Homedoctor Foundation

Homedoctor Foundation Home Doctor Foundation is a non government organisation which was formed by the group of people from Udupi.

Home doctor foundation serves the people in need of help and provides them financial help .

22/04/2026

🙏🙏

22/04/2026

22/04/2026

25/03/2026

👌👌👌

14/02/2026
14/02/2026

14/02/2025...swarga ashram,kolalagiri,udupi

13/02/2026

ನಮ್ಮ ಊಟ... ಸ್ವರ್ಗ ಆಶ್ರಮ(13/02/2026)

11/11/2025

*674. 'ತುಂಡು ಬಾಲದ ಹಲ್ಲಿ'......*🥱🥱
-----------------------------
*ಸಣ್ಣಕತೆ:ಡಾ. ಶಶಿಕಿರಣ್ ಶೆಟ್ಟಿ*
*ಹೋಂ ಡಾಕ್ಟರ್ ಫೌಂಡೇಶನ್*
*ಉಡುಪಿ*
*9945130630(whatsaap)*
--------------------------------------
🟥🟦🟩🌹🟩🟦🟥

*ಅದು "ಸ್ವರ್ಗ ಗಾರ್ಡನ್". ಅದೊಂದು ನಗರದ ದೊಡ್ಡ ಮದುವೆ ಹಾಲ್.. ಅಲ್ಲಿ ಶ್ರೀಮಂತರ ಅದ್ದೂರಿ ಮದುವೆ ಸಮಾರಂಭಗಳು ನಡೆಯುತ್ತಿತ್ತು..ಅಂದು ನಗರದ ಪ್ರಖ್ಯಾತ ವ್ಯಾಪಾರಿಯೊಬ್ಬರ ಮಗಳ ಮದುವೆ ಸಮಾರಂಭ ನಡೆಯುತ್ತಿತ್ತು . 4000 ಗಣ್ಯರಿಗೆ ಆಮಂತ್ರಣವಿತ್ತು.*

*ಅಲ್ಲಿ ಒಂದು ಪ್ಲೇಟ್ ಊಟಕ್ಕೆ ರೂ 4,000 ನಿಗಧಿಯಾಗಿತ್ತು😱... ಗಣ್ಯರೆಲ್ಲರೂ ಸೇರಿದ್ದರು.. ಅಷ್ಟರಲ್ಲಿ ಮದುಮಗಳು ಸ್ಟೇಜ್ ಅಲ್ಲಿ ಕಿಟಾರನೆ ಕಿರುಚಿಕೊಂಡಳು!.. ಕಿರುಚುವಿಕೆ ಎಷ್ಟೊಂದು ಜೋರಾಗಿತ್ತೆoದರೆ ಅಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮ ಗಳನ್ನು ಒಂದು ಕ್ಷಣ ನಿಲ್ಲಿಸಲಾಯಿತು😱. ಮದುಮಗ ಹುಡುಗಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಸಮಾಧಾನಿಸುತಿದ್ದ!.. ಎಲ್ಲರಿಗೂ ಆತಂಕವಿತ್ತು ಇಲ್ಲೇನಾಗಿದೆ ಎನ್ನುವ ಕುತೂಹಲ ಇತ್ತು ಎಲ್ಲರಲ್ಲಿ, ಒಂದರೆ ಕ್ಷಣ ಎಲ್ಲರೂ ಮೌನವಾಗಿದ್ದರು.. ಪೂರ್ತಿ ಹಾಲ್ ಸ್ತಬ್ದವಾಗಿತ್ತು ..... 😱😱.*

*ಅಲ್ಲಿ ಸತ್ತ ಹಲ್ಲಿಯೊಂದು ಮದುವೆ ಹುಡುಗಿಯ ಭುಜದ ಮೇಲೆ ಬಿದ್ದಿತ್ತು!, ದೀಪದ ಬೆಳಕಿಗೋ, ಯಾವುದೊ ಕಾರಣದಿಂದ ಅಲ್ಲಿದ್ದ ಹಲ್ಲಿ ಯೊಂದು ಕೆಳಗೆ ಬಿದ್ದಿತ್ತು ಅಷ್ಟೇ.ಮೊದಲಿನಿಂದಲೂ ಹಲ್ಲಿ ಅಂದರೆ ಆಕಾಶ ಭೂಮಿ ಒಂದು ಮಾಡುತಿದ್ದ ಹುಡುಗಿ ಹೆದರಿ ನಡುಗುತಿದ್ದಳು. ಸಂಘಟಕರು ಅಲ್ಲೇ ಇದ್ದ ವಾಚ್ ಮ್ಯಾನ್ ಅನ್ನು ಕರೆದರು ಸತ್ತ ಹಲ್ಲಿಯನ್ನು ಹೊರಗೆ ಎಸೆಯುವಂತೆ ಅವನ ಕೈಗೆ ನೀಡಲಾಯಿತು...ಒಳಗೊಳಗೇ ನಗುತ್ತಿದ್ದ ಸುಮಾರು 35 ವರ್ಷದ ಗುಂಗುರು ಕೂದಲಿನ ವಾಚ್ ಮ್ಯಾನ್ ಹಲ್ಲಿಯನ್ನೊಮ್ಮೆ ನೋಡಿದ.. ಪಾಪ ಸತ್ತಿತ್ತು ಹಲ್ಲಿ!... ಅದರ ಬಾಲ ಅದಾಗಲೇ ತುಂಡಾಗಿತ್ತು!.... ಅಲ್ಲಿಗೆ ಭಯದ ವಾತಾವರಣ ಹಾಸ್ಯ ವಾಗಿ ಬದಲಾಯಿತು.. ಎಲ್ಲರೂ ನಕ್ಕು ವಿಷಯ ಮರೆತರು.. ಮದುವೆ ಗೌಜಿ ಮತ್ತೆ ಆರಂಭವಾಗಿತ್ತು..... ಅಷ್ಟರಲ್ಲಿ ಅಲ್ಲಿ ಮತ್ತೊಂದು ಅವಘಡ ನಡೆದೇ ಬಿಟ್ಟಿತ್ತು😱....*

*ಮದುವೆಯ ಊಟ ನಡೆಯುತ್ತಿದ್ದಾಗ ಮಧ್ಯಾಹ್ನ ಹೊತ್ತು ಇಬ್ಬರು ಸೆಕ್ಯೂರಿಟಿ ಯಾವರು ಒಳಗೆ ಬಂದು ಏಕಾ ಏಕಿ ಆ ಭಿಕ್ಷುಕ ಕುಟುಂಬ ದ ಕೈಯ್ಯಲ್ಲಿದ್ದ ಪ್ಲೇಟ್ ಗಳನ್ನು ಕಿತ್ತುಕೊಂಡರು!.. ಹರಿದ ಅಂಗಿಯ ವ್ಯಕ್ತಿ, ಆತನ ಹರಿದ ಸೀರೆಯ ಹೆಂಡತಿ, ಮತ್ತೆರಡು ಅಂಗಿ ಹಾಕದ ಚಿಕ್ಕ ಚಿಕ್ಕ ಮಕ್ಕಳನ್ನು ಅಲ್ಲಿಂದ ಧರದರನೆ ಹೊರಗೆ ಎಳೆದೊಯ್ಯಲಾಗಿತ್ತು😔.. ಅಲ್ಲಿ ಆತ ಇನ್ನೂ ಪ್ಲೇಟ್ ಹಿಡಿದಿರಲಿಲ್ಲ, ಆಕೆಯ ಕೈಯ್ಯಲ್ಲಿ ಕಾಲಿ ಪ್ಲೇಟ್ ಇದ್ದರೆ, ಮಕ್ಕಳ ಕೈಯ್ಯಲ್ಲಿದ್ದ ಪ್ಲೇಟ್ ಅಲ್ಲಿ ವಿವಿಧ ಭಕ್ಷ ಭೋಜ್ಯ ಗಳಿದ್ದವು, ಆ ಚಿಕ್ಕ ಮಗು ತನ್ನ ಸಿಂಬಳ ದ ಮೂಗನ್ನು ಒಂದು ಕೈ ಇಂದ ಉಜ್ಜುತಿದ್ದರೆ ಇನ್ನೊಂದು ಕೈ ಮುಷ್ಟಿ ಒಳಗೆ ಆ ಗುಲಾಬ್ ಜಾಮೂನ್ ಹಿಡಿದಿತ್ತು.. ಸೆಕ್ಯೂರಿಟಿ ಯವರು ಎಲ್ಲಾ ಪ್ಲೇಟ್ ಗಳನ್ನು ಅಲ್ಲೇ ಕೆಳಗೆ ಹಾಕಿಸಿ ಬೆತ್ತದಿಂದ ಹೊಡೆಯುತ್ತಾ, ಅಸಭ್ಯವಾಗಿ ಬೈಯುತ್ತಾ ಎಲ್ಲರನ್ನೂ ಅಲ್ಲಿಂದ ಹೊರಗೆ ಓಡಿಸಿದರು😔... ಎಲ್ಲರೂ "ಡಿಸ್ಗಸ್ಟಿಂಗ್" ಎನ್ನುತ್ತಾ ಮೂಗು ಮುರಿದರೆ... ಆ ಮಗು ಮಾತ್ರ ಒಂದು ಕೈಯಿಂದ ಬೆತ್ತದ ಪೆಟ್ಟು ಬಿದ್ದ ಚಡ್ಡಿ ಯ ಭಾಗ ವನ್ನು ಉಜ್ಜುತ್ತಾ, ಕೈ ಯಲ್ಲಿ ತೊಟ್ಟಿಕ್ಕುತ್ತಿದ್ದ ಜಾಮೂನಿನ ಸಕ್ಕರೆ ನೀರನ್ನು ನಕ್ಕುತಿತ್ತು, ಪಾಪ ಮದ್ಯಾಹ್ನ ಗಂಟೆ 1 ದಾಟಿದ್ದರಿಂದ ಹಸಿದಿತ್ತು ಮಗು😔. ಸೆಕ್ಯೂರಿಟಿ ಯವರು ಕಣ್ಣು ಕೆಂಪು ಮಾಡಿ ಅದೇ ಗುಂಗುರು ಕೂದಲಿನ ವಾಚ್ ಮ್ಯಾನ್ ಅನ್ನು ಕೆಕ್ಕರಿಸಿ ನೋಡುತಿದ್ದರು.. ಕಾರ್ಯಕ್ರಮ ಮುಗಿದ ಬಳಿಕ ನನಗೇನೋ ಗ್ರಹಚಾರ ಕಾದಿದೆ ಎನ್ನುವುದು ಆತನಿಗೆ ಸ್ಪಷ್ಟವಾಗಿ ಗೊತ್ತಾಗಿತ್ತು.. 2000 ಜನರ ಮದ್ಯದಲ್ಲಿ ಈ 4 ಜನರು ಗೊತ್ತಾಗಲಿಕ್ಕಿಲ್ಲ ಪಾಪ ಹಸಿದಿದ್ದಾರೆ ತಿಂದು ಹೊಗಲಿ ಎಂದು ಒಳಗೆ ಬಿಟ್ಟಿದ್ದು ತಪ್ಪಾಗಿದ್ದು ಎಲ್ಲಿ? ಎಂದೂ ಆತ ಪದೇ ಪದೇ ಯೋಚಿಸುತಿದ್ದ..ಹಾ....ಆ cc tv ಯ ವಿಷಯ ಆತ ಪದೇ ಪದೇ ಮರೆಯುತಿದ್ದ 🥺......*

*ಆ ಹಸಿದ ಮಗುವನ್ನೂ ನಿರ್ದಾಕ್ಷಿಣ್ಯ ವಾಗಿ ಊಟ ಕೊಡದೆ ಓಡಿಸಿದ್ದು ಆತನಿಗೇಕೋ ಸರಿ ಬಂದಿರಲಿಲ್ಲ...ಅಷ್ಟರಲ್ಲಿ ಅಲ್ಲೊಂದು ದೊಡ್ಡ ಆಚಾತುರ್ಯ ನಡೆದೇ ಬಿಟ್ಟಿತ್ತು!! 😱......*

*ಕೌಂಟರ್ ನಂಬರ್ 8 ರಲ್ಲಿ ಕಡಾಯಿ ಒಳಗೆ ಕುದಿಯುತಿದ್ದ ಸಾಂಬಾರ್ ಒಳಗೆ*
*ಒಂದು ಹಲ್ಲಿ ಬಿದ್ದಿತ್ತು!.. ಅದನ್ನು ನೋಡಿದ ಅಲ್ಲಿ ಯಾರೋ ಗಲಾಟೆ ಎಬ್ಬಿಸಿದ್ದರು ಗಲಾಟೆ ಜೋರು ಜೋರಾದಾಗ ಹಾಲ್ ನ ಮ್ಯಾನೇಜರ್ ಅತ್ತ ದಾವಿಸಿದ್ದ. ಒಟ್ಟು 200 ಜನಕ್ಕೆ ಊಟದ ವ್ಯವಸ್ಥೆ ಇದ್ದ ಕೌಂಟರ್ ಅದಾಗಿತ್ತು.. ಅಲ್ಲಿದ್ದ ಅನೇಕರು ಹಲ್ಲಿ, ಹಲ್ಲಿ.. ಎಂದೂ ಪ್ಲೇಟ್ ಎಸೆದರೆ ಒಂದಷ್ಟು ಜನ ಕಡಾಯಿಗೆ ಬಿದ್ದ ಹಲ್ಲಿ ಯನ್ನು ಯೋಚಿಸಿ ಯೋಚಿಸಿ ವಾಂತಿ ಮಾಡಿ ಕೊಳ್ಳುತ್ತಿದ್ದರು🥺.. ತಕ್ಷಣ ಮ್ಯಾನೇಜರ್ ಅನೌನ್ಸ್ ಮಾಡಿದ ದಯವಿಟ್ಟು ಕ್ಷಮಿಸಿ ಹಲ್ಲಿ ಬಿದ್ದ ಕಾರಣ ಈ ಕೌಂಟರ್ ಅನ್ನು ಮುಚ್ಚುತ್ತಿದ್ದೇವೆ. ಇಲ್ಲಿಯ ಎಲ್ಲಾ 200 ಮಂದಿಗೂ ಪಕ್ಕದ ಕೌಂಟರ್ ಅಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ... ಎಂದೂ ಅಲ್ಲಿದ್ದ ಎಲ್ಲರನ್ನೂ ಸಮಾಧಾನ ಪಡಿಸಿ ಹೊರಗೆ ಕಳಿಸಿದ, ಆ ಗುಂಗುರು ಕೂದಲಿನ ವಾಚ್ ಮ್ಯಾನ್ ಅನ್ನು ಕರೆದವನೇ ಇಷ್ಟೂ ಊಟವನ್ನು ಹೊರಗೆ ಚೆಲ್ಲಿ ಬರಲು ಆದೇಶಿಸಿದ.. ಅಲ್ಲಿ 'ಸ್ವರ್ಗ ಗಾರ್ಡನ್' ನ ಮರ್ಯಾದೆ ಉಳಿಸುವುದು ಆ ಕ್ಷಣ ಮ್ಯಾನೇಜರ್ ಮಾಡಲೇ ಬೇಕಾದ ಕೆಲಸವಾಗಿತ್ತು.. ಜನರೆಲ್ಲಾರೂ ಚದುರಿದರು ಸಮಸ್ಯೆ ಒಂದು ಹಂತದಲ್ಲಿ ಬಗೆ ಹರಿದಿತ್ತು... ಅಷ್ಟರಲ್ಲಿ ಒಂದು ಟೆಂಪೋದೊಂದಿಗೆ ಅಲ್ಲಿಗೆ ಬಂದಿದ್ದ ಅದೇ ಗುಂಗುರು ಕೂದಲಿನ ವಾಚ್ ಮ್ಯಾನ್...*

*ಎಲ್ಲಾ ತುಂಬಿದ ಪಾತ್ರೆಗಳನ್ನು ಗಾಡಿಗೆ ತುಂಬುತಿದ್ದ, ಆ ಕೌಂಟರ್ ಅಲ್ಲಿದ್ದ ಅಷ್ಟೂ ಅಡುಗೆ ಯನ್ನು ಚೆಲ್ಲುವ ಆರ್ಡರ್ ಇತ್ತು ಅವನಿಗೆ 😔 .. ಅಷ್ಟರಲ್ಲಿ ಅಲ್ಲಿಗೆ ಬಂದ ಮ್ಯಾನೇಜರ್ ನೋಡು ಎಲ್ಲವನ್ನೂ ಕೊಂಡು ಹೋಗು ಆದರೆ ಆ ಹಲ್ಲಿ ಬಿದ್ದಿರುವ ಪಾತ್ರೆ ಮಾತ್ರ ಇಲ್ಲೇ ಇರಲಿ, cc ಟಿವಿಯಲ್ಲಿ ಪರೀಕ್ಷಿಸಬೇಕಿದೆ ಅಲ್ಲಿ ಹಲ್ಲಿ ಹೇಗೆ ಬಿತ್ತು ಯೆಂದು ಹೇಳಿದ. "ಸರಿ ಸರ್" ಎಂದವನೇ ಬಗೆ ಬಗೆಯ ಅನ್ನ,ಮೃಸ್ಟಾನ್ನ, ಗುಲಾಬ್ ಜಾಮೂನ್ ಎಲ್ಲವನ್ನೂ ಆ ಕೌಂಟರ್ ನಿಂದ ಕಾಲಿ ಮಾಡಿದವನೇ ಊರಿನ ಹೊರಗೆ ಹೋದ... ಅವನಿಗೆ ಗೊತ್ತಿತ್ತು ಆಗ ಊಟ ಕೊಡದೆ ಓಡಿಸಿದ ಆ ಭಿಕ್ಷುಕ ಜನರು ವಾಸಿಸುವ ಸ್ಲಂ ಅಲ್ಲೇ ಹತ್ತಿರವಿತ್ತು👍..*

*ಸ್ಲಂ ತಲುಪಿದವನೇ ಎಲ್ಲರಿಗೂ ಕರೆದ ಎಲ್ಲರಿಗೂ ಮೃಸ್ಟಾನ್ನ ಭೋಜನ ನೀಡಿದ... ಮನುಷ್ಯ ಒಂದು ಯೋಚಿಸಿದರೆ ಭಗವಂತನ ಲೆಕ್ಕಾಚಾರ ಬೇರೆಯದೆ ಇರುತ್ತದೆ ಎಂದೂ ಯೋಚಿಸುತಿದ್ದ ಆ ಗುಂಗುರು ಕೂದಲಿನ ವಾಚ್ ಮ್ಯಾನ್ ಆ ಹಸಿದ ಅಪ್ಪ,ಅಮ್ಮ ಮಕ್ಕಳು ಹೊಟ್ಟೆ ತುಂಬಾ ತಿನ್ನುವುದನ್ನೇ ನೋಡುತಿದ್ದ👌, ಮೊಬೈಲ್ ಅಲ್ಲಿ ಫೋಟೋ ಒಂದೆರಡು ಕ್ಲಿಕ್ಕ್ಕಸಿದ, ಅಲ್ಲಿ ಗುಲಾಬ್ ಜಾಮೂನ್ ಇಷ್ಟ ಪಟ್ಟಿದ್ದ ಮಗುವಿಗೆ ಒಂದಲ್ಲ 4,4 ಜಾಮೂನ್ ಕೊಟ್ಟ ಆ ಮಗು ಹಾಗೆ ಸ್ಲಂ ನ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡಿ ಮುಗಿಸಿದರು... ಇದೆಲ್ಲವನ್ನೂ ನೋಡಿ ಖುಷಿ ಪಟ್ಟವನೇ ಮತ್ತೆ ಕಾಲಿ ಪಾತ್ರೆಗಳೊಂದಿಗೆ "ಸ್ವರ್ಗ ಗಾರ್ಡನ್" ನತ್ತ ಹೊರಟ. ಅದೇ ಗುಂಗುರು ಕೂದಲ ವಾಚ್ ಮ್ಯಾನ್ ಇಲ್ಲಿ ತನಗಾದ ಸಂತೃಪ್ತಿ ನೆಮ್ಮದಿ ಇಂದ ಇಸ್ಟೊತ್ತು ಪೆಟ್ಟು ತಿಂದ ಹುಲಿ ಮೊದಲು ಕಚ್ಚುವುದು ನನಗೇ ಎನ್ನುವ ವಿಷಯವನ್ನು ಸಂಪೂರ್ಣವಾಗಿ ಮರೆತಿದ್ದ🥺.....*

*ಸ್ವರ್ಗ ಗಾರ್ಡನ್ ಗೆ ಕಾಲಿ ಪಾತ್ರೆ ಗಳೊಂದಿಗೆ ಬರುವಾಗ ಸಂಜೆ 3 ಗಂಟೆ ಆಗಿತ್ತು. ಅಲ್ಲಿ ಬೆಳಿಗ್ಗೆ ನ ಕಾರ್ಯಕ್ರಮ ದ cc ಟಿವಿ ಫೂಟೇಜ್ ವೀಕ್ಷಣೆ ಯಲ್ಲಿ ಎಲ್ಲರೂ ಬ್ಯುಸಿ ಇದ್ದರು... ಅಲ್ಲಿ ಆ ಹಲ್ಲಿ ಬಿದ್ದ ಪಾತ್ರೆ ಯಲ್ಲಿ ಸಾಂಬಾರ್ ಹಾಗೇ ಇತ್ತು ಹಲ್ಲಿ ಯನ್ನು ಎತ್ತಿ ತೆಗೆಯಲಾಗಿತ್ತು...ಅಲ್ಲೊಂದು ಕ್ಲೂ ಇತ್ತು...ಅದು ಬಾಲ ಇಲ್ಲದ ಹಲ್ಲಿಯಾಗಿತ್ತು😱!...*

*ಅಲ್ಲಿ cc tv ಫೂಟೆಜ್ ಅಲ್ಲಿ ಕಳ್ಳ ಸಿಕ್ಕಿ ಬಿದ್ದಿದ್ದ.. ಅದೇ ಹಲ್ಲಿ ಬೆಳಿಗ್ಗೆ ಸತ್ತು ಮದುಮಗಳ ಮೇಲೆ ಬಿದ್ದದ್ದು ಇಲ್ಲಿ ಸಾರಿನ ಬೊಗಣಿ ಯಲ್ಲಿತ್ತು😱!... ಅದೇ ಗುಂಗುರು ಕೂದಲ ವಾಚ್ ಮನ್ ತನ್ನ ಕೈ ಚಳಕ ತೋರಿದ್ದು ಅಲ್ಲಿ ಸ್ಪಷ್ಟವಾಗಿ ತಿಳಿದಿತ್ತು..ಮತ್ತೆ ಅಲ್ಲಿದ್ದ cc ಟಿವಿ ಯನ್ನು ಮರೆತಿದ್ದ! ಆತ.. ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ😱.....*

*ಎಲ್ಲರ ಕಣ್ಣು ಗಳು ಆ ಗುಂಗುರು ಕೂದಲಿನ ಹುಡುಗನ ಮೇಲೆ ಬಿದ್ದಿದ್ದವು.. ಒಮ್ಮೆ ಉಗುಳು ನುoಗಿದ ಹುಡುಗ..ಅವನ ಆಟ ಅಲ್ಲಿಗೆ ಮುಗಿದಿತ್ತು 😔😔.*

*ಮ್ಯಾನೇಜರ್ ಅವನ ಸಮೀಪ ಬಂದ, ಅದಾಗಲೇ 'ಸ್ವರ್ಗ ಗಾರ್ಡನ್' ಗೆ ಪೊಲೀಸ್ ವ್ಯಾನ್ ಬಂದಾಗಿತ್ತು.. ಮ್ಯಾನೇಜರ್ ಸಿಟ್ಟಲ್ಲಿ ಕಿರುಚಿದ "ನೋಡು ಅಲ್ಲಿ ವೇಸ್ಟ್ ಆಗಿದ್ದು 200 ಜನರ ಊಟ ಒಂದು ಪ್ಲೇಟ್ ಗೆ 4000 ದಂತೆ 8 ಲಕ್ಷ ಆಗುತ್ತದೆ ನಿನ್ನಲ್ಲಿ 2 ಒಪ್ಶನ್ ಇದೆ ಇಂದೇ 8 ಲಕ್ಷ ಅಲ್ಲಿ ರಿಸೆಪ್ಶನ್ ಅಲ್ಲಿ ಕಟ್ಟು ಇಲ್ಲ ಪೊಲೀಸ್ ಜೀಪ್ ಹತ್ತು, ನಾಳೆ ಬೆಳಿಗ್ಗೆ ಎಲ್ಲಾ ಪೇಪರ್ ಅಲ್ಲಿ ನಿನ್ನ ಫೋಟೋ ಜೊತೆ ನೀನು ಮಾಡಿದ ಘನಂದಾರಿ ಕೆಲಸ ಬರುತ್ತದೆ, ಸ್ಟೇಷನ್ ಒಳಗೆ ನಿನ್ನನ್ನು ರುಬ್ಬುತ್ತಾರೆ, ಮಾಡಿದ ಪಾಪದ ಕೆಲಸಕ್ಕೆ 2 ವರ್ಷ ಜೈಲಲ್ಲಿ ಇರಬೇಕು ನಿನ್ನ ಬಳಿ 5 ನಿಮಿಷ ಇದೆ 2 ರಲ್ಲಿ ಒಂದನ್ನು ಆರಿಸಿಕೋ ಮ್ಯಾನೇಜರ್ ನ ಕೂಗು ಮುಗಿಲು ಮುಟ್ಟಿತ್ತು.ಸಿಟ್ಟಲ್ಲಿ ಆತ ಒಂತರಾ... ಶೇಕ್ ಆಗುತಿದ್ದ....*

*ಸುತ್ತ ಒಟ್ಟು 33 ಮಂದಿ ಕೆಲಸದವರು, 10 ಮಂದಿ ಹಾಲ್ ನ ಅಧಿಕಾರಿ ವರ್ಗ, 5 ಮಂದಿ ಪೊಲೀಸರು, 5 ಮಂದಿ ಮದುವೆಯ ಹೆಣ್ಣಿನ ಕಡೆಯವರಿದ್ದರು... ಸುತ್ತ ಸ್ಮಶಾನ ಮೌನವಿತ್ತು... ಗಡಿಯಾರದ ಸೆಕೆಂಡ್ ನ ಮುಳ್ಳು ಟಿಕ್ ಟಿಕ್.. ಟಿಕ್ ಎಂದು ಸುತ್ತೆಲ್ಲ ಸದ್ದು ಮಾಡುತ್ತಿತ್ತು... ಹುಡುಗ ತಿರುಗಿದ...... ಎಲ್ಲರ ಕಣ್ಣುಗಳು ಹುಡುಗನತ್ತ ತಿರುಗಿದ್ದವು...🥺*

*"ಸರ್ ನಾನು ನಿರ್ಧಾರ ಮಾಡಿ ಆಗಿದೆ... ನನಲ್ಲಿ 8 ಲಕ್ಷ ಇಲ್ಲ ನಾನೊಬ್ಬ ಹಣವಂತ ಅಲ್ಲ ಹಾಗಾಗಿ ಪೊಲೀಸ್ ವ್ಯಾನ್ ಹತ್ತುವುದು ಮಾತ್ರ ನನ್ನೆದುರು ಇರುವ ಆಯ್ಕೆ!... ಆದರೆ ಒಂದು ಮಾತು ಹೇಳಬಲ್ಲೆ... ನಾನೊಬ್ಬ ಹಣವಂತ ಅಲ್ಲದಿರಬಹುದು ಆದರೆ ಖಂಡಿತ ನಾನೊಬ್ಬ ಹೃದಯವಂತ ನಾ ಮಾಡಿದ ಕೆಲಸದ ಬಗ್ಗೆ ಒಂದು ಚೂರು ಕೂಡ ಪಶ್ಚತಾಪ ನನಗಿಲ್ಲ!..."*

*ಮತ್ತೆ ಅವನ ಕೆಚ್ಚುತನ ನೋಡುಗರ ಗಮನ ಸೆಳೆದಿತ್ತು, ಅದೇ ಗಾಭೀರ್ಯ ದಿಂದ ನಡೆಯುತ್ತಿದ್ದ ..ಅವನ ಮಾತು ಮುಂದುವರಿದಿತ್ತು....*

*ದೊಡ್ಡವರ ಕಾರ್ಯಕ್ರಮ ಅಂದರೆ ಅದು ಕೇವಲ ಆಡಂಬರ, ಅಲ್ಲಿ ನಡೆಯುತ್ತಿದ್ದುದು ಅನ್ನದಾನ.. ಆದರೆ ಪ್ಲೇಟ್ ಒಂದಕ್ಕೆ 4000 ರೂ ಕೊಡುವ ಆ ಪುಣ್ಯಾತ್ಮರು ಒಬ್ಬ ಹಸಿದವನಿಗೆ ಊಟ ಕೊಡಲು ಯೋಗ್ಯತೆ ಇಲ್ಲದವರಾದದ್ದು ನಿಜಕ್ಕೂ ಬೇಸರ ತರಿಸಿತ್ತು!. ಅಲ್ಲಿ ಬಂದವರಲ್ಲಿ ಅಷ್ಟೂ ಜನ ಪ್ಲೇಟ್ ಅಲ್ಲಿ ಎಲ್ಲವನ್ನೂ ಹಾಕಿ ಕೊಂಡು ಆಮೇಲೆ ಹೆಚ್ಚಿನವನ್ನು ವೇಸ್ಟ್ ಬಾಕ್ಸ್ ಗೆ ಹಾಕುತಿದ್ದರು, ಅಲ್ಲಿ ತಿನ್ನುವುದಕ್ಕಿಂತ ಹೆಚ್ಚು ಎಸೆಯುವುದೇ ಪ್ಯಾಶನ್ ಆಗಿತ್ತು😔, ಅಂತಹದ್ದರಲ್ಲಿ ನಾನು ಒಳಗೆ ಬಿಟ್ಟದ್ದು ಮದ್ಯಾಹ್ನ ಹಸಿದಿದ್ದ 4 ಬಡ ಭಿಕ್ಷುಕರನ್ನು, ಖಂಡಿತ ಆ 4 ಮಂದಿಯ ಹಸಿವು ನೀಗಿಸುವ ಶಕ್ತಿ ಅವರಲ್ಲಿತ್ತು ಆದರೆ ಯಾವಾಗ ನೀವು ಅವರ ಅನ್ನವನ್ನು ಕಸಿದು, ಅವರಿಗೆ ಹೊಡೆದು ಅವಮಾನಿಸಿ ಹೊರಗೆ ಹಾಕಿ ಹಾಗೇ ಆ ಹಸಿದ ಮಗುವಿನ ಕೈಯ್ಯಲ್ಲಿದ್ದ ಗುಲಾಬ್ ಜಾಮೂನ್ ಕೂಡ ಕಸಿದಿರಾ ಆಗಲೇ ನಿರ್ಧರಿಸಿ ಬಿಟ್ಟಿದ್ದೆ,ನಿಮ್ಮಂತಹ ಪಾಪಿಗಳಿಗೆ ಬುದ್ದಿ ಕಲಿಸಬೇಕು ಎಂದು. ಅದಿಕ್ಕೆ ನಾನು ಹೀಗೆಲ್ಲ ಮಾಡಿದ್ದೆ... ಆ ಒಂದು cc tv ಯನ್ನು ಮರೆತೆ ಅಷ್ಟೇ ನಾನು ಮಾಡಿದ ತಪ್ಪು..ನೆನಪಿಡಿ ಇವತ್ತು ಮದುವೆಯಲ್ಲಿ ನೀವು ವಿತರಿಸಿದ ನಿಮ್ಮ ಆಡಂಬರದ ಊಟಕ್ಕಿಂತ ಹೆಚ್ಚು ಪುಣ್ಯ ನಾನು ಹಸಿದ ಆ ಸ್ಲಂ ನಿವಾಸಿಗಳಿಗೆ ವಿತರಿಸಿದ ಊಟದಲ್ಲಿತ್ತು!...ನೀವು ಎಸೆಯಿರಿ ಎಂದು ಕೊಟ್ಟ ಅಷ್ಟೂ ಮೃಸ್ಟಾನ್ನ ಆ ಸ್ಲಂ ನ ಬಡ ಜನರು ಖುಷಿ ಖುಷಿ ಇಂದ ತಿಂದಿದ್ದಾರೆ.ಅಷ್ಟೂ ಬಡವರು ಹೊಟ್ಟೆ ತುಂಬಿದಾಗ ಹೇಳಿದ್ದು ಅನ್ನದಾತೋ ಸುಖಿ ಭವ ಎಂದು.. ಅದು ಆ ಮದುವೆ ಮಾಡಿಸಿದ ಪುಣ್ಯಾತ್ಮರಿಗೆ ತಲುಪಿರುತ್ತದೆ..ನಿಜವಾದ ಪುಣ್ಯ ಅವರಿಗೆ ಸಿಕ್ಕಿದೆ.. ನೆನಪಿಡಿ ಆಡಂಬರ ಹಾಗು ಅಹಂಕಾರ ದಿಂದ ನೀವು ಪಾಪಿ ಗಳಾಗಬಹುದು ಅದೇ ಪ್ರೀತಿ ಹಾಗು ಮಾನವೀಯತೆ ಇಂದ ನೀವು ದೇವರಾಗಬಹುದು..."... ಎಂದವನೇ ಪೊಲೀಸ್ ಜೀಪಿನ ಬಳಿ ಹೋಗುತ್ತಾನೆ..ಅದಾಗಲೇ ಆತ ಅಲ್ಲಿ ಇರುವ ಮಂದಿಗೊಂದು ಹೊಸ ಬದುಕಿನ ಪಾಠ ಕೇಳಿಸಿ ಆಗಿತ್ತು .. ಅಲ್ಲಿದ್ದ ಯಾರಿಗೂ ಆತ ಪೊಲೀಸ್ ಜೀಪು ಹತ್ತು ವುದು ಬೇಕಿರಲಿಲ್ಲ.. ಆ ಕ್ಷಣ ಎಲ್ಲರ ಕಣ್ಣು ಗಳೂ ಮoಜಾಗಿದ್ದವು... 😔 ಆಷ್ಟರಲ್ಲಿ "ನಿಲ್ಲಿ".. ಎನ್ನುವ ಧ್ವನಿಯೊಂದು ಹಿಂದಿನಿಂದ ಕೇಳಿಸಿದಾಗ ಎಲ್ಲರೂ ಹಿಂತಿರುಗಿ ನೋಡುತ್ತಾರೆ....😱*
*... ಅಲ್ಲಿ ಮದುವೆಯ ಹುಡುಗಿಯ ಅಪ್ಪ ಇದ್ದರು. ಅವರ ಕಣ್ಣುಗಳೂ ಸಹ ಮಂಜಾಗಿದ್ದವು..*
*"ನಾನು ಆ ಹುಡುಗನ ಮೇಲೆ ಕಂಪ್ಲೇಂಟ್ ಕೊಡದೆ ನೀವು ಅವನನ್ನು ಅರೆಸ್ಟ್ ಮಾಡಲು ಸಾಧ್ಯವೇ ಇಲ್ಲ...ಆತ ಹೇಳಿದ್ದು ನಿಜವೇ ಆಗಿದೆ..ಅವನು ಕಟ್ಟ ಬೇಕಾದ 8 ಲಕ್ಷ ನಾನೇ ಕಟ್ಟುತ್ತೇನೆ... ಜೊತೆಗೆ ನನಗೆ ಒಂದಷ್ಟು ಪುಣ್ಯ ಗಳಿಸಿ ಕೊಟ್ಟ ಈ ಪುಣ್ಯಾತ್ಮನಿಗೆ ಬಹುಮಾನವಾಗಿ 2 ಲಕ್ಷ ದ ಚೆಕ್ ಕೊಡುತ್ತಿದ್ದೇನೆ ಎಂದವರೇ ಚೆಕ್ ನೊಂದಿಗೆ ಮುಂದೆ ಬಂದರು...ಗುಂಗುರು ಕೂದಲ ಹುಡುಗ ಆ ಹಿರಿಯರ ಆಶೀರ್ವಾದ ಪಡೆದುಕೊಂಡ ಅಲ್ಲಿದ್ದ ಅಷ್ಟೂ ಮಂದಿ ಚಪ್ಪಾಳೆ ಹೊಡೆಯುತ್ತಿದ್ದರು....🙏*

*ಅದೆಷ್ಟು ಸತ್ಯ ನೋಡಿ ಈ ಆಡಂಬರದ ಮದುವೆಗಳಲ್ಲಿ ಒಂದು ಊಟಕ್ಕೆ 4,000/5000 ದ ಪ್ಲೇಟ್ ಗೆ ಕೊಡುವ ಮಂದಿ ಒಮ್ಮೆ ಯೋಚಿಸಬೇಕಿದೆ ಇಲ್ಲಿ ಒಂದಷ್ಟು ಹಣ ಉಳಿದಿದ್ದರೆ ಅದೇ ಮದುವೆ ಇನ್ನೊಂದಿಷ್ಟು ಬಡ ಹೆಣ್ಣುಮಕ್ಕಳ ಪಾಲಿಗೋ, ಒಂದಿಷ್ಟು ಅಸಹಾಯಕರ ಪಾಲಿಗೊ ಹೊಸ ಭರವಸೆ ಯಾಗ ಬಹುದು....ಒಂದು ಗಳಿಗೆ ಸಿಗುವ ಆಡಂಬರದ ಖುಷಿ...ಯ ಬದಲು ಆ ಅಸಹಾಯಕ ಹೆಣ್ಣುಮಕ್ಕಳಿಗೆ, ಆಶಕ್ತರಿಗೆ ಜೀವನ ಪರ್ಯಂತ ಹೊಸ ಬದುಕಿನ ಭರವಸೆ ನಿಮ್ಮಿಂದ ಸಿಗಬಹುದು .ಈ ಒಂದು ಬದಲಾವಣೆ ಯೊಂದಿಗೆ ನಡೆಯುವ ನಿಮ್ಮ ಮಗಳ/ಮಗನ ಮದುವೆ ನಿಮಗೆ ಒಂದಿಷ್ಟು ಪುಣ್ಯ ದೊರಕಿಸಿ ಕೊಡಬಲ್ಲದು ... ಬದಲಾವಣೆ ಜಗದ ನಿಯಮ...ಒಮ್ಮೆ ನಾವು ನೀವು ಕೂತು ಯೋಚಿಸಬೇಕಿದೆ ಅಲ್ಲವೇ?🙏🙏....*
🟥🟦🟩🌹🟥🟦🟩
ಇಂತಹ ಇನ್ನಷ್ಟು ಮೌಲ್ಯ ಯುಕ್ತ ಕತೆಗಳ ಸಂಗ್ರಹ ಪುಸ್ತಕ *ಬದುಕ ಬದಲಿಸುವ ಕತೆಗಳು* ಪ್ರತಿಗಳಿಗಾಗಿ ಸಂಪರ್ಕಿಸಿ (9945130630).

Address

Home Doctor Foundation, Somayya Complex, Kolalagiri Post
Udupi
576105

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Website

https://www.facebook.com/Homedoctorfoundationudupi/, https://www.instagram.com/

Alerts

Be the first to know and let us send you an email when Homedoctor Foundation posts news and promotions. Your email address will not be used for any other purpose, and you can unsubscribe at any time.

Share