02/04/2026
ನಮ್ಮ ಹನುಮ ಜಯಂತಿಯ ಶುಭಾಶಯಗಳು
ಹೊಲೈಕುಲದ ಮುತ್ತು ಹನುಮ!
ಕರ್ನಾಟದ ಕಿಸುಕಾಡಿನ (ಕಿಷ್ಕಿಂದೆ) ಕೂಸು, ಕನ್ನಡಿಗ ಹನುಮ, ಶಕ್ತಿ ಭಕ್ತಿ ಸಾಮರ್ಥ್ಯಗಳಿಗೆ ಹೆಸರುವಾಸಿಯಾದವನು.
ಕನ್ನಡಿಗರು ಆರಾಧಿಸುವ ಕನ್ನಡಿಗ ಹನುಮ ರಾಮನ ಬಂಟನೂ ಅಲ್ಲ, ರಾಮನ ಗುಲಾಮನೂ ಅಲ್ಲ.
ನಮ್ಮ ನಮ್ಮ ಐಕಾನ್‌ಗಳನ್ನು ನಾವು ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಯಾರೋ ಇನ್ನಾರದೂ ಲಾಭಕ್ಕಾಗಿ ನಮ್ಮ ಪೂರ್ವಜರ ಚಿತ್ರಣವನ್ನು ಇನ್ಯಾರದೋ ಬಂಟರಂತೆ ಗುಲಾಮರಂತೆ ಬಿಂಬಿಸಿ ಕಥೆ ಎಣೆದು ಅದನ್ನು ಪವಿತ್ರವಾದ ಮಹಾಕಥನ ಎಂದು ಬಿಂಬಿಸುವುದರ ಹಿಂದೆ ದೊಡ್ಡ ಷಡ್ಯಂತ್ರಗಳಲ್ಲದೇ ಬೇರೇನೂ ಇಲ್ಲ.
ಇಂಥ ಸಂಗತಿಗಳ ಮೂಲಕವೇ ಕನ್ನಡಿಗರನ್ನು ಇಷ್ಟು ಕಾಲ ಸ್ವತಂತ್ರರಾಗಿ ಬಾಳಲಾಗದಂತಾಗಿದೆ. ನಮ್ಮ ಐಕಾನ್ ಒಬ್ಬನನ್ನು ಶ್ರೀ ರಾಮನ ಗುಲಾಮ, ಶ್ರೀರಾಮನ ಬಂಟನೆಂದೇ ಇಲ್ಲಸಲ್ಲದ ಕಥೆಗಳ ಎಣೆದು, ಈಗ ಕನ್ನಡಿಗರನ್ನೂ ಸಹ ಅದೇ ಉತ್ತರದವರ ಗುಲಾಮರನ್ನಾಗಿ ತಯಾರು ಮಾಡುವ ಕೆಲಸ ಕೆಲಸ ನಡೆಯುತ್ತಿದೆ.
ಈ ದುರಂತ ತಪ್ಪಬೇಕಾದರೆ ಇರುವುದೊಂದೇ ದಾರಿ. ಅದೇ ನಮ್ಮ ಹನುಮನನ್ನು ಪರದೇಸಿಗಳು ಎಣೆಯುವ ಕಟ್ಟು ಕಥೆಗಳ ಕೂಪದಿಂದ ಮೇಲೇಳಿಸುವುದು.
ಗಾರುಡಿಕೆ, ಎಂದರೆ ಕಾವಲು ಪಡೆ (Guarding) ಪರಂಪರೆಯ ನಾಯಕ ಹನುಮ. ಆತ ಬೋರೇದೇವರಂತೆ ಲಿಂಗ (ಯೋನಿ - ಪಾಣಿ) ಆರಾಧಿಸುವ ತಂತ್ರಿಯೂ ಹೌದು. ಅವನು ಆದಿ ಯೋಗಿಯೂ ಹೌದಯು. ಆಳುವ ರಾಣಿ, ರಾಜರಿಂದಿಡಿಡು, ತನ್ನದೇ ಮನೆಯ ಹೆಂಗಸು ಮಕ್ಕಳ ರಕ್ಷಣೆಗೆ ಕಾವಲು ನಿಲ್ಲುವ ಪ್ರತಿಯೊಬ್ಬ ಗಂಡೂ ಸಹ ಹನುಮನೆ.
ರಾಮನೊಡನೆ ಮಾಡಿಕೊಂಡ ಒಪ್ಪಂದದ ತಪ್ಪಿಗೆ ಇಡೀ ತನ್ನ ಜನರನ್ನೆಲ್ಲ ರಾಮರಾವಣರ ಯುದ್ದದಲ್ಲಿ ಬಲಿಕೊಡುವ ಕಿಸುಕಾಡಿನ ಹನುಮನು, ಗಂಡರನ್ನು ಕಳೆದುಕೊಂಡು ವಿಧವೆಯರಾಗಿದ್ದ ಹೆಂಗಸರು, ಮಕ್ಕಳು, ಆ ಹನುಮನಿಗೆ ಬಯ್ಯುವ, ಗೋಳಾಡುವ ಕೆಲವು ಜನಪದ ಸಾಲುಗಳು ನೆನಪಿವೆ. ಈ ಪ್ರಸಂಗ ಅಂತಿಂತದ್ದಲ್ಲ. ಈ ಬೈಗುಳಗಳಿಗೆಲ್ಲಾ ಮರುಮಾತಾಡದೆ ತಲೆತಗ್ಗಿಸಿ ನಿಲ್ಲುವ ಹನುಮ, ಊರ ಹೆಂಗಸರಲ್ಲಿ ಕ್ಷಮೆ ಯಾಚಿಸಿ, ಊರಾಚೆಯ ಊರಿನ ಉತ್ತರ ಗಡಿಯಲ್ಲಿ ನಿಂತು ತನ್ನೂರನು ಕಾಯುವ ಶಪಥಗಯ್ಯುತ್ತಾನೆ.
ಹಾಗೆಯೇ ನಮಗೆ ಹನುಮರೆಂದರೆ ಒಬ್ಬನೇ ಅಲ್ಲ. ಇದು ಕಿಸುಕಾಡು ಹನುಮನ ದುರಂತ ಕಥೆ. ಈತನೇ ರಾಮನೆಂಬ ಪರರಾಜ್ಯದ ರಾಜನೊಂದಿಗೆ ಅದಾವುದೋ ಅನಿವಾರ್ಯಕ್ಕೆ ಒಪ್ಪಂದ ಮಾಡಿಕೊಂಡು ತನ್ನ ರಾಜ್ಯದ ಜನರನ್ನೆಲ್ಲ ಬಲಿಯಿಟ್ಟು, ತನ್ನೂರ ಹೆಂಗಸರ ವಿಧವೆ ಮಾಡಿದವ.
ಕರ್ನಾಟಕದಾದ್ಯಂತ ಹನುಮ ಪರಂಪರೆಗಳಿವೆ. ಶಾಕ್ತ ಪರಂಪರೆಯನ್ನು ಮೂಲವಾಗಿಸಿಕೊಂಡ ದ್ರಾವಿಡ ಪರಂಪರೆಗಳಲ್ಲಿ ಲೆಕ್ಕವಿಲ್ಲದಷ್ಟು ಬಂಟ ದೇವರುಗಳ ಪರಂಪರೆ ಇವೆ. ಅಂತಹ ಶಾಕ್ತ-ಬಂಟ ದೇವರುಗಳ ಪರಂಪರೆಗಳಲ್ಲಿ ಹನುಮನೂ ಸಹ ಒಬ್ಬನೆ.
ತಮಿಳರಲ್ಲಿ ಮಾತ್ರ ಇಂದು ಕಾಣಸಿಗುವ ಕಂದಸ್ವಾಮಿ/ಮುರುಗ ದೇವರ ಪರಂಪರೆ, ಹಿಂದೆ ಕನ್ನಡಿಗರಲ್ಲೂ ಚೆನ್ನ/ಚೆನ್ನಿಗ/ಚೆಲುವ/ಶರ್ವ/ ಇತ್ಯಾದಿ ಹೆಸರುಗಳಲ್ಲಿ ಇತ್ತು. ಅದು ಮಧ್ಯಕಾಲೀನ ಯುಗದಲ್ಲಿ ವೈಷ್ಣವಕರಣಕ್ಕೆ ಬಲಿಯಾಗಿ ಮಾರ್ಪಾಡಾಗಿದೆ. ಆದರೆ ಕನ್ನಡಿಗರಲ್ಲಿ, ತಮಿಳರಂತೆ ಕೇವಲ ಕಂದಸ್ವಾಮಿ/ಮುರುಗ ದೇವರ ಪರಂಪರೆ ಅಷ್ಟೇ ಅಲ್ಲದೆ ಬಹಳಷ್ಟು ಬಂಟ ದೈವಗಳ ಪರಂಪರೆ ಇದ್ದು ಅವುಗಳ ಪೈಕಿ, ಹನುಮನೂ ಒಬ್ಬ. ಮಾತೃದೇವತೆಯ ಬಂಟ ದೈವ.
ಮಂಡ್ಯದ ಮುತ್ತತ್ತಿ, ರಾಮನಗರದ ಅಯ್ಯನಗುಡಿ (ಕೆಂಗಲ್), ಹದ್ದಿನಕಲ್ಲು, ಗಾಳಿಕೆರೆ ಆಂಜನೇಯ, ಹುಚ್ಚರಾಯ, ಇವುಗಳೆಲ್ಲ ಇಂಥವೇ ಸ್ಥಳೀಯ ಗಾರುಡಿಕೆ (guarding) ಪರಂಪರೆಯ ಬಂಟ ದೈವಗಳೇ ಹೊರತು, ಅದ್ಯಾರೋ ರಾಮನೆಂಬುವನ ಗುಲಾಮನಾಗಲಿ, ಬಂಟನಾಗಲಿ ಅಲ್ಲವೇ ಅಲ್ಲ.
ಕನಿಷ್ಠ ಪಕ್ಷ 13-14ನೇ ಶತಮಾನದವರೆಗೂ ನರ್ಮದೆಯಿಂದ ದಕ್ಷಿಣಕ್ಕೆ ರಾಮನ ಹೆಸರಿನ ಅರಸರಾಗಲಿ, ಗುಡಿಗಳಾಗಲಿ ಇಲ್ಲವೇ ಇಲ್ಲ ಎಂಬಷ್ಟಿದ್ದವೆನ್ನಬಹುದು. ಆದರೆ ಅದಾವ ಬದಲಾವಣೆ ಆ ಕಾಲದಲ್ಲಾಯಿತೋ ಏನೋ ಕಾಣೆ. ಮೊದಲಿಗೆ ಹನುಮ ರಾಮರ ನಡುವೆ ಇದ್ದ ಒಪ್ಪಂದದ ಸಂಬಂಧ ಮರೆಯಾಗಿ, ಒಡೆಯಾ-ಬಂಟನ ಆಯಾಮ ಸೃಷ್ಟಿಸಲಾಯಿತು. ನಂತರ ಎಲ್ಲಾ ಪ್ರಾಂತ್ಯದ ಹನುಮಕಲ್ಲುಗಳನ್ನು ಪ್ರತ್ಯೇಕ ಗಾರುಡಿಕೆಯ ವೀರಗಲ್ಲುಗಳೆಂದು ಪರಿಗಣಿಸದೇ, ಅದೆಲ್ಲಾ ರಾಮಾಯಣದ ಕಿಸುಕಾಡಿನ (ಕಿಷ್ಕಿಂದೆ) ಹನುಮನೇ ಎಂದು ಜನರಲೈಸ್ (ಸಾಮಾನ್ಯೀಕರಣ) ಮಾಡಲಾಯಿತು. ಇದರ ಮೂಲಕ ಅದಾರ ಪ್ರೇರೇಪಣೆ ಇಂದಲೋ ಏನೋ, ರಾಜರು ಹನುಮಕಲ್ಲುಗಾಳಿದ್ದ ಸ್ಥಳಗಳ ಗುರುತಿಸಿ ರಾಮನ ಗುಡಿಗಳನ್ನು ಕಟ್ಟಿಸುವ ಹೊಸ ಪ್ರಯತ್ನವನ್ನೂ ನಡೆಸಿಯೇ ಬಿಟ್ಟರು!
ಅಲ್ಲಿಯವರೆಗೂ ದಕ್ಷಿಣದಲ್ಲಿ ರಾಮ ಎಂದರೆ ರಾಜನಿಗಿದ್ದ ಒಂದು ಪಟ್ಟದ ಹೆಸರಾಗಿತ್ತು. ಈಗಲೂ ಅದರ ಕುರುಹುಗಳಾಗಿ ಹಳೆಮೈಸೂರು ಭಾಗಗಳಲ್ಲಿ ಹಳೆ ರಾಜರ ಕೆತ್ತನೆಗಳನ್ನು ದೇವಾಲಯಗಳಲ್ಲಿ ನೋಡಬಹುದು. ಅಷ್ಟೇ ಯಾಕೆ? ಪಂಡರಾಪುರದಲ್ಲಿ ವಿಠ್ಠಲನ ಹೆಸರಲ್ಲಿ ಮೆರೆಸೊ ಮೂರ್ತಿ, ಹೊಯ್ಸಳರ ಪ್ರೇರೇಪಣೆಯಿಂದ ಸ್ಥಾಪನೆಯಾಗಿದ್ದ ಕರ್ನಾಟ ಸಾಮ್ರಾಜ್ಯದ ಹೆದ್ದೊರೆ (ತುಂಗಾಬದ್ರ) ಹೊಳೆಯ ದಡದಲ್ಲಿದ್ದ ಮಂಟಪದಲ್ಲಿದ್ದ ಹೊಯ್ಸಳ ಅರಸ ವಿಷ್ಣುವರ್ಧನನ ಕಲ್ಲಿನ ಪ್ರತಿಮೆ!
ರಾಮ ರಾಮ ಎಂಬಂತೆ ಇಷ್ಟೆಲ್ಲಾ ಸಾಂಪ್ರದಾಯಿಕ ದುರಂತಗಳು ನಡೆದಮೇಲದು ರಾಜನ ಪಟ್ಟವಾಗಿ ಉಳಿಯದೆ, ನೇರವಾಗಿ ಅಯೋಧ್ಯೆಯ ರಾಮನಿಗೆ ಸಂಬಂಧಿಸಿದ್ದೆಂಬಂತೆ ಅರ್ಥ ಕಲ್ಪಿಸಿಕೊಳ್ಳುವ ದುರಂತ ಯುಗಕ್ಕೆ ಕಾಲಿಟ್ಟೆವು.
ಈಗ ಇದೆಲ್ಲ ಗೋಜುಗೋಜಲಾಗಿ ಜನರ ತಲೆಕೆಡಿಸುತ್ತಿರುವುದಂತು ನಿಜ.
ನಮ್ಮಲ್ಲಿ ಹಲವರಿಗೆ ಹನುಮ ಅಚ್ಚುಮೆಚ್ಚಿನ ದೈವ. ಅದರಲ್ಲೂ ಕಟ್ಟುಮಸ್ತಾಗಿ ಇರಬಯಸುವ ಜಗಜಟ್ಟಿಯಂತಹ ಗಂಡುಗಳಿಗೆ ಹನುಮ ಎಂದರೆ ಶಕ್ತಿ ಭಕ್ತಿ. ಆದರೆ ರಾಮ??? I mean ನಮ್ಮ ಅರಸರ ರಾಮ-ಪಟ್ಟದ ಬಗ್ಗೆ ಹೇಳ್ತಿಲ್ಲ, ಅಯೋಧ್ಯೆಯ ರಾಮನ ಬಗ್ಗೆ ಹೇಳ್ತಿದ್ದೇನೆ. ಇಂಥಹ ಎಷ್ಟೋ ಯುವಕರ ಮನದಾಳದಲ್ಲಿ, ಹನುಮ ಅಚ್ಚಿಳಿದಷ್ಟು ರಾಮ ಅಚ್ಚಿಳಿದಿರುವುದಿಲ್ಲ. ಹನುಮನ ಜೊತೆ ರಾಮನೂ ಫ್ರೀ ಸಿಕ್ಕಿದನೆಂಬಂತೆ, ಹೆಸರಿಗೆ ರಾಮನನ್ನೂ ಹನುಮನ ಜೊತೆ ಉಳಿಸಿಕೊಳ್ಳುವ ಅನಿವಾರ್ಯತೆ ಹನುಮನನ್ನು ಆರಾಧಿಸುವವರಿಗೆ! ಕಾರಣ ಹೂವಿನ ಜೊತೆ ನಾರೂ ಸ್ವರ್ಗ ಸೇರಿತು ಅನ್ನೋ ಹಾಗೆ ಹನುಮ ಸುತ್ತ ಎಣೆದಿರುವ ಬೊಗಳೆ ಕಥೆಗಳಲ್ಲಿ ಹನುಮನು ರಾಮನ ಬಂಟ, ಗುಲಾಮ! ಆದರೆ ಸೂಕ್ಷ್ಮ ಸತ್ಯಗಳು ಅರ್ಥವಾಗುತ್ತಾ ಹೋದಂತೆ ಈ ಗೊಂದಲಗಳು ಉಳಿಯುವುದಿಲ್ಕ. ಮೊರದಲ್ಲಿ ರಾಗಿ ಸೂಸುತ್ತಾ ಕಲ್ಲಾ ಆಯ್ದು ಆಚೆಗೆ ಎಸೆಯು ಪ್ರಸಂಗದಂತೆ, ನಮ್ಮ ಆರಾಧ್ಯದೈವದ ನಿಜಸ್ವರೂಪದ ದರ್ಶನ ನಮಗಾಗುವುದು ಕಂಡಿತ. ದಶಾವತಾರದ ಕಥನವೇ ಹೇಳುವಂತೆ ರಾಮಾವತಾರಕ್ಕಿಂತ ವಾನರಾವತಾರ ಹಳತು ಹಾಗೂ ಹಿರಿಯದು. ರಾಮನ ಪರಂಪರೆಯು ದಕ್ಷಿಣದಲ್ಲಿ ಇತ್ತೀಚೆಗೆ ಆವರಿಸಿಕೊಂಡರೆ, ಹನುಮನ ಪರಂಪರೆಯು ಉತ್ತರದಲ್ಲಿ ಅಲ್ಲಿ ನಾಗರಿಕತೆ ಕಟ್ಟಿದ್ದ ದ್ರಾವಿಡರಿದ್ದ ಕಾಲದಲ್ಲೇ ಇತ್ತು.
ಇಂಥಹ ಎಷ್ಟೋ ಜನರ ಗೊಂದಲಕ್ಕೆ ತೆರೆ ಎಳೆಯಬೇಕೆಂದೇ ಇಷ್ಟೆಲ್ಲಾ ಬರೆಯಬೇಕಾಯಿತು. ಎಲ್ಲಾ ಹನುಮರೂ ಒಂದೇ ಅಲ್ಲ. ಹನುಮನು ರಾಮನ ಬಂಟನೂ ಅಲ್ಲ, ಗುಲಾಮನೂ ಅಲ್ಲ. ಹನುಮನನ್ನು ಒಪ್ಪುವ ಮಾತ್ರಕ್ಕೆ ಅಯೋಧ್ಯೆಯ ರಾಮನನ್ನೂ ಒಪ್ಪಬೇಕೆಂದೇನೂ ಇಲ್ಲ. ಇಷ್ಟನ್ನು ಅರ್ಥ ಮಾಡಿಕೊಂಡರೆ ಸಾಕು. ಸಾಮುದಾಯಿಕವಾಗಿ ನಮ್ಮ ಜನರಿಗೂ ಗೊಂದಲದಿಂದ ಮುಕ್ತಿ. ಭಾಷಿಕ ಜನರಾಗಿ ಕನ್ನಡಿಗರೂ ಸಹ ಬೌದ್ಧಿಕವಾಗ ಸ್ವತಂತ್ರರಾಗಿ, ಉತ್ತರದವರ ಗುಲಾಮಗಿರಿಯ ಅಳಿಸಿಹಾಕಬಹುದು.