Ramakrishna - Vivekananda Ashrama, Tumakuru

Ramakrishna - Vivekananda Ashrama, Tumakuru Ramakrishna - Vivekananda Ashrama, Tumakuru

17/02/2026

*ಸಂಜೆಯ ಪಾರಾಯಣ ಸಮಯದಲ್ಲಿ ಬದಲಾವಣೆ*

ಆತ್ಮೀಯ ಆಧ್ಯಾತ್ಮಿಕ ಬಂಧುಗಳೇ,

*ನಿನ್ನೆಯಿಂದ* ಆಶ್ರಮದಲ್ಲಿ ಪ್ರತಿದಿನ ಸಂಜೆ ನಡೆಯುತ್ತಿರುವ *ಶ್ರೀಲಲಿತಾಸಹಸ್ರನಾಮ, ದೇವೀಸ್ತುತಿ ಹಾಗು ಶ್ರೀವಿಷ್ಣುಸಹಸ್ರನಾಮ ಪಾರಾಯಣಗಳ ಸಮಯದಲ್ಲಿ* ಒಂದು ಸಣ್ಣ ಬದಲಾವಣೆಯಾಗಿದೆ. ದಯವಿಟ್ಟು ಗಮನಿಸಿ.

*ಸಂಜೆ 6 ಗಂಟೆಗೆ :* ಪಾರಾಯಣ
*ಸಂಜೆ 6.30 :* ಆರಾತ್ರಿಕ ಹಾಗು ಭಜನೆ.

ಭಗವತ್ಸೇವೆಯಲ್ಲಿ,
*ಸ್ವಾಮಿ ಧೀರಾನಂದಜೀ ಮಹಾರಾಜ್*

*ಫೆಬ್ರವರಿ 19:* ಆಶ್ರಮದಲ್ಲಿ ಶ್ರೀರಾಮಕೃಷ್ಣರ ಜಯಂತಿ
17/02/2026

*ಫೆಬ್ರವರಿ 19:* ಆಶ್ರಮದಲ್ಲಿ ಶ್ರೀರಾಮಕೃಷ್ಣರ ಜಯಂತಿ

14/02/2026

*ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮ*

ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಇದೇ *2026ರ ಫೆಬ್ರವರಿ 15, ಭಾನುವಾರದಂದು* ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

*ಸಂಜೆ 4 ಗಂಟೆಯಿoದ 6 ಗಂಟೆಯವರೆಗೆ* ವೇದಮೂರ್ತಿ ಬ್ರಹ್ಮಶ್ರೀ ಬಿದರೆ ಶ್ರೀಹರಿಶರ್ಮ ಹಾಗೂ ವಿದ್ವಾನ್ ಶ್ರೀ ಪ್ರಶಾಂತ್‌ರವರು *ಏಕವಾರ ರುದ್ರಾಭಿಷೇಕವನ್ನು* ನೆರವೇರಿಸಿಕೊಡಲಿದ್ದಾರೆ.

*6 ಗಂಟೆಯಿoದ 7.30ರವರೆಗೆ* ವಿಶೇಷ ಭಗನ್ನಾಮ ಸಂಕೀರ್ತನೆಯನ್ನು ಏರ್ಪಡಿಸಲಾಗಿದೆ.

ಸಾರ್ವಜನಿಕ ಭಕ್ತಜನರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಶ್ರಮದ ಪ್ರಕಟಣೆ ತಿಳಿಸಿದೆ.

05/02/2026
*ಯತಿದ್ವಯರ ಪ್ರವಚನ ಪ್ರವಾಸ; ಇಂದು ಭಕ್ತರ ಸಭೆ*ವಿಶ್ವಸನೀಯ ಆಧ್ಯಾತ್ಮಿಕ ಬಂಧುಗಳೇ, ನಿಮಗೆ ದಿವ್ಯತ್ರಯರ ಸ್ಮರಣೆಗಳು ಹಾಗೂ ಪ್ರೀತಿಪೂರ್ವಕ ನಮಸ್ಕ...
03/02/2026

*ಯತಿದ್ವಯರ ಪ್ರವಚನ ಪ್ರವಾಸ; ಇಂದು ಭಕ್ತರ ಸಭೆ*

ವಿಶ್ವಸನೀಯ ಆಧ್ಯಾತ್ಮಿಕ ಬಂಧುಗಳೇ, ನಿಮಗೆ ದಿವ್ಯತ್ರಯರ ಸ್ಮರಣೆಗಳು ಹಾಗೂ ಪ್ರೀತಿಪೂರ್ವಕ ನಮಸ್ಕಾರಗಳು.

ನಮ್ಮ ಆಶ್ರಮದ ಅಧ್ಯಕ್ಷರಾದ *ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀ* ಮತ್ತು ಕಾರ್ಯದರ್ಶಿಗಳಾದ *ಪೂಜ್ಯ ಸ್ವಾಮಿ ಪರಮಾನಂದಜೀ ಮಹಾರಾಜ್* ರವರು *ಆಸ್ಟ್ರೇಲಿಯಾ , ನ್ಯೂಜಿಲೆಂಡ್ ಮತ್ತು ಫಿಜಿ ದೇಶಗಳಲ್ಲಿ* ಆಹ್ವಾನದ ಮೇರೆಗೆ *ವಿಶೇಷ ಪ್ರವಚನಗಳನ್ನು ನೀಡಲು ಇದೇ ಫೆಬ್ರವರಿ 4ರಿಂದ ಮಾರ್ಚ್ 10ರವರೆಗೆ* ಪ್ರವಾಸ ಮಾಡುವರು.

ಸತ್ಸಂಗಗಳಲ್ಲಿ ಪೂಜ್ಯರು *ದಿವ್ಯತ್ರಯರ ಹಾಗೂ ಸನಾತನ ಪರಂಪರೆ ವಿಷಯಾಧಾರಿತ ಪ್ರವಚನಗಳನ್ನು ನೀಡುವರು.* ಅಲ್ಲದೆ ಯುವಜನತೆ ಹಾಗೂ ಮಾತೆಯರಿಗೂ ವಿಶೇಷ ಪ್ರವಚನಗಳು ಆಯೋಜನೆಗೊಂಡಿದೆ.

*ಪೂಜ್ಯರ ಸತ್ಸಂಗ ಪ್ರವಾಸವು ಯಶಸ್ವಿಯಾಗಿ ನೆರವೇರಲೆಂದು ಹಾರೈಸಿ ಬೀಳ್ಗೊಡುವುದಕ್ಕಾಗಿ ಇಂದು ಮಂಗಳವಾರ ಸಂಜೆ (ಫೆಬ್ರವರಿ 3) 6.30 ರಿಂದ 7.30ರವರೆಗೆ ಭಕ್ತರ ಸಭೆಯನ್ನು ಆಶ್ರಮದಲ್ಲಿ ಕರೆಯಲಾಗಿದೆ.*

ತಾವೆಲ್ಲರೂ ಈ ಸತ್ಸಂಗದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕೆಂದು ತಮ್ಮಲ್ಲಿ ಪ್ರೀತಿಪೂರ್ವಕವಾಗಿ ವಿನಂತಿಸುತ್ತೇನೆ.

ಅನಂತ ವಂದನೆಗಳು
ಶ್ರೀರಾಮಕೃಷ್ಣರ ಪದತಲದಲ್ಲಿ
*ಸ್ವಾಮಿ ಧೀರಾನಂದ*

24/01/2026
ಆತ್ಮೀಯ ಆಧ್ಯಾತ್ಮಿಕ ಬಂಧುಗಳೇ,ನಮ್ಮ ಆಶ್ರಮದ ಸದ್ಭಕ್ತರಾದ *ಶ್ರೀ ಎಂ.ಕೆ ನಾಗರಾಜ್* ರವರು (ವಾಸವಾಂಬ ನಾಗಣ್ಣ) ಇಂದು ಸಂಜೆ 7:05ಕ್ಕೆ ದೈವಾಧೀನರಾ...
23/01/2026

ಆತ್ಮೀಯ ಆಧ್ಯಾತ್ಮಿಕ ಬಂಧುಗಳೇ,

ನಮ್ಮ ಆಶ್ರಮದ ಸದ್ಭಕ್ತರಾದ *ಶ್ರೀ ಎಂ.ಕೆ ನಾಗರಾಜ್* ರವರು (ವಾಸವಾಂಬ ನಾಗಣ್ಣ) ಇಂದು ಸಂಜೆ 7:05ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ನಾಳೆ ಬೆಳಿಗ್ಗೆ ನೆರವೇರಿಸಲಾಗುವುದು.
ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ದರ್ಶನ ಪಡೆಯಬಹುದು.
Srinilaya, 3rd cross Shankarpuram
Near mookambika eye hospital road
Tumakuru- 572102

ಜೈ ರಾಮಕೃಷ್ಣ

Address

Ramakrishna Nagar
Tumkur
572105

Opening Hours

Monday 6:30am - 12pm
4pm - 8pm
Tuesday 6:30am - 12pm
4pm - 8pm
Wednesday 6:30am - 12pm
4pm - 8pm
Thursday 6:30am - 12pm
4pm - 8pm
Friday 6:30am - 12pm
4pm - 8pm
Saturday 6:30am - 12pm
4pm - 8pm
Sunday 6:30am - 12pm
4pm - 8pm

Telephone

+919448268280

Alerts

Be the first to know and let us send you an email when Ramakrishna - Vivekananda Ashrama, Tumakuru posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ramakrishna - Vivekananda Ashrama, Tumakuru:

Share