17/04/2025
ಸಿಜ್ಞಾ ಯೂತ್ ಸೆಂಟರ್ ನಿಂದ ವಿಶ್ವ ಭೂಮಿ ದಿನಾಚರಣೆ ಆಚರಣೆ
ತುಮಕೂರು: ವಿಶ್ವ ಭೂಮಿ ದಿನ ಅಂಗವಾಗಿ ತುಮಕೂರಿನ ಸಿಜ್ಞಾ ಯುವ ಸಂವಾದ ಕೇಂದ್ರದಿಂದ ಏ.20ರಂದು ‘ನಮ್ಮ ಶಕ್ತಿ,ನಮ್ಮ ಗ್ರಹ’ ವಿಷಯದ ಕುರಿತು ಒಂದು ದಿನದ ಚಾರಣ, ಪಕ್ಷಿ ವೀಕ್ಷಣೆ ಮತ್ತು ಸಂವಾದ ಏರ್ಪಡಿಸಿಲಾಗಿದೆ.
ತುಮಕೂರುನ ನಾಮದಚಿಲುಮೆ ಮತ್ತು ದೇವರಾಯನದುರ್ಗದ ತಪ್ಪಲಿನಲ್ಲಿ ಭಾನುವಾರ ಬೆಳಗ್ಗೆ 6.30ಕ್ಕೆ ಚಾರಣದೊಂದಿಗೆ ಆರಂಭವಾಗುವ ಕಾರ್ಯಕ್ರಮವು ಕಾನನದ ವೈಶಿಷ್ಟ್ಯ, ಪಕ್ಷಿಗಳ ಜೀವನ ಕ್ರಮ, ಮಳೆ ನೀರು ಸಂಗ್ರಹ ಸೇರಿ ಹಲವು ವಿಚಾರಗಳ ಚರ್ಚೆ ನಡೆಯಲಿದೆ. ಭವಿಷ್ಯದ ಮುಂದಿನ ದಿನಗಳಿಗೆ ಕಾಡು, ನದಿ, ಬೆಟ್ಟ, ಗುಡ್ಡಗಳನ್ನು ಉಳಿಸಿ ಭೂ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ತುರ್ತು ಪರಿಸ್ಥಿತಿಗೆ ಸ್ಪಂದಿಸಿ ಸುಸ್ಥಿರ ಅಭಿವೃದ್ಧಿ ಮಾಡುವ ಗುರಿಯನ್ನು ಹೊಂದಿದ್ದು, ಈ ದಿಸೆಯಲ್ಲಿ ಯುವಜನರಿಗೆ ಮತ್ತು ಮಕ್ಕಳಿಗೆ ಪರಿಸರಾತ್ಮಕ ಕಲಿಕೆ ಮತ್ತು ಅದರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರವೇಶ ಉಚಿತವಾಗಿರಲಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ ಮತ್ತು ಭಾಗವಹಿಸಲು ಸಿಜ್ಞಾದ ಸಂಯೋಜಕರಾದ ಸುದೀಪ್ ರವರನ್ನು 8431484033 ಸಂಪರ್ಕಿಸಬಹುದು.
ಬರುವವರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ, ನಿಗದಿತ ಸಮಯಕ್ಕೆ ಸ್ಥಳದಲ್ಲಿರಬೇಕು. ಯಾವುದೇ ರೀತಿಯ ಚೀರಾಟ ಶಬ್ಧ ಮಾಡುವ ಸ್ಪೀಕರ್ ಮತ್ತೀತರೆ ವಸ್ತುಗಳನ್ನು ತರಬಾರದು. ಬಿಸಿಲಿಗೆ ಛತ್ರಿ ತರಬೇಕು ಆದಷ್ಟು ಕಡ್ಡಾಯವಾಗಿ ಪ್ಲಾಸ್ಟಿಕ್ ಬಾಟಲ್ ತರಬಾರದು . ಯಾವುದೇ ವಸ್ತುವನ್ನು ಎಸೆಯುವಂತಿಲ್ಲ ಎಂದು ಸಂಸ್ಥೆ ತಿಳಿಸಿದೆ.