕ್ಕೆ ತಲುಪಿಸುವ ಬಲು ಅಪರೂಪದ ಕೆಲಸಕ್ಕೆ ಸಾಕ್ಷಿ ಆಗುತ್ತಿದೆ.
ತನ್ನ ಊರಿನ ಕಾನೂನು ಪಾಲಕರ ಕರೆಗೆ ಕಿವಿಗೊಟ್ಟು ಅವರ ಕಾನೂನು ಪಾಲನೆಗೆ ಅತಿ ಅವಶ್ಯವಾದ CCTV , ಗಣಕಯಂತ್ರ ಮತ್ತು ವೇಗ ನಿಯಂತ್ರಕ ಗೇಟ್ಗಳ ಕೊಡುಗೆ ಮತ್ತು ನಿರ್ವಹಣೆಯೊಂದಿಗೆ ಕಾನೂನು ಪಾಲನೆಯಲ್ಲೂ ತನ್ನ ಸಹಭಾಗಿತ್ವದ ಹೆಮ್ಮೆ ಇದರದ್ದು.
ಇದೆಲ್ಲದರ ಜೊತೆಯಲ್ಲಿ ಇನ್ನು ಎಷ್ಟೋ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಇದು ತನ್ನ ಸಹಾಯ ಹಸ್ತವನ್ನು ಚಾಚುತ್ತ ತನ್ನ ನಂಬಿ ಬಂದ ಎಲರಿಗೂ ನೆರಳನ್ನು ಕೊಡುತ್ತ ತನ್ನ ಹೆಸರಿನಲ್ಲಿರುವ ಆನಂದವನ್ನು ಇದರ ಉಸಿರಿನಲ್ಲಿ ಇರಿಸಿಕೊಂಡು ಸ್ವಸ್ಥ ಸಮಾಜಕ್ಕಾಗಿ ಸುಂದರವಾದ ನಾಳೆಯ ಕನಸುಗಳನ್ನು ಕಾಣುತ್ತ. ಹಳೆ ಬೇರು ಹೊಸ ಚಿಗರು ಕೂಡಿರಲು ಮರ ಸೊಗಸು ಎನ್ನುವ ಕವಿ ವಾಣಿಯಂತೆ ತನ್ನ ಹಳೆಯ ಬೇರೆಗಳನ್ನು ಇನ್ನು ಸದೃಢ ಗೊಳಿಸಿ ಕೊಳ್ಳುತ್ತಾ ಹೊಸ ಚಿಗುರಿನ ನಿರೀಕ್ಷೆಯೊಂದಿಗೆ ಮುನ್ನಡಿ ಇಡುತಿದೆ....