Bharatiya Mazdoor Sangh-Dakshina Kannada

Bharatiya Mazdoor Sangh-Dakshina Kannada BHARATIYA MAZDOOR SANGH (BMS) that shaped the trade union movement in India.

General Body meeting of Canara Lighting Workers union, Punaroor affiliated to BMS DK
09/01/2024

General Body meeting of Canara Lighting Workers union, Punaroor affiliated to BMS DK

06/12/2023
ಭಾರತೀಯ ಮಾಜ್ಡೂರ್ ಸಂಘದ ಅಂಗ ಸಂಸ್ಥೆಯಾದ ಭಾರತೀಯ ಪೋರ್ಟ್ ಮತ್ತು ಡಾಕ್ ಮಾಜ್ಡೂರ್ ಮಹಾಸಂಘ ದ ರಾಷ್ಟೀಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 2 ಹಾಗೂ 3 ...
06/12/2023

ಭಾರತೀಯ ಮಾಜ್ಡೂರ್ ಸಂಘದ ಅಂಗ ಸಂಸ್ಥೆಯಾದ ಭಾರತೀಯ ಪೋರ್ಟ್ ಮತ್ತು ಡಾಕ್ ಮಾಜ್ಡೂರ್ ಮಹಾಸಂಘ ದ ರಾಷ್ಟೀಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 2 ಹಾಗೂ 3 ರಂದು ನವ ಮಂಗಳೂರು ಬಂದರಿನ ಆಡಿಟೋರಿಯಂ ನಲ್ಲಿ ನಡೆಯಿತು. ದೇಶದ ವಿವಿಧ ಬಂದರಿನ ಬಿ ಎಮ್ ಎಸ್ ಯೂನಿಯನ್ ಪದಾಧಿಕಾರಿಗಳು ಹಾಗು ಸದಸ್ಯರು ಪಾಲ್ಗೊಂಡರು.
ಮಂಗಳೂರು ಉತ್ತರ ವಿಧಾನ ಸಭೆ ಶಾಸಕರಾದ ಡಾ ವೈ ಭರತ್ ಶೆಟ್ಟಿ ಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿ,ಕಾರ್ಮಿಕ ಕ್ಷೇತ್ರದಲ್ಲಿ ಬಿಎಂಸ್ ಸೇವೆ ಯನ್ನು ಕೊಂಡಾಡಿದರು, ಭಾರತೀಯ ಪೋರ್ಟ್ ಮತ್ತು ಡಾಕ್ ಮಾಜ್ಡೂರ್ ಸಂಘದ ಪ್ರಭಾರಿ ಶ್ರೀ ಚಂದ್ರಕಾಂತ್ ಧೂಮಾಲ್, ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಶ ಪಾಟೀಲ್, ದಕ್ಷಿಣ ಕನ್ನಡ ಜಿಲ್ಲಾ ಬಿ ಎಮ್ ಎಸ್ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಯು, ರಾಜ್ಯ ಬಿ ಎಮ್ ಎಸ್ ಮಾಜಿ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಶೆಟ್ಟಿ, ನವ ಮಂಗಳೂರು ಬಂದರಿನ ಬಿ ಎಮ್ ಎಸ್ ಕಾರ್ಯಧ್ಯಕ್ಷ ಶ್ರೀ ರಮೇಶ್ ಭಂಡಾರಿ, ಬೊಟ್ಯಾಡಿ, ಪ್ರಧಾನ ಕಾರ್ಯದರ್ಶಿ ಶ್ರೀ ವಿಘ್ನೇಶ ನಾಯ್ಕ್ ಹಿರಿಯ ಮಾರ್ಗದರ್ಶಕರಾಧ ಶ್ರೀ ರೋಹಿತಾಶ್ವ ಮತ್ತು ವೆಂಕಪ್ಪನಾಯ್ಕ್ ಮಾಜಿ ಟ್ರಸ್ಟಿ ಶ್ರೀ ಭರತ್ ಕುಮಾರ್ ಉಪಸ್ಥಿತರಿದ್ದರು.
ಎರಡು ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ದೇಶದ ಎಲ್ಲಾ ಬಂದರಿನಲ್ಲಿ ದುಡಿಯುತ್ತಿರುವ ಖಾಯಂ ಹಾಗೂ ಕಾಂಟ್ರಾಕ್ಟ್ ಉದ್ಯೋಗಿಗಳ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.
ಈ ಕಾರ್ಯಕಾರಿಣಿ ಸಭೆಯನ್ನು ನವ ಮಂಗಳೂರು ಬಂದರಿನ ಬಿ. ಎಮ್. ಎಸ್ ಯೂನಿಯನ್ ಆಯೋಜಿಸಿತ್ತು.

ಕಾಫಿ ಏಲಕ್ಕಿ ಮತ್ತು ಅಡಿಕೆ ಕಾರ್ಮಿಕ ಸಂಘದ ಮಹಾಸಭೆಯು 29.10.2023 ರಂದು ಮಂಗಳೂರು ಬಿಎಂಎಸ್   ಕಾರ್ಯಾಲಯದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನ...
02/11/2023

ಕಾಫಿ ಏಲಕ್ಕಿ ಮತ್ತು ಅಡಿಕೆ ಕಾರ್ಮಿಕ ಸಂಘದ ಮಹಾಸಭೆಯು 29.10.2023 ರಂದು ಮಂಗಳೂರು ಬಿಎಂಎಸ್ ಕಾರ್ಯಾಲಯದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ವಹಿಸಿದ್ದರು. ಬಿ ಎಂ ಎಸ್ ನ ಜಿಲ್ಲಾ ಉಪಾಧ್ಯಕ್ಷ ಶ್ರೀ ರೋಹಿತಾಶ್ವ ಮತ್ತು ಬಿ ಎಂ ಎಸ್ ನ ನಿಕಟ ಪೂರ್ವ ರಾಜ್ಯಾಧ್ಯಕ್ಷ ಶ್ರೀ ಕೆ ವಿಶ್ವನಾಥ್ ಶೆಟ್ಟಿ ಅವರು ಅತಿಥಿಗಳಾಗಿ ಆಗಮಿಸಿದ್ದರು ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮುಂದಿನ ಅವಧಿಗೆ ಈ ಕೆಳಗಿನವರನ್ನು ಪದಾಧಿಕಾರಿಗಳಾಗಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು: ಶ್ರೀ ಗೋಪಾಲಕೃಷ್ಣ
ಉಪಾಧ್ಯಕ್ಷರು: ಶ್ರೀ ಮೋಹನ್, ಶ್ರೀ ಜನಾರ್ದನ ಬಲ್ಲಾಳ್, ಕು// ಗೌರಿ
ಪ್ರಧಾನ ಕಾರ್ಯದರ್ಶಿ: ಶ್ರೀ ಯುವರಾಜ್
ಜೊತೆ ಕಾರ್ಯದರ್ಶಿ: ಶ್ರೀ ನಾಗೇಶ್, ಸವಿತಾ ಮತ್ತು ಗೀತಾ
ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಯತೀಶ್
ಕೋಶಾಧ್ಯಕ್ಷರಾಗಿ - ಶ್ರೀ ಹರಿಪ್ರಸಾದ್ ಹಾಗೂ ಸಮಿತಿ ಸದಸ್ಯರುಗಳಾಗಿ ಇತರ 7 ಮಂದಿಯನ್ನು ಆಯ್ಕೆಮಾಡಲಾಯಿತು

Address

Felix Pai Bazar, Hampankatte, Mangaluru
Mangalore
575001

Opening Hours

Monday 10am - 4pm

Telephone

+919964319010

Website

Alerts

Be the first to know and let us send you an email when Bharatiya Mazdoor Sangh-Dakshina Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bharatiya Mazdoor Sangh-Dakshina Kannada:

Share