Baikady Prathishtana

Baikady Prathishtana Contact information, map and directions, contact form, opening hours, services, ratings, photos, videos and announcements from Baikady Prathishtana, Nonprofit Organization, #1-24-2051, "Manjusha", Hoigebail, Urwa, Mangalore.

Baikady Prathishtana is a charitable trust founded in order to pursue the ideologies and principles of Shri Baikady Janardana Achar - An exceptional orator, amazing writer, devoted educationalist, inspiring teacher and a great human being.

‘ವಾಗ್ಮಿ 2025’ - ಆನ್ ಲೈನ್ ಕನ್ನಡ ಭಾಷಣ ಸ್ಪರ್ಧೆಬೈಕಾಡಿ ಪ್ರತಿಷ್ಠಾನವು ಪೂಜ್ಯ ಬೈಕಾಡಿ ಜನಾರ್ದನ ಆಚಾರ್ ರವರ ಬದುಕಿನ ಭಾವ ಮತ್ತು ಭಾಗವಾಗಿದ್...
15/11/2025

‘ವಾಗ್ಮಿ 2025’ - ಆನ್ ಲೈನ್ ಕನ್ನಡ ಭಾಷಣ ಸ್ಪರ್ಧೆ
ಬೈಕಾಡಿ ಪ್ರತಿಷ್ಠಾನವು ಪೂಜ್ಯ ಬೈಕಾಡಿ ಜನಾರ್ದನ ಆಚಾರ್ ರವರ ಬದುಕಿನ ಭಾವ ಮತ್ತು ಭಾಗವಾಗಿದ್ದ ‘ಭಾಷಣ ಕಲೆ’ಯ ಉತ್ತೇಜನಕ್ಕಾಗಿ ‘ವಾಗ್ಮಿ 2025’ ಶೀರ್ಷಿಕೆಯೊಂದಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಗೌರವಪೂರ್ವಕ ವಿನಂತಿ.

ವಿಭಾಗಗಳು ಮತ್ತು ಸ್ಪರ್ಧಾ ವಿಷಯ
ತರುಣ ವಿಭಾಗ (13ರಿಂದ 18 ವರ್ಷ) - ನಿಮ್ಮ ಭವಿಷ್ಯದ ವೃತ್ತಿ? ಅದರಿಂದ ಸಮಾಜಕ್ಕೇನು ಕೊಡುಗೆ?
ಯುವ ವಿಭಾಗ (19ರಿಂದ 25 ವರ್ಷ) - ಜನನಾಯಕನಾಗಿ ದೇಶದ ಅಭಿವೃದ್ಧಿಗೆ ನಿಮ್ಮ ಕೊಡುಗೆ
ಸಾರ್ವಜನಿಕ ವಿಭಾಗ (25ವರ್ಷಕ್ಕಿಂತ ಮೇಲ್ಪಟ್ಟವರಿಗೆ) - ಜೀವನದಲ್ಲಿ ಕಲೆಯ ಮಹತ್ವ

ಸಾಮಾನ್ಯ ನಿಯಮಗಳು
‘ವಾಗ್ಮಿ 2025’ ಒಂದು ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆಯಾಗಿದ್ದು 3 ವಿಭಾಗಗಳನ್ನು ಒಳಗೊಂಡಿರುತ್ತದೆ.
ಎಲ್ಲಾ ಸ್ಪರ್ಧಾಳುಗಳು 15.12.2025ರ ಒಳಗಾಗಿ ತಮ್ಮ ಭಾಷಣವನ್ನು 4 ನಿಮಿಷಗಳಿಗೆ ಮೀರದಂತೆ ವೀಡಿಯೋ ರೆಕಾರ್ಡ್ ಮಾಡಿ 9886507605 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸತಕ್ಕದ್ದು.
ಕಳುಹಿಸಿದ ವೀಡಿಯೋ ರೆಕಾರ್ಡಿಂಗ್‌ನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಉಪಯೋಗಿಸುವ ಎಲ್ಲಾ ಹಕ್ಕನ್ನು ಬೈಕಾಡಿ ಪ್ರತಿಷ್ಠಾನ (ರಿ.) ಕಾಯ್ದಿರಿಸಿಕೊಂಡಿದೆ.
ವಿಷಯ, ಶೈಲಿ, ಪ್ರಸ್ತುತಿ, ಹಾವಭಾವ, ಸಮಗ್ರತೆ - ಈ ಅಂಶಗಳನ್ನು ಪರಿಗಣಿಸಲಾಗುವುದು.
ಓದಿ ಹೇಳುವ ಭಾಷಣಗಳನ್ನು ಪರಿಗಣಿಸಲಾಗುವುದಿಲ್ಲ.
ಪ್ರಪಂಚದ ಯಾವುದೇ ಮೂಲೆಯಿಂದ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು.
ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಅಗತ್ಯ ಬಿದ್ದಾಗ ಸ್ಪರ್ಧಾಳುಗಳ ವಯಸ್ಸನ್ನು ದೃಢೀಕರಿಸಲು ತಕ್ಕುದಾದ ದಾಖಲೆಗಳನ್ನು ಒದಗಿಸತಕ್ಕದ್ದು.
ಪ್ರತೀ ವಿಭಾಗದಲ್ಲಿ ತಲಾ 3 ಬಹುಮಾನಗಳಿರುತ್ತವೆ. ಪ್ರಥಮ: ರೂ. 2000/- ಮತ್ತು ಇ-ಸರ್ಟಿಫಿಕೇಟ್, ದ್ವಿತೀಯ: ರೂ. 1000/- ಮತ್ತು ಇ-ಸರ್ಟಿಫಿಕೇಟ್, ತೃತೀಯ: ರೂ. 500/- ಮತ್ತು ಇ-ಸರ್ಟಿಫಿಕೇಟ್
ನಿಯಮಗಳ ಪರಿಪಾಲನೆಯ ಕೊರತೆ ಕಂಡುಬಂದಲ್ಲಿ ಸ್ಪರ್ಧಾಳುಗಳ ಭಾಗವಹಿಸುವಿಕೆಯನ್ನು ಅಮಾನ್ಯಗೊಳಿಸಲಾಗುವುದು.
ಅರ್ಹ ಮತ್ತು ಅನುಭವಿ ನಿರ್ಣಾಯಕರಿಂದ ಪ್ರತೀ ಸ್ಪರ್ಧಾಳುಗಳ ಮೌಲ್ಯಮಾಪನ ಮಾಡಲಾಗುವುದು.
ಬೈಕಾಡಿ ಪ್ರತಿಷ್ಠಾನ (ರಿ.) ಹಾಗೂ ನಿರ್ಣಾಯಕರ ತೀರ್ಪು ಅಂತಿಮ.

ವೀಡಿಯೋ ಕಳುಹಿಸುವಾಗ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ತಾವು ಭಾಗವಹಿಸುತ್ತಿರುವ ವಿಭಾಗ, ಹುಟ್ಟಿದ ದಿನಾಂಕ, ಕಲಿಯುತ್ತಿರುವ ಶಾಲೆ, ತರಗತಿ, ಕಾಲೇಜು/ಉದ್ಯೋಗ, ಮಾಡುತ್ತಿರುವ/ಮಾಡುತ್ತಿದ್ದ ಉದ್ಯೋಗ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸವನ್ನು ನಮೂದಿಸತಕ್ಕದ್ದು.

‘ಕಥಾನಕ 2025’ ಪುಟಾಣಿಗಳ ಸಂವಹನಶೀಲತೆಯ ಉತ್ತೇಜನಕ್ಕಾಗಿ ಕಥೆ ಹೇಳುವ ಸ್ಪರ್ಧೆವಿಷಯ: ಕಾಡಿನ ಕಥೆಗಳು ಭಾಷೆ: ಕನ್ನಡವಿಭಾಗಗಳು :ವಿಭಾಗ 1: 3ರಿಂದ ...
15/11/2025

‘ಕಥಾನಕ 2025’
ಪುಟಾಣಿಗಳ ಸಂವಹನಶೀಲತೆಯ ಉತ್ತೇಜನಕ್ಕಾಗಿ ಕಥೆ ಹೇಳುವ ಸ್ಪರ್ಧೆ

ವಿಷಯ: ಕಾಡಿನ ಕಥೆಗಳು
ಭಾಷೆ: ಕನ್ನಡ

ವಿಭಾಗಗಳು :
ವಿಭಾಗ 1: 3ರಿಂದ 5 ವರ್ಷ
ವಿಭಾಗ 2: 5ರಿಂದ 9 ವರ್ಷ
ವಿಭಾಗ 3: 9ರಿಂದ 13 ವರ್ಷ

ಸಾಮಾನ್ಯ ನಿಯಮಗಳು
‘ಕಥಾನಕ 2025’ - ಒಂದು ಆನ್ಲೈನ್ ಕಥೆ ಹೇಳುವ ಸ್ಪರ್ಧೆಯಾಗಿದ್ದು 3 ವಿಭಾಗಗಳನ್ನು ಒಳಗೊಂಡಿರುತ್ತದೆ.
ಎಲ್ಲಾ ಸ್ಪರ್ಧಾಳುಗಳು 15.12.2025ರ ಒಳಗಾಗಿ 4 ನಿಮಿಷಗಳಿಗೆ ಮೀರದಂತೆ ವೀಡಿಯೋ ರೆಕಾರ್ಡ್ ಮಾಡಿ 9886507605 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸತಕ್ಕದ್ದು.
ಕಳುಹಿಸಿದ ವೀಡಿಯೋ ರೆಕಾರ್ಡಿಂಗನ್ನು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಉಪಯೋಗಿಸುವ ಎಲ್ಲಾ ಹಕ್ಕನ್ನು ಬೈಕಾಡಿ ಪ್ರತಿಷ್ಠಾನ (ರಿ.) ಕಾಯ್ದಿರಿಸಿಕೊಂಡಿದೆ.
ಪ್ರಪಂಚದ ಯಾವುದೇ ಮೂಲೆಯಿಂದ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು.
ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಅಗತ್ಯ ಬಿದ್ದಾಗ ಸ್ಪರ್ಧಾಳುಗಳ ವಯಸ್ಸನ್ನು ದೃಢೀಕರಿಸಲು ತಕ್ಕುದಾದ ದಾಖಲೆಗಳನ್ನು ಒದಗಿಸತಕ್ಕದ್ದು.
ಪ್ರತೀ ವಿಭಾಗದಲ್ಲಿ ತಲಾ 3 ಬಹುಮಾನಗಳಿರುತ್ತವೆ. ಪ್ರಥಮ: ರೂ. 2000/- ಮತ್ತು ಇ-ಸರ್ಟಿಫಿಕೇಟ್, ದ್ವಿತೀಯ: ರೂ. 1000/- ಮತ್ತು ಇ-ಸರ್ಟಿಫಿಕೇಟ್, ತೃತೀಯ: ರೂ. 500/- ಮತ್ತು ಇ-ಸರ್ಟಿಫಿಕೇಟ್
ನಿಯಮಗಳ ಪರಿಪಾಲನೆಯ ಕೊರತೆ ಕಂಡುಬಂದಲ್ಲಿ ಸ್ಪರ್ಧಾಳುಗಳ ಭಾಗವಹಿಸುವಿಕೆಯನ್ನು ಅಮಾನ್ಯಗೊಳಿಸಲಾಗುವುದು.
ಅರ್ಹ ಮತ್ತು ಅನುಭವಿ ನಿರ್ಣಾಯಕರಿಂದ ಸ್ಪರ್ಧಾಳುಗಳ ಮೌಲ್ಯಮಾಪನ ಮಾಡಲಾಗುವುದು.
ಬೈಕಾಡಿ ಪ್ರತಿಷ್ಠಾನ (ರಿ.) ಹಾಗೂ ನಿರ್ಣಾಯಕರ ತೀರ್ಪು ಅಂತಿಮ.

ನಾಳೆ | ಮೇ 25, 2025 | ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಮಂಗಳೂರು'ಸ್ಫೂರ್ತಿದಾಯಕ ಸಂವಾದ' - ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ ಎಸ್...
24/05/2025

ನಾಳೆ | ಮೇ 25, 2025 | ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಮಂಗಳೂರು
'ಸ್ಫೂರ್ತಿದಾಯಕ ಸಂವಾದ' - ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ ಎಸ್ ರಾಜಣ್ಣ ಅವರೊಂದಿಗೆ

ಪೋಲಿಯೊ ಕಾರಣದಿಂದ ತನ್ನ ಎರಡೂ ಕೈಗಳು ಹಾಗೂ ಕಾಲುಗಳನ್ನು ಕಳೆದುಕೊಂಡಿದ್ದರೂ, ಡಾ. ರಾಜಣ್ಣ ಪ್ಯಾರಾ ಒಲಿಂಪಿಕ್ ಚಾಂಪಿಯನ್ ಆಗಿದ್ದು, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಉದ್ಯಮಿಯಾಗಿಯೂ ಆಗಿದ್ದು, 350ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದ್ದಾರೆ. ಶಕ್ತಿಯ ಮತ್ತು ಹೋರಾಟದ ಪ್ರತೀಕವಾದ ಅವರ ಸಾಹಸಮಯ ಪ್ರಯಾಣ ಮತ್ತು ಅಂಗವೈಕಲ್ಯ ಹೊಂದಿರುವವರಿಗೆ ಹಕ್ಕು ಮತ್ತು ಪ್ರತಿನಿಧಿತ್ವದ ಹೋರಾಟವನ್ನು ಅರಿಯೋಣ, ಅಸಾಮಾನ್ಯ ಸಾಧಕನ ಯಶೋಗಾಥೆಯಿಂದ ಪ್ರೇರಣೆ ಪಡೆಯೋಣ.

ಬೈಕಾಡಿ ಜನಾರ್ದನ ಆಚಾರ್ ಇವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ನಡೆದ 5ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ. ಜನವರಿ 5, 2025  |  ತುಳು...
07/01/2025

ಬೈಕಾಡಿ ಜನಾರ್ದನ ಆಚಾರ್ ಇವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ನಡೆದ 5ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ.

ಜನವರಿ 5, 2025 | ತುಳುಭವನ, ಉರ್ವಸ್ಟೋರ್, ಮಂಗಳೂರು

ಸಾಹಿತಿ, ಸಮಾಜ ಸೇವಕಿ ಹಾಗೂ ವಿಶ್ರಾಂತ ಅಧ್ಯಾಪಕಿ ಶ್ರೀಮತಿ ಕೆ. ಎ. ರೋಹಿಣಿಯವರು 2025ನೇ ಸಾಲಿನ 'ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ'ಯನ್ನು ಸ್ವೀಕರಿಸಿದರು. ಪರಮಪೂಜ್ಯ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ, ಉತ್ತರಾಧಿಕಾರಿಗಳು - ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠ, ನಿಡಸೋಸಿ, ಬೆಳಗಾವಿ ಇವರ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ. ಎಸ್. ಆರ್. ಹರೀಶ್ ಆಚಾರ್ಯ, ಶ್ರೀ ಗುಂಡುರಾಜು, ಡಾ. ಶ್ವೇತಾ ಮಡಪ್ಪಾಡಿ ಇವರು ಉಪಸ್ಥಿತರಿದ್ದರು.

Baikady Janardana Achar Award for the year 2024 was awarded to Smt. K. A. Rohini by Shree Nijalingeshwara Swamiji in the presence of Capt. Ganesh Karnik, Dr....

'ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ ಸಮಾರಂಭ 2025'ಪ್ರೊ. ಅಮೃತ ಸೋಮೇಶ್ವರ ಸಭಾಂಗಣ, ತುಳು ಸಾಹಿತ್ಯ ಅಕಾಡೆಮಿ, ಉರ್ವಸ್ಟೋರ್, ಮಂಗಳೂರುಜ...
02/01/2025

'ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ ಸಮಾರಂಭ 2025'
ಪ್ರೊ. ಅಮೃತ ಸೋಮೇಶ್ವರ ಸಭಾಂಗಣ,
ತುಳು ಸಾಹಿತ್ಯ ಅಕಾಡೆಮಿ, ಉರ್ವಸ್ಟೋರ್, ಮಂಗಳೂರು
ಜನವರಿ 5, 2025 ಆದಿತ್ಯವಾರ | ಸಂಜೆ 5ಕ್ಕೆ

3000 ಸಾವಿರ ವರ್ಷಕ್ಕೂ ಅಧಿಕ ಇತಿಹಾಸವಿರುವ ಜಾನಪದ ಕಲೆ 'ತೊಗಲು ಗೊಂಬೆಯಾಟ' - ನೆರಳು-ಬೆಳಕಿನ ತೊಗಲು ಬೊಂಬೆಗಳ ವಿಶೇಷ ಪ್ರದರ್ಶನ.
ಪ್ರಸ್ತುತಿ: ಪ್ರಶಸ್ತಿ ವಿಜೇತ 'ಶ್ರೀ ಗುಂಡುರಾಜು' ಮತ್ತು ತಂಡ, ಹಾಸನ.
9 ತಲೆಮಾರುಗಳಿಂದ ಈ ಕಲೆಯನ್ನು ಸಂರಕ್ಷಿಸಿಕೊಂಡು ಬಂದಿರುವ ಕುಟುಂಬದ ಕುಡಿ

ತಮ್ಮ ಆಗಮನದ ನಿರೀಕ್ಷೆಯಲ್ಲಿ,
ಬೈಕಾಡಿ ಪ್ರತಿಷ್ಠಾನ (ರಿ.), ಮಂಗಳೂರು

'ಬೈಕಾಡಿ ಜನಾರ್ದನ ಆಚಾರ್' ಇವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ನಡೆಯುವ 5ನೇ ವರ್ಷದ ಕಾರ್ಯಕ್ರಮಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ. ತಮ್ಮ...
31/12/2024

'ಬೈಕಾಡಿ ಜನಾರ್ದನ ಆಚಾರ್' ಇವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ನಡೆಯುವ 5ನೇ ವರ್ಷದ ಕಾರ್ಯಕ್ರಮಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ.
ತಮ್ಮ ಆಗಮನವನ್ನು ಎದುರು ನೋಡುತ್ತಿರುತ್ತೇವೆ.

ವಿನೂತನ ಪ್ರದರ್ಶನ: 'ತೊಗಲು ಬೊಂಬೆಯಾಟ' - ಪ್ರಶಸ್ತಿ ಪುರಸ್ಕೃತ ಶ್ರೀ ಗುಂಡುರಾಜು ಹಾಗೂ ತಂಡ, ಹಾಸದವರಿಂದ

2021ರಲ್ಲಿ ಪ್ರಾರಂಭಗೊಂಡ 'ರತ್ನ ಕಲಾಲಯ' 4ನೇ ವರ್ಷಕ್ಕೆ ತನ್ನ ಪುಟ್ಟ ಹೆಜ್ಜೆಗಳನ್ನು ಇಡುತ್ತಿದೆ. 'ರತ್ನ ಕಲಾಲಯ'ದ ಮೂರು ವರ್ಷದ ಸಾಧನೆಯ ಅನಾವರ...
12/09/2024

2021ರಲ್ಲಿ ಪ್ರಾರಂಭಗೊಂಡ 'ರತ್ನ ಕಲಾಲಯ' 4ನೇ ವರ್ಷಕ್ಕೆ ತನ್ನ ಪುಟ್ಟ ಹೆಜ್ಜೆಗಳನ್ನು ಇಡುತ್ತಿದೆ. 'ರತ್ನ ಕಲಾಲಯ'ದ ಮೂರು ವರ್ಷದ ಸಾಧನೆಯ ಅನಾವರಣವೇ "ಅನುಪದಮ್".
ದಯವಿಟ್ಟು ಬನ್ನಿ. ಆಸಕ್ತರನ್ನು ಕರೆತನ್ನಿ. ಕಲಾಸಕ್ತರೊಂದಿಗೆ ಹಂಚಿಕೊಳ್ಳಿ.
ತಮ್ಮ ಆಗಮನವನ್ನು ನಿರೀಕ್ಷಿಸುತ್ತೇವೆ🙏😊

ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಹಾಗೂ ಬೈಕಾಡಿ ಪ್ರತಿಷ್ಠಾನ (ರಿ) ಮಂಗಳೂರು ಜಂಟಿಯಾಗಿ ಬೈಕಾಡಿ ಜನಾರ್ದನ ಆಚಾರ್ ಸ್ಮರಣಾರ್ಥ ಈ ಮಕ್ಕ...
23/07/2024

ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಹಾಗೂ ಬೈಕಾಡಿ ಪ್ರತಿಷ್ಠಾನ (ರಿ) ಮಂಗಳೂರು ಜಂಟಿಯಾಗಿ ಬೈಕಾಡಿ ಜನಾರ್ದನ ಆಚಾರ್ ಸ್ಮರಣಾರ್ಥ ಈ ಮಕ್ಕಳ ನಾಟಕೋತ್ಸವವನ್ನು ಹಮ್ಮಿಕೊಂಡಿದೆ.
ದಯವಿಟ್ಟು ಬನ್ನಿ. ಆಸಕ್ತರನ್ನು ಕರೆತನ್ನಿ. ಕಲಾಸಕ್ತರೊಂದಿಗೆ ಹಂಚಿಕೊಳ್ಳಿ 🙏

ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ .(ರಿ) Canara Educational Institutions Shashiraj Kavoor

Baikady Art Camp 2024ENROLL NOW!!!For More Information Contact: 9845663331, 9482184197
06/06/2024

Baikady Art Camp 2024
ENROLL NOW!!!
For More Information Contact: 9845663331, 9482184197

ಕಲಾರಾಧಕ ದಂಪತಿ ಶ್ರೀ ಬಿ. ಶ್ರೀನಿವಾಸ ರಾವ್ ಮತ್ತು ಶ್ರೀಮತಿ ಸಾವಿತ್ರಿ ಎಸ್. ರಾವ್, ಮಂಗಳೂರುಸಮಾಜದ ಹಿತಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ...
01/06/2024

ಕಲಾರಾಧಕ ದಂಪತಿ ಶ್ರೀ ಬಿ. ಶ್ರೀನಿವಾಸ ರಾವ್ ಮತ್ತು ಶ್ರೀಮತಿ ಸಾವಿತ್ರಿ ಎಸ್. ರಾವ್, ಮಂಗಳೂರು
ಸಮಾಜದ ಹಿತಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟು, ಶೈಕ್ಷಣಿಕ ಪ್ರಗತಿಗಾಗಿ ಸದಾ ಕಾರ್ಯೋನ್ಮುಖರಾಗಿದ್ದು, ಸಾಂಸ್ಕೃತಿಕ ರಾಯಭಾರಿಗಳಂತೆ ದುಡಿದು, ಸಾಹಿತ್ಯದ ಮೂಲಕ ಜನಪರ ಸಂದೇಶಗಳನ್ನು ಸಾರಿ, ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ.) ಮೂಲಕ ಬಾಲ ಪ್ರತಿಭೆಗಳ ದನಿಗೆ ಶಕ್ತಿ ತುಂಬುತ್ತಲೇ ಬಂದಿರುವ ಕ್ರಿಯಾಶೀಲ, ಉತ್ಸಾಹಿ ಶಿಕ್ಷಕ ದಂಪತಿ ಶ್ರೀ ಬಿ. ಶ್ರೀನಿವಾಸ ರಾವ್ ಮತ್ತು ಶ್ರೀಮತಿ ಸಾವಿತ್ರಿ ಎಸ್. ರಾವ್ ಇವರ ಬಗ್ಗೆ ಒಂದು ಡಾಕ್ಯುಮೆಂಟರಿ.
ದಯವಿಟ್ಟು ಶೇರ್ ಮಾಡಿ ಇವರ ಅಭೂತಪೂರ್ವ ಸಾಧನೆಯನ್ನು ಪಸರಿಸೋಣ.

A documentary on an amazing couple Smt. Savithri S Rao & Sri B. Srinivas Rao from Mangaluru, who have dedicated their whole life to Literature, Children's po...

ಕಥಾನಕ 2023 - ವಿಭಾಗ 1 - ವಿಜೇತರುಅಭಿನಂದನೆಗಳುHangyo IceCreams Pvt. Ltd.
04/01/2024

ಕಥಾನಕ 2023 - ವಿಭಾಗ 1 - ವಿಜೇತರು
ಅಭಿನಂದನೆಗಳು

Hangyo IceCreams Pvt. Ltd.

Address

#1-24-2051, "Manjusha", Hoigebail, Urwa
Mangalore
575006

Alerts

Be the first to know and let us send you an email when Baikady Prathishtana posts news and promotions. Your email address will not be used for any other purpose, and you can unsubscribe at any time.

Share