International Tulunada rakshana vedike

International Tulunada rakshana vedike ತುಳುನಾಡ ಸಾರಥಿ ಯೋಗೀಶ್ ಶೆಟ್ಟಿ ಜಪ್ಪು 2009ರಲ್ಲಿ ತುಳುನಾಡ ರಕ್ಷಣಾ ವೇದಿಕೆ ರಾಜಕೀಯೇತರ ಜಾತ್ಯತೀತ ಸಂಘಟನೆ ಸ್ಥಾಪನೆ

https://youtu.be/Ot2uweEQMlI
24/04/2026

https://youtu.be/Ot2uweEQMlI

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದುರಂತ ಮಾವಿನ ಹಣ್ಣು ತೆಗೆಯಲು ಹೋದ ಗ್ರಾಮ ಸಹಾಯಕ ವಿದ್ಯುತ್ ಸ್ಪರ್ಶಿಸಿ ಸಾವು

ಉಡುಪಿ ಜಿಲ್ಲಾಕಚೇರಿ ಆವರಣದಲ್ಲಿ ದುರಂತ – ಮಾವಿನ ಹಣ್ಣು ತೆಗೆಯಲು ಹೋದ ಗ್ರಾಮ ಸಹಾಯಕ ಸಾವು, ಸರ್ಕಾರದ ನಿರ್ಲಕ್ಷ್ಯಕ್ಕೆ ಖಂಡನೆಉಡುಪಿ, ಏಪ್ರಿಲ್...
24/04/2026

ಉಡುಪಿ ಜಿಲ್ಲಾಕಚೇರಿ ಆವರಣದಲ್ಲಿ ದುರಂತ – ಮಾವಿನ ಹಣ್ಣು ತೆಗೆಯಲು ಹೋದ ಗ್ರಾಮ ಸಹಾಯಕ ಸಾವು, ಸರ್ಕಾರದ ನಿರ್ಲಕ್ಷ್ಯಕ್ಕೆ ಖಂಡನೆ

ಉಡುಪಿ, ಏಪ್ರಿಲ್ 24: ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾವಿನ ಹಣ್ಣು ತೆಗೆಯಲು ಹೋದ ವಿದ್ಯತ್ ಸ್ಪರ್ಶವಾಗಿ ವ್ಯಕ್ತಿಯೊಬ್ಬರು ದುರ್ಘಟನೆಯಲ್ಲಿ ಮೃತಪಟ್ಟ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮೃತರನ್ನು ಗ್ರಾಮ ಸಹಾಯಕ ಸದಾನಂದ ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿ ಉಡುಪಿ ತುಳುನಾಡ ರಕ್ಷಣಾ ವೇದಿಕೆ ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದು, ಭದ್ರತಾ ಕ್ರಮಗಳ ಕೊರತೆಯೇ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ವೇದಿಕೆಯ ಪದಾಧಿಕಾರಿಗಳು 24-04-2026 ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಮತ್ತು ಭದ್ರತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರತಿನಿಧಿಗಳು ಆಗ್ರಹಿಸಿದರು.

ಮೃತರ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಸರ್ಕಾರದಿಂದ ಆರ್ಥಿಕ ನೆರವು, ಉದ್ಯೋಗಾವಕಾಶ ಸೇರಿದಂತೆ ಮಾನವೀಯ ಸಹಾಯ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು. ಜೊತೆಗೆ ತಾಲೂಕು ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಆವರಣಗಳಲ್ಲಿ ಭದ್ರತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಜಯ ಪೂಜಾರಿ (ಲಕ್ಷ್ಮೀನಗರ), ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾಗೂ ಮುಖಂಡರಾದ ಮಮತಾ ಎನ್. ಶಂಕರ್, ಗುಣಾಕರ್ ಬೈರಂಪಳ್ಳಿ, ಸುಧೀಪ್ ಬೆಳ್ಳಾರ್ಪಾಡಿ, ಸಾಥ್ವಿಕ್ ಬೆಳ್ಳಾರ್ಪಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

03/04/2026
https://youtu.be/UBkKYszW47I
03/04/2026

https://youtu.be/UBkKYszW47I

ಕೆ.ಜಿ. ರೋಡ್ ಪ್ರದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನ ಸಂಚಾರ ಹಾಗೂ ಅಪಘಾತಗಳ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಅಂಡರ್ ಪಾ...

*ಕೆ.ಜಿ. ರೋಡ್‌ನಲ್ಲಿ ಅಂಡರ್ ಪಾಸ್ ಹಾಗೂ ಸರ್ವಿಸ್ ರೋಡ್ ಕಾಮಗಾರಿಗಳಿಗೆ ತುರ್ತು ಕ್ರಮಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ* https://tulun...
02/04/2026

*ಕೆ.ಜಿ. ರೋಡ್‌ನಲ್ಲಿ ಅಂಡರ್ ಪಾಸ್ ಹಾಗೂ ಸರ್ವಿಸ್ ರೋಡ್ ಕಾಮಗಾರಿಗಳಿಗೆ ತುರ್ತು ಕ್ರಮಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ* https://tulunadasurya.com/41339-2/
🌞 *ತುಳುನಾಡ ಸೂರ್ಯ**🪀

📰 *Monthly News Paper & Social Media Network* 🌐

WhatsApp Group Invite

15/03/2026

ಉಡುಪಿ ಜಿಲ್ಲಾ ವ್ಯಾಪ್ತಿ ಯ ಕಾಪು ಇನ್ನಂಜೆ ಸೇರಿದಂತೆ ಕೆಲವು ಭಾಗಗಳಲ್ಲಿ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲ್ಲೆಯಲ್ಲಿ ಯೋಗೀಶ್ ಶೆಟ್ಟಿ ಜಪ್ಪು ರವರಿಂದ
ಉಡುಪಿ ಜಿಲ್ಲಾ DCF ರವರ ಭೇಟಿ

ಯೋಗೀಶ್ ಶೆಟ್ಟಿ ಜಪ್ಪು ರವರಿಂದ ಉಡುಪಿ ಜಿಲ್ಲಾ DCF ರವರ ಭೇಟಿ
15/03/2026

ಯೋಗೀಶ್ ಶೆಟ್ಟಿ ಜಪ್ಪು ರವರಿಂದ
ಉಡುಪಿ ಜಿಲ್ಲಾ DCF ರವರ ಭೇಟಿ

ಕುಂದಾಪುರ : ಕಾಪು–ಇನ್ನಂಜೆ ಭಾಗದಲ್ಲಿ ಚಿರತೆ ಸಂಚರಣೆ ಹೆಚ್ಚಳ – ತುರ್ತು ಕ್ರಮಕ್ಕೆ ತುಳುನಾಡ ರಕ್ಷಣಾ ವೇದಿಕೆ ಮನವಿಕುಂದಾಪುರ: ಉಡುಪಿ ಜಿಲ್ಲೆಯ...
13/03/2026

ಕುಂದಾಪುರ : ಕಾಪು–ಇನ್ನಂಜೆ ಭಾಗದಲ್ಲಿ ಚಿರತೆ ಸಂಚರಣೆ ಹೆಚ್ಚಳ – ತುರ್ತು ಕ್ರಮಕ್ಕೆ ತುಳುನಾಡ ರಕ್ಷಣಾ ವೇದಿಕೆ ಮನವಿ

ಕುಂದಾಪುರ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಹಾಗೂ ಸುತ್ತಮುತ್ತಲಿನ ಗ್ರಾಮ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆಗಳ ಸಂಚರಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಉಡುಪಿ ವಿಭಾಗದ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಶುಕ್ರವಾರ (13-03-2026) ಬೆಳಿಗ್ಗೆ 11.30ಕ್ಕೆ ಮನವಿ ಸಲ್ಲಿಸಲಾಯಿತು.

ತುಳುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರು, ಇತ್ತೀಚಿನ ದಿನಗಳಲ್ಲಿ ಇನ್ನಂಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ವಾಸಸ್ಥಾನಗಳ ಹತ್ತಿರ ಚಿರತೆ ಕಾಣಿಸಿಕೊಳ್ಳುತ್ತಿರುವ ಘಟನೆಗಳು ಹಲವು ಬಾರಿ ವರದಿಯಾಗಿವೆ ಎಂದು ತಿಳಿಸಿದರು.

ವಿಶೇಷವಾಗಿ ಇನ್ನಂಜೆ ಪಾಂಗಳ ಮಂಡೆಡಿ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಮನೆಗಳ ಆವರಣದಲ್ಲೇ ಸಾಕುಪ್ರಾಣಿ ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂಡೊಯ್ಯುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಮಕ್ಕಳು ಹಾಗೂ ಹಿರಿಯರು ರಾತ್ರಿ ವೇಳೆ ಮನೆ ಹೊರಗೆ ಹೋಗಲು ಸಹ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳ ಸುರಕ್ಷತೆಯೂ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.

ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಚಿರತೆ ಸಂಚರಿಸುತ್ತಿರುವ ಪ್ರದೇಶಗಳಲ್ಲಿ ಬೋನು (ಕೇಜ್) ಅಳವಡಿಸಿ ಚಿರತೆಯನ್ನು ಹಿಡಿಯುವ ಕ್ರಮ ಕೈಗೊಳ್ಳಬೇಕು. ಜೊತೆಗೆ ರಾತ್ರಿ ವೇಳೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ನಿರಂತರ ಪಹರೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಗ್ರಾಮಸ್ಥರಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ತಿಳಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾಕುಪ್ರಾಣಿಗಳ ಮೇಲೆ ದಾಳಿ ನಡೆದಿದ್ದಲ್ಲಿ ತಕ್ಷಣ ಪರಿಹಾರಧನ ಮಂಜೂರು ಮಾಡಬೇಕು. ಚಿರತೆ ಸಂಚರಣೆ ಕಂಡುಬರುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಅಲಾರಂ ವ್ಯವಸ್ಥೆ ಅಳವಡಿಸಲು ಸರ್ಕಾರದಿಂದ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಜನವಸತಿ ಪ್ರದೇಶಗಳ ಸಮೀಪ ಚಿರತೆಗಳ ಓಡಾಟವನ್ನು ನಿಯಂತ್ರಿಸಲು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ವಿನಂತಿಸಿದೆ.

ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ವೈದರ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಕಾಪು ಘಟಕ ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬೈರಂಪಳ್ಳಿ ಘಟಕ ಅಧ್ಯಕ್ಷ ಕೃಷ್ಣನಂದ ನಾಯಕ್, ಕಾಪು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ, ಮಹಿಳಾ ಅಧ್ಯಕ್ಷೆ ರೋಷನ್ ಬಳ್ಳಾಲ್, ಮುಖಂಡರಾದ ಶಶಿಕಲಾ ಶೆಟ್ಟಿ, ಹರಿಣಾಕ್ಷಿ ಉಚ್ಚಿಲ, ಜ್ಯೋತಿ ಆರ್ ಹಾಗೂ ಕಲಾವಿದರ ಘಟಕದ ಮುಖಂಡ ಮತ್ತು ಚಿತ್ರ ನಟ ರಣವೀರ್ ಉಪಸ್ಥಿತರಿದ್ದರು.

ಕುಂದಾಪುರ ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಹರೀಶ್ ಕೋಡಿ, ಜೀವನ ಖಾರ್ವಿ, ವಿನೋದ್ ಖಾರ್ವಿ, ನವೀನ್ ಖಾರ್ವಿ, ದಿನೇಶ್ ಯು. ಖಾರ್ವಿ, ದಿನೇಶ್ ಕೆ. ಖಾರ್ವಿ, ದೇವೇಂದ್ರ ಖಾರ್ವಿ, ಜಗನ್ನಾಥ ಖಾರ್ವಿ, ಕಳಸಿ, ರಾಘವೇಂದ್ರ ಖಾರ್ವಿ, ಗಣಪತಿ ಖಾರ್ವಿ, ಅಶೋಕ್ ಸಾರಂಗ, ಅಶೋಕ್ ಖಾರ್ವಿ, ಮನೋಜ್ ಜೋಗಿ, ರಾಜಾ ಖಾರ್ವಿ, ಎಚ್. ಖಾರ್ವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Address

3rd Floor Al Rahaba Plaza, Nellikai Road, State Bank
Mangalore
575001

Telephone

+919019387676

Website

Alerts

Be the first to know and let us send you an email when International Tulunada rakshana vedike posts news and promotions. Your email address will not be used for any other purpose, and you can unsubscribe at any time.

Contact The Organization

Send a message to International Tulunada rakshana vedike:

Share