31/07/2025
ಇದೇ ಜೂನ್ 8, 2025 ರಂದು 'ಅಸಹಾಯಕ ಮಕ್ಕಳಿಗೆ ಸಹಾಯ ಯೋಜನೆ' ಎಂಬ ವಿನೂತನ ಕಾರ್ಯಕ್ರಮ ಜರುಗಿತು.
ಧಾರವಾಡ ಜಿಲ್ಲೆಯ 7 ವಿದ್ಯಾರ್ಥಿಗಳು, ಗದಗ,ದಾಂಡೆಲಿ ಅಂಬಿಕಾನಗರ ದಿಂದ ಒಬ್ಬಬ್ಬರು ಒಟ್ಟೂ 10 ಫಲಾನುಭವಿಗಳು ಇದ್ದರು ಕೆಲವು ಪಾಲಕರ ಹಳೇ ಶಿಭಿರಾರ್ಥಿಗಳು ಸಹ ಕಾರ್ಯಕ್ರಮದ ಪಾಲುದಾರರಾಗಿದ್ದರು.
ನಮ್ಮ ಸೇವಾಭಿಮಾನಿ ಬಳಗದ ಸದಸ್ಯರಾದ ಹಳಿಯಾಳದ ಶ್ರೀ ಸುರೇಶ ಕಡೆಮನಿ, ಸೇವಾಭಿಮಾನಿಗಳಾದ ಶ್ರೀ ಮಲ್ಲಿಕಾರ್ಜುನ ದೊಡ್ಡಗೌಡ್ರು, ಲೂಸಿಯಾನ, ಬಂಕಾಪುರದಿಂದ ಶ್ರೀಯುತ ಶಂಕರ ಸಿಗ್ಗಾಂವದ ಗದಿಗೆಪ್ಪ ಹಾಗೂ ಸ್ನೇಹ ಆಶ್ರಮದ ಉದಾರ ಮನಸುಗಳ ಸಹಾಯದಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿ ಗಳನ್ನು ವಿತರಿಸಲಾಯಿತು.
ಸಂಪೂರ್ಣ ಕಾರ್ಯಕ್ರಮ ನಮ್ಮ ಆಶ್ರಮದ ಮಾರ್ಗದರ್ಶಕರಾದ ಶ್ರೀ ಶಂಕರ ಚವಾಣರವರ ಉಸ್ತುವಾರಿಯಲ್ಲಿ ನಡೆಯಿತು.ಇದೇ ಸುಸಮಯದಲ್ಲಿ ಅತಿಥಿಯಾಗಿ ಆಗಮಿಸಿದ ಪೂಜ್ಯ .ಪಾದರ ದೇವಸ್ಯ ರವರಿಗೆ ಜನ್ಮದಿನದ ಶುಭಾಶಯ ಕೋರಲಾಯಿತು.
ಸರ್ವ ದಾನಿಗಳಿಗೆ, ಸೇವಾಭಿಮಾನಿಗಳಿಗೆ ಅಪಾರ ಉಪಕಾರಗಳು,ನಮಸ್ಕಾರಗಳು!