Indian Army Recruitment UDUPI

Indian Army Recruitment UDUPI RECRUITMENT INFORMER™
● ಕನ್ನಡ ಮೊದಲು
● Social Services
● General Awareness
● Defense News Update
● Defense Job Alert
● Identifying The Defense Aspirant

Address

Kundapura Main Road
Udupi
,KARNATAKA,

Alerts

Be the first to know and let us send you an email when Indian Army Recruitment UDUPI posts news and promotions. Your email address will not be used for any other purpose, and you can unsubscribe at any time.

Contact The Organization

Send a message to Indian Army Recruitment UDUPI:

Share

ನಮ್ಮ ಕಥೆ | ನಮ್ಮ ಕನಸು

ದೇಶ ರಕ್ಷಿಸುವ ಧೀರ ಯೋಧರು ಎಂದರೆ ನೆನಪಿಗೆ ಬರುವ ಜಿಲ್ಲೆಯಾಗಿರುವ ಕೊಡಗು, ಪಂಜಾಬ್ ಹೊರತು ಪಡಿಸಿದಂತೆ ದೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಸುಮಾರು 8 ಸಾವಿರದಷ್ಟು ಯೋಧರನ್ನು ನೀಡಿದೆ. ಕೊಡಗು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಮೂಲಕ ಮಹಾನ್ ಯೋಧರನ್ನು ಕೊಡುಗೆಯಾಗಿ ನೀಡಿದ ವೀರರ ಜಿಲ್ಲೆ. ಕಳೆದ ದಶಕದವರೆಗೂ ಕೊಡಗಿನಲ್ಲಿ ಸೈನ್ಯಕ್ಕೆ ಮಕ್ಕಳನ್ನು ಕಳುಹಿಸುವುದೆಂದರೇ ಅದೊಂದು ಪ್ರತಿಷ್ಠೆ, ಹೆಮ್ಮೆಯಾಗಿತ್ತು. ಹೀಗಾಗಿ ಕೊಡಗಿನ ಪ್ರತಿ ಮನೆಯ ಒಬ್ಬರಾದರೂ ಸೇನೆಯಲ್ಲಿ ದೇಶ ರಕ್ಷಣೆಯ ಕರ್ತವ್ಯದಲ್ಲಿದ್ದವರು ಕಂಡುಬರುತ್ತಿದ್ದರು. ಕೊಡಗಿನವರ ಮನೆಗಳಲ್ಲಿ ದೇಶ ರಕ್ಷಣೆಯ ಬಗ್ಗೆ ಒಂದಿಲ್ಲೊಂದು ವೀರತೆಯ ಕಥೆಗಳಿರುತ್ತಿದ್ದವು. ಆದರೀಗ, ಕಾಲ ಬದಲಾದಂತೆ ಆಧುನೀಕತೆಯ ಗಾಳಿಯೊಂದಿಗೆ ಜಾಗತೀಕರಣದ ಪ್ರಭಾವವೂ ಹೆಚ್ಚಿದ ಪರಿಣಾಮ ಕೊಡಗಿನಲ್ಲಿಯೇ ಯೋಧರ ಸಂಖ್ಯೆ ಕಡಿಮೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸೇನೆಗೆ ಆಯ್ಕೆ ಪ್ರಕ್ರಿಯೆ ನಡೆದಾಗಲೆಲ್ಲಾ ಕೊಡಗಿನ ಮಕ್ಕಳು ಸೇನಾ ಆಯ್ಕೆ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿಲ್ಲ. ಹಾಜರಾದವರಲ್ಲಿಯೂ ಬಹುತೇಕರು ಸೇನೆಗೆ ಆಯ್ಕೆಯಾಗುತ್ತಿಲ್ಲ.

ದೇಶದ ರಕ್ಷಣೆಗಾಗಿ ಸೈನಿಕನಾಗಿ ಸೇವೆ ಮಾಡುತ್ತಿರುವ ಮಗನ ಬಗ್ಗೆ ಹೆಮ್ಮೆ ಪಡುತ್ತಿದ್ದ ಹೆತ್ತವರು ಒಂದು ಕಾಲದಲ್ಲಿ ಇದ್ದರೆ, ಇಂದು ಎಂಜಿನಿಯರಿಂಗ್, ಡಾಕ್ಟರ್, ಸಾಫ್ಟ್‌ವೇರ್ ಹುದ್ದೆಗಳನ್ನು ಆರಿಸುವಂತೆ ಉತ್ತೇಜಿಸುವ ಹೆತ್ತವರು ಹೆಚ್ಚಾಗಿದ್ದಾರೆ. ರಾಜ್ಯದ ರಾಯಚೂರು, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಿಂದ ಹೆಚ್ಚು ಮಂದಿ ಸೇನೆ ಸೇರ್ಪಗೊಳ್ಳುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಸೇನೆಗೆ ಸೇರುವವರು ಸಂಖ್ಯೆ ಶೇ.1ರಷ್ಟು ಮಾತ್ರ. ಇದಕ್ಕೆ ಕಾರಣ ಹೆತ್ತವರು ಒಂದೆಡೆಯಾದರೆ, ಜನರಲ್ಲಿ ಸೈನಿಕ ಹುದ್ದೆಯ ಬಗ್ಗೆ ಜಾಗೃತಿ ಕಡಿಮೆ ಇರುವುದು. ಸೈನಿಕ ಹುದ್ದೆ ಎಂದರೆ ಕೇವಲ ಗಡಿ ಪ್ರದೇಶಕ್ಕೆ ಹೋಗಿ ಶತ್ರು ಸೈನ್ಯದೊಡನೆ ಕಾದಾಡುವುದು ಎಂಬ ಭಾವನೆಯಿದೆ. ಆದರೆ, ದೇಶದ ರಕ್ಷಣೆಯಲ್ಲಿ ತೊಡಗಿಕೊಳ್ಳಲು ಬೇರೆ ಬೇರೆ ಕ್ಷೇತ್ರಗಳಿವೆ ಎಂಬ ಮಾಹಿತಿ ಹೆಚ್ಚಿನವರಿಗೆ ಇಲ್ಲವಾಗಿದೆ

ಜಪಾನ್, ಚೀನಾ, ಅಮೆರಿಕದಲ್ಲಿ ಕಡ್ಡಾಯವಾಗಿ ಒಂದು ಮನೆಯ ಒಬ್ಬ ಸದಸ್ಯ ಸೈನಿಕ ಹುದ್ದೆಗೆ ಸೇರ್ಪಡೆಗೊಳ್ಳಬೇಕು ಎಂಬ ನಿಯಮವಿದೆ. ಆದ್ದರಿಂದ ಅಲ್ಲಿನ ಸೈನಿಕರ ಸಂಖ್ಯೆ ಜಾಸ್ತಿ ಇದೆ. ಪದವಿ, ಪಿಯುಸಿಯಲ್ಲಿ ಎನ್‌ಸಿಸಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸೈನಿಕ ರ್ಯಾಲಿಯಲ್ಲಿ ಮೊದಲ ಪ್ರಾಶಸ್ತ್ಯವಿರುತ್ತದೆ. ಸೇನೆಯಲ್ಲಿ ಕೇವಲ 15 ವರ್ಷ ದುಡಿದರೆ ಸಾಕು ನಂತರ ನಿವೃತ್ತಿ ಪಡೆದು, ಬ್ಯಾಂಕ್, ಸರ್ಕಾರಿ ಕೆಲಸಗಳಲ್ಲಿ ಸೇರಿಕೊಳ್ಳಬಹುದು. 'ಶತ್ರುಗಳು ದೇಶಕ್ಕೆ ನುಗ್ಗುತ್ತಿರುವ ಕುರಿತು ತಿಳಿದುಕೊಳ್ಳಲು ಹಾಗೂ ದಾಳಿ ನಡೆಸಲು ಅನೇಕ ತಂತ್ರಜ್ಞಾನದ ವ್ಯವಸ್ಥೆಯಿದೆ. ಸೈನಿಕ ಎಂದರೆ ಕೇವಲ ಬಂದೂಕು ಹಿಡಿದು ಶತ್ರು ಸಂಹಾರ ನಡೆಸುವುದಲ್ಲ ದೇಶದ ಭದ್ರತೆಗೆ ಅನುಗುಣವಾಗಿರುವ ಅನೇಕ ಕ್ಷೇತ್ರದಲ್ಲಿ ಹುದ್ದೆ ಪಡೆಯಲು ಅವಕಾಶವಿದೆ ಇತ್ತೀಚಿನ ಶಿಕ್ಷಣದಲ್ಲಿ ದೇಶದ ರಕ್ಷಣೆ, ಸೈನಿಕ ಹುದ್ದೆಯ ಬಗ್ಗೆ ಸರಿಯಾದ ಜಾಗೃತಿ ಮತ್ತು ಮಾಹಿತಿ ಮಕ್ಕಳಿಗೆ ಸಿಗುತ್ತಿಲ್ಲ. ಹೆತ್ತವರು ಮಕ್ಕಳಿಗೆ ಇಷ್ಟವಿರಲಿ ಇಲ್ಲದಿರಲಿ ಎಂಜಿನಿಯರಿಂಗ್, ಡಾಕ್ಟರ್ ಹುದ್ದೆಗೆ ಕಳುಹಿಸುತ್ತಾರೆ. ಸೈನ್ಯದಲ್ಲಿ ದೇಶದ ಎಲ್ಲ ಭಾಗದ ಜನರು ಕಾರ್ಯನಿರ್ವಹಿಸುತ್ತಾರೆ. ಆದರೆ ಮಂಗಳೂರಿನಿಂದ ಯಾರೊಬ್ಬರು ಇರುವುದಿಲ್ಲ

ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸೈನ್ಯಕ್ಕೆ ಸೇರುವುದಕ್ಕೆ ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕರ್ನಾಟಕ ನಿಗದಿ ಮಾಡಿದ ಕೋಟಾ ಕಳೆದ ಅನೇಕ ವರ್ಷಗಳಿಂದ ಭರ್ತಿಯಾಗುತ್ತಲೇ ಇಲ್ಲ. ಅದರಲ್ಲೂ ಉಡುಪಿ ಜಿಲ್ಲೆಯಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಬಹಳ ಕಡಿಮೆಯಾಗಿಬಿಟ್ಟಿದೆ. ಅಂದ ಹಾಗೇ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ದೇಶದ 30,000 ಸೈನಿಕರಲ್ಲಿ ಕರ್ನಾಟಕದ ಕೆಲವೇ ಮಂದಿ ಇದ್ದರು, ಉಡುಪಿ ಜಿಲ್ಲೆಯ ಒಬ್ಬನೇ ಒಬ್ಬ ಇದ್ದಿರಲಿಲ್ಲ.