06/09/2026
ನುಡಿದಂತೆ ನಡೆದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ಪೋಷಕರಾದ ಶ್ರೀಮತಿ ಮನೋರಮ ಎನ್. ಬಿ. ಶೆಟ್ಟಿ:
🌹***🌹***🌹***🌹
ಖ್ಯಾತ ಉದ್ಯಮಿ ಶ್ರೀ ಎನ್. ಬಿ. ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಮನೋರಮ ಎನ್. ಬಿ. ಶೆಟ್ಟಿ ತ್ರಿವೇಣಿ ಮ್ಯಾನೇಜ್ಮೆಂಟ್ ಕನ್ಸಲ್ಟ್ಟೆನ್ಸಿ ಸರ್ವಿಸಸ್ ಲಿ. ಮುಂಬೈ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಹಾಗೂ ಸಭಾಭವನ ನಿರ್ಮಾಣದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುವರೇ ಸಹಕಾರ ನೀಡಿದ್ದಾರೆ. ಇವರು ಈ ಹಿಂದೆ ಒಕ್ಕೂಟದ ಪೋಷಕ ಸದಸ್ಯರಾಗಿದ್ದರು ಇನ್ನು ಮುಂದೆ ಮಹಾ ಪೋಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದಯೆ ಅವರ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತ,
ಇವರಿಗೆ ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
***🙏***🙏***🙏***🙏
ಐಕಳ ಹರೀಶ್ ಶೆಟ್ಟಿ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು
ದಾನಿಗಳು, ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು
ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ.)ಮಂಗಳೂರು.