Krupamayi Makkala Balaga

Krupamayi Makkala Balaga Krupamayi Makkala Balaga is a non-profit voluntary organisation for children being run under the guidance of Sri Ramakrishna-Vivekananda Ashrama, Tumakuru.

ಮಾತೆಯರಿಂದ ಕೈತುತ್ತು
20/12/2016

ಮಾತೆಯರಿಂದ ಕೈತುತ್ತು

Swamiji spoke about the qualities of a good student.
27/11/2016

Swamiji spoke about the qualities of a good student.

ಆಧುನಿಕ ಭಾರತದ ನಿರ್ಮಾಪಕರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರ ಪ್ರಜ್ವಲ, ಪ್ರಗತಿಪರ ಅಭಿಯಾನದ ಸ್ಪರ್ಶಕ್ಕೆ...
25/09/2016

ಆಧುನಿಕ ಭಾರತದ ನಿರ್ಮಾಪಕರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರ ಪ್ರಜ್ವಲ, ಪ್ರಗತಿಪರ ಅಭಿಯಾನದ ಸ್ಪರ್ಶಕ್ಕೆ ಒಳಗಾಗದ ಯಾವ ಸಾರ್ವಜನಿಕ ಜೀವನಕ್ಷೇತ್ರವೂ ಇಲ್ಲ. ಕೈಗಾರಿಕೆಗಳಿಂದ ಹಿಡಿದು ಶಿಕ್ಷಣದವರೆಗೆ, ಆಡಳಿತದಿಂದ ಹಿಡಿದು ಸಾಹಿತ್ಯದವರೆಗೆ ಎಲ್ಲ ಕ್ಷೇತ್ರಗಳನ್ನೂ ಅವರು ಉದ್ದೀಪ್ತಗೊಳಿಸಿದರು. ಈ ನೂರಾರು ಪ್ರಗತಿಕಾರ್ಯಗಳನ್ನು ವಿಶ್ವೇಶ್ವರಯ್ಯನವರು ಒಟ್ಟೊಟ್ಟಿಗೆ ಉನ್ಮುಖಗೊಳಿಸಿದರು ಎಂಬುದು ನಿಜಕ್ಕೂ ಅನ್ಯಾದೃಶವಾದ ಸಾಧನೆ. ಒಂದು ದೇಶಕ್ಕೆ ಕೇವಲ ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಅನುಕೂಲಗಳು ಆಗಿರುವುದು ಬಹುಷಃ ಜಗತ್ತಿನ ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಸಂಗತಿ ಎಂದು ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿಯ ನಗರ ಸಂಚಾಲಕ ಶ್ರೀ ಬಿ.ವಿ ತ್ಯಾಗರಾಜುರವರು ಅಭಿಪ್ರಾಯಪಟ್ಟರು.

ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಕೃಪಾಮಯಿ ಮಕ್ಕಳ ಬಳಗ'ದ ವತಿಯಿಂದ ಆಯೋಜಿಸಲಾಗಿದ್ದ 'ಸರ್ ಎಂ. ವಿಶ್ವೇಶ್ವರಯ್ಯ'ನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸುಸಂಸ್ಕೃತ ಕುಟುಂಬವೊಂದರಲ್ಲಿ 1860ರಲ್ಲಿ ಜನಿಸಿ, ಕಡುಬಡತನದ ನಡುವೆ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿ 1884ರಲ್ಲಿ ಮುಂಬೈ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮುಂಬೈ ಸರ್ಕಾರದ 24 ವರ್ಷಗಳ ತಮ್ಮ ಸೇವೆಯಲ್ಲಿ ನೀರನ್ನು ಪೋಲುಮಾಡದೆ ಬಳಸುವ ವ್ಯವಸಾಯಕ್ರಮ - 'ಬ್ಲಾಕ್ ಸಿಸ್ಟಮ್', 'ಆಟೋಮ್ಯಾಟಿಕ್ ಸ್ಲೂಸ್ ಗೇಟ್ಸ್' ನಿರ್ಮಾಣ, ಎಡೆನ್ ಪಟ್ಟಣದ ಜಲನಿರ್ಗಮನ ಯೋಜನೆ - ಹೀಗೆ ಅನೇಕ ಯೋಜನೆಗಳನ್ನು ರೂಪಿಸಿ ತಮ್ಮ ಕಾರ್ಯಕ್ಷಮತೆಯಿಂದ ವೃತ್ತಿಯಲ್ಲಿ ಸುಮಾರು 18 ದರ್ಜೆಗಳು ಮೇಲೇರಿದರು. ವಿಶ್ವೇಶ್ವರಯ್ಯನವರು ಹೈದರಾಬಾದ್ ನಗರವನ್ನು ಪ್ರವಾಹದಿಂದ ರಕ್ಷಿಸಲು ರೂಪಿಸಿದ ಯೋಜನೆಯ ಸಫಲತೆಯನ್ನು ಕಂಡು ಹೈದರಾಬಾದ್ ನಿಜಾಮ ನವಾಬ್ ಜಂಗ್ ಬಹಾದ್ದೂರ್ ಅವರನ್ನು 'ಆಧುನಿಕ ಹೈದರಾಬಾದ್ ನಿರ್ಮಾಪಕ' ಎಂದು ಕರೆದ.

1909ರಲ್ಲಿ ವಿಶ್ವೇಶ್ವರಯ್ಯನವರು ಮೈಸೂರಿನ ಮುಖ್ಯ ಇಂಜಿನಿಯರ್ ಆಗಿ ನಂತರ 1912ರಲ್ಲಿ ಮೈಸೂರಿನ ದಿವಾನರಾಗಿಯೂ ನೇಮಕಗೊಂಡರು. ಈ ಕಾಲಾವಧಿಯಲ್ಲಿ ಮೈಸೂರು ರಾಜ್ಯದ ಔದ್ಯಮಿಕ, ಶೈಕ್ಷಣಿಕ ಮತ್ತು ಸಾರ್ವತ್ರಿಕ ಪ್ರಗತಿಗೆ ಅವರು ಹಾಕಿದ ಅಸ್ತಿಭಾರ ನಮ್ಮ ರಾಜ್ಯದ ಆಧುನಿಕ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು. ಸರ್ಕಾರಿ ಕೆಲಸಗಳಲ್ಲಿ ಐರೋಪ್ಯ ಜನರ ದಕ್ಷತೆಯನ್ನು ತರಲು ಪ್ರಯತ್ನಿಸಿದರು. 'ಮೈಸೂರು ಸಂಪದಭಿವೃದ್ಧಿ ಸಮಾವೇಶ', ಬಾಲ್ಯವಿವಾಹದ ಹಾನಿಯ ಬಗ್ಗೆ ತಿಳುವಳಿಕೆ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಹೋಟೆಲ್ ಉದ್ಯಮಕ್ಕೆ ಉತ್ತೇಜನ, ಗ್ರಾಮಗಳ ಪುನರುಜ್ಜೀವನಕ್ಕೆ ಯೋಜನೆಗಳು, ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ - ಪಂಗಡಗಳ ಮಕ್ಕಳಿಗೆ ಶಿಕ್ಷಣ, ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ರೇಷ್ಮೆ, ಸೋಪ್, ಗಂಧದ ಎಣ್ಣೆ, ಲೋಹ, ಚರ್ಮದ ಹದ ಮಾಡುವ ಕಾರ್ಖಾನೆಗಳ ಸ್ಥಾಪನೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಆರಂಭ, ಕನ್ನಂಬಾಡಿ ಕಟ್ಟೆ, ಛೇಂಬರ್ ಆಫ್ ಕಾಮರ್ಸ್, ಕೆ.ಆರ್ ಕಾಟನ್ ಮಿಲ್ಸ್ - ಹೀಗೆ ನೂರಾರು ಸಮಾಜಮುಖಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದರು.

ತಾವು ನಿವೃತ್ತರಾದಮೇಲೂ ಸುಮಾರು 30 ವರ್ಷಗಳ ಕಾಲ ಸಲಹಾಗಾರರಾಗಿ ಅಷ್ಟೇ ಕ್ರಿಯಾಶೀಲವಾಗಿ ಕೆಲಸಮಾಡಿದರು. ತಮ್ಮ ಸುಮಾರು 102 ವರ್ಷಗಳ ಸುದೀರ್ಘ ಜೀವನದಲ್ಲಿ ಯಾರನ್ನೂ ನೋಯಿಸಿದವರಲ್ಲ. ಮಿತ ಭಾಷಿಯಾಗಿ ಒಂದು ಮೌನಕ್ರಾಂತಿಯನ್ನೇ ಮಾಡಿದರು. ಅವರ ನಿಷ್ಕಳಂಕ ಜೀವನ, ಉದಾರ ಮನಸ್ಸು, ಕಾರ್ಯನಿರ್ವಾಹಕ ಶಕ್ತಿ, ಬುದ್ಧಿ ಚಾತುರ್ಯ, ಸಂಯಮ, ಶಿಸ್ತು, ನಿಸ್ವಾರ್ಥ ಜನಪ್ರೀತಿ ನಮಗೆ ಮಾದರಿ ಎಂದು ಬಿ. ವಿ ತ್ಯಾಗರಾಜುರವರು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಬಳಗದ ಚಿ. ಸಂಜನ್ ವಿಶ್ವೇಶ್ವರಯ್ಯನವರನ್ನು ಕುರಿತಾದ ಒಂದು ಹಾಡನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದನು. ಕಾರ್ಯಕ್ರಮವನ್ನು ಚಿ. ಸುನೀಲ್ ನಿರೂಪಿಸಿದರು. ಬಳಗದ ಮಾರ್ಗದರ್ಶಕ ಶ್ರೀ ರಂಗನಾಥ್ ಹಾಗು ಶ್ರೀಮತಿ ಸುನಂದಾ ಮತ್ತು ಶ್ರೀಮತಿ ಲಕ್ಷೀ ತ್ಯಾಗರಾಜುರವರು ಉಪಸ್ಥಿತರಿದ್ದರು.

ತುಮಕೂರಿನ ಪ್ರಜಾವಾಣಿ ದಿನಪತ್ರಿಕೆಯ ವರದಿಗಾರರಾದ ಸನ್ಮಾನ್ಯ ಶ್ರೀ ಶಿವಕುಮಾರ್ ಬೂಕಾರವರು ನಮ್ಮ ಮಕ್ಕಳ ಬಳಗದ ಮೇಲಿನ ಅಭಿಮಾನದಿಂದ ಸ್ವಯಂಪ್ರೇರಿತ...
27/08/2016

ತುಮಕೂರಿನ ಪ್ರಜಾವಾಣಿ ದಿನಪತ್ರಿಕೆಯ ವರದಿಗಾರರಾದ ಸನ್ಮಾನ್ಯ ಶ್ರೀ ಶಿವಕುಮಾರ್ ಬೂಕಾರವರು ನಮ್ಮ ಮಕ್ಕಳ ಬಳಗದ ಮೇಲಿನ ಅಭಿಮಾನದಿಂದ ಸ್ವಯಂಪ್ರೇರಿತರಾಗಿ ಈ ದಿನದ "ಭೂಮಿಕಾ" supplementary ಯಲ್ಲಿ ಬಳಗದ ಕೆಲಸದ ಬಗ್ಗೆ ಒಂದು ಲೇಖನ ಬರೆದಿದ್ದಾರೆ. ಅವರ ಸಹೃದಯತೆ ಮತ್ತು ಸತ್ಕಾರ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಅವರ ಮನಸ್ಸು ಇತರರಿಗೆ ಮಾದರಿ. ಶ್ರೀ ಶಿವಕುಮಾರ್ ರವರಿಗೆ ನಮ್ಮ ಕೃತಜ್ಞತೆಗಳು.

ಸೇವೆಯ ಅವಕಾಶ ನೀಡಿ ಮುನ್ನಡೆಸುತ್ತಿರುವ, ನಮ್ಮ ಬಾಳಿಗೆ ಸಾರ್ಥಕತೆಯನ್ನು ಒದಗಿಸಿರುವ ನಮ್ಮ ಪೂಜ್ಯ ಗುರುಗಳೂ ಆದ ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀ ಯವರಿಗೆ ಈ ಸಂದರ್ಭದಲ್ಲಿ ಭಕ್ತಿಪೂರ್ವಕ ನಮಸ್ಕಾರಗಳು. ಬಳಗದ ಎಲ್ಲ ಹಿರಿಯ ಹಾಗು ಕಿರಿಯ ಮಕ್ಕಳಿಗೂ, ಅವರ ಪೋಷಕರಿಗೂ ನಮ್ಮ ಪ್ರೀತಿಪೂರ್ವಕ ಕೃತಜ್ಞತೆಗಳು.

Career Guidance by Young ScientistsKrupamayi Makkala Balaga organized a unique interactive session for children and pare...
19/07/2016

Career Guidance by Young Scientists

Krupamayi Makkala Balaga organized a unique interactive session for children and parents with two young scientists. The topic of discussion was “The essentials for choosing the right career path”.
Some important points of the sessions are summarized below.

Dr. Raju K. Gupta is one of the youngest professors at IIT Kanpur. He hails from a business family in rural UP who had minimal science or engineering background. Yet his passion to do engineering
and research led him to a fascinating journey of a Hindi-medium educated boy to an internationally recognized IIT professor in Chemical Engineering. Dr. Gupta shared his journey with the children in his own unique down-to- earth style by remembering the roles that his parents played in his success.

Later, he introduced the children to “Nanotechnology” and its possibilities in solving environmental,energy, water and health problems that the world is facing today. Children and parents were amazed at these possibilities and got many of them excited to explore this field of science.

The audience was introduced to the humane side of Dr. Raju as well. He runs a school for rural children of UP who lack most basic amenities of life. The school was started by Dr. Raju and few of his IIT Roorkee friends in an effort to provide world class primary schooling to rural children. His selfless service to India should set an example for all the IIT alumni.

Dr. Sudhir Ranganath is an Assistant Professor of Chemical Engineering at SIT Tumkur, who took risk by quitting a monotonous industry job to a more exciting research career. He is treading an
unconventional career path of researching in biomedical sciences despite being an engineer. Dr. Sudhir is also the founder Director of BIOINvENT research lab at SIT. The summary of his talk is as follows:

Career is a progression towards one’s ambition and is long-term and very different from a myopic “job” which is just to earn quick money and is short term. More so, career should be meaningful to not only yourself but to the society as well. Without understanding the seriousness of a “career”, children often make faulty career planning or no planning at all. The reasons are many such as following the crowd, getting influenced by others, pushy parents, demotivation, etc. Hence, Dr. Sudhir emphasized on the need for career guidance to young children and how proactively they should grab such opportunities.

Dr. Sudhir also discussed on the topic “research as a career”. He emphasized the need for research and innovation in India in this knowledge economy and globalized world.

He gave an example of Prof. Robert Langer, a world-renowned scientist, pioneer, educator and entrepreneur in the field of bioengineering. He redefined chemical engineering by rejecting 20 offers from oil companies and joining a low-paying researcher job with a cancer researcher. Thirty years later, his unconventional
approach of using engineering and chemistry has contributed to solving medical problems in an unprecedented way.

Finally, children and parents asked very meaningful and thought provoking questions to the two scientists. The questions ranged from “the difference between students/teachers in India and abroad”, “opportunities for research in non-science areas”, “upcoming and unconventional career paths such as agricultural engineering, nanotechnology, art history, bioinformatics”, “options to seek science degrees in premier institutes such as IISc, IISERs and IITs”, “GRE vs GATE”, and so on. In summary, the session lasted for almost 4 hours and the audience were overwhelmed with information and were very pleased.

Looking at the response, Makkala Balaga has hence decided to organize such events more frequently for the benefit of the children.

Photos of yesterday's Gamaka Habba 2016 program.
18/07/2016

Photos of yesterday's Gamaka Habba 2016 program.

18/07/2016

ನಿನ್ನೆ ( ದಿನಾಂಕ 17-07-2016, ಭಾನುವಾರ ) ತುಮಕೂರಿನ ಎಸ್.ಎಸ್ ಪುರಂನ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ 'ಗಮಕ ಹಬ್ಬ - 2016' ಕಾರ್ಯಕ್ರಮದ ಸಮಾರೋಪ ಸಮಾರಂಭವು ನೆರವೇರಿತು. ಈ ಸಂದರ್ಭದಲ್ಲಿ 'ಸಂಸ್ಕಾರ ಭಾರತಿ' - ತುಮಕೂರು ಶಾಖೆ - ಇವರು 'ಕೃಪಾಮಯಿ ಮಕ್ಕಳ ಬಳಗ'ದ ಹತ್ತು ವರ್ಷಗಳ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬಳಗದ ಮಾರ್ಗದರ್ಶಕರಾದ ತಾಯಿ ಸುನಂದಮ್ಮ ಹಾಗೂ ಶ್ರೀ ರಂಗನಾಥ್ ರವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ರಂಗನಾಥ್ ರವರು 'ಭಗವಂತನ ಕೃಪೆ ಹಾಗು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪ್ರೋತ್ಸಾಹ - ಪ್ರೇರಣೆಯಿಂದ ನಾವು ಕಿಂಚಿತ್ ಸೇವೆಯನ್ನು ಸಲ್ಲಿಸಲು ಸಾಧ್ಯವಾಗಿದೆ. ಈ ಸನ್ಮಾನದಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ಬಳಗದ ಚಟುವಟಿಕೆಗಳನ್ನು ಹೃತ್ಪೂರ್ವಕವಾಗಿ ಪ್ರೋತ್ಸಾಹಿಸಿ ಸಹಕರಿಸುತ್ತಿರುವ ಮಕ್ಕಳ ಪೋಷಕರು, ಬಳಗದ ಹಿತೈಷಿಗಳು ಹಾಗೂ ಮಕ್ಕಳನ್ನು ಯೋಗ್ಯವಾಗಿ ತರಬೇತಿಗೊಳಿಸಿ ಮಾರ್ಗದರ್ಶನ ನೀಡುತ್ತಿರುವ ಕಲಾವಿದರು - ಇವರೆಲ್ಲರನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ತುಮಕೂರಿನಲ್ಲಿ ಕಳೆದ ನಲವತ್ತು ವರ್ಷಗಳಿಂದ ಸತತವಾಗಿ ಗಮಕ ಕಲೆಯನ್ನು ಪೋಷಿಸುತ್ತಿರುವ ತಾಯಿ ತುಂಕೂರು ಸುನಂದ ಹಾಗೂ ಅವರ ಶಿಷ್ಯರು ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಗಮಕ ಭಾರತಿ ಛಾರಿಟಬಲ್ ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ.' ಎಂದು ಅಭಿಪ್ರಾಯಪಟ್ಟರು.

ತಾಯಿ ಸುನಂದ ಹಾಗು ಶ್ರೀ ರಂಗನಾಥ್ ರವರಿಗೆ "ಸನ್ಮಾನ ಪತ್ರ" ನೀಡಿ ಗೌರವಿಸಲಾಯಿತು. "ಸನ್ಮಾನ ಪಾತ್ರ"ದಲ್ಲಿ ಹೀಗೆ ಉಲ್ಲೇಖಿಸಲಾಗಿದೆ :

"ಆತ್ಮೀಯರೇ,
'ಬಿತ್ತಿಭಕ್ತಿಯ ಬೀಜ, ಶ್ರದ್ಧೆ ನೇಗಿಲ ಬಳಸಿ । ಉಳುಮೆ ನೀ ಮಾಡುತಿರು ದುಡಿಮೆ ಎತ್ತಿಂದ ।।
ತೋರು ಸರಿ ಆಸಕ್ತಿ ಮುಕ್ತಿ ಫಲ ಬೆಳಸಿನಲಿ । ಯೋಗಿ ಪುಂಗವನಾಗು ।। - ಮುದ್ದು ರಾಮ'
ಎಂಬ ಮುದ್ದುರಾಮನ ಮಾತಿಗೆ ಅನ್ವರ್ಥವಾಗಿ ಭಾರತದ ಭಾವಿ ಪ್ರಜೆಗಳ ಚಾರಿತ್ರ್ಯ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ನಿಮಗೆ ಅಭಿನಂದನೆಗಳು.

ಶ್ರೀಮತಿ ಸುನಂದರವರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ಶೆಟ್ಟಿಕೆರೆಯ ಶ್ರೀಮತಿ ಶಾರದಮ್ಮ ಮತ್ತು ಶ್ರೀ ಸತ್ಯನಾರಾಯಣ ದಂಪತಿಗಳ ಸುಪುತ್ರಿಯಾಗಿ, ಬಿ.ಎ ವ್ಯಾಸಂಗ ಮುಗಿಸಿದಿರಿ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಹುಲಿಕಲ್ ನ ಶ್ರೀ ರಾಮಚಂದ್ರಯ್ಯ ಹಾಗೂ ಜಯಲಕ್ಷ್ಮಮ್ಮ ನವರ ಸುಪುತ್ರರೂ ಸಂಗೀತ-ಸಾಹಿತ್ಯ-ಸೇವಾ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದ ಶ್ರೀ ಎಚ್.ಆರ್ ರಂಗನಾಥ್ ರವರ ಸಹಧರ್ಮಿಣಿಯಾಗಿ ತುಮಕೂರಿಗೆ ಬಂದ ನಂತರದಲ್ಲಿ ತಾವಿಬ್ಬರು ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂಜ್ಯ ಶ್ರೀಗಳಾದ ಶ್ರೀ ಶ್ರೀ ವೀರೇಶಾನಂದ ಸರಸ್ವತೀರವರ ಭಜನೆ ಹಾಗೂ ಪ್ರವಚನಗಳಿಂದ ಸ್ಫೂರ್ತಿಗೊಂಡು 2006ರಲ್ಲಿ "ಕೃಪಾಮಯಿ ಮಕ್ಕಳ ಬಳಗ"ವನ್ನು ಪ್ರಾರಂಭಿಸಿದಿರಿ.

ಪ್ರತಿ ಶನಿವಾರ ಹಾಗು ಭಾನುವಾರದಂದು ಮಕ್ಕಳಿಗೆ ಭಜನೆ, ಹಲವಾರು ಸ್ತೋತ್ರಗಳು, ಹನುಮಾನ್ ಚಾಲೀಸಾ, ಭಗವದ್ಗೀತೆಗಳನ್ನು ಅಭ್ಯಾಸ ಮಾಡಿಸುತ್ತ ಅವರ ಸರ್ವತೋಮುಖ ಬೆಳವಣಿಗೆಗಾಗಿ ನೀತಿ ಕಥೆಗಳು, ರಾಷ್ಟ್ರೀಯ ಹಬ್ಬಗಳ ಆಚರಣೆ, ವಿಜ್ಞಾನ ಗೋಷ್ಠಿಗಳ ಜೊತೆಗೆ ಕರಕುಶಲ ವಸ್ತುಗಳ ತರಬೇತಿ, ರಂಗೋಲಿ ತರಬೇತಿಯನ್ನು ಕೊಡುವ ಮೂಲಕ ಮಕ್ಕಳನ್ನು ಬೆಳೆಸಿದ್ದೀರಿ. ಅವರ ದೈಹಿಕ ಆರೋಗ್ಯದ ದೃಷ್ಟಿಯಿಂದ ಬೆಟ್ಟಗಳಿಗೆ ಚಾರಣಗಳನ್ನು ಏರ್ಪಡಿಸಿದಿರಿ.

ಮಕ್ಕಳಲ್ಲಿ ಸುಪ್ತವಾಗಿರುವ ಕಲಾವಿದನನ್ನು ಹೊರತರಲು ತಾವು ನಡೆಸುತ್ತಿರುವ ನಾಟಕ-ನೃತ್ಯ ಕಾರ್ಯಾಗಾರಗಳು ಸಾಕ್ಷಿಯಾಗಿವೆ. ಶ್ರೇಷ್ಠ ಕಲಾವಿದರನ್ನು ಸೇರಿಸಿಕೊಂಡು ಪ್ರತಿ ವರ್ಷ ನಾಟಕ ಪ್ರದರ್ಶಗಳನ್ನು ನೀಡುತ್ತಿದ್ದೀರಿ.

ಇವೆಲ್ಲಕ್ಕೂ ಕಿರೀಟವಿಟ್ಟಂತೆ ತಾವು ಮೇ ತಿಂಗಳ 28 ರಂದು ನಡೆಸಿದ 'ರಾಜ್ಯಮಟ್ಟದ ಮಕ್ಕಳ ಸಮ್ಮೇಳನ' ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿತೆಂದರೆ ಅತಿಶಯೋಕ್ತಿಯಲ್ಲ. 'ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು' ಎಂಬ ಶ್ರೀರಾಮನ ಮಾತಿನಂತೆ ಮಕ್ಕಳ ಬಳಗದ ಇಂದಿನ ಉಚ್ಚ್ರಾಯ ಸ್ಥಿತಿಯನ್ನು ನೋಡುತ್ತಿರುವವರಿಗೆ ಪ್ರಾರಂಭದ ದಿನಗಳಲ್ಲಿ ತಾವು ಪಟ್ಟ ಶ್ರಮ ತಿಳಿದಿರಲಾರದು. ಆದರೂ ತಾವು ಬಯಸಿದಂತೆ ಬಳಗದ ಮಕ್ಕಳು ಇಂದು ನಾನಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವುದು ತಮ್ಮ ಪರಿಶ್ರಮಕ್ಕೆ ಸಂದ ಗೌರವವೆಂದು ನಾವಾದರೂ ಭಾವಿಸುತ್ತೇವೆ.

ಪೂಜ್ಯ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಿಂದ ಇಷ್ಟೆಲ್ಲ ಸಾಧ್ಯವಾಯಿತು ಎಂಬ ತಮ್ಮ ಸಾರ್ಥಕ್ಯದ ಮಾತು ಸತ್ಯವಾದರೂ ತಮ್ಮ ಪರಿಶ್ರಮ ಅತ್ಯಂತ ಗಮನಾರ್ಹವಾದುದು. ತಮ್ಮ ಈ ಶ್ರೇಷ್ಠ ಕಾರ್ಯವನ್ನು ಗುರುತಿಸಿ ದೇಶದ ಶ್ರೇಷ್ಠ ಸಾಂಸ್ಕೃತಿಕ ಸಂಘಟನೆಯಾದ ಸಂಸ್ಕಾರ ಭಾರತೀ - ಕರ್ನಾಟಕ (ರಿ.), ತುಮಕೂರು ಶಾಖೆಯು, ಗಮಕ ಭಾರತೀ ಚಾರಿಟಬಲ್ ಟ್ರಸ್ಟ್ (ರಿ.), ಜಿಲ್ಲಾ ಗಮಕ ಕಲಾ ಪರಿಷತ್ತು, ತುಮಕೂರು, ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು - ಇವರ ಸಹಯೋಗದಲ್ಲಿ ತಾಯಿ ವಾಸವಿಯ ಸನ್ನಿಧಿಯಲ್ಲಿ ಸಂಪನ್ನವಾಗಿರುವ ಗಮಕ ಹಬ್ಬ - 2016 ರ ಸಮಾರೋಪ ಸಮಾರಂಭದ ಈ ಶುಭ ಸಂದರ್ಭದಲ್ಲಿ ತಮಗೆ "ಭಾವೀ ಭಾರತ ಶಿಲ್ಪಿ" ಎಂಬ ಬಿರುದನ್ನು ನೀಡಿ ಗೌರವಿಸುತ್ತಿದ್ದೇವೆ.

ತಮ್ಮಿಬ್ಬರ ಈ ಪವಿತ್ರ ಕಾರ್ಯದಲ್ಲಿ ತಮಗೆ ಸಹಾಯಕರಾಗಿರುವ ತಮ್ಮ ಮಕ್ಕಳಾದ ಶ್ರೀ ಸುನೀಲ್, ಶ್ರೀ ಸುಧೀರ್ ಮತ್ತು ಸೊಸೆ ಶ್ರೀಮತಿ ಪನ್ನಗ, ಮೊಮ್ಮಗಳು ಸಮನ್ವಿತ ಹಾಗೂ ಬಳಗದ ಎಲ್ಲಾ ಬಂಧುಗಳಿಗೆ ಪರಮಾತ್ಮನು ಸಕಲ ಸನ್ಮಂಗಳಗಳನ್ನು ನೀಡಲೆಂದು ಹಾರೈಸುತ್ತೇವೆ. ತಮ್ಮ ಸೇವೆ ಚಿರಾಯುವಾಗಲಿ.

ಗೌರವಪೂರ್ವಕ ವಂದನೆಗಳೊಂದಿಗೆ..
ತಾಯಿ ಭಾರತಿಯ ಸೇವೆಯಲ್ಲಿ ತಮ್ಮವರೇ ಆದ
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ಸಂಸ್ಕಾರ ಭಾರತೀ ಕರ್ನಾಟಕ (ರಿ.), ತುಮಕೂರು ಶಾಖೆ

ಶ್ರೀ ದುರ್ಮುಖಿ ನಾಮ ಸಂವತ್ಸರ ದಕ್ಷಿಣಾಯನ
ಗ್ರೀಷ್ಮ ಋತು ಆಶಾಢ ಶುಕ್ಲ ತ್ರಯೋದಶಿ
ಭಾನುವಾರ ದಿನಾಂಕ 17-07-2016"

Address

Tumkur
572102

Telephone

+91 9945696532

Website

Alerts

Be the first to know and let us send you an email when Krupamayi Makkala Balaga posts news and promotions. Your email address will not be used for any other purpose, and you can unsubscribe at any time.

Contact The Organization

Send a message to Krupamayi Makkala Balaga:

Share