Akshaya Aahara Foundation

Akshaya Aahara Foundation Akshaya Aahara Foundation® is a non-governmental and non-profit organization established with an objective to provide food to the needy and poor poeple.

AKSHAYA AAHARA FOUNDATION (R). is a non-governmental and a non - profit organization established with an objective to provide food to the needy and poor people in the society. in the name of “AKSHAYA AAHARA JOLIGE”

VISION : To fight against hunger and build a society where in Poorest of poor will get sufficient food. Objective : To Collect prepared food / food grains from donors and provide them

to needy people through network. Goal : Hunger Free - Starvation free India

Programs :
Collection of Excess food and cooked food from functions, Marriage halls etc., and distribute it among poor & needy, rehabilitation camps, beggar’s colony, orphanage, slums in and around Mysuru. Create awareness among school children and public regarding wastage of food, educate them to prevent wastage and help organizations to save food. To conduct `share surplus food’ campaign. Save unused food left overs and preserve for distribution among the poor and needy people. Establish feeding homes poor and needy people. Hunger free India Movement. PUBLIC PARTICIPATION :
1. Enroll as members.
2. Register with the foundation as a volunteers.
3. Inform the foundation regarding availability of un used food in parties and Functions.
4. Participation in programs and campaigns.

ನನ್ನ ಪ್ರೀತಿಯ, ಆತ್ಮೀಯ ನಲ್ಮೆಯ ಬಂಧುಗಳೇ, ⚠️🇮🇳*IF WE DON'T COLLECT SURPLUS FOOD — WHAT HAPPENS? The following here *ನಾವು ಹೆಚ್...
02/09/2026

ನನ್ನ ಪ್ರೀತಿಯ, ಆತ್ಮೀಯ ನಲ್ಮೆಯ ಬಂಧುಗಳೇ,
⚠️🇮🇳
*IF WE DON'T COLLECT SURPLUS FOOD — WHAT HAPPENS? The following here

*ನಾವು ಹೆಚ್ಚಾದ ಆಹಾರ ತೆಗೆದುಕೊಳ್ಳದೆ ಹೋದರೆ ಏನಾಗುತ್ತೆ?*

*❌ LEFT SIDE - ಆಹಾರ ಕಸದ ಬುಟ್ಟಿಗೆ ಹೋದರೆ:*

🗑️ *LANDFILL & METHANE EMISSIONS*

- ಕೊಳೆಯುವ ಆಹಾರ Methane Gas ಬಿಡುತ್ತದೆ - ಇದು CO2 ಗಿಂತ 25 ಪಟ್ಟು ಹೆಚ್ಚು ಅಪಾಯಕಾರಿ
- Climate Change & Air Pollution ಗೆ ಕಾರಣ

💸 *ECONOMIC LOSS: ₹92,000 CRORE/YEAR*
- ಭಾರತದಲ್ಲಿ ಪ್ರತಿ ವರ್ಷ ₹92,000 ಕೋಟಿ ಆಹಾರ Waste ಆಗುತ್ತೆ ಬಂಧುಗಳೇ,

- Wasted food = Wasted money - ನೀರು, Labour, Transport, ರೈತನ ಬೆವರು ಎಲ್ಲವೂ ಕಸಕ್ಕೆ! ಭಾರತ ದೇಶದ ಆರ್ಥಿಕ ಅಭಿವೃದ್ಧಿ ದಿನೇ ದಿನೇ ಕ್ಷೀಣಿಸುತ್ತಾ ಹೋಗುವುದರಲ್ಲಿ ಇದು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ

🌍 *ENVIRONMENTAL DAMAGE*
- ಮಣ್ಣು, ನೀರು ಕಲುಷಿತ, Greenhouse Gas ಜಾಸ್ತಿ, Natural Resources Waste

*😢 RIGHT SIDE - RIGHT NOW: PEOPLE GO HUNGRY*

🍽️ *HUNGER & MALNUTRITION*
- ಲಕ್ಷಾಂತರ ಜನರು ಹಸಿವಿನಿಂದ ಮಲಗುತ್ತಾರೆ, ಮಕ್ಕಳಲ್ಲಿ Stunting & Malnutrition - India Hunger Index Alarming!

👨‍🌾 *FARMERS SUFFER LOSS*

- ರೈತ ಬೆಳೆದ ಹೆಚ್ಚಾದ ಬೆಳೆ ಕಸಕ್ಕೆ ಹೋದರೆ, ಅವನ ದುಡ್ಡು, ಅವನ ಶ್ರಮ ಎಲ್ಲವೂ ನಷ್ಟ - Rural Livelihoods ದಿನೇ ದಿನೇ ಕ್ಷೀಣಿಸುತ್ತಾ ಹೋಗುತ್ತದೆ

📉 NATIONAL ECONOMIC IMPACT - GDP LOSS
- ಹಸಿವಿನಿಂದ Productivity ಕಡಿಮೆ, Healthcare Burden ಜಾಸ್ತಿ, GDP Loss - ಇಡೀ ದೇಶದ ಆರ್ಥಿಕತೆ Weak ಆಗುತ್ತೆ!

✅ THE SOLUTION ಕೆಳಗಡೆ - ನೀವು ಮಾಡುತ್ತಿರುವ ಕೆಲಸ:

*AKSHAYA AAHARA FOUNDATION COLLECTS & REDISTRIBUTES*

🚚 WE COLLECT SURPLUS FOOD- Restaurants, Events, Households ನಿಂದ Safe Food ಸಂಗ್ರಹ

🍛 WE FEED THE NEEDY - ಮಕ್ಕಳು, ಹಿರಿಯರು, ಮತ್ತು ಊಟದ ಅವಶ್ಯಕತೆ ಇರುವವರಿಗೆ Slum Communities ಗೆ Nutritious Food ಒದಗಿಸಿದಂತಾಗುತ್ತದೆ.

📊 *IMPACT (2012-2026): 2.9 MILLION MEALS SAVED & SERVED - Founded by Dr. H R Rajendra and ಶ್ವೇತಾ ರಾಜೇಂದ್ರ,

WHEN WE COLLECT → WE PROTECT THE PLANET. WE FEED THE HUNGRY. WE SAVE THE ECONOMY.

*JOIN THE MOVEMENT. BE THE CHANGE. ACT NOW.

CONTACT US: 9148987375

Email:-

[email protected]

akshayaaahara.org

* ನಾವು ಮತ್ತು ನೀವು ಏನು ಮಾಡಬಹುದು?*
ನಿಮ್ಮ ಮನೆಯಲ್ಲಿ, ನಿಮ್ಮ ಬೀದಿಯಲ್ಲಿ, ನಿಮ್ಮೂರಿನಲ್ಲಿ . ಹೆಚ್ಚಾದ ಆಹಾರ ಇದ್ದರೆ ಕಸಕ್ಕೆ ಹಾಕಬೇಡಿ, ನಮಗೆ ಕರೆ ಮಾಡಿ.

*📞 ಸಂಪರ್ಕಿಸಿ: 9148987375*

*Akshaya Aahara Foundation - Building Hunger-Free India, One Meal at a Time*
*FOUNDER: Dr. H R Rajendra |

RIGHT TO EAT, NOT TO WASTE*🙏🙏🙏

*🇮🇳 ಸಮೃದ್ಧ ಭಾರತ ಹೇಗೆ ಕಟ್ಟಬೇಕು? ಅಕ್ಷಯ ಆಹಾರ ಫೌಂಡೇಶನ್ ನ 14 ವರ್ಷದ ಅನುಭವದ ಪಾಠ!*QUALITIES FOR SAMRUDDHA BHARAT - AKSHAYA AAHAR...
02/09/2026

*🇮🇳 ಸಮೃದ್ಧ ಭಾರತ ಹೇಗೆ ಕಟ್ಟಬೇಕು? ಅಕ್ಷಯ ಆಹಾರ ಫೌಂಡೇಶನ್ ನ 14 ವರ್ಷದ ಅನುಭವದ ಪಾಠ!*
QUALITIES FOR SAMRUDDHA BHARAT - AKSHAYA AAHARA MODEL FOR NATION*

ಪ್ರಿಯ ಭಾರತೀಯ ಬಂಧುಗಳೇ,

ನಮ್ಮ ಭಾರತ ವಿಶ್ವಗುರು ಆಗಬೇಕು, ಸಮೃದ್ಧವಾಗಬೇಕು ಅಂದರೆ ರಸ್ತೆ, ಕಟ್ಟಡ ಮಾತ್ರ ಸಾಲದು. *ಮನುಷ್ಯನಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸಮೃದ್ಧಿ ಮಾಡುವ ಗುಣ ಬರಬೇಕು.*

ನಾನು Dr. H R Rajendra, ಅಕ್ಷಯ ಆಹಾರ ಫೌಂಡೇಶನ್ ನ ಸಂಸ್ಥಾಪಕ (2012-2026)*. ಕಳೆದ 14 ವರ್ಷಗಳಲ್ಲಿ 29 ಲಕ್ಷಕ್ಕೂ ಹೆಚ್ಚು ಊಟಗಳನ್ನು ಅವಶ್ಯಕತೆ ಇರುವ ಸಮುದಾಯಗಳಿಗೆ ತಲುಪಿಸುವಾಗ ನಾನು ಕಲಿತ ಪಾಠವೇನೆಂದರೆ - ಹಸಿವು ಇರುವುದು ಆಹಾರ ಇಲ್ಲದ ಕಾರಣದಿಂದಲ್ಲ, ನಮ್ಮಲ್ಲಿ ಕೆಲವು ಮುಖ್ಯವಾದ ಗುಣಗಳು ಇಲ್ಲದ ಕಾರಣದಿಂದ.

ಆ 10 ಗುಣಗಳನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ. ಇದು ನನ್ನ ಸಂಸ್ಥೆಯ ಗುಣಗಳಲ್ಲ, ಇಡೀ ಭಾರತ ದೇಶ ಅಳವಡಿಸಿಕೊಳ್ಳಬೇಕಾದ ಜೀವನ ಶೈಲಿ.

ಭಾಗ 1: ಸಮೃದ್ಧ ಭಾರತಕ್ಕೆ ಬೇಕಾದ 10 ಅಗತ್ಯ ಗುಣಗಳು

1. ಅನ್ನದಾನ ಧರ್ಮ: ನಮ್ಮ ಪೂರ್ವಜರು "ಅನ್ನಂ ಬ್ರಹ್ಮ" ಅಂದರು. ಆಹಾರವನ್ನು ದೇವರು ಎಂದು ಕಾಣಬೇಕು ಆಹಾರವನ್ನು ಅಪವ್ಯಯ ಮಾಡಬಾರದು

2. Zero ವೇಸ್ಟ್ ಮನಸ್ಥಿತಿ:* ಮದುವೆಯಲ್ಲಿ 100 ಜನರಿಗೆ ಹೆಚ್ಚು ಮಾಡಿ 20 ಜನರ ಆಹಾರ ಕಸಕ್ಕೆ ಹಾಕುತ್ತೇವೆ. ಹೀಗೆ ಮಾಡಿದರೆ ದೇಶ ಹೇಗೆ ಸಮೃದ್ಧವಾಗುತ್ತದೆ? ಇರುವುದನ್ನು ಪೂರ್ತಿ ಬಳಸಬೇಕು. ಜೊತೆಗೆ ಹೆಚ್ಚಾದ ಆಹಾರ ಪದಾರ್ಥಗಳನ್ನು ಯಾರಿಗೆ ಅವಶ್ಯಕತೆ ಇದೆ ಅವರಿಗೆ ತಲುಪಿಸುವ ಗುಣಗಳನ್ನು ಹೊಂದಿದರೆ ಮಾತ್ರ ಭಾರತ ದೇಶ ಆರ್ಥಿಕತೆಯಲ್ಲಿ ಸ್ವಲ್ಪ ಇನ್ನೂ ಸಮೃದ್ದಿವಂತಲೂ ಅನುವಾಗುತ್ತದೆ

3. ರೈತರಿಗೆ ಗೌರವ: ನಾವು ಊಟದ ಬಟ್ಟಲಲ್ಲಿ ಅನ್ನ ಬಿಡುತ್ತೇವೆ, ಆದರೆ ರೈತ 6 ತಿಂಗಳು ಬೆವರು ಸುರಿಸಿ ಅದನ್ನು ಬೆಳೆದಿರುತ್ತಾನೆ. ರೈತನಿಗೆ ಬೆಲೆ ಕೊಡದಿದ್ದರೆ ಸಮೃದ್ಧತೆ ಬರುವುದಿಲ್ಲ.

4. ಸಮುದಾಯದ ಭಾಗವಹಿಸುವಿಕೆ: ನಾನು ಒಬ್ಬನೇ ಏನೂ ಮಾಡಲು ಸಾಧ್ಯವಿಲ್ಲ. ನನ್ನ ಜೊತೆ ನೂರಾರು Volunteers, ನಾಗರಿಕರು ಕೈ ಜೋಡಿಸಿದಾಗ ಮಾತ್ರ 29 ಲಕ್ಷ ಊಟ ಸಾಧ್ಯವಾಯಿತು. ದೇಶ ಕಟ್ಟುವುದು ಒಬ್ಬರಿಂದಲ್ಲ, ಎಲ್ಲರಿಂದ ಎಂಬ ಮನೋಭಾವವನ್ನು ಬೆಳೆಸಿದರೆ ಮಾತ್ರ ಇನ್ನು ಹೆಚ್ಚಿನ ರೀತಿಯಾಗಿ ದೇಶದ ಆರ್ಥಿಕತೆಯ ಬಗ್ಗೆ ಜಾಗೃತ ರಾಗಲು ಪ್ರತಿಯೊಬ್ಬರು ಸಿದ್ದರಿರಬೇಕು

5. ದಯೆ ಮತ್ತು ಅನುಕಂಪ:* ಹಸಿದವನಿಗೆ ಊಟ ಕೊಡುವಾಗ "ನಾನು ಕೊಡುತ್ತಿದ್ದೇನೆ" ಎಂಬ ಅಹಂಕಾರ ಬೇಡ. "ಅವನರಿ ಗೆ ಗೌರವದಿಂದ ಕೊಡುತ್ತಿದ್ದೇನೆ" ಎಂಬ ಕರುಣೆ ಇರಬೇಕು.

6. ಶಿಸ್ತು ಮತ್ತು ಸಮಯ ಪಾಲನೆ: ನಾವು ಹೇಳಿದ ಸಮಯಕ್ಕೆ ಸರಿಯಾಗಿ ಹೋಗಿ ಆಹಾರ ತರುತ್ತೇವೆ. ಏಕೆಂದರೆ ಆಹಾರ ಹಾಳಾಗುತ್ತದೆ. ದೇಶದ ಕೆಲಸದಲ್ಲೂ ಇದೇ ಶಿಸ್ತು ಬೇಕು.

7. ಸುಸ್ಥಿರತೆ ಮತ್ತು ಪರಿಸರ: ನಾವು ಪ್ಲಾಸ್ಟಿಕ್ ಬಳಸುವುದಿಲ್ಲ. ನಮ್ಮ *JOLIGE* ಎಂಬ ಚೀಲವನ್ನು ಬಳಸುತ್ತೇವೆ. ಅದು ಮತ್ತೆ ಮತ್ತೆ ಬಳಸಬಹುದು. ದೇಶ ಸಮೃದ್ಧವಾಗಬೇಕಾದರೆ ಪ್ರಕೃತಿಯನ್ನು ಉಳಿಸಬೇಕು.

8. ಪಾರದರ್ಶಕತೆ: ನಾವು ಎಷ್ಟು ಊಟ ಸಂಗ್ರಹಿಸಿದೆವು, ಎಲ್ಲಿ ಹಂಚಿದೆವು ಎಂದು ಪ್ರತಿ ಲೆಕ್ಕವನ್ನು ಬಹಿರಂಗವಾಗಿ ಇಡುತ್ತೇವೆ. ಆಗ ಆ ಮಾತ್ರ ಸುಸ್ತಿರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ

9. ನಾವೀನ್ಯತೆ ಮತ್ತು ತಂತ್ರಜ್ಞಾನ: ಕೇವಲ ಕೈಯಿಂದ ಆಗುವುದಿಲ್ಲ. App, Digital Tracking, Smart Logistics etc....ಬಳಸಿದರೆ ಹೆಚ್ಚು ಜನರಿಗೆ ತಲುಪಬಹುದು.

10. ನಿಸ್ವಾರ್ಥ ಸೇವೆ - ಸೇವಾ ಮನೋಭಾವ: ಇದೇ ನಮ್ಮ ಮೂಲ. ನನಗೆ ಏನು ಸಿಗುತ್ತದೆ ಎಂದು ಅಲ್ಲ, ನನ್ನಿಂದ ಇನ್ನೊಬ್ಬರಿಗೆ ಏನು ಸಿಗುತ್ತದೆ ಎಂದು ಯೋಚಿಸುವುದು.

ಭಾಗ 2: ಇಡೀ ದೇಶಕ್ಕೆ ಮಾದರಿಯಾದ ನಮ್ಮ ವ್ಯವಸ್ಥೆ (Systematic Process)

ಈ 10 ಗುಣಗಳ ಆಧಾರದ ಮೇಲೆ ನಾವು ಒಂದು ವ್ಯವಸ್ಥೆಯನ್ನು ಕಟ್ಟಿದ್ದೇವೆ, ಇದನ್ನು ಭಾರತದ ದೇಶದ ಎಲ್ಲಾ ರಾಜ್ಯ ಮತ್ತು ಜಿಲ್ಲೆಗಳಲ್ಲೂ ಮಾಡಬಹುದು.

ಹಂತ 1 - COLLECTION: ದಾನಿಗಳು, ಹೋಟೆಲ್, ಮದುವೆ ಮನೆಗಳಿಂದ ಹೆಚ್ಚಾದ, ಆದರೆ ತಿನ್ನಲು ಯೋಗ್ಯವಾದ ಆಹಾರವನ್ನು ಸಂಗ್ರಹಿಸುವುದು.

ಹಂತ 2 - SORTING: ಆ ಆಹಾರವನ್ನು Quality Check ಮಾಡಿ, ಸ್ವಚ್ಛಗೊಳಿಸಿ, ಪ್ರತ್ಯೇಕಿಸುವುದು.

ಹಂತ 3 - DISTRIBUTION:* ನಮ್ಮ ವಿಶೇಷ JOLIGE - Portable Cloth Bag ನಲ್ಲಿ ಸುರಕ್ಷಿತವಾಗಿ, ಗೌರವಯುತವಾಗಿ ಆಹಾರದ ಅವಶ್ಯಕತೆ ಇರುವವರಿಗೆ ತಲುಪಿಸುವುದು.

*JOLIGE ಎಂದರೇನು?* ಇದು ಸಾಮಾನ್ಯ ಚೀಲವಲ್ಲ. ಇದು ಗೌರವದ ಸಂಕೇತ. ಪ್ಲಾಸ್ಟಿಕ್ ನಿಂದ ಮುಕ್ತ, ಮರುಬಳಕೆಯ, ಸಮುದಾಯದ ವರಿಗೆ ಗೌರವದಿಂದ ಊಟ ಕೊಡುವ ನಮ್ಮ ಆವಿಷ್ಕಾರ.

ಭಾಗ 3: ಇದರ ಫಲಿತಾಂಶ (Model Impact 2012-2026)*

✅ ಇಂದಿನವರೆಗೆ ನಗರದ ಅತ್ಯಂತ 29 ಲಕ್ಷಕ್ಕೂ ಹೆಚ್ಚು ಊಟಗಳ ವಿತರಣೆ ಮಾಡಿರುವಂತಹ ಫಲ ನಮ್ಮದಾಗಿರುತ್ತದೆ
✅ ಭಾರತದ ಎಲ್ಲಾ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಬಹುದಾದ ಮಾದರಿ
✅ ಸಮುದಾಯವೇ ನಡೆಸುವ, ಸ್ವಯಂಸೇವಕರಿಂದ ಕೂಡಿದ ವ್ಯವಸ್ಥೆ
✅ ಸ್ಥಳೀಯ ಸಮುದಾಯಗಳಿಗೆ ಆಹಾರ ಭದ್ರತೆ

ಸ್ನೇಹಿತರೇ,

*CORE VALUES: Compassion, Integrity, Sustainability, Selfless Service, National Unity, Respect for All* - ಇವೇ ನಮ್ಮ ಶಕ್ತಿ.

ಇದು *Rooted in Indian Tradition, Powered by Modern Innovation, For a Samriddha Bharat!*

* ನಾವು ಮತ್ತು ನೀವು ಏನು ಮಾಡಬಹುದು?*

ನಿಮ್ಮ ಮನೆಯಲ್ಲಿ, ನಿಮ್ಮ ಬೀದಿಯಲ್ಲಿ, ನಿಮ್ಮೂರಿನಲ್ಲಿ ಈ 10 ಗುಣಗಳನ್ನು ಅಳವಡಿಸಿಕೊಳ್ಳಿ. ಹೆಚ್ಚಾದ ಆಹಾರ ಇದ್ದರೆ ಹೊರಗಡೆ ಚೆಲ್ಲಬೇಡಿ, or ಹಾಕಬೇಡಿ, ನಮಗೆ ಕರೆ ಮಾಡಿ.

*📞 ಸಂಪರ್ಕಿಸಿ: 9148987375*

*Akshaya Aahara Foundation - Building Hunger-Free India, One Meal at a Time*
*FOUNDER: Dr. H R Rajendra | RIGHT TO EAT, NOT TO WASTE*

ದಯವಿಟ್ಟು ಈ ಪೋಸ್ಟರ್ ಅನ್ನು ಎಲ್ಲರಿಗೂ Share ಮಾಡಿ. ಒಬ್ಬ ವ್ಯಕ್ತಿ ಬದಲಾದರೂ, ದೇಶ ಬದಲಾಗುತ್ತದೆ.

ಜೈ ಹಿಂದ್! ಜೈ ಕರ್ನಾಟಕ! ಜೈ ಭಾರತ

ಪ್ರೀತಿಯ ಬಂಧುಗಳೇ,*ನನ್ನ ಪ್ರಯಾಣ - ಅಕ್ಷಯ ಆಹಾರ ಜೋಳಿಗೆ* _ಹಸಿವು, ಮಾನವೀಯತೆ ಮತ್ತು 14 ವರ್ಷಗಳ ಸೇವೆಯ ಕಥೆ_( ಅಕ್ಷಯ ಆಹಾರ ಫೌಂಡೇಶನ್, ಮೈಸೂ...
01/08/2026

ಪ್ರೀತಿಯ ಬಂಧುಗಳೇ,

*ನನ್ನ ಪ್ರಯಾಣ - ಅಕ್ಷಯ ಆಹಾರ ಜೋಳಿಗೆ*
_ಹಸಿವು, ಮಾನವೀಯತೆ ಮತ್ತು 14 ವರ್ಷಗಳ ಸೇವೆಯ ಕಥೆ_( ಅಕ್ಷಯ ಆಹಾರ ಫೌಂಡೇಶನ್, ಮೈಸೂರು )

14 ವರ್ಷಗಳ ಹಿಂದೆ...

ಒಂದು ಸಣ್ಣ ಆಲೋಚನೆಯಿಂದ ಹುಟ್ಟಿದ್ದು _ಅಕ್ಷಯ ಆಹಾರ ಜೋಳಿಗೆ_.

ನಾನು ಚಿಕ್ಕವನಿದ್ದಾಗ, ವಿದ್ಯಾರ್ಥಿ ದೆಸೆಯಲ್ಲಿ ನಾನು ಬಡತನವನ್ನು ತುಂಬಾ ಹತ್ತಿರದಿಂದ _ನೋಡುತ್ತಿದ್ದೆ_. ಜೊತೆಗೆ ನನಗೆ ತುಂಬಾ ಅರ್ಥಗರ್ಭಿತವಾಗುತ್ತಿತ್ತು ಆ ದಿನದಿಂದಲೇ

ಒಂದು ಹೊತ್ತು ಹೊಟ್ಟೆ ತುಂಬಾ ಊಟಕ್ಕೆ ಜನರು ಪರದಾಡುವುದನ್ನು _ನೋಡುತ್ತಿದ್ದೆ_.

ಅದೇ ಸಮಯದಲ್ಲಿ ನಮ್ಮ ರೈತರು ಬೆಳೆದಂತಹ ದೇಶದ ಎಷ್ಟೋ ಆಹಾರ ಪ್ರತಿದಿನ ಕಸದ ಬುಟ್ಟಿಗೆ ಹೋಗುವುದನ್ನೂ _ನೋಡುತ್ತಿದ್ದೆ_.

ಈ ಎರಡು ವಿರುದ್ಧ ಚಿತ್ರಗಳನ್ನು _ನೋಡುತ್ತಿದ್ದಾಗ_ ನನ್ನ ಮನಸ್ಸು ಪ್ರಶ್ನಿಸಿತು -
_“ಸುಮ್ಮನಿರಲು ಹೇಗೆ ಸಾಧ್ಯ?”_
ಅಲ್ಲಿಂದಲೇ ನನ್ನ ಪ್ರಯಾಣ ಶುರುವಾಯಿತು.

_ಬಾಲ್ಯದ ಬೇರುಗಳು_ ಜೊತೆಗೆ ನನ್ನ ಕೃಷಿಕ ಕುಟುಂಬದ ಪ್ರತಿದಿನದ ನೋವು ಮತ್ತು ನಲಿವುಗಳು ನನ್ನ ಮನಸ್ಸಿಗೆ ಅಗಾಧವಾಗಿ ಬೆರೆವ್ರಿದ್ದವು,

ನಾನು ಹುಟ್ಟಿದ್ದು _ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕು, ಹುಲಿಯೂರುದುರ್ಗ ಹೋಬಳಿಯ ಅರಮನೆ ಹೊನ್ನಮಾಚನಹಳ್ಳಿಯಲ್ಲಿ ಎಂಬ ಸುಂದರ ಪುಟ್ಟಗ್ರಾಮ ಗ್ರಾಮದಲ್ಲಿ
ನಾನು _ಶ್ರೀಮತಿ ಹೆಚ್.ಸಿ. ಪ್ರೇಮ ಮತ್ತು ಶ್ರೀ ಎಚ್.ಸಿ. ರಾಜಣ್ಣ ಚೆನ್ನೇಗೌಡ_ ದಂಪತಿಗಳ ಪುತ್ರ.
ನಮ್ಮ ಕುಟುಂಬದ ಹೆಸರು ಮೋಟೆಗೌಡರ ಕುಟುಂಬ ಇಂದಿಗೂ ಆ ಹೆಸರು ನಮ್ಮ ಊರು ಮತ್ತು ನೆರೆಹೊರೆಯ ಊರುಗಳಿಗೆ ಮನೆಮಾತಾಗಿದೆ.

ನನ್ನ ಹೆಸರು _ಡಾ. ಹೆಚ್.ಆರ್. ರಾಜೇಂದ್ರ MA.,M.Phil., PGDPM., Ph.D._

ಚಿಕ್ಕಂದಿನಿಂದಲೇ ನನ್ನಲ್ಲಿ ಒಂದು ಕನಸಿತ್ತು -
_“ನಾನು ಚೆನ್ನಾಗಿ ಓದಬೇಕು ಸಮಾಜದಲ್ಲಿರುವ ಜನರಿಗೆ ಮತ್ತು ನನ್ನ ಸುತ್ತಮುತ್ತಲು ಇರುವ ಕುಟುಂಬಕ್ಕೆ ನನ್ನ ಕೈಲಾದಷ್ಟುಸಹಾಯ ಮಾಡಬೇಕು. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು.”_ ಎಂಬ ಹಲವಾರು ರೀತಿಯಾದಂತಹ ಆಸೆ ಆಕಾಂಕ್ಷೆಗಳನ್ನು ಆ ಬಾಲ್ಯ ದಿಂದಲೇ ರೂಡಿಸಿಕೊಂಡಿದ್ದೆ

ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಳ್ಳಿಯಿಂದ ತಾಲೂಕಿಗೆ, ತಾಲೂಕಿನಿಂದ ಜಿಲ್ಲೆಗೆ ಓದಲು ಹೋಗುವಾಗ ನಾನು ಎರಡು ಬೇರೆ ಪ್ರಪಂಚಗಳನ್ನು _ನೋಡುತ್ತಿದ್ದೆ_.
ಒಂದು ಕಡೆ ಸಿರಿತನ, ಇನ್ನೊಂದು ಕಡೆ ತೀವ್ರ ಬಡತನ.

ನನ್ನ ವಿದ್ಯಾಭ್ಯಾಸದ ಅವಧಿಯಲ್ಲಿ ನನ್ನ ಸಹಪಾಠಿಗಳು ಬೆಳಿಗ್ಗೆ ತಿಂಡಿ ತಿಂದು ಶಾಲೆಗೆ ಬರುತ್ತಿದ್ದರು. ಮತ್ತೆ ಸಾಯಂಕಾಲದವರೆಗೆ ಏನೂ ತಿನ್ನಲಿಕ್ಕೆಇರುತ್ತಿರಲಿಲ್ಲ. ಜೊತೆಗೆ ಆ ದಿನಗಳಲ್ಲಿ ಯಾರ ಬಳಿಯಲ್ಲೂ ಕೂಡ ಹಣಕಾಸಿನ ಸ್ಥಿತಿ ಅಷ್ಟು ವ್ಯವಸ್ಥಿತವಾಗಿ ಇರುತ್ತಿರಲಿಲ್ಲ ಆ ಒಂದು ವೇಳೆಯನ್ನು ಕಾಲವೇ ನಿರ್ಧರಿಸುತ್ತಿತ್ತು, ಅಂತಹ ವೇಳೆಯಲ್ಲಿ
ನಾನೂ ಅದೇ ಪರಿಸ್ಥಿತಿಯಲ್ಲಿ ಇದ್ದೆ. ಹಸಿವು ಎಂದರೇನು ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಮತ್ತು ಗೊತ್ತಾಗುತ್ತಿತ್ತು
ಆ ಸಮಯದಲ್ಲಿ ನಾನು ಕಾಲೇಜಿಗೆ ಹೋಗುವಾಗ ಬಸ್ಸಿನಲ್ಲಿ ಪ್ರಯಾಣಿಸುವಾಗ ಹಲವಾರು ರೀತಿಯಲ್ಲಿ ಕಾಣುತ್ತಿದ್ದ ಬಡವರ ಕಣ್ಣಿನಲ್ಲಿರುವ ಹಸಿವು ಇಂದಿಗೂ ನನ್ನನ್ನು ಕಾಡುತ್ತದೆ.

ರೈತರು ರಾತ್ರಿ-ಹಗಲು ಶ್ರಮಿಸಿ ಬೆಳೆದ ಬೆಳೆ, ಅವರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬ ನೋವೂ ನನ್ನನ್ನು ಕಾಡುತ್ತಿತ್ತು.

*ಜೀವನ ಬದಲಿಸಿದ ಒಂದು ರಾತ್ರಿ*

ಪ್ರತಿಷ್ಠಿತ ವಿಶ್ವ ವಿದ್ಯಾಲಯದಲ್ಲಿ ಅರ್ಥಶಾಸ್ತ್ರ ದಲ್ಲಿ MA., M.Phil ಮುಗಿಸಿ ನನ್ನ ಜೀವನದ ಕಾಯಕ ಕೋಸ್ಕರ ನಾನು ನಗರಕ್ಕೆ ಬಂದೆ. ಆ ಹೋತ್ತಿಗಾಗಲೇ ಸಮಾಜದಲ್ಲಿ ನಡೆಯುವ ಅರ್ಥವ್ಯವಸ್ಥೆಯ ಪ್ರತಿದಿನದ ಆಗು ಹೋಗುಗಳ ಬಗ್ಗೆ ಸಂಪೂರ್ಣವಾಗಿ ಆರ್ಥಿಕತೆ ಯ ಬಗ್ಗೆ ಓದಿದ್ದೆ ಜೊತೆಗೆ ಜೀವನದ ಪಾಠ ಗೊತ್ತಾಗುತ್ತಿತ್ತು
ಆದರೆ ಜೀವನ ನನಗೆ ಬೇರೆಯೇ ಪಾಠ ಕಲಿಸಿತು.

ದೇವರ ಕೃಪೆಯಿಂದ ಒಂದು ದಿನ ಕುಟುಂಬ ಸಮೇತ ಒಂದು ಕಲ್ಯಾಣ ಮಂಟಪಕ್ಕೆ ಸ್ನೇಹಿತರ ಮದುವೆಗೆ ಭೇಟಿ ಕೊಟ್ಟಿದ್ದೆವು
ಅಲ್ಲಿ ವಿವಿಧ ರೀತಿಯ ರುಚಿಕರ ತಿನಿಸುಗಳು ಮತ್ತು ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿದ್ದರು ಆದರೆ ಜನರು ಮಾತ್ರ ಕಡಿಮೆ ಬಂದಿರುವಂತಹ ಸೂಚನೆ ಎದ್ದು ಕಾಣುತ್ತಿತ್ತು, ಆ ಸಮಯದಲ್ಲಿ ಭಯಂಕರವಾದoತಾಹ ಮಳೆ ಕೂಡ ಹೊರಗಡೆ ರಭಸದಿಂದ ಸುರಿಯುತ್ತಿತ್ತು ಹೆಚ್ಚಿನ ರೀತಿಯಾದ ಅಡುಗೆ ಪದಾರ್ಥಗಳನ್ನು ನೋಡಿದ ನಾನು ಅಲ್ಲಿ ಇದ್ದಂತಹ
ಅಡುಗೆ ಭಟ್ಟರನ್ನು ಕೇಳಿದೆ, _“ಇಷ್ಟೊಂದು ಆಹಾರ ಮಿಕ್ಕಿದೆ ಏನು ಮಾಡುತ್ತೀರಿ?”_ ಎಂದು
ಅವರು ಸುಮ್ಮನೆ ಮೇಲೆ ಕೈ ತೋರಿಸಿ ಹೇಳಿದರು, _“ದೇವರಿಗೆ ಗೊತ್ತು.”_ ಎಂದು

ಅದೇ ದಿನ ನಾವು ಮನೆಗೆ ಹಿಂದಿರುಗುವಾಗ ಇನ್ನೊಂದು ಕಲ್ಯಾಣ ಮಂಟಪದ ಹೊರಗೆ ಒಂದು ದೃಶ್ಯ _ಕಾಣುತ್ತಿತ್ತು_.
ಚಿಕ್ಕ ಚಿಕ್ಕ ಮಕ್ಕಳು ಕಸದ ಬುಟ್ಟಿಯಿಂದ ಉಳಿದ ಆಹಾರವನ್ನು ಹೆಕ್ಕಿ ತಿನ್ನುತ್ತಿದ್ದರು.

ಅದನ್ನು _ನೋಡಿದ_ ನನ್ನ ಅಮ್ಮ ಕಣ್ಣಲ್ಲಿ ನೀರು ತುಂಬಿಕೊಂಡರು ಅವರು ನಡುಗುವ ಧ್ವನಿಯಲ್ಲಿ ಹೇಳಿದರು -
_“ಅಯ್ಯೋ ದೇವರೇ! ಅಲ್ಲಿ ಅಷ್ಟು ಆಹಾರ ವ್ಯರ್ಥವಾಗಿದೆ. ತಿನ್ನುವವರೇ ಇಲ್ಲ ಆದರೆ ಇಲ್ಲಿ ಮಕ್ಕಳು ಕಸದ ಬುಟ್ಟಿಯಿಂದ ಆಹಾರ ತಿನ್ನುತ್ತಿದ್ದಾರೆ.” _ ಎಂಬ ಧ್ವನಿ ನನ್ನ ಎರಡು ಕಿವಿಗಳಿಗೆ ಅಪ್ಪಳಿಸಿದಂತಾಯಿತು

ನನ್ನ ಅಮ್ಮನ ಆ ಒಂದು ಮಾತು ನನ್ನ ಮನಸ್ಸಿನಲ್ಲಿ ಎಂದಿಗೂ ಅಳಿಯದಂತೆ ಉಳಿಯಿತು.
ಆ ಕ್ಷಣವೇ ತೀರ್ಮಾನಿಸಿದೆ -
_“ಈ ಹೆಚ್ಚಾದ ಆಹಾರವನ್ನು ನಾವು ತೆಗೆದುಕೊಂಡು ಹಸಿದವರಿಗೆ ಕೊಟ್ಟರೆ, ಅದು ಅವರಿಗೆ ಗೌರವದ ಊಟವಾಗುತ್ತದಲ್ಲವೇ? ಇದು ದೇಶದ ನಿಜವಾದ ಸೇವೆಯಲ್ಲವೇ?”_ ಎಂಬ ಭಾವನೆ ನನಗೆ ಅಂದಿನಿಂದಲೇ ಬೇರೂರಿತು!

*ಹೀಗೆ ಹುಟ್ಟಿದ್ದು 14 ವರ್ಷದ ಹಿಂದೆ ಅಕ್ಷಯ ಆಹಾರ ಜೋಳಿಗೆ*🙏

ಅಲ್ಲಿ ನಡೆದಂತ ನೋಡಿದಂತಹ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡ ನಾನು ಮನೆಗೆ ಬಂದು ಪುನಹ ಈ ವಿಚಾರವಾಗಿ ವಿಷಯವನ್ನು ಹೆಂಡತಿಯ ಬಳಿ ಚರ್ಚಿಸಿದೆವು . ನಂತರ ಈ ವಿಷಯವನ್ನು ಬದಿಗೊತ್ತು ನನ್ನ ಆಲೋಚನೆಯಂತೆ ಮೊದಲು ಮನೆಯಿಂದಲೇ ಅಡಿಗೆ ಮಾಡಿಸೋಣ ಎಂಬ ಮನಸ್ಸು ನನ್ನದಾಗಿದರಿಂದ ಆದ್ದರಿಂದ ನಾನು ನನ್ನ ಶ್ರೀಮತಿಯ ಜೊತೆ ಏನಾದರೂ ಮಾಡಿ ಅಡುಗೆ ಮಾಡಿಸೋಣ ಎಂದು ತೀರ್ಮಾನಿಸಿದೆ ಅದರಂತೆ
ನಾನು ಸುಳ್ಳು ಹೇಳಿ, _“ನನ್ನ ಕೆಲವು ಸ್ನೇಹಿತರು ಮೈಸೂರಿಗೆ ಬಂದಿದ್ದಾರೆ. 10 ದಿನ ಮೈಸೂರಿನಲ್ಲೇ ಇರುತ್ತಾರೆ. ಅವರಿಗೆ ಊಟ ಮಾಡಿಕೊಡಬಹುದಾ?”_ ನನ್ನ ಉದ್ದೇಶ ಆ ದಿನ ನೋಡಿದ ದೃಶ್ಯ ನನ್ನ ಮನಸ್ಸಿಗೆ ಬಹಳ ಆಘಾತಕಾರಿಯದಂತಹ ವಿಚಾರ ವಾಗಿದ್ದಿದ್ದರಿಂದ ಒಂದು ದಿನ ಸಿಟಿಯಲ್ಲಿ ಹೋಗುತ್ತಿದ್ದಾಗ ರಸ್ತೆಯ ಎರಡು ಬದಿಗಳಲ್ಲಿ ಅಲ್ಲಲ್ಲಿ ಕೆಲವರು ಏಕಾಂಗಿಯಾಗಿ ಕುಳಿತಿರುವಂತಹ ದೃಶ್ಯವನ್ನು ನೋಡುತ್ತಿದ್ದೆ ಮತ್ತು ಆ ದಿನ ನೋಡಿದ ಮತ್ತು ಅಮ್ಮ ಹೇಳಿದ ಆ ಒಂದು ಧ್ವನಿ ನನ್ನ ಮನಸ್ಸಿನಲ್ಲಿ ಇದ್ದುದರಿಂದ ಇವರಿಗೆ ಏನಾದರೂ ಮಾಡಿ ರೋಡಿನಲ್ಲಿ ಅಸಹಾಯಕರಾಗಿ ಊಟವಿಲ್ಲದೆ ಕುಳಿತಿರುವವರಿಗೆ ನಾನು ಊಟವನ್ನು ಕೊಡಲೇಬೇಕು ಎಂಬುದಾಗಿ ನಿರ್ಧರಿಸಿದೆ ಒಂದು ಕಡೆ ಇದು ಕಷ್ಟ ಎನ್ನುವ ರೀತಿ ಮತ್ತೊಂದು ಕಡೆ ಈ ಒಂದು ಕೆಲಸವನ್ನು ಮಾಡಲೇ ಬೇಕು ಎಂಬುದು ನನ್ನ ಮನಸ್ಸಿನ ಅಂತರಾಳದ ಕನಸಾಗಿತ್ತು ಅದನ್ನು ನೆನಪಿನಲ್ಲಿ ಇಟ್ಟುಕೊಂಡು ನನ್ನ ಶ್ರೀಮತಿಯ ಜೊತೆ ಮಾತನಾಡಿ ನೀನು ಅಡುಗೆಯನ್ನು ಮಾಡಿಕೊಡಬಹುದಾ ಎಂಬುದಾಗಿ ಕೇಳಿದ್ದರಿಂದ ಅವಳು ನಿಮ್ಮ ಸ್ನೇಹಿತರು ಮೈಸೂರಿಗೆ ಬಂದಿರುವುದರಿಂದ ಅವರನ್ನು ಮನೆಗೆ ಕರೆದುಕೊಂಡು ಬರಬಹುದಲ್ಲ ಎಂಬುದಾಗು ಸಹ ಅವಳು ಹೇಳಿದಳು ನನ್ನ ಕಾಯಕವೇ ಬೇರೆಯಾಗಿದ್ದರಿಂದ ನನ್ನ ವಸ್ತು ಸ್ಥಿತಿಯೇ ಬೇರೆಯಾಗಿದ್ದರಿಂದ ಇಲ್ಲ ಇಲ್ಲ ಅವರು ತುಂಬಾ ಕೆಲಸದ ಒತ್ತಡದಲ್ಲಿದ್ದಾರೆ ಅವರಿಗೆ ಸಮಯವಿಲ್ಲ ಅವರಿಗೆ ನಾನೇ ತೆಗೆದುಕೊಂಡು ಹೋಗಿ ಕೊಟ್ಟರೆ ನಮ್ಮ ಕೆಲಸಕ್ಕೆ ಮತ್ತು ಅವರ ಕೆಲಸಕ್ಕೆ ಸರಿ ಹೋಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು ಆದ್ದರಿಂದ ಆ ವಿಚಾರವನ್ನು ಅವಳಿಗೆ ನಾನು ಅದೇ ರೀತಿ ಹೇಳಿದೆ ಆದರೆ ಅವಳು ಅದೃಷ್ಟವಶಾತ್ ಒಪ್ಪಿಕೊಂಡಳು

ನನ್ನ ಮಾತಿಗೆ ಧ್ವನಿ ಕೂಡಿಸಿ ಪ್ರತಿದಿನ ಅಡುಗೆ ಮಾಡುತ್ತಿದ್ದಳು.
ನಾನು ಸ್ಕೂಟರ್‌ನಲ್ಲಿ ಇರ್ವಿನ್ ರೋಡ್,ಆಸ್ಪತ್ರೆ, KR ಆಸ್ಪತ್ರೆ ಮತ್ತು ರಸ್ತೆ ಬದಿ ಕುಳಿತಿದ್ದ ಹಸಿದ ಜನರಿಗೆ ಆ ಊಟ ತಲುಪಿಸುತ್ತಿದ್ದೆ.

_ ಆ ಒಂದು ದಿನ ನಡೆದ ಘಟನೆ...

ಶ್ರೀಮತಿ ಮಾಡಿಕೊಟ್ಟಂತಹ ಅಡುಗೆಯನ್ನು ನಾನು ಅಂದುಕೊಂಡ ರೀತಿಯಲ್ಲಿ ರಸ್ತೆಯಲ್ಲಿ ಕುಳಿತಿರುವವರಿಗೆ ಪ್ರತಿದಿನದಂತೆ ಆ ದಿನನೂ ಕೂಡ ಊಟ ಹಂಚುತ್ತಿರುವಾಗ, ದಾರಿಯಲ್ಲಿ ಹೋಗುತ್ತಿದ್ದ ನನ್ನ ಹೆಂಡತಿಯ ಒಬ್ಬ ಗೆಳತಿ ನೋಡಿದರಂತೆ ನಂತರ ನನ್ನ ಶ್ರೀಮತಿಯನ್ನು ವಿಚಾರಿಸಿ ಕೇಳಿದರಂತೆ
_“ನಿಮ್ಮ ಮನೆಯಲ್ಲಿ ಏನಾದರೂ ಕಾರ್ಯಕ್ರಮ ಇದೆಯೇ? ನಿಮ್ಮ ಯಜಮಾನರು ರಸ್ತೆ ಬದಿಯಲ್ಲಿ ಕುಳಿತವರಿಗೆ ಊಟ ಕೊಡುತ್ತಿದ್ದಾರಲ್ಲ?”_ ಎಂಬುದಾಗಿ

ಆ ಮಾತು ಕೇಳಿದ ನನ್ನ ಶ್ರೀಮತಿ ಆಶ್ಚರ್ಯವಾಯಿ ತಂತೆ
ಅವಳು ಉತ್ತರಿಸಿದಳಂತೆ - _“ಇಲ್ಲವಲ್ಲ, ಆ ತರ ಏನೂ ಇಲ್ಲ. ನಮ್ಮ ಮನೆಯವರು ಈ ದಿನ ಆಫೀಸಿಗೆ ಹೋಗಿದ್ದಾರೆ.”_ ಎಂದು ಹೇಳಿದರಂತೆ ಜೊತೆಗೆ ನನ್ನ ಶ್ರೀಮತಿಗೆ ಬೇರೆ ರೀತಿಯಾದಂತಹ ಆಲೋಚನೆ ಬಾಸವಾಯಿತಂತೆ ಇದು ನಿಜವಾ ಇಲ್ಲ ಸುಳ್ಳು ಇರಬಹುದಾ ನನ್ನ ಗೆಳತಿ ಬೇರೆ ಯಾರನ್ನು ನೋಡಿ ನನ್ನ ಯಜಮಾನರು ತರ ಅವಳಿಗೆ ಕಂಡಿರಬಹುದು ಎಂಬುದಾಗಿ ಹಲವಾರು ರೀತಿಯಾದಂತಹ ಯೋಚನೆಗಳು ಆ ಸಮಯದಿಂದಲೇ ಬಂದಿತ್ತಂತೆ ನಂತರ ಆ ದಿನ ನನ್ನ ಶ್ರೀಮತಿ ನಮ್ಮ ಯಜಮಾನರು ಎಷ್ಟು ಹೊತ್ತು ಗೆ ಮನೆಗೆ ಬರಬಹುದು ಎಂಬ ಕುತೂಹಲ ಹೆಚ್ಚಾಯಿತಂತೆ ಆದಷ್ಟು ಬೇಗ ಈ ವಿಚಾರವನ್ನು ಅವರ ಜೊತೆ ಕೇಳಿ ಪರಿಹರಿಸಿಕೊಳ್ಳಬೇಕು ಎಂಬುವ ಆಲೋಚನೆ ತುಂಬಾ ಜಾಸ್ತಿ ಇತ್ತಂತೆ ಆದ್ದರಿಂದ ಬರುವ ಸಮಯವನ್ನು ನಿಷ್ಠೆಯಿಂದ ಆ ದಿನ ಕಾಯುತ್ತಿದ್ದಳಂತೆ

ಆ ಸಂಜೆ ನಾನು ಮನೆಗೆ ಬಂದ ತಕ್ಷಣವೇ ನನ್ನನ್ನು ನನ್ನ ಶ್ರೀಮತಿ ಪ್ರಶ್ನಿಸಿದಳು. ಈ ದಿನ ನೀವು ಎಲ್ಲಿ ಹೋಗಿದ್ದೀರಿ ಎಂದು ಆ ಕ್ಷಣದಲ್ಲಿ ನಾನು ಸ್ವಲ್ಪ ವಿಚಲಿತನಾದೆ ಇಲ್ಲಿಯತನಕ ಯಾವ ದಿನವೂ ಸಹ ಈ ರೀತಿಯಾದಂತಹ ಪ್ರಶ್ನೆಯನ್ನು ಕೇಳದವರು ಈ ದಿನ ಯಾಕೆ ಪ್ರಸ್ನಿಸುತ್ತಿದ್ದಾಳೆ ಎಂಬುದು ನನಗೆ ಕ್ಷಣ ಆಶ್ಚರ್ಯ ಚಿಕಿತನಾದೆ ನಂತರ ನನಗೆ ಏನು ಒಂದು ರೀತಿ ಬಸವಾಯಿತ್ತು ಅವಳು ಕೇಳಿದ ಪ್ರಶ್ನೆಗೆ ಸಂಬಂಧಿಸಿದವಾಗಿ ಯಾವುದೇ ಸುಳ್ಳು ಹೇಳದೆ ನಾನು ಉತ್ತರಿಸಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡೆ
ಆ ಕ್ಷಣದಲ್ಲಿ ನಾನು ಸುಳ್ಳು ಹೇಳಲಿಲ್ಲ. ನನ್ನ ಮನದಾಳದ ನೋವು, ನನ್ನ ಕನಸು, ನಾನು ಮಾಡುತ್ತಿರುವ ಕೆಲಸದ ಉದ್ದೇಶ ಎಲ್ಲವನ್ನೂ ಅವಳಿಗೆ ವಿವರವಾಗಿ ಹೇಳಿದೆ. ಆ ವಿಚಾರದ ಬಗ್ಗೆ ಅವಳಿಗೆ ಮೊದಲು ಸಹ ಆ ಘಟನೆ ಗೊತ್ತಿದ್ದರಿಂದ

ಅದನ್ನು ಕೇಳಿದ ಅವಳು ಗಟ್ಟಿಯಾಗಿ ತುಂಬಾ ಸಂತೋಷದಿಂದ ನಗುಮನಸ್ಸಿನಿಂದ ಹೇಳಿದಳು -
_“ನೀವು ಮೊದಲೇ ಹೇಳಿದ್ದರೆ 10 ಜನರಿಗೆ ಅಲ್ಲ, 50 ಜನರಿಗೆ ಅಡುಗೆ ಮಾಡುತ್ತಿದ್ದೆ. ನೀವು ಮಾಡುತ್ತಿರುವುದು ಪವಿತ್ರ ಕೆಲಸ. ಇದು ನಮ್ಮ ಜೀವನದ ಸಾರ್ಥಕತೆಯ ಬದುಕು.”_ ಸಮಾಜಕ್ಕೆ ಕೊಡುವ ಒಂದು ದೊಡ್ಡ ಉಡುಗೊರೆ, ಈ ರೀತಿಯಾದಂತಹ ಕೆಲಸವನ್ನು ಹಸಿದವರಿಗೆ ನೀವು ಮಾಡುತ್ತೀರಿ ಎಂದರೆ ನಾನು ಯಾವಾಗಲೂ ನಿಮ್ಮ ಜೊತೆ ಸದಾ ಸಿದ್ದಳಾಗಿ ಇರುತ್ತೇನೆ ಯಾವುದೇ ಸಂಕೋಚ ಇಲ್ಲದೆ ನೀವು ನನಗೆ ಹೇಳಿ " ಅನ್ನದಾನ ಮಹಾದಾನ "ಎಂದು ಹೇಳಲಾರಬ್ಬಿಸಿದಳು ಆ ಒಂದು ಪ್ರತಿಯೊಂದು ಕ್ಷಣ ಅವಳ ಮಾತು ಕೂಡ ನನ್ನ ಜೀವನದ ಅತ್ಯಂತ ಅದ್ಭುತವಾದ ಕ್ಷಣಗಳಾಗಿ ಪರಿಣಮಿಸಿತು

ಆ ದಿನ ನನಗೆ ಹೆಂಡತಿ ಮಾತ್ರವಲ್ಲ, ಈ ಸಮಾಜಕ್ಕೆ ನಾನು ಮನಸ್ಸಿನಲ್ಲಿ ಅಂದುಕೊಂಡಿರುವ ಹೋರಾಟಕ್ಕೆ ಒಬ್ಬ ಪೂರ್ಣ ಪ್ರಮಾಣದ ಸಂಗಾತಿಯೂ ಸಿಕ್ಕಳು ಎಂಬ ಆ ಕ್ಷಣ ನನ್ನ ಜೀವನದ ಮರೆಯಲಾಗದಂತಹ ದಿನವಾಗಿ ಪರಿಣಮಿಸಿತು ಆದರೂ ಒಂದು ಕಡೆ ಮನೆಯಲ್ಲಿ ನಮಗೆ ಚಿಕ್ಕ ಚಿಕ್ಕ ಮಕ್ಕಳು ಕೂಡ ಇದ್ದಿದ್ದು ಏನು ಮಾಡುವುದು ಎಂಬ ಪ್ರಶ್ನೆ ಉದ್ಭವಾಯಿತು ಆದರೂ ಕೂಡ ಆ ಒಂದು ದೇವರ ಕೆಲಸಕ್ಕೆ ನಮ್ಮ ಚಿಕ್ಕ ಚಿಕ್ಕ ಪುಟ್ಟ ಹೆಜ್ಜೆ ಹಾಕುವ ಮಕ್ಕಳನ್ನು ಸಹ ಈ ಕೆಲಸಕ್ಕೆ ಜೊತೆಯಲ್ಲೇ ಕರೆದುಕೊಂಡು ನಮ್ಮ ಕೆಲಸವನ್ನು ಪ್ರಾರಂಭಿಸಿದವು,
ಇಂದಿಗೆ ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ 14 ವರ್ಷ ಮುಗಿಯುತ್ತಿರುವ ಒಂದು ಕನಸು ಆಗಿದ್ದಂತಹ ಒಂದು ದೇವರ ಕೆಲಸ ಈ ದಿನ ನನಸಾಗಿ ನಗಾಲೋಟದಲ್ಲಿ ಸಮಾಜಮುಖಿಯಾಗಿ ಸಾಗುತ್ತಿದೆ ಇದು ನಿಮ್ಮೆಲ್ಲರ ಆಶೀರ್ವಾದ ಮತ್ತು ಶಕ್ತಿಯಾಗಿ ಪರಿಣಮಿಸಿದೆ ನಿಮ್ಮ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಹೀಗೆ ಇರಲಿ ಎಂಬುದು ನಮ್ಮ ಮನದಾಳದ ಕಥೆ 🙏 ಸಹಾಯವಾಣಿ ಸಂಖ್ಯೆ9148987375

*14 ವರ್ಷಗಳ ನಡೆ*

ಆ ದಿನದಿಂದ ನಾವಿಬ್ಬರೂ ಚಿಕ್ಕ ಚಿಕ್ಕ ನಮ್ಮ ಮಕ್ಕಳ ಜೊತೆ ಪ್ರಮಾಣ ಮಾಡಿದೆವು - _“ಎಷ್ಟೇ ಕಷ್ಟ ಬಂದರೂ ಈ ಕೆಲಸವನ್ನು ನಿಲ್ಲಿಸುವುದಿಲ್ಲ.”_ ಎಂದು ನಂತರ ನಮ್ಮ ಈ ಒಂದು ಸಮಾಜಮುಖಿ ಕಾಯಕ
ಒಂದು ಸ್ಕೂಟರ್‌ನಿಂದ ಶುರುವಾದ ಸೇವೆ, ಜನರ ಪ್ರೀತಿಯಿಂದ ದೊಡ್ಡ ಆಂದೋಲನವಾಯಿತು.
ಇಂದು ಪ್ರತಿದಿನ ನೂರಾರು, ಸಾವಿರಾರು ಜನರ ಹಸಿವು ನೀಗಲು ನಮ್ಮ ಮೈಸೂರಿನಲ್ಲಿ ಹಲವಾರು ಪ್ರದೇಶಗಳಲ್ಲಿ ಈ _ ಅಕ್ಷಯ ಆಹಾರ ಜೋಳಿಗೆ_ ಹಸಿವನ್ನು ನೀಗಿಸುವ ಸಹಾಯ ಮಾಡುತ್ತಿದೆ.

**ಅಕ್ಷಯ ಆಹಾರ ಜೋಳಿಗೆ* ಒಂದು ವ್ಯಾಪಾರವಲ್ಲ. ಇದು ಒಂದು ಸಮಾಜಮುಖಿ ಕಾಯಕ

*ಸಮಾಜಕ್ಕೆ ನಮ್ಮ ಒಂದೇ ಮನವಿ*

_“ಯಾವುದೇ ಸಭೆ, ಸಮಾರಂಭದಲ್ಲಿ ಆಹಾರ ಉಳಿದರೆ ದಯವಿಟ್ಟು ವ್ಯರ್ಥ ಮಾಡಬೇಡಿ. ನಮಗೆ ಕೊಡಿ.”_

ಸಹಾಯವಾಣಿ ಸಂಖ್ಯೆ:- 9148987375

ನಾನು ಮೂಲತಃ ಹೆಸರಾಂತ ಕೃಷಿಕ ಕುಟುಂಬದಿಂದ ಬೆಳೆದವನು ನಾನು ಪಕ್ಕ ರೈತನ ಮಗ. ಪ್ರತಿ ಕಾಳಿನ ಬೆಲೆ ನನಗೆ ಗೊತ್ತು.
ನಾವು ಇದನ್ನು ನಮ ಗಾಗಿ ಮಾಡುತ್ತಿಲ್ಲ.
ಇದನ್ನು ನಮ್ಮ ದೇಶಕ್ಕಾಗಿ, ಸಮಾಜಕ್ಕಾಗಿ, ಮುಂದಿನ ಪೀಳಿಗೆಗಾಗಿ ಮಾಡುತ್ತಿದ್ದೇವೆ.

_ಏಕೆಂದರೆ ಇಂದು ನಾವು ಆಹಾರವನ್ನು ಉಳಿಸಿದರೆ, ನಾಳೆ ನಮ್ಮ ದೇಶದ ಸಂಪತ್ತನ್ನು ಉಳಿಸಿದಂತಾಗುತ್ತದೆ._

ಇದು ಕೇವಲ ನನ್ನ ಕೆಲಸವಲ್ಲ.
_ಇದು ಈ ದೇಶದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ._ 💚

_ಅಭಿಮಾನ ಮತ್ತು ಕೃತಜ್ಞತೆಯೊಂದಿಗೆ,_

_ಡಾ. ಹೆಚ್.ಆರ್. ರಾಜೇಂದ್ರ MA., M.Phil., PGDPM., Ph.D._

ಶ್ವೇತಾ ರಾಜೇಂದ್ರ

_ಸಂಸ್ಥಾಪಕರು , ಅಕ್ಷಯ ಆಹಾರ ಜೋಳಿಗೆ_
_ಅರಮನೆ ಹೊನ್ನಮಾಚನಹಳ್ಳಿ, ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ_
14 ವರ್ಷಗಳ ಅವಿರತ ಸೇವೆ 🙏
ಸಹಾಯವಾಣಿ : 9148987375🙏

ಪ್ರೀತಿಯ ಬಂಧುಗಳೇ,*ನನ್ನ ಪ್ರಯಾಣ - ಅಕ್ಷಯ ಆಹಾರ ಜೋಳಿಗೆ* _ಹಸಿವು, ಮಾನವೀಯತೆ ಮತ್ತು 14 ವರ್ಷಗಳ ಸೇವೆಯ ಕಥೆ_( ಅಕ್ಷಯ ಆಹಾರ ಫೌಂಡೇಶನ್, ಮೈಸೂ...
28/07/2026

🍽️ ಅಕ್ಷಯ ಆಹಾರ ಪೌಂಡೇಶನ್, ಮೈಸೂರು"ಅನ್ನವೇ ಪರಬ್ರಹ್ಮ" – ಆಹಾರ ವ್ಯರ್ಥ ಮಾಡಬೇಡಿ, ಹಸಿದವರ ಹೊಟ್ಟೆ ತುಂಬಿಸಿ. ❤️ನಿಮ್ಮ ಮನೆಯಲ್ಲಿ ನಡೆಯುವ ಮದ...
28/07/2026

🍽️ ಅಕ್ಷಯ ಆಹಾರ ಪೌಂಡೇಶನ್, ಮೈಸೂರು
"ಅನ್ನವೇ ಪರಬ್ರಹ್ಮ" – ಆಹಾರ ವ್ಯರ್ಥ ಮಾಡಬೇಡಿ, ಹಸಿದವರ ಹೊಟ್ಟೆ ತುಂಬಿಸಿ. ❤️

ನಿಮ್ಮ ಮನೆಯಲ್ಲಿ ನಡೆಯುವ ಮದುವೆ, ಹುಟ್ಟುಹಬ್ಬ, ಗೃಹಪ್ರವೇಶ, ಸೀಮಂತ ಅಥವಾ ಯಾವುದೇ ಸಮಾರಂಭಗಳಲ್ಲಿ ಹೆಚ್ಚುವರಿ ಆಹಾರ ಉಳಿದಿದ್ದರೆ ಅದನ್ನು ವ್ಯರ್ಥ ಮಾಡಬೇಡಿ.

📞 ಅಕ್ಷಯ ಆಹಾರ ಪೌಂಡೇಶನ್ ಅನ್ನು ಸಂಪರ್ಕಿಸಿ. ನಿಮ್ಮಿಂದ ದೊರೆಯುವ ಆಹಾರವನ್ನು ಅಗತ್ಯವಿರುವ ನಿರ್ಗತಿಕರು ಮತ್ತು ಹಸಿದವರಿಗೆ ತಲುಪಿಸುವ ಸೇವೆಯನ್ನು ನಾವು ಮಾಡುತ್ತೇವೆ.

🤝 ಒಂದು ಕರೆ... ಹಲವರ ಹಸಿವು ನೀಗಿಸುತ್ತದೆ.
📱 ಸಂಪರ್ಕಿಸಿ: 9148987375

#ಅನ್ನದಾನ #ಮೈಸೂರು #ಸೇವೆಯೇಸಾಧನೆ

Address

143, Moksha Marga, Siddartha Nagar
Mysore
570029

Alerts

Be the first to know and let us send you an email when Akshaya Aahara Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Akshaya Aahara Foundation:

Shortcuts

Share