27/12/2021
ಗೆಳೆಯ ಕೆ.ಪಿ.ನಟರಾಜ್ ಬರಹ:
ಇದೊಂದು ಪದಗಳಲ್ಲಿ ಹಿಡಿದಿಡಲಾಗದ ಮಹಾ ಮೋಸದ ವಿದ್ಯಮಾನ ..
ಆಕಾಶ ಮುಟ್ಟಿರುವ ಬೆಲೆಗಳು , ಪಾತಾಳಮುಟ್ಟಿರುವ ರೂಪಾಯಿ , ಕುಸಿದು ಬಿದ್ದಿರುವ ಜಿಡಿಪಿ , ಹಾಳಾಗಿಹೋಗುತ್ತಿರುವ ಸಮುದಾಯಗಳ ನಡುವಿನ ಸಾಮರಸ್ಯ , ನಾಶನವಾಗಿರುವ ಸಾಂವಿಧಾನಿಕ ಸಂಸ್ಥೆಗಳು , ಅಬ್ಬೆಪಾರಿ ಸ್ಥಿತಿ ತಲುಪಿರುವ ಪ್ರಜಾಪ್ರಭುತ್ವ , ಬೀದಿ ಬೀದಿಗಳಲ್ಲಿ ಠಳಾಯಿಸುತ್ತಿರುವ ಮಾರಲ್ ಪೊಲೀಸಿಂಗ್ ಪಡೆಗಳು .. ಇವರ ಜೊತೆ ಕೈಜೋಡಿಸುತ್ತಿರುವ ಪೊಲೀಸರು ಜಾತೀಯತೆಯಿಂದ ಮತಾಂಧತೆಗೆ ಪ್ರೊಮೋಷನ್ ಪಡೆದಿರುವ ಹಿಂದೂ ಜಾತಿಗಳ ಜನ
ಇಂತ ಹ ಉರಿಯುತ್ತಿರು ವ ಮನೆಯ ಅನುಕೂಲಕರ ಪರಿ
ಸ್ಥಿತಿ ಯಲ್ಲಿ 'ಗಳ ಹಿರಿಯುತ್ತಿರುವ ' ಮೋದಿ ಎಂಬ ಪುಣ್ಯಾತ್ಮ ತಲಾ ಸಾವಿರ ರೂಪಾಯಿ ಕೊಡಿ ಎಂದು ದೇಶದ ಜನರಲ್ಲಿ ಬಿಕ್ಷೆ ಬೇಡುತ್ತಿದ್ದಾರೆ
ಈಗಾಗಲೇ ದೇಶದ ಸಿರಿವಂತ ಕಾರ್ಪೊರೇಟ್ ಕುಳಗಳು
ಮೋದಿಯ ಕೋಮುವಾದಿ ರಾಜಕಾರಣಕ್ಕೆ ಒಂದು ಅಂದಾಜು ತೊಂಬತ್ತು ಪರ್ಸೆಂಟ್ ಗೂ ಹೆಚ್ಚು ದೇಣಿಗೆ ಕೊಡುತ್ತಿದ್ದಾರೆ . ಮಿಕ್ಕ ಹತ್ತು ಪರ್ಸೆಂಟ್ ಮಾತ್ರ ಮಿಕ್ಕ ರಾಜಕೀಯ ಪಕ್ಷಗಳಲ್ಲಿ ಹಂಚಿಕೆಯಾಗಿದೆ
ಮೋದಿಯ ರಾಜಕಾರಣಕ್ಕೆ ದೇಣಿಗೆ ಅಂದರೆ , ಅದು ಯಾವ ಕಾರ್ಯಾಚರಣೆ ಗೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಈಗ ಜನ ಸಾಮಾನ್ಯರ ದುಡ್ಡನ್ನು ದೋಚಲು ಹೊರಟ ತಾಜಾ ಯೋಜನೆ ಇದು
ಮತೀಯವಾದಿ ರಾಜಕಾರಣವನ್ನು ಶಾಶ್ವತಗೊಳಿಸಲು ಧನ ಸಂಪನ್ಮೂಲ ಸಂಗ್ರಹದ ದೂರಗಾಮಿ ಹುನ್ನಾರ ಇದು ಅಂತ ಜನ ಸಾಮಾನ್ಯ ತಿಳಿಯದಿದ್ದರೆ ನಮ್ಮ ನರಕ ಮತ್ತಷ್ಟು ಆಳವಾಗುತ್ತದೆ ಅನ್ನಿಸುತ್ತದೆ
ಚರಂಡಿಯ ಹುಳಗಳಂತಿರುವ ಜನ ಈ ಬಗ್ಗೆ ಯೋಚಿಸುತ್ತಲೇ ಇಲ್ಲ..
ತಿಳಿವಳಿಕಸ್ತ minority ಜನ ನಾವು ಕೂಡಾ aap bsp JDS cpim CP I ಅದೂ ಇದೂ ಅಂತ ಹರಿದು ಹಂಚಿಹೋಗಿದ್ದಾರೆ
ಭಯಂಕರ ಸಂಗತಿ ಅಂದರೆ , ದೊಡ್ಡ ಸಂಖ್ಯೆಯ ( ಎಪ್ಪತ್ತೇಳು ಜನ ) sc/st reserved mp ಗಳು ಕಳೆದ ಏಳು ವರ್ಷಗಳಿಂದ ಮೋದಿ ಆಡಳಿತವನ್ನು ಬಲವಾದ ಪಿಲ್ಲರ್ ಗಳಂತೆ ಹೊತ್ತು ನಿಂತುಬಿಟ್ಟಿರುವುದು