Sri Sri Arjun Avadhootha Maharaj - Aadhyathma Seva Samithi

  • Home
  • India
  • Tumkur
  • Sri Sri Arjun Avadhootha Maharaj - Aadhyathma Seva Samithi

Sri Sri Arjun Avadhootha Maharaj - Aadhyathma Seva Samithi Sri Sri Arjuna Avadhoota Guru Maharaj - Aadhyathma Seva Samithi

28/02/2026

|| ಶ್ರೀ ಗುರುಭ್ಯೋ ನಮಃ ||

ದಿನಾಂಕ 26-02-2026 ನೇ ಗುರುವಾರ ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಜೀರ್ಣೋದ್ಧಾರಗೊಂಡ ಪುರಾತನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವು ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಗುರುಮಹಾರಾಜರ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಆಯಿತು.

On Thursday, 26-02-2026, the ancient Sri Anjaneya Swamy Temple in Binnipete, Bengaluru, which had been renovated, was inaugurated in the presence of His Holiness Sri Sri Arjuna Avadhoota Guru Maharaj.

|| ಜೈ ಅರ್ಜುನಾಚಲಂ ||

20/02/2026

|| ಶ್ರೀ ಗುರುಭ್ಯೋ ನಮಃ ||

ಅವಧೂತರ ವಚನಗಳೇ ದಿವ್ಯತೆಯ ಅನುಭೂತಿ. ಅವಧೂತರ ಮೌನ ಅಧ್ಯಾತ್ಮ ಸಂವಹನ. ಜಗದಗಲವೇ ಅವಧೂತರ ವ್ಯಾಪ್ತಿ.ಲೋಕದುದ್ಧಾರಕ್ಕೆ ಶ್ರೀ ಶ್ರೀ ಅರ್ಜುನ ಅವಧೂತರ ಆವಿರ್ಭಾವ.

|| ಶ್ರೀ ಗುರುಭ್ಯೋ ನಮಃ ||मृत्युञ्जयाय रुद्राय नीलकण्ठाय शम्भवे।अमृतेशाय शर्वाय महादेवाय ते नमः।।   ಪರಶಿವನ ಆರಾಧನೆಗೆ ಅತ್ಯಂತ ...
15/02/2026

|| ಶ್ರೀ ಗುರುಭ್ಯೋ ನಮಃ ||

मृत्युञ्जयाय रुद्राय
नीलकण्ठाय शम्भवे।
अमृतेशाय शर्वाय
महादेवाय ते नमः।।

ಪರಶಿವನ ಆರಾಧನೆಗೆ ಅತ್ಯಂತ ಶ್ರೇಷ್ಠವಾದ ದಿನವೇ ಮಹಾಶಿವರಾತ್ರಿ. *ಏಕಬಿಲ್ವಂ ಶಿವಾರ್ಪಣಂ* ಎಂಬಂತೆ ಒಂದು ಬಿಲ್ವಪತ್ರೆಯನ್ನು ಭಕ್ತಿಯಿಂದ ಸಮರ್ಪಿಸಿದರೆ ಶಿವನು ಪ್ರಸನ್ನಗೊಳ್ಳುವನು. ಅಭಿಷೇಕಪ್ರಿಯ ಮೃತ್ಯಂಜಯನಿಗೆ ರುದ್ರಾಭಿಷೇಕ, ಜಪ, ಧ್ಯಾನ, ಜಾಗರಣೆ, ಉಪವಾಸ, ಭಜನೆಗಳಿಂದ ಪೂಜಿಸುತ್ತಾರೆ. ಹಾಲಾಹಲವನ್ನು ಕುಡಿದು ಜಗತ್ತಿಗೆ ಶಾಂತಿ, ಸಹನೆ, ಜೀವನವನ್ನು ಅನುಗ್ರಹಿಸಿದ ನಂಜುಂಡೇಶ್ವರನ *ಓಂ ನಮಃ ಶಿವಾಯ* ಎಂಬ ಮಂತ್ರ ಸದಾ ನಮ್ಮ ಹೃನ್ಮನವನ್ನು ಆವರಿಸಿಕೊಳ್ಳಲಿ. ಮಂಗಳಕರನಾದ ಶಂಕರನ ಅನುಗ್ರಹವು ಸರ್ವದಾ ಎಲ್ಲಾ ಆತ್ಮಬಂಧುಗಳಿಗೆ ಇರಲಿ ಎಂದು ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಆಶಿಸುತ್ತದೆ.
ಎಲ್ಲಾ ಆತ್ಮಬಂಧುಗಳಿಗೂ ಮಹಾಶಿವರಾತ್ರಿಯ ಶುಭಾಶಯಗಳು.

|| ಜೈ ಅರ್ಜುನಾಚಲಂ ||

14/02/2026

|| ಶ್ರೀ ಗುರುಭ್ಯೋ ನಮಃ||

मन्दस्मितं शिवं शान्तं
चिदानन्दं विवेकिनम्।
ज्ञानदं मोक्षदं चैव
अर्जुनं च नमाम्यहम्।।

ಪರಮಪೂಜ್ಯ ಶ್ರೀ ಶ್ರೀ ಶ್ರೀ ವೇಂಕಟಾಚಲ ಅವಧೂತ ಗುರುಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಗುರುಮಹಾರಾಜರ ಹತ್ತನೆಯ ಆಧ್ಯಾತ್ಮಿಕ ಜನ್ಮದಿನವಾದ ಜ್ಞಾನಪ್ರಕಾಶೋತ್ಸವ ಕಾರ್ಯಕ್ರಮವನ್ನು ದಿನಾಂಕ 13-2-2026 ರ ಶುಕ್ರವಾರದಂದು ಶ್ರೀ ವೇಂಕಟಾರ್ಜುನ ಧ್ಯಾನಮಂದಿರದಲ್ಲಿ ಭಕ್ತಿ ಭಾವ ಸಂಭ್ರಮದಿಂದ ಆಚರಿಸಲಾಯಿತು.
ಅಂದು ಬೆಳಗ್ಗೆ ಗುರುನಿವಾಸದಲ್ಲಿ ಶ್ರೀಮತಿ ರಂಗಲಕ್ಷ್ಮಿ ಅಮ್ಮನವರ ಪಾದಪೂಜೆ ಹಾಗೂ ಗೋಪೂಜೆಯನ್ನು ಶ್ರೀ ಗುರುಗಳು ನೆರವೇರಿಸಿದರು. ಆಶ್ರಮದಲ್ಲಿ 108 ಕ್ಕೂ ಹೆಚ್ಚಿನ ಸುಮಂಗಲಿಯರಿಂದ ಲಲಿತಾ ಸಹಸ್ರನಾಮ ಪಾರಾಯಣ, ಅರ್ಚನೆ ನಡೆಯಿತು. ನಂತರ ಲಲಿತಾ, ಗಣಪತಿ, ನವಗ್ರಹ ಹೋಮದ ಪೂರ್ಣಾಹುತಿ ಪರಮಪೂಜ್ಯರು ನೆರವೇರಿಸಿದರು. ವಿವಿದೆಡೆಯಿಂದ ಆತ್ಮಬಂಧುಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಗುರುಗಳ ಆಶೀರ್ವಚನಗಳ ನಂತರ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮವು ಸಂಪನ್ನವಾಯಿತು.

|| ಜೈ ಅರ್ಜುನಾಚಲಂ ||

12/02/2026

ಮಹಾಶಿವರಾತ್ರಿ 2026..

11/02/2026

|| ಹರಿಃ ಓಂ ||

|| ಶ್ರೀ ಗುರುಭ್ಯೋ ನಮಃ ||

ನಮ್ಮ ಪರಮ ಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಗುರುಮಹಾರಾಜರ ಪ್ರಕಟೋತ್ಸವದ ಅಂಗವಾಗಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವೇಂಕಟಾಚಲ ಅವಧೂತ ಗುರುಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ *ತಾ.13.02.2026 ರ ಶುಕ್ರವಾರದಂದು ಬೆಳಗ್ಗೆ 9.00 ಗಂಟೆಗೆ ಪೂಜಾ ಕೈಂಕರ್ಯಗಳೊಂದಿಗೆ ಜ್ಞಾನ ಪ್ರಕಾಶೋತ್ಸವ* ಕಾರ್ಯಕ್ರಮವನ್ನು *ಆಶ್ರಮದಲ್ಲಿ* ಏರ್ಪಡಿಸಲಾಗಿದೆ. ಎಲ್ಲಾ ಆತ್ಮಬಂಧುಗಳು ಕುಟುಂಬ ಸಮೇತರಾಗಿ ಸಕಾಲಕ್ಕೆ ಆಗಮಿಸಿ ಗುರುಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್.

ಜೈ ಗುರುದೇವ 🙏

08/02/2026

|| ಶ್ರೀ ಗುರುಭ್ಯೋ ನಮಃ ||

ಬೆಂಗಳೂರಿನಲ್ಲಿ ದಿನಾಂಕ 06-02-2026 ನೇ ಶುಕ್ರವಾರ ಬಿಜಿಎಸ್ ಅಪೋಲೋ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಶೇಖರ್ ಸ್ವಾಮೀಜಿ ಅವರ ವರ್ಧಂತ್ಯುತ್ಸವದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಗುರು ಮಹಾರಾಜರು ಪಾಲ್ಗೊಂಡು ಆಶೀರ್ವದಿಸಿದರು.

On Friday, 06-02-2026, in Bengaluru, at the birthday celebration program of Sri Shekhar Swamiji, the head of the BGS Apollo Institution, Parama Poojya Sri Arjuna Avadhoota Guru Maharaj participated and blessed the gathering.

|| ಜೈ ಅರ್ಜುನಾಚಲಂ ||

02/02/2026

ಅರ್ಜುನ ಉವಾಚ

29/01/2026

|| ಹರಿಃ ಓಂ ||

|| ಶ್ರೀ ಗುರುಭ್ಯೋ ನಮಃ||

ದಿನಾಂಕ - 26/01/2026

ಬೆಂಗಳೂರಿನಲ್ಲಿ ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಗುರುಮಹಾರಾಜರ ಅಧ್ಯಕ್ಷತೆಯಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದ ಕಾರ್ಯಕ್ರಮ

|| ಹರಿಃ ಓಂ |||| ಶ್ರೀ ಗುರುಭ್ಯೋ ನಮಃ || ||ಹರಿ ಸರ್ವೋತ್ತಮ|| ಮಧ್ವಾಚಾರ್ಯರು ದ್ವೈತಮತದ ಪ್ರತಿಷ್ಠಾಪನಾಚಾರ್ಯರಾಗಿ, ದ್ವೈತಮತವನ್ನು ಪ್ರಚಾರ ...
27/01/2026

|| ಹರಿಃ ಓಂ ||

|| ಶ್ರೀ ಗುರುಭ್ಯೋ ನಮಃ ||

||ಹರಿ ಸರ್ವೋತ್ತಮ||
ಮಧ್ವಾಚಾರ್ಯರು ದ್ವೈತಮತದ ಪ್ರತಿಷ್ಠಾಪನಾಚಾರ್ಯರಾಗಿ, ದ್ವೈತಮತವನ್ನು ಪ್ರಚಾರ ಮಾಡಿ, ಹರಿಯೇ ಸರ್ವೋತ್ತಮನೆಂದು ಬೋಧಿಸಿದರು. ಭಕ್ತಿ ಮತ್ತು ಜ್ಞಾನದಿಂದ ಮೋಕ್ಷಸಾಧ್ಯ, ಜೀವ, ಜಗತ್ತು ಎರಡೂ ಭಿನ್ನವೆಂದು ಹೇಳುತ್ತಾ ಭಗವದ್ಗೀತೆ, ಬ್ರಹ್ಮಸೂತ್ರ, ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದು ಜಿಜ್ಞಾಸುಗಳಿಗೆ ಸಾಧನಾಪಥವನ್ನು ತೋರಿದರು.
ಭಕ್ತಿಪಂಥಕ್ಕೂ ಹರಿದಾಸಪಂಥಕ್ಕೂ, ಸಂಗೀತದ ಪ್ರೋತ್ಸಾಹಕ್ಕೂ ಕಾರಣರಾದ ಮಧ್ವಾಚಾರ್ಯರಿಗೆ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ನಿಂದ ಮಧ್ವನವಮಿಯಂದು ಭಕ್ತಿಪೂರ್ವಕ ಸಾಷ್ಟಾಂಗ ಪ್ರಣಾಮಗಳು.

|| ಜೈ ಅರ್ಜುನಾಚಲಂ ||

26/01/2026

|| ಹರಿಃ ಓಂ ||

|| ಶ್ರೀ ಗುರುಭ್ಯೋ ನಮಃ||

ಪರಮಪೂಜ್ಯರಿಂದ ಬೇಲೂರಿನ ಆರ್ಯವೈಶ್ಯ ಮಂಡಳಿಯ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರದ ಕಾರ್ಯಕ್ರಮ.

Address

#67, Srinivasa Krupa, "Sri Venkatarjuna Guru Nivasa Tumkur", 3rd Main Road, Shivamookambika Nagara, Upparahalli
Tumkur
572102

Website

Alerts

Be the first to know and let us send you an email when Sri Sri Arjun Avadhootha Maharaj - Aadhyathma Seva Samithi posts news and promotions. Your email address will not be used for any other purpose, and you can unsubscribe at any time.

Share