16/08/2026
ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ ಬಹುವೇಗವಾಗಿ ಓಡಾಡುತ್ತಿದೆ.ನಾನು ಅರುಣಣ್ಣನ ಅಭಿಮಾನಿ ಎಂಬ ಹೆಸರಿನಲ್ಲಿ ಇರುವ ಸಂದೇಶ..ನೂರಕ್ಕೆ ನೂರು ಹೇಳಬಲ್ಲೆ ಅದು ಬರೆದಿರುವುದು ಅರುಣಣ್ಣನ ಅಭಿಮಾನಿಯು ಅಲ್ಲ ಹಿತೈಷಿಯೂ ಅಲ್ಲ..ಕಳೆದ 3-4 ವರ್ಷಗಳಿಂದ ಅರುಣಣ್ಣನನ್ನು ರಾಜಕೀಯವಾಗಿ ಮುಗಿಸಬೇಕೆಂದು ಪಣತೊಟ್ಟಿರುವ ತಂಡದ ಒಬ್ಬ ಸದಸ್ಯ.ಕಳೆದ ಚುನಾವಣೆಯಲ್ಲಿ ಪಕ್ಷದಿಂದ ಬಂದ ಕೋಟಿ-ಕೋಟಿ ಹಣ ಹೊಡೆದು ಮುಂದಿನ ಚುನಾವಣೆಯಲ್ಲಿ ಪುತ್ತಿಲರು ಪಕ್ಷೇತರವಾಗಿ ಚುನಾವಣೆಗೆ ನಿಂತಾಗ ಹಣ ದೋಚಲು ಸಿದ್ಧವಾಗಿ ನಿಂತಿರುವ ಒಬ್ಬ ಸ್ವಾರ್ಥಿ.
ಆತ 2023 ರ ಕೊಟೇಚಾ ಹಾಲ್ ನಲ್ಲಿ ನಡೆದ ಮೊದಲ ಕಾರ್ಯಕರ್ತರ ಸಭೆಯ ದಿನದ ತನಕ ಅಭಿಮಾನಿಯಾಗಿದ್ದರಬಹುದು..ಆದರೆ ನಂತರ ಕೆಲ ಸ್ವಾರ್ಥಿಗಳು ಅರುಣಣ್ಣನ ಜೊತೆಯಿದ್ದ ಪ್ರತಿಯೊಬ್ಬ ಕಾರ್ಯಕರ್ತನ ಮನೆ ಬಿಡದೆ ನಡು ರಾತ್ರಿಯಲ್ಲೂ ಮನ ಪರಿವರ್ತನೆ ಮಾಡಿದ ಸದಸ್ಯರಲ್ಲೊಬ್ಬ ಎಂಬುದು ಸ್ಪಷ್ಟ…ಕಾರಣ ಇಷ್ಟೆ ..ಅರುಣಣ್ಣನ ಅಭಿಮಾನಿಯಾದವ ಇಂತಹ ಬರಹಗಳನ್ನು ಬರೆಯಲು ಸಾಧ್ಯವೇ ಇಲ್ಲ..35-40 ವರ್ಷಗಳಲ್ಲಿ ಪಕ್ಷ,ಸಂಘಟನೆ ಮಾಡಿದ ಅನ್ಯಾಯವನ್ನು ಕಂಡವ ಯಾರೂ ಕೂಡ ಅಂತಹ ಲೇಖನ ಬರೆಯಲು ಸಾಧ್ಯವೇ ಇಲ್ಲ.
ಇಂತಹ ಲೇಖನ 2023 ರ ಮುಂಚೆ ಪುತ್ತಿಲರು ಬಿಜೆಪಿ ಅಭ್ಯರ್ಥಿ ಆಗಲೇಬಾರದೆಂದು ಕೆಲ ಹಿತಶತ್ರುಗಳು ಬರೆಸುತ್ತಿದ್ದರು..2023 ರ ನಂತರ ಬಂದ ಲೇಖನಗಳಿಗೆ ಲೆಕ್ಕವೇ ಇರಲಿಕ್ಕಿಲ್ಲ..2023 ರ ಚುನಾವಣೆ ಸಾಕ್ಷಿಯಾಯಿತು ಇಂತಹ ಯಾವುದೇ ಲೇಖನವನ್ನು ಕಾರ್ಯಕರತರು,ಹಿಂದೂ ಸಮಾಜ ಒಪ್ಪುವುದಿಲ್ಲವೆಂದು..ಕಾರಣ ನೂರಾರು ಫೇಕ್ ಅಕೌಂಟ್ಗಳು,ಅಸಭ್ಯ ಪೋಸ್ಟರ್ಗಳು,ಲೇಖನಗಳು,ವಿಡಿಯೋಗಳು,ಪ್ರೆಸ್ ಮೀಟ್ ಗಳು,ಕುತಂತ್ರಗಳು,ಹಣದ ಆಮಿಷಗಳು,ವಾಮಾಚಾರಗಳು..ಇಂತಹ ಸವಾಲುಗಳ ಸಂದರ್ಭದಲ್ಲೂ ಕಾರ್ಯಕರ್ತರು,ಹಿಂದೂ ಸಮಾಜ ಪುತ್ತಿಲರ ಜೊತೆ ನಿಂತದ್ದು ಇತಿಹಾಸ..ಕಾರಣ ಆ ವ್ಯಕ್ತಿ ಚುನಾವಣಾ ಸಮಯದಲ್ಲಿ ಹುಟ್ಟಿಕೊಂಡ ಅಣಬೆಯಾಗಿರಲಿಲ್ಲ..ಆ ವ್ಯಕ್ತಿ 4 ದಶಕಗಳಿಂದ ಪುತ್ತೂರಿನ ಗಲ್ಲಿ ಗಲ್ಲಿಯಲ್ಲೂ ಹಿಂದೂ ಸಮಾಜದ ಕಷ್ಟದ ಸಮಯದಲ್ಲಿ ಜೊತೆ ನಿಂತಿದ್ದ ಎಂಬುದು ಪುತ್ತೂರಿನ ಪ್ರತಿಯೊಬ್ಬ ಹಿಂದುವಿಗೂ ಗೊತ್ತಿತ್ತು.
ನಿನ್ನೆ ಬರೆದ ಲೇಖನ ಷೇರ್ ಮಾಡುತ್ತಿರುವ ಮಹಾನುಭಾವರುಗಳೇ..2023 ರ ಚುನಾವಣೆಯ ಮೊದಲು ಹಾಗೂ ನಂತರ ನೀವು ಪುತ್ತಿಲರಿಗಾಗಿ ದುಡಿದ್ದೀರಾ?ಪಕ್ಷದಲ್ಲಿ ಜವಾಬ್ದಾರಿ ಕೊಡುವಂತೆ ಪಕ್ಷದ ಹಿರಿಯರಲ್ಲಿ ಕೇಳಿಕೊಂಡಿದ್ದೀರಾ?ಅಶೋಕ್ ರೈ ಎಂಬ ಕಾಂಗ್ರೆಸ್ ನಾಯಕನನ್ನು ಸೋಲಿಸಲು ಪುತ್ತಿಲರಿಂದ ಮಾತ್ರ ಸಾಧ್ಯ ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿದ್ದೀರಾ?ಚುನಾವಣೆ ಸಮಯದಲ್ಲಿ ಪಕ್ಷ ಪುತ್ತಿಲರಿಗೆ ಮಾಡಿದ ದ್ರೋಹವನ್ನು ಪ್ರಶ್ನಿಸಿದ್ದಿರಾ?ಹಿಂದೂ ಕಾರ್ಯಕರ್ತರಿಗೆ 3 ವರ್ಷದಿಂದ ಆದ ಅನ್ಯಾಯದ ವಿರುದ್ಧ ಹೋರಾಡಿದ್ದೀರಾ?
ಪಕ್ಷದಲ್ಲಿ ಚುನಾವಣೆ ಸೋತ ಯಾವೊಬ್ಬ ನಾಯಕನೂ ಕ್ಷೇತ್ರದಲ್ಲಿ ಓಡಾಡದೆ ಮನೆಯಲ್ಲೇ ಇರೋದು ಸಾಮಾನ್ಯ..ಮತ ಹಾಕಿದ ಮತದಾರರ ಸಂಪರ್ಕವೇ ಇಟ್ಟುಕೊಳ್ಳೋದಿಲ್ಲ…ಮತ್ತೆ ಸಂಪರ್ಕ ಮಾಡೋದು ಮುಂದಿನ ಚುನಾವಣೆ ಸಮಯದಲ್ಲೇ..ಇಂತಹ ನಾಯಕರ ನಡುವೆ ಇಲ್ಲೊಬ್ಬ ಸೋತ ಮರುದಿನದಿಂದ ಇಂದಿನ ವರೆಗೂ ದಿನದ 24 ಗಂಟೆಯೂ ಕಾರ್ಯಕರತರೊಂದಿಗೆ,ಮತ ಹಾಕಿದ ಮತದಾರರ ಕಷ್ಟ-ಸುಖದಲ್ಲಿ ತಾನೂ ಒಬ್ಬನ್ನಾಗಿ ನಿಂತದ್ದು ನಮ್ಮ ನಾಯಕ ಅರುಣ್ ಕುಮಾರ್ ಪುತ್ತಿಲ.
ಪಕ್ಷದಲ್ಲಿ ಸೋತ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ರವರು ಚುನಾವಣೆಯ ಸಂದರ್ಭದಲ್ಲಿ ನಾನು ದಿವಸದ 24 ಗಂಟೆಯೂ ಕಾರ್ಯಕರ್ತರ ಜೊತೆ ನಿಲ್ಲುತ್ತೇನೆ ಎಂದವರು ಇಂದು ಎಲ್ಲಿದ್ದಾರೆ?ಮಾಜಿ ಶಾಸಕ ಮಟ್ಟಂದೂರು ಇಂದು ಎಷ್ಟು ಕಾರ್ಯಕರ್ತರ ಕಷ್ಟದ ಸಮಯದಲ್ಲಿ ಜೊತೆ ನಿಂತಿದ್ದಾರೆ?ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರಿನಲ್ಲಿ ಎಷ್ಟು ಬಾರಿ ಕಾರ್ಯಕರ್ತರ ಜೊತೆ ನಿಂತಿದ್ದಾರೆ?ಹೇಳುತ್ತಾ ಹೋದರೆ ಇನ್ನೂ ಹಲವು ಹೆಸರುಗಳಿವೆ..(20 ಜನ ಟ್ರ್ಯಾಕ್ ನಲ್ಲಿ ಇರುವವರು)
ಇಂದು ಲೇಖನ ಷೇರ್ ಮಾಡುತ್ತಿರುವ ಮಂಡಲದ ಇಬ್ಬರು ನೂತನ ಅಧ್ಯಕ್ಷರುಗಳ ಹಾದಿಯಾಗಿ…ಪಂಚಾಯತ್ ಸದಸ್ಯನ ವರೆಗೂ ನಿಮಗೆ ರಾಜ್ಯಾಧಕ್ಷ ವಿಜಯೇಂದ್ರ,ಅಂದಿನ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ ವಿ,ಸತೀಶ್ ಕುಂಪಲ,ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್,ಮಂಡಲ ಅಧ್ಯಕ್ಷರುಗಳಾಗಿದ್ದ ಸಾಜ ರಾಧಾಕೃಷ್ಣ ಆಳ್ವ,ಜಗನ್ನಿವಾಸ ರಾವ್ ಇವರ ಸಮ್ಮುಖದಲ್ಲಿ ನಡೆದ ಮೀಟಿಂಗ್ ನಲ್ಲಿ ಪುತ್ತಿಲರಿಗೆ ಏನು ಮಾತು ಕೊಟ್ಟಿದ್ದರು ಎಂದು?ವಿಜಯೇಂದ್ರ ಇವರ ಬೆಂಗಳೂರಿನ ಮನೆಯಲ್ಲಿ ನಡೆದ ಮೀಟಿಂಗ್ನಲ್ಲಿ ಎಂಪಿ ಚುನಾವಣೆಯ ಸಹ ಪ್ರಭಾರಿ ಪುತ್ತಿಲರಿಗೆ ನೀಡಬೇಕು,60:40 ಅನುಪಾತದಲ್ಲಿ ಪುತ್ತಿಲ ಪರಿವಾರ(60)ಹಾಗೂ ಪಕ್ಷ (40) ಶೇಕಡಾ ಜವಾಬ್ದಾರಿ ಹಂಚಿಕೊಳ್ಳಬೆಕು..ಪುತ್ತಿಲರಿಗೆ 2024 ರ ಡಿಸೆಂಬರ್ ಒಳಗಾಗಿ ರಾಜ್ಯ ಬಿಜೆಪಿಯ ಉನ್ನತ ಹುದ್ದೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದಲೇ ಸ್ಪರ್ಧಿಸುವ ಅವಕಾಶ ನೀಡುವ ಬಗ್ಗೆ ಮಾತುಕತೆ ನಡೆದಿತ್ತು..ಎಂಪಿ ಚುನಾವಣೆ ನಡೆದು 1.5 ವರ್ಷ ಕಳೆದರೂ ಪುತ್ತಿಲರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡದಾಗ ಇಂದು ಲೇಖನ ಷೇರ್ ಮಾಡುತ್ತಿರುವ ಮಹಾನುಭಾವರ ಬಾಯಿಗೆ ಬೀಗ ಹಾಕಿತ್ತಾ?ಇಂದು ನೀವು ಮತ್ತೆ ಅಪಪ್ರಚಾರ ಪ್ರಾರಂಭ ಮಾಡಿದ್ದೀರಿ.ಅಪಪ್ರಚಾರದ ಅಂತ್ಯ ನಾವು ಮಾಡಲಿದ್ದೇವೆ.
ಮಾರ್ತರಿಂದ ಹಿಡಿದು ಕಟ್ಟ ಕಡೆಯ ಕಾರ್ಯಕರ್ತನಿಗೆ ಪಕ್ಷದಲ್ಲಿ ಜವಾಬ್ದಾರಿ ಸಿಗುವಂತೆ ಮಾಡಿದ ನಾಯಕನೊಬ್ಬ ರಾಜ್ಯದಲ್ಲಿ ಇದ್ದರೆ ಅದು ಪುತ್ತಿಲ ಮಾತ್ರ..ಆದರೆ ನಮ್ಮಂತಹ ಕಾರ್ಯಕರ್ತರಿಗೆ ಯಾವುದೇ ಜವಾಬ್ದಾರಿಯ ಅಪೇಕ್ಷೆ ಇರಲಿಲ್ಲ..ಪ್ರತಿಯೊಬ್ಬ ಕಾರ್ಯಕರ್ತನ ಮನಸ್ಸಿನಲ್ಲಿ ಹಿಂದೆಯೂ..ಮುಂದೆಯೂ ಇರೋದು ನಮ್ಮ ನಾಯಕನಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕು,ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸಲು ಆ ವ್ಯಕ್ತಿ ಕ್ಷೇತ್ರದ ಶಾಸಕನಾಗಬೇಕೆಂದು..ಇಷ್ಟು ಬಿಟ್ಟರೆ ದೇವದುರ್ಲಬ ಕಾರ್ಯಕರ್ತರಿಗೆ ಯಾವ ಆಸೆಯೂ ಇಲ್ಲ ಅಪೇಕ್ಷೆಯೂ ಇಲ್ಲ..
ಅಂದು ಕೊಟೆಚಾದಲ್ಲಿ ನಡೆದ ಸಭೆಯಿಂದ ಹಿಡಿದು ಇಂದಿನ ವರೆಗೂ ಕಾರ್ಯಕರ್ತರು ಏನು ಹೇಳುತ್ತಾರೋ ಅದನ್ನೇ ಕಾರ್ಯರೂಪಕ್ಕೆ ತಂದಿರೋ ನಾಯಕನೊಬ್ಬ ಇದ್ದರೆ ಅದು ನಮ್ಮ ನಾಯಕ ಪುತ್ತಿಲ.ನಾಳೆಯೂ ಆ ನಾಯಕನಿಗೆ ಸೂಕ್ತ ಸ್ಥಾನಮಾನ ಸಿಗದೇ,ಪಕ್ಷದಲ್ಲಿ ಅವಕಾಶ ಕೊಡದೇ ಇದ್ದಲ್ಲಿ ಕಾರ್ಯಕರ್ತರಿಗೆ ಹಿಂದುತ್ವದ ಹೆಸರಲ್ಲಿ ಗೆಲ್ಲಿಸುವ ತಾಕತ್ತು ಇದೆ.
ನಮ್ಮ ಉದ್ದೇಶ ಸ್ಪಷ್ಟ ಇದೆ.ಕಾರ್ಯಕರ್ತರಿಂದ ಪಕ್ಷವೇ ಹೊರತು..ಪಕ್ಷದಿಂದ ಕಾರ್ಯಕರ್ತನಲ್ಲ..
ಅಶೋಕ್ ರೈಗಳ ಉದ್ದೇಶ ಹಿಂದುತ್ವದ ಭದ್ರಕೋಟೆಯನ್ನು ಛಿದ್ರ ಮಾಡೋದು..
ನಮ್ಮ ಉದ್ದೇಶ ಕಾಂಗ್ರೆಸ್ ಶಾಸಕ ಅಶೋಕ್ ರೈ ಗಳನ್ನು ಸೋಲಿಸಿ ಹಿಂದುತ್ವ ಗೆಲ್ಲಿಸೋದು..
ಆದರೆ ಪಕ್ಷದ ಉದ್ದೇಶ ಏನು?ಪುತ್ತಿಲರಿಗೆ ಟಿಕೆಟ್ ತಪ್ಪಿಸಿ ಬಿಜೆಪಿ ಸೋಲಿಸೋದು…ಪುತ್ತಿಲರು ಮತ್ತೆ ಪಕ್ಷೇತರ ನಿಲ್ಲುವಂತೆ ಮಾಡಿ ಬಿಜೆಪಿ ಸೋಲಿಸಿದ ಅನ್ನೋ ಹಣೆಪಟ್ಟಿ ಕಟ್ಟಿ ಕಾಂಗ್ರೆಸ್ ನ ಶಾಸಕ ಅಶೋಕ್ ರೈ ಗಳನ್ನು ಗೆಲ್ಲಿಸೋದು..ಅಲ್ಲವೇ?
ಈ ಮೇಲಿನ ಮಾತು ಅಪಪ್ರಚಾರ ಎಂದು ಬರೆಯುವ ಬದಲು ಪಕ್ಷದಲ್ಲಿ ಪುತ್ತಿಲರಿಗೆ ಟಿಕೆಟ್ ಕೊಟ್ಟು ಗೆಲ್ಲಿಸುವ ಕಾರ್ಯ ಮಾಡಿ..ನಮ್ಮದು ಕೂಡ ಕಾಂಗ್ರೆಸ್ ಶಾಸಕ ಅಶೋಕ್ ರೈ ಗಳನ್ನು ಸೋಲಿಸೋದೆ ಅಂತಿಮ ಉದ್ದೇಶ ಅನ್ನೋದನ್ನ ಕಾರ್ಯಕರ್ತರಿಗೆ ಮನವರಿಕೆ ಮಾಡಿ.
ಭಾಗ-2 ….coming soon …!!!!