Digital Media Association of Karnataka

Digital Media Association of Karnataka D-MAK. (Digital Media Association of Karnataka)

30/09/2026

*ಮಾಧ್ಯಮ ಗೋಷ್ಠಿಗೆ ಆಹ್ವಾನ*,

ಆತ್ಮೀಯರೇ,

ಬೆಂಗಳೂರಿನ ಆನಂದ್ ರಾವ್ ವೃತ್ತದ ಮೌರ್ಯ ಹೋಟೆಲ್ ನಲ್ಲಿ ನಾಳೆ ಬೆಳಗ್ಗೆ 11.30ಗಂಟೆಗೆ ಹೆಚ್ ಡಿ ಕುಮಾರ್ ಸ್ವಾಮಿ ಅವರು ಮಾನ್ಯ ಮುಖ್ಯಮಂತ್ರಿಗಳ ವಿರುದ್ಧ ನೈಸ್ ಯೋಜನೆ ವಿಚಾರದಲ್ಲಿ ಗಂಭೀರವಾದ ಆರೋಪಕ್ಕೆ Power Points Presentation ಮೂಲಕ ಕೆಪಿಸಿಸಿ ವಕ್ತಾರರಾದ ಶ್ರೀ ಎಂ ಲಕ್ಷ್ಮಣ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್ ಮನೋಹರ್ ಹಾಗೂ ಕೆಪಿವೈಸಿಸಿ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಮಂಜುನಾಥ್ ಅವರು ದಾಖಲೆಗಳ ಸಮೇತ ಉತ್ತರ ನೀಡುವುದಲ್ಲದೆ ಕೇಂದ್ರ ಸಚಿವರಾದ ಕುಮಾರ್ ಸ್ವಾಮಿಯರ ಆಸ್ತಿಗಳ ಬಗ್ಗೆ ವಿವರಣೆ ನೀಡಲಿದ್ದಾರೆ.

ಮಾಧ್ಯಮ ಮಿತ್ರರು ಆಗಮಿಸಲು ಕೋರಿಕೆ.

ಸಂವಹನ ಮತ್ತು ಮಾಧ್ಯಮ ವಿಭಾಗ, ಕೆಪಿಸಿಸಿ.

28/09/2026

28-09-2026

ಗೆ,
ಸಂಪಾದಕರು / ವರದಿಗಾರರು.

*ಪತ್ರಿಕಾಗೋಷ್ಠಿಗೆ ಆಹ್ವಾನ*

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರಾದ *ಶ್ರೀ ಬಿ.ವೈ. ವಿಜಯೇಂದ್ರ,* ಸಂಸದರಾದ *ಶ್ರೀ ಪಿ.ಸಿ. ಮೋಹನ್,* ರಾಜ್ಯ ಮುಖ್ಯ ವಕ್ತಾರರಾದ *ಶ್ರೀ ಅಶ್ವಥನಾರಾಯಣ್,* ರೈತ ಮೋರ್ಚಾ ರಾಜ್ಯ ಅಧ್ಯಕ್ಷರಾದ *ಶ್ರೀ ಎ.ಎಸ್. ಪಾಟೀಲ್ ನಡಹಳ್ಳಿ* ಅವರು 29.09.2026ರ ಮಂಗಳವಾರ *ಮಧ್ಯಾಹ್ನ 12.00 ಗಂಟೆಗೆ* ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ *ಜಗನ್ನಾಥ ಭವನದಲ್ಲಿ* ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ತಮ್ಮ ಪತ್ರಿಕೆಯ ವರದಿಗಾರರು, ಛಾಯಾಗ್ರಾಹಕರು ಮತ್ತು ಟಿ.ವಿ. ಮಾಧ್ಯಮಗಳ ವರದಿಗಾರರು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

ರಾಜ್ಯ ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ

28/09/2026

*ಮಾಧ್ಯಮಗೋಷ್ಠಿಗೆ ಅಹ್ವಾನ*

ಆತ್ಮೀಯರೇ,

ಇಂದು, 28-09-2026 ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಶ್ರೀ ಸರವಣನ್ ಅವರು ಅಧಿಕಾರ ಸ್ವೀಕಾರ ವವಹಿಸಿಕೊಳ್ಳಲಿದ್ದಾರೆ.

ಈ ಸಭೆಯಲ್ಲಿ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿಕೆ ಹರಿಪ್ರಸಾದ್ ಅವರು ಉಪಸ್ಥಿತರಿರುತ್ತಾರೆ.

*ಈ ಸಮಾರಂಭದ ನಂತರ ಮಧ್ಯಾಹ್ನ 1-00 ಗಂಟೆಗೆ ಕೆಪಿಸಿಸಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.*

ಮಾಧ್ಯಮ ಮಿತ್ರರು ಆಗಮಿಸಲು ಕೋರಿಕೆ.

ಸಂವಹನ ಮತ್ತು ಮಾಧ್ಯಮ ವಿಭಾಗ, ಕೆಪಿಸಿಸಿ.

18/09/2026

*ಮಾಧ್ಯಮ ಆಹ್ವಾನ,*

*ಆತ್ಮೀಯರೇ,*

ದಿನಾಂಕ 19/09/2026 ಶನಿವಾರ ಬೆಳಿಗ್ಗೆ 11-00ಕ್ಕೆ ಭಾರತ್ ಜೋಡೋ ಭವನದಲ್ಲಿ ಕೆಪಿಸಿಸಿ ಇಂಟಕ್ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಅರಣ್ಯ ಮತ್ತು ಮರಗೆಲಸಗಾರರ ಒಕ್ಕೂಟ, ಕಟ್ಟಡ ನಿರ್ಮಾಣ "ಶ್ರಮಿಕರ ಸಂಕಲ್ಪ" ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ರವರು ಭಾಗವಹಿಸಲಿದ್ದಾರೆ.

*ಮಾಧ್ಯಮ ಮಿತ್ರರು ಆಗಮಿಸಲು ಕೋರಿಕೆ.*

*ಸಂವಹನ ಮತ್ತು ಮಾಧ್ಯಮ ವಿಭಾಗ, ಕೆಪಿಸಿಸಿ.*
(D-MAK Broadcast)

12/09/2026

*ಪಕ್ಷ ಸೇರ್ಪಡೆಗೆ ಮಾಧ್ಯಮ ಅಹ್ವಾನ* ,

ಆತ್ಮೀಯರೇ,

ಶ್ರೀ ನೆ.ಲ ನರೇಂದ್ರ ಬಾಬು, ಮಾಜಿ ಶಾಸಕರು ನಾಳೆ ಬೆಳಗ್ಗೆ 11.00 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಹಿಂಭಾಗದ ಭಾರತ್ ಜೋಡೋ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿಕೆ ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಮಾಧ್ಯಮ ಮಿತ್ರರು ಆಗಮಿಸಲು ಕೋರಿಕೆ.

ಸಂವಹನ ಮತ್ತು ಮಾಧ್ಯಮ ವಿಭಾಗ, ಕೆಪಿಸಿಸಿ.

12/09/2026

11-09-2026

ಗೆ,
ಸಂಪಾದಕರು / ವರದಿಗಾರರು.

*ಪತ್ರಿಕಾ ಆಹ್ವಾನ*

ಬೆಂಗಳೂರು: *ಬಿಜೆಪಿ ಯಾದವ ಬಳಗದ* ವತಿಯಿಂದ 12.09.2026ರ ಶನಿವಾರ *ಬೆಳಿಗ್ಗೆ 11.00* ಗಂಟೆಗೆ ಬಿಜೆಪಿ ರಾಜ್ಯ ಕಾರ್ಯಾಲಯ *ಜಗನ್ನಾಥ ಭವನ* ದಲ್ಲಿ *ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು* ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರಾದ *ಶ್ರೀ ಬಿ.ವೈ. ವಿಜಯೇಂದ್ರ,* ವಿಧಾನಸಭೆಯ ವಿಪಕ್ಷ ನಾಯಕರಾದ *ಶ್ರೀ ಆರ್. ಅಶೋಕ್,* ವಿಧಾನಪರಿಷತ್ ವಿಪಕ್ಷ ನಾಯಕರಾದ *ಶ್ರೀ ಛಲವಾದಿ ನಾರಾಯಣಸ್ವಾಮಿ,* ಸಂಸದರಾದ *ಶ್ರೀ ಯದುವೀರ್ ಒಡೆಯರ್,* ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ಶಾಸಕರಾದ *ಶ್ರೀ ಧೀರಜ್ ಮುನಿರಾಜು,* ಮಹಿಳಾ ಮೋರ್ಚಾ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾದ *ಶ್ರೀಮತಿ ಪೂರ್ಣಿಮಾ ಪ್ರಕಾಶ್* ಮತ್ತು *ಪಕ್ಷದ ಮುಖಂಡರು* ಉಪಸ್ಥಿತರಿರಲಿದ್ದಾರೆ.
ತಮ್ಮ ಪತ್ರಿಕೆಯ ವರದಿಗಾರರು, ಛಾಯಾಗ್ರಾಹಕರು ಮತ್ತು ಟಿ.ವಿ. ಮಾಧ್ಯಮಗಳ ವರದಿಗಾರರು ಈ ಸಂದರ್ಭದಲ್ಲಿ ಭಾಗವಹಿಸಲು ಕೋರಲಾಗಿದೆ.

ರಾಜ್ಯ ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
(Broadcast : D-MAK)

With SuddiBox – I just got recognized as one of their rising fans! 🎉
15/08/2026

With SuddiBox – I just got recognized as one of their rising fans! 🎉

15/08/2026
02/08/2026

Address

Mumbai
560076

Website

Alerts

Be the first to know and let us send you an email when Digital Media Association of Karnataka posts news and promotions. Your email address will not be used for any other purpose, and you can unsubscribe at any time.

Shortcuts

Share