Reliance Association Bollur

Reliance Association Bollur Contact information, map and directions, contact form, opening hours, services, ratings, photos, videos and announcements from Reliance Association Bollur, Youth Organization, Haleangadi, Manglur.

*ನಾಡಿನ ಸಮಸ್ತ ಬಾಂಧವರಿಗೆ ಈದ್-ಉಲ್-ಫಿತ್ರ್ ಹಬ್ಬದ ಶುಭಾಶಯಗಳು.*ಈದ್-ಉಲ್-ಫಿತ್ರ್▪️▪️▪️▪️ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬಗಳಲ್ಲಿ ಒಂದು. ರಂಜ...
20/03/2026

*ನಾಡಿನ ಸಮಸ್ತ ಬಾಂಧವರಿಗೆ ಈದ್-ಉಲ್-ಫಿತ್ರ್ ಹಬ್ಬದ ಶುಭಾಶಯಗಳು.*

ಈದ್-ಉಲ್-ಫಿತ್ರ್▪️▪️▪️▪️
ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬಗಳಲ್ಲಿ ಒಂದು. ರಂಜಾನ್ ಮಾಸದ ಕೊನೆಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪವಿತ್ರ ರಂಜಾನ್ ಮಾಸದ ಒಂದು ತಿಂಗಳ ಕಠಿಣ ಉಪವಾಸ ಈ ಹಬ್ಬದ ಮೂಲಕ ಕೊನೆಯಾಗುತ್ತದೆ. ವಿಶ್ವದಾದ್ಯಂತ ಮುಸ್ಲಿಂ ಧರ್ಮೀಯರು ಈ ಹಬ್ಬವನ್ನು ಆಚರಿಸುತ್ತಾರೆ.

ರಂಜಾನ್ ತಿಂಗಳ ಚಂದ್ರ ದರ್ಶನದೊಂದಿಗೆ ಒಂದು ತಿಂಗಳ ಉಪವಾಸ ಆರಂಭವಾಗುತ್ತದೆ, ಶಾವಾಲ್ ತಿಂಗಳ ಚಂದ್ರದರ್ಶನದೊಂದಿಗೆ ಈ ಉಪವಾಸ ಕೊನೆಯಾಗುತ್ತದೆ. ಹೀಗಾಗಿ ಇದನ್ನು ಉಪವಾಸ ಕೊನೆಗೊಳಿಸುವ ಹಬ್ಬ ಎಂದೂ ಕರೆಯಲಾಗುತ್ತದೆ. ಇದು ಅಲ್ಲಾಹ್ ಕರುಣಿಸಿದ ದಯೆ, ಶಕ್ತಿ, ಪ್ರೀತಿಗೆ ಧನ್ಯವಾದ ಅರ್ಪಿಸುವ ಹಬ್ಬ ಕೂಡಾ ಹೌದು. ಹೀಗಾಗಿ, ಮುಂಜಾನೆ ಬೇಗ ಎದ್ದು, ನಮಾಜ್ ಮಾಡಿ, ಹೊಸ ಬಟ್ಟೆಯನ್ನು ತೊಟ್ಟು ಜನ ಈ ದಿನ ಹಬ್ಬ ಆಚರಿಸುತ್ತಾರೆ. ಜತೆಗೆ, ಕುಟುಂಬದವರೊಂದಿಗೆ ಹಬ್ಬದೂಟವನ್ನೂ ಸವಿಯುತ್ತಾರೆ. ಬಡವರಿಗೆ, ನಿರ್ಗತಿಕರಿಗೆ ಊಟ, ಹೊಸ ಬಟ್ಟೆ ಕೊಡುವುದು ಸೇರಿದಂತೆ ಹಲವು ದಾನ ನೀಡುವುದಕ್ಕೂ ಈ ದಿನ ವಿಶೇಷ ಮಹತ್ವವಿದೆ...

18/11/2025
ಮೊಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ಪ್ರವಾದಿ (ಸ.ಅ) ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಮದರಸ ವಿದ್ಯಾರ್ಥಿಗಳ  “ಪ್ರ...
04/09/2025

ಮೊಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ಪ್ರವಾದಿ (ಸ.ಅ) ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಮದರಸ ವಿದ್ಯಾರ್ಥಿಗಳ “ಪ್ರತಿಭಾ ಸ್ಪರ್ಧಾ ಕಾರ್ಯಕ್ರಮಕ್ಕೆ" ಕಳೆದ 10 ವರ್ಷದಿಂದ ಪ್ರೋತ್ಸಾಹಿಸುತ್ತ ಬಂದಿದ್ದು, ಈ ವರ್ಷವು ಸುಮಾರು 25,000 ಸಾವಿರ ರೂಪಾಯಿ ಮೊತ್ತದ (ಪ್ರಥಮ ಬಹುಮಾನ) ವನ್ನು ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ವತಿಯಿಂದ ನೀಡಲಾಯಿತು.

ಈ ವೇಳೆ ನಮ್ಮ ಸಂಸ್ಥೆಯ ನಿರಂತರ 28 ವರ್ಷದ ಸಾಮಾಜಿಕ, ಧಾರ್ಮಿಕ, ಶೆಕ್ಷಣಿಕ ಸೇವೆಯನ್ನು ಮನಗಂಡು ಈ ಸಂದರ್ಭದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು ವತಿಯಿಂದ ನಮ್ಮ ಸಂಸ್ಥೆಗೆ ಅಭಿನಂದನ ಫಲಕವನ್ನು ನೀಡಿ ಗೌರವಿಸಲಾಯಿತು…

*🕋🌙 ಈದ್ ಮುಬಾರಕ್🌙🕋**ತನ್ನವರ ಮುಖದ ನಗುವಿಗಾಗಿ ಹಗಲಿರುಳು ಮರುಭೂಮಿಯಲ್ಲಿ ದುಡಿಯುತ್ತಿರುವ, ಕುಟುಂಬಕ್ಕಾಗಿ ಪ್ರತಿಕ್ಷಣ ಹೃದಯ ಮಿಡಿಯುತ್ತಿರುವ ...
29/03/2025

*🕋🌙 ಈದ್ ಮುಬಾರಕ್🌙🕋*

*ತನ್ನವರ ಮುಖದ ನಗುವಿಗಾಗಿ ಹಗಲಿರುಳು ಮರುಭೂಮಿಯಲ್ಲಿ ದುಡಿಯುತ್ತಿರುವ, ಕುಟುಂಬಕ್ಕಾಗಿ ಪ್ರತಿಕ್ಷಣ ಹೃದಯ ಮಿಡಿಯುತ್ತಿರುವ ನಮ್ಮೊಳಗಿನ ವಿದೇಶಿ ಸಹೋದರರಿಗೆ…*

*🌙 ಈದುಲ್ ಫಿತರ್ ಹಬ್ಬದ ಶುಭಾಶಯಗಳು 🌙*

*ತಮ್ಮ ಪ್ರತೀ ಬೆವರ ಹನಿಗಳಿಗೂ ಅಲ್ಲಾಹನು ಅರ್ಹ ಪ್ರತಿಫಲ ನೀಡಲಿ ತಮ್ಮನ್ನು, ನಮ್ಮೆಲ್ಲರನ್ನೂ ಅಲ್ಲಾಹನು ಅನುಗ್ರಹಿಸಲಿ ಅಮೀನ್…..*

💢*ಅಧ್ಯಕ್ಷರು ಮತ್ತು ಸರ್ವಸದಸ್ಯರು ರಿಲಯನ್ಸ್ ಎಸೋಸಿಯೇಶನ್ (ರಿ) ಬೊಳ್ಳೂರು ಹಳೆಯಂಗಡಿ*💢

*09-02-2025 ರಂದು ಶೃಂಗೇರಿ ಯಲ್ಲಿ ನಡೆದ ‘ಶೃಂಗೇರಿ ಟೇಕ್ವಾಂಡೋ ಕಪ್- 2025’ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ರಿಲಯನ್ಸ್ ಎಸೋಸಿಯೇಶನ್(ರಿ) ಬೊಳ್ಳ...
10/02/2025

*09-02-2025 ರಂದು ಶೃಂಗೇರಿ ಯಲ್ಲಿ ನಡೆದ ‘ಶೃಂಗೇರಿ ಟೇಕ್ವಾಂಡೋ ಕಪ್- 2025’ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ರಿಲಯನ್ಸ್ ಎಸೋಸಿಯೇಶನ್(ರಿ) ಬೊಳ್ಳೊರು ಹಳೆಯಂಗಡಿ ಇದರ ಟೈಕ್ವೋಂಡೊ ತಂಡದಿಂದ ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ರಷಾದ್ ಇಂದಿರಾನಗರ ಹಾಗು ತೃತೀಯ ಸ್ಥಾನವನ್ನು ಸೌದ್ ಇಂದಿರಾನಗರ ಮತ್ತು ಸಾದ್ ಬೊಳ್ಳೊರು ಪಡೆದು ನಮ್ಮ ಸಂಸ್ಥೆಯ ಹಾಗೂ ಊರಿನ ಹೆಸರನ್ನು ರಾಜ್ಯ ಮಟ್ಟದಲ್ಲಿ ಬೆಳಗಿಸಿದ ನಿಮಗೂ ಹಾಗು ತರಬೇತುದಾರರಾದ ಆಸೀಫ್ ಕಿನ್ಯ ಮತ್ತು ಸವಾದ್ ನಂದಾವರ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು.*

*▪️ಅಧ್ಯಕ್ಷರು ಮತ್ತು ಸರ್ವಸದಸ್ಯರು ▪️*
*ರಿಲಯನ್ಸ್ ಎಸೋಸಿಯೇಶನ್(ರಿ) ಬೊಳ್ಳೂರು ಹಳೆಯಂಗಡಿ.*
*ರಿಲಯನ್ಸ್ ಎಸೋಸಿಯೇಶನ್ ಸೌದಿ ಅರೇಬಿಯಾ.*
*ರಿಲಯನ್ಸ್ ಕ್ರಿಕೆಟರ್ಸ್ ಬೊಳ್ಳೂರು.*

22/12/2024

ಹಳೆಯಂಗಡಿ: ಪಡುಪಣಂಬೂರು ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ ಅರಸು ಕಂಬಳ' ಸಮಿತಿ ವತಿಯಿಂದ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಹಸನ್ ಮುಬಾರಕ್ ಬೊಳ್ಳೂರು (MBBS,MD) ಇವರಿಗೆ ಮುಲ್ಕಿ ಅರಸು ಕಂಬಳ ದಿನವಾದ ಇಂದು ಅರಮನೆಯ ಮುಂಭಾಗದಲ್ಲಿ ಮುಲ್ಕಿ ಸೀಮೆ ಅರಸರಾದ ಗೌರವಾನಿತ ದುಗ್ಗಣ್ಣ ಸಾವಂತರು ಅವರ ಉಪಸ್ಥಿತಿಯಲ್ಲಿ ‘ಅರಸು ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

*ಈದ್ ಮಿಲಾದ್.…..*ಮುಸ್ಲಿಂ ಧರ್ಮೀಯರ ಪವಿತ್ರ ಆಚರಣೆಗಳಲ್ಲಿ ಒಂದು. ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಆಚರಣೆ ಶುಭ ಸಂದ...
15/09/2024

*ಈದ್ ಮಿಲಾದ್.…..*
ಮುಸ್ಲಿಂ ಧರ್ಮೀಯರ ಪವಿತ್ರ ಆಚರಣೆಗಳಲ್ಲಿ ಒಂದು. ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಆಚರಣೆ ಶುಭ ಸಂದರ್ಭವಿದು. ಪ್ರವಾದಿ ಮಹಮ್ಮದ್ ಅವರ ಜನ್ಮದಿನವನ್ನು ಪ್ರತಿ ಮುಸ್ಲಿಂ ಧರ್ಮೀಯರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರಿನ ರಬೀ ವುಲ್ ಅವ್ವಲ್ 12 ರಂದು ಈದ್ ಮಿಲಾದ್ ಆಚರಿಸಲಾಗುತ್ತದೆ.

ಈದ್ ಮಿಲಾದ್ ಸಂದರ್ಭದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆಯುತ್ತವೆ. ಧರ್ಮಗುರುಗಳು ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ, ಶಾಂತಿ ಸಂದೇಶ, ಯುವ ಪೀಳಿಗೆಗೆ ನೀಡಿದ ಮಾರ್ಗದರ್ಶನಗಳನ್ನೆಲ್ಲಾ ತಿಳಿಸಿಕೊಡುತ್ತಾರೆ. ಜೊತೆಗೆ, ಪ್ರವಾದಿಗಳ ವ್ಯಕ್ತಿತ್ವವನ್ನು ಕಟ್ಟಿಕೊಡುವ ಹಾಡು, ಸ್ಫೂರ್ತಿ ಸಂದೇಶಗಳನ್ನೂ ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಜೊತೆಗೆ, ಇಸ್ಲಾಂನ ಪವಿತ್ರ ಗ್ರಂಥ ಕುರಾನ್‌ನ ಪಠಣದ ಬಳಿಕ ಮೆರವಣಿಗೆಯನ್ನೂ ನಡೆಸಲಾಗುತ್ತದೆ. ಈ ಮೆರವಣಿಗೆಯಲ್ಲಿ ಎಲ್ಲಾ ಇಸ್ಲಾಂ ಧರ್ಮೀಯರು ಭಕ್ತಿಪೂರ್ವಕವಾಗಿ ಪಾಲ್ಗೊಳ್ಳುತ್ತಾರೆ.

 #ಶಿಕ್ಷಕರ ದಿನಾಚರಣೆಯ  #ಶುಭಾಶಯಗಳು #ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.ಜ್ಞಾನದ ಕಣ್...
05/09/2024

#ಶಿಕ್ಷಕರ ದಿನಾಚರಣೆಯ #ಶುಭಾಶಯಗಳು #

ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ಜ್ಞಾನದ ಕಣ್ಣುಗಳನ್ನು ತೆರೆಸಿದ ಗುರುಗಳಿಗೆ ಮೀಸಲಾದ ದಿನವಿದು. ಆದರ್ಶ ಶಿಕ್ಷಕ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಿದು. ಡಾ ರಾಧಾಕೃಷ್ಣನ್ ಅವರು `ಶಿಕ್ಷಕರು ದೇಶದ ಅತ್ಯುತ್ತಮ ಮನಸ್ಸುಗಳಾಗಿರಬೇಕು' ಎಂದು ನಂಬಿದ್ದರು. ಇದೇ ಕಾರಣದಿಂದ ಅವರ ಹುಟ್ಟುಹಬ್ಬದ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಶಿಕ್ಷಕರು ಉತ್ತಮ ಮನಸ್ಸುಗಳನ್ನು ರೂಪಿಸುವಲ್ಲಿ, ಪಠ್ಯಪುಸ್ತಕಗಳನ್ನು ಮೀರಿದ ಮೌಲ್ಯಗಳನ್ನು ನಮ್ಮಲ್ಲಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ನೀಡಿದ ಜ್ಞಾನ ನಮ್ಮ ಬದುಕನ್ನು ಉತ್ತಮವಾಗಿ ರೂಪಿಸುತ್ತದೆ. ಹೀಗಾಗಿ, ನಮಗೆ ದಾರಿ ತೋರಿದ, ನಮ್ಮನ್ನು ಉತ್ತಮ ಪ್ರಜೆಗಳಾಗಿ ರೂಪಿಸಿದ ಶಿಕ್ಷಕರಿಗೆ ಧನ್ಯವಾದ ಹೇಳುವ, ಅವರ ತ್ಯಾಗ, ಪ್ರೀತಿ, ಅಮೂಲ್ಯ ಕೊಡುಗೆಗಳನ್ನು ಸ್ಮರಿಸುವ ಮಹತ್ವದ ದಿನವಾಗಿದೆ ಇಂದು.

Address

Haleangadi
Manglur
574146

Website

Alerts

Be the first to know and let us send you an email when Reliance Association Bollur posts news and promotions. Your email address will not be used for any other purpose, and you can unsubscribe at any time.

Share