Al Ameen Youth Federation Aramboor

Al Ameen Youth Federation Aramboor Youth team for Social Welfare

10/03/2026
ಹಿಜಾಮ ಚಿಕಿತ್ಸಾ ಶಿಬಿರದಲ್ಲಿ ಭಾಗಿಯಾದ ಶಿಬಿರಾರ್ಥಿಗಳಿಗೆ ಗೌರವ ಪತ್ರ ನೀಡಿ ಗೌರವಿಸಲಾಯಿತು.
28/12/2025

ಹಿಜಾಮ ಚಿಕಿತ್ಸಾ ಶಿಬಿರದಲ್ಲಿ ಭಾಗಿಯಾದ ಶಿಬಿರಾರ್ಥಿಗಳಿಗೆ ಗೌರವ ಪತ್ರ ನೀಡಿ ಗೌರವಿಸಲಾಯಿತು.

الحمد لله ನಮ್ಮ ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು ಸಂಘಟನೆಯ ವತಿಯಿಂದ ನಡೆಸಲ್ಪಡುವ ಹಿಜಾಮ ಚಿಕಿತ್ಸಾ ಶಿಬಿರದ ಕಾರ್ಯಕ್ರಮದ ಉದ್ಘಾಟನೆ ನಡೆಸ...
28/12/2025

الحمد لله
ನಮ್ಮ ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು ಸಂಘಟನೆಯ ವತಿಯಿಂದ ನಡೆಸಲ್ಪಡುವ ಹಿಜಾಮ ಚಿಕಿತ್ಸಾ ಶಿಬಿರದ ಕಾರ್ಯಕ್ರಮದ ಉದ್ಘಾಟನೆ ನಡೆಸಿದ, ಮಸೀದಿಯ ಖತೀಬರಾದ ಮುಈನುದ್ದೀನ್ ಫೈಝಿ ಉಸ್ತಾದರು, ಸಭೆಯ ಅಧ್ಯಕ್ಷತೆ ವಹಿಸಿದ ಮಸೀದಿಯ ಅಧ್ಯಕ್ಷರಾದ ಹಾಜಿ ಭಾಷಾ ಸಾಹೇಬ್ ಅರಂಬೂರು, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರು, ಮಸೀದಿಯ ಗೌರವ ಸದಸ್ಯರೂ ಆದ ಸಂಶುದ್ದೀನ್ ಎಸ್ ಎ ಎಸ್, AYF ಅರಂಬೂರು ಇದರ ಅಧ್ಯಕ್ಷರಾದ ಆಸೀಫ್ ಪನ್ನೆ, ಮಸೀದಿಯ ಉಸ್ತಾದರಾದ ಇಬ್ರಾಹಿಂ ಮುಸ್ಲಿಯಾರ್, ಹಿಜಾಮ ಚಿಕಿತ್ಸಾ ತಜ್ಞರಾದ ಅಬೂ ಫಾಝಿಲ್ ಪ್ರಾಣ ಕ್ಲಿನಿಕ್, ಹೀಲಿಂಗ್ & ಹಿಜಾಮ ಸೆಂಟರ್, ಸಂಘಟನೆಯ ಸದಸ್ಯರೂ,ವೈದ್ಯಕೀಯ ವಿದ್ಯಾರ್ಥಿಯೂ ಆದ ಹಫೀಜ್ ಪಿ.ಆರ್ ರವರು ಈ ಸಮಯದಲ್ಲಿ ಉಪಸ್ಥಿತರಿದ್ದರು.

ಅಲ್ ಅಮೀನ್ ಅರಂಬೂರು  – ಸ್ಪಟಿಕ ಮಹೋತ್ಸವ ಲೋಗೋ ಅನಾವರಣಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಸಂಘಟನೆಯು ತನ್ನ 15ನೇ ವರ್ಷದ ಸಂವತ್ಸರವನ್ನು ಪ್ರ...
06/10/2025

ಅಲ್ ಅಮೀನ್ ಅರಂಬೂರು – ಸ್ಪಟಿಕ ಮಹೋತ್ಸವ ಲೋಗೋ ಅನಾವರಣ

ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಸಂಘಟನೆಯು ತನ್ನ 15ನೇ ವರ್ಷದ ಸಂವತ್ಸರವನ್ನು ಪ್ರವೇಶಿಸಿರುವ ಸಂದರ್ಭದಲ್ಲಿ, “ಸೌಹಾರ್ದತೆ ಮತ್ತು ಒಗ್ಗಟ್ಟಿನ 15 ವರ್ಷಗಳು” ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷವನ್ನು “ಸ್ಪಟಿಕ ಮಹೋತ್ಸವ ವರ್ಷ” ಎಂದು ಘೋಷಿಸಿ ವರ್ಷಪೂರ್ತಿ ವೈವಿಧ್ಯಮಯ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಯೋಜನೆ ರೂಪಿಸಲಾಗಿದೆ.

ಈ ಮಹೋತ್ಸವದ ಅಧಿಕೃತ ಆರಂಭದ ಭಾಗವಾಗಿ, ಸ್ಪಟಿಕ ಮಹೋತ್ಸವ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ದುಗ್ಗಲಡ್ಕದ ಮಸೀದಿಯ ವಠಾರದಲ್ಲಿ ಭವ್ಯವಾಗಿ ನೆರವೇರಿಸಲಾಯಿತು.

ಕಾರ್ಯಕ್ರಮವಾದ 'ಸ್ಪಟಿಕ ಮಹೋತ್ಸವ'ದ ಲೋಗೋವನ್ನು ಅಕ್ಟೋಬರ್ 5 ರಂದು NPM ಝೈನುಲ್ ಆಬಿದೀನ್ ತಂಙಲ್ ದುಗ್ಗಲಡ್ಕ ರವರು ಅನಾವರಣ ಮಾಡಿ, ದುವಾಗೈದು, ಸಂಘಟನೆಯ ಧ್ಯೇಯ ಉದ್ದೇಶಗಳ ಕುರಿತು ಮಾಹಿತಿ ಪಡೆದು, ಸಂಘಟನಾ ಸದಸ್ಯರಿಗೆ ಹುರಿದುಂಬಿಸಿದರು.

ಪರಿಸರ ಸಂರಕ್ಷಣೆ, ಶೈಕ್ಷಣಿಕ ಕಾರ್ಯಕ್ರಮ, ಆರೋಗ್ಯ ಶಿಬಿರ ಮತ್ತು ಸಾಂಸ್ಕೃತಿಕ-ಧಾರ್ಮಿಕ ಚಟುವಟಿಕೆಗಳನ್ನು ಒಳಗೊಂಡಂತೆ ಒಟ್ಟು 15 ಕಾರ್ಯಕ್ರಮಗಳನ್ನು ವರ್ಷದೊಳಗೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ .
ಈ ಎಲ್ಲಾ ಕಾರ್ಯಕ್ರಮಗಳು ಸಮಾಜಮುಖಿ, ಶೈಕ್ಷಣಿಕ ಬೆಂಬಲ ಹಾಗೂ ಧಾರ್ಮಿಕ ಅರಿವು ಅಭಿವೃದ್ದಿಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆಸಿಫ್ ಪನ್ನೆ, ಪ್ರಧಾನ ಕಾರ್ಯದರ್ಶಿ ನಿಸಾರ್ ಶೈನ್ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಬ್ದುಲ್ಲಾ ಅರಂಬೂರು, ನಾಸಿರ್ ಪಾಲಡ್ಕ, ಮುನೀರ್ ಶೈನ್, ಮಿರಾಜ್ ಮಾಂಬ್ಲಿ, ಸಂಶುದ್ದೀನ್ ಮಾಂಬ್ಲಿ, ಆಶಿಕ್ ಸ್ಟಾರ್, ಶರೀಫ್ ಮಾಂಬ್ಲಿ, ರಾಶಿದ್ ಪಾಲಡ್ಕ, ಫಾರಿಸ್ ಮಾಂಬ್ಲಿ ಉಪಸ್ಥಿತರಿದ್ದರು.

ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ ಸದಸ್ಯರಿಗಾಗಿ ನಡೆಸಿದ ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ನಡೆದ ಹಲವಾರು ವಿಶಿಷ್ಟ ಕಾರ್ಯಕ್ರಮಗಳಲ್ಲಿ ಭ...
28/08/2025

ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ ಸದಸ್ಯರಿಗಾಗಿ ನಡೆಸಿದ ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ನಡೆದ ಹಲವಾರು ವಿಶಿಷ್ಟ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವಿಜಯಶಾಲಿಗಳಾದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು..
ಹಾಗೆಯೇ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರುಗಳಿಗೂ ಧನ್ಯವಾದಗಳು.

19/08/2025

ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು ಇದರ ಸದಸ್ಯರ ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ, ವಿನೂತನ ಸ್ಪರ್ಧೆ... ಬುದ್ಧಿಮತ್ತೆಗೆ ಬಣ್ಣ ಹಚ್ಚಿದ ವಿಭಿನ್ನ ಪ್ರಯತ್ನ..

ನಮ್ಮ ಸಂಸ್ಥೆಯು ಪ್ರಾರಂಭದಿಂದಲೇ ಸಮಾಜ ಸೇವೆ, ಧಾರ್ಮಿಕ ಕಾರ್ಯ, ಶೈಕ್ಷಣಿಕ ಬೆಳವಣಿಗೆ ಇವುಗಳ ಮೇಲೆ ವಿಶೇಷ ಒತ್ತು ನೀಡುತ್ತ ಬಂದಿದೆ. ಮಸೀದಿ ಮತ್ತು ಮದರಸಾಗಳಿಗೆ ಸಂಬಂಧಿಸಿದ ಶ್ರಮಧಾನ, ಧನಸಹಾಯ, ಅಗತ್ಯವಿರುವಾಗ ವಸ್ತುಸಹಾಯ ಹೀಗೆ ಹಲವಾರು ಕಾರ್ಯಗಳನ್ನು ಸದಸ್ಯರು ಒಗ್ಗಟ್ಟಿನಿಂದ ನೆರವೇರಿಸುತ್ತಿದ್ದೇವೆ

ಇದಲ್ಲದೆ, ಮೀಲಾದ್, ರಮದಾನ್ ಮುಂತಾದ ಪವಿತ್ರ ಸಂದರ್ಭಗಳಲ್ಲಿ ಊರಿನಲ್ಲಿ ನಡೆಯುವ ಹಲವಾರು ಪುಣ್ಯ ಕಾರ್ಯಗಳಲ್ಲಿ ನಮ್ಮ ಸಂಸ್ಥೆಯ ಸಕ್ರಿಯ ಭಾಗವಹಿಸುವಿಕೆ ಕಂಡು ಬರುತ್ತದೆ. ಈ ಮೂಲಕ ಧಾರ್ಮಿಕ ಚಟುವಟಿಕೆಗಳಿಗೆ ಬಲ ನೀಡುವುದರ ಜೊತೆಗೆ, ಸಮಾಜದಲ್ಲಿ ಒಗ್ಗಟ್ಟು ಮತ್ತು ಸಹಕಾರದ ವಾತಾವರಣವನ್ನು ನಿರ್ಮಿಸುವ ಕೆಲಸವೂ ಆಗುತ್ತಿದೆ.

ಸದಸ್ಯರ ನಡುವೆ ಸ್ನೇಹ, ಸಹಕಾರ ಮತ್ತು ಉತ್ಸಾಹವನ್ನು ಹೆಚ್ಚಿಸಲು ವಿವಿಧ ಕ್ರೀಡೆಗಳು, ಸ್ಪರ್ಧೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುತ್ತಿದೆ. ಇಂತಹ ಚಟುವಟಿಕೆಗಳು ಸದಸ್ಯರ ಸಾಮರ್ಥ್ಯವನ್ನು ಹೊರತೆಗೆದು ತರುವುದು ಮಾತ್ರವಲ್ಲ, ಸಂಸ್ಥೆಯ ಬೆಳವಣಿಗೆಯಲ್ಲಿಯೂ ಒಳ್ಳೆಯ ಪಾತ್ರವಹಿಸುತ್ತವೆ.

ಮುಂದಿನ ದಿನಗಳಲ್ಲಿ ಕೂಡಾ ಸಮಾಜ ಸೇವೆ, ಶಿಕ್ಷಣ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸದಸ್ಯರ ವ್ಯಕ್ತಿತ್ವಾಭಿವೃದ್ದಿ ಆಗಿ, ನಮ್ಮ ಸಂಸ್ಥೆ ಇನ್ನಷ್ಟು ಉತ್ತಮ ದಿಕ್ಕಿನಲ್ಲಿ ಬೆಳೆಯಲಿ ಎಂಬುದು ನಮ್ಮ ಆಶಯ. 🔥

ಅಭಿನಂದನೆಗಳು..ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ ಕಾರ್ಯಕಾರಿ  ಸಮಿತಿಯ ಕಾರ್ಯದರ್ಶಿಗಳಾದ ಮುನೀರ್ ಶೈನ್ ಹಾಗೂ ಮಾಧ್ಯಮ ಸಂಯೋಜಕರಾದ ನಿಝಾ...
11/08/2025

ಅಭಿನಂದನೆಗಳು..

ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಗಳಾದ ಮುನೀರ್ ಶೈನ್ ಹಾಗೂ ಮಾಧ್ಯಮ ಸಂಯೋಜಕರಾದ ನಿಝಾರ್ ಶೈನ್, ಕ್ರೀಡಾಳುಗಳ ಕಲ್ಯಾಣಕ್ಕಾಗಿ ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾದ ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್ ಇದರ ಸುಳ್ಯ ಝೋನ್ ಸಮಿತಿಯ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ, ಜೊತೆ ಕಾರ್ಯದರ್ಶಿಗಳಾಗಿ ಮುನೀರ್ ಶೈನ್ ರವರು ಹಾಗೂ ಮಾಧ್ಯಮ ಕಾರ್ಯದರ್ಶಿಗಳಾಗಿ ನಿಝಾರ್ ಶೈನ್ ರವರು ಆಯ್ಕೆಯಾಗಿರುವುದು ನಮ್ಮ ಸಂಘಟನೆಗೆ ಅತೀವ ಸಂತಸ ಹಾಗೂ ಹೆಮ್ಮೆಯ ವಿಷಯವಾಗಿದೆ..

ನಿಮ್ಮ ಅಧಿಕಾರಾವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಅಲ್ಲಾಹನು ಅನುಗ್ರಹಿಸಲಿ...

18/12/2024

ಮಾಷಾ ಅಲ್ಲಾಹ್♥️

ಒಂದೇ ದಿನದಲ್ಲಿ ಅರಂಬೂರಿನ ಅಲ್ ಅಮೀನ್ ಯೂತ್ ಫೆಡರೇಶನ್ ಸಂಘಟನೆಯ ಮೂವರು ಸದಸ್ಯರಿಂದ ರಕ್ತದಾನ🫶💐

ಸಮಾಜ ಸೇವೆಯಲ್ಲೂ, ಧಾರ್ಮಿಕ ಕ್ಷೇತ್ರದಲ್ಲೂ, ಜೀವಕಾರುಣ್ಯ ಚಟುವಟಿಕೆಗಳಲ್ಲಿ ಗುರುತಿಸಿ ಕೊಂಡಿರುವ ಅರಂಬೂರಿನ ಯುವಕರ ಸಂಘಟನೆಯಾದ ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ ಮೂವರು ಸದಸ್ಯರು ಇಂದು (ಡಿಸೆಂಬರ್ 18) ಕೆವಿಜಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ತುರ್ತು ರಕ್ತದ ಅವಶ್ಯಕತೆ ಇದ್ದಾಗ ತಕ್ಷಣ ಸ್ಪಂದಿಸಿ,

ಬೆಳಗ್ಗೆ O+ve ರಕ್ತದ ಅವಶ್ಯಕತೆಗೆ ಸ್ಪಂದಿಸುತ್ತಾ ರಾಶಿದ್ ಪಾಲಡ್ಕ,

ಮಧ್ಯಾಹ್ನದ ಸಮಯದಲ್ಲಿ B+ve ರಕ್ತದ ಅವಶ್ಯಕತೆಗೆ ಮುಕ್ತಾರ್ ಮಾಂಬ್ಲಿ ಹಾಗೂ
AYF ಕೋಶಾಧಿಕಾರಿ ನಾಸಿರ್ ಪಾಲಡ್ಕ ರಕ್ತ ಕೊಟ್ಟು ಸಹಕರಿಸಿದ್ದಾರೆ .

ಈ ಮೂವರಿಗೆ ತಮ್ಮ ಸ್ಪಂದನೆಗೆ, ಹಾಗೂ ರಕ್ತದಾನದ ವಿಷಯದಲ್ಲಿ ಮುಂಚೂಣಿಯಲ್ಲಿದ್ದು, ಮೆಡಿಕಲ್ ವಿಂಗ್ ಕಾರ್ಯನಿರ್ವಾಹಕರಾಗಿ ಸಹಕರಿಸುತ್ತಿರುವ *ರಮೀಝ್ ಶೈನ್* ರವರಿಗೂ ಕೃತಜ್ಞತೆಗಳು.

🩸 ರಕ್ತ ಕೊಟ್ಟು ,ಬಾಂಧವ್ಯ ಕಟ್ಟು🩸

# AYF ಮೆಡಿಕಲ್ ವಿಂಗ್
ಅರಂಬೂರು

ಧನ್ಯವಾದಗಳು💐💐*ರಾಶಿದ್ ಪಾಲಡ್ಕ*  wing ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು
18/12/2024

ಧನ್ಯವಾದಗಳು💐💐

*ರಾಶಿದ್ ಪಾಲಡ್ಕ*

wing
ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು

ಧನ್ಯವಾದಗಳು💐💐*ನಾಸಿರ್ ಪಾಲಡ್ಕ*  wing ಅಲ್ ಅಮೀನ್ ಫೆಡರೇಷನ್ ಅರಂಬೂರು
18/12/2024

ಧನ್ಯವಾದಗಳು💐💐

*ನಾಸಿರ್ ಪಾಲಡ್ಕ*

wing
ಅಲ್ ಅಮೀನ್ ಫೆಡರೇಷನ್ ಅರಂಬೂರು

ಧನ್ಯವಾದಗಳು💐💐*ಮುಖ್ತಾರ್ ಮಾಂಬ್ಲಿ*  wing ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು
18/12/2024

ಧನ್ಯವಾದಗಳು💐💐

*ಮುಖ್ತಾರ್ ಮಾಂಬ್ಲಿ*

wing
ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು

Address

Near Badar Masjid Aramboor
Sullia
574314

Alerts

Be the first to know and let us send you an email when Al Ameen Youth Federation Aramboor posts news and promotions. Your email address will not be used for any other purpose, and you can unsubscribe at any time.

Share