TeamChiranootan

TeamChiranootan Welcome to TeamChiranootan
TeamChiranootan is a nonprofit non govt enthusiastic youth Org.serving since 2015

Welcome to TeamChiranootan
Team Chiranootan is a non-profit, non-government enthusiastic youth organisation. Sponsored by “Chiranootan Vividoddeshagala Sangh (R) Lakshmeshwar” that has been working since 2015 to support and strengthen government kindergartens in rural and urban Karnataka .and we also work for school and college students by organising extra-curricular activities to ensure their interest and intimation Encouraging by rewarding them.

ವಿಶ್ವ ಗುರು ಬಸವಣ್ಣನವರ ಜಯಂತಿ ಶುಭಾಷಯಗಳುಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಕೂಡಲಸಂಗಮದ...
20/04/2026

ವಿಶ್ವ ಗುರು ಬಸವಣ್ಣನವರ ಜಯಂತಿ ಶುಭಾಷಯಗಳು

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.

ನರ ಕೂರಂಬಿನಲೆಚ್ಚ; ಅವಂಗೊಲಿದೆಯಯ್ಯ
ಅರಳಂಬಿನಲೆಚ್ಚ ಕಾಮನನುರಹಿದೆಯಯ್ಯ.
ಇರುಳು ಹಗಲೆನ್ನದೆ ಪ್ರಾಣಘಾತವ ಮಾಡಿದ ಬೇಡನ
ಕೈಲಾಸಕೊಯ್ದೆಯಯ್ಯ.
ಎನ್ನನೇತಕೆ ಒಲ್ಲೆ ಕೂಡಲಸಂಗಮದೇವ ?

Commemorating Bharat Ratna Dr: B R Ambedkar on his 136th Birth Anniversaryಭಾರತ ರತ್ನ ಡಾ: ಬಿ ಆರ್ ಅಂಬೇಡ್ಕರ್ ಅವರ 136ನೇ ಜಯಂತಿ...
14/04/2026

Commemorating Bharat Ratna Dr: B R Ambedkar on his 136th Birth Anniversary

ಭಾರತ ರತ್ನ ಡಾ: ಬಿ ಆರ್ ಅಂಬೇಡ್ಕರ್ ಅವರ 136ನೇ ಜಯಂತಿಯಂದು ನಮ್ಮ ಶತ ಪ್ರಣಾಮಗಳು.
"‌ಒಬ್ಬ ಮಹಾನ್ ವ್ಯಕ್ತಿಯು ಖ್ಯಾತ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ, ಏಕೆಂದರೆ ಅವರು ಸಮಾಜದ ಸೇವಕರಾಗಲು ಸಿದ್ಧರಾಗಿದ್ದಾರೆ".
ಡಾ: ಬಿ ಆರ್‌ ಅಂಬೇಡ್ಕರ್
🙏🏻💐🌹🕊️

ಅಹಿಂಸಾ ಪರಮೋ ಧರ್ಮಃ ಭಗವಾನ್ ಮಹಾವೀರ ಜಯಂತಿ ಶುಭಾಶಯಗಳುಸರ್ವಜನ ಹಿತಾಯ, ಸರ್ವಜನ ಸುಖಾಯ.!
30/03/2026

ಅಹಿಂಸಾ ಪರಮೋ ಧರ್ಮಃ

ಭಗವಾನ್ ಮಹಾವೀರ ಜಯಂತಿ ಶುಭಾಶಯಗಳು

ಸರ್ವಜನ ಹಿತಾಯ, ಸರ್ವಜನ ಸುಖಾಯ.!

BALIDAN DIVAS ಬಲಿದಾನ ದಿವಸ ಭಾರತದ ಸ್ವಾತಂತ್ರ್ಯ ಪಡೆಯಲು ಶ್ರಮಿಸಿ, ಹೋರಾಟದ ಹಾದಿಯಲ್ಲಿ ಎದೆಗುಂದದೆ ನುಗ್ಗಿದ ವೀರರು ಸಾವಿರಾರು ಮಂದಿ.ಅವರಲ್...
23/03/2026

BALIDAN DIVAS
ಬಲಿದಾನ ದಿವಸ

ಭಾರತದ ಸ್ವಾತಂತ್ರ್ಯ ಪಡೆಯಲು ಶ್ರಮಿಸಿ, ಹೋರಾಟದ ಹಾದಿಯಲ್ಲಿ ಎದೆಗುಂದದೆ ನುಗ್ಗಿದ ವೀರರು ಸಾವಿರಾರು ಮಂದಿ.ಅವರಲ್ಲಿ ಪುಟ್ಟ ಮಗುವಿದ್ದಾಗಲೇ ಬಂದೂಕನ್ನು ಬೆಳೆದು ಬಿಳಿಯರನ್ನು ನನ್ನ ದೇಶದಿಂದ ಓಡಿಸುತ್ತೇನೆಂಬ ಆಸೆ ಇಟ್ಟುಕೊಂಡು,ತಾನೇ ಒಂದು ಬಂದೂಕಿನಂತೆ ಬೆಳೆದು ಬಿಳಿಯರನ್ನು ಹೆದರಿಸುವ ಮಟ್ಟಿಗೆ ಎಲ್ಲರ ಮನದಲ್ಲಿ ನಿಂತವನು ಪಂಜಾಬಿನ ಹುಲಿ ' ಭಗತ್ ಸಿಂಗ್'. ಇನ್ನು ಕಲಿಯುಗ ಪಾರ್ಥನಾಗಿ ಸಾವಿನಲ್ಲೂ ಬ್ರಿಟಿಷರ ಗುಂಡಿಗೆಯನ್ನು ಅಲ್ಲಾಡಿಸಿದ ಶಿವರಾಮ್ ಹರಿ ರಾಜಗುರು ಹಾಗೂ ಜೊತೆಗಾರ ಕ್ರಾಂತಿಕಾರರ ಚಾಣಕ್ಷ ಸುಖದೇವ ಅವರುಗಳ ತ್ಯಾಗ ಬಲಿದಾನಗಳು ಇಂದಿಗೂ ಭಾರತದ ಕೋಟಿ ಕೋಟಿ ಯುವ ಮನಸ್ಸುಗಳ ಸ್ಪೂರ್ತಿ ಚೇತನ.

ಸಹೃದಯರೇ,ತಮಗೂ ಹಾಗೂ ತಮ್ಮ ಕುಟುಂಬ ವರ್ಗದವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ...
19/03/2026

ಸಹೃದಯರೇ,
ತಮಗೂ ಹಾಗೂ ತಮ್ಮ ಕುಟುಂಬ ವರ್ಗದವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಕುಗ್ಗದೆ ಬದುಕು ಮುನ್ನಡೆಸೋಣ.

ಈ ಯುಗಾದಿ ತಮ್ಮೆಲ್ಲರ ಜೀವನದಲ್ಲಿ ಹೊಸತನ, ಹೊಸ ಚೈತನ್ಯ, ಹೊಸ ಹುರುಪನ್ನು ಹೊತ್ತು ತರಲಿ. ಸುಖ, ಶಾಂತಿ, ಸಮೃದ್ಧಿ ನೆಲೆಸಲಿ.

-ಚಿರನೂತನ ಲಕ್ಷ್ಮೇಶ್ವರ

Happy Holi...ಸಂಪ್ರದಾಯಗಳ ಜೊತೆ ಜೊತೆಗೇ ಜಗತ್ತಿನ ಸೂಕ್ಷ್ಮಗಳನ್ನು ಅರಿಯೋಣ..! ಸರ್ವರಿಗೂ ಹೋಳಿ ಹಬ್ಬದ ಶುಭಾಷಯಗಳು.
07/03/2026

Happy Holi...

ಸಂಪ್ರದಾಯಗಳ ಜೊತೆ ಜೊತೆಗೇ ಜಗತ್ತಿನ ಸೂಕ್ಷ್ಮಗಳನ್ನು ಅರಿಯೋಣ..!

ಸರ್ವರಿಗೂ ಹೋಳಿ ಹಬ್ಬದ ಶುಭಾಷಯಗಳು.

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಶುಭಾಶಯಗಳು.ಸರ್ವಶಕ್ತ ಭಗವಂತ ತಮ್ಮೆಲ್ಲರಿಗೂ ಶುಭತರಲಿ ಎಂದು ಆಶಿಸುತ್ತೇವೆ. 🙏
15/02/2026

ನಾಡಿನ ಸಮಸ್ತ ಜನತೆಗೆ
ಮಹಾಶಿವರಾತ್ರಿಯ ಶುಭಾಶಯಗಳು.

ಸರ್ವಶಕ್ತ ಭಗವಂತ ತಮ್ಮೆಲ್ಲರಿಗೂ ಶುಭತರಲಿ ಎಂದು ಆಶಿಸುತ್ತೇವೆ. 🙏

ಭಾರತ ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು.. ರಾಷ್ಟ್ರ ಭಕ್ತಿ, ಧರ್ಮ ,ಸಂಸ್ಕೃತಿ ಮತ್ತು ಮಾನವೀಯತೆ ಇವೇ ಮೊದಲಾದ ಬದುಕಿನ ಮೂಲ ತತ್ವಗಳಿಗೆ ವಿಧೆ...
26/01/2026

ಭಾರತ ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು..
ರಾಷ್ಟ್ರ ಭಕ್ತಿ, ಧರ್ಮ ,ಸಂಸ್ಕೃತಿ ಮತ್ತು ಮಾನವೀಯತೆ ಇವೇ ಮೊದಲಾದ ಬದುಕಿನ ಮೂಲ ತತ್ವಗಳಿಗೆ ವಿಧೆಯರಾಗಿರುವ ಮೂಲಕ ಭಾರತದ ಭವ್ಯತೆಗೆ ಶ್ರಮಿಸೋಣ. 🙏

ನಿಮ್ಮ ಬರುವಿಕೆಗಾಗಿ ಈ‌ ನೆಲ ಇಂದೂ ಕಾಯುತಿದೆ... #ಭಾರತದ_ದಿವ್ಯತೇಜಭಾರತ ಕಂಡ ಅದ್ವಿತೀಯ ನೇತಾರ...ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 129 ನೇ ಜ...
23/01/2026

ನಿಮ್ಮ ಬರುವಿಕೆಗಾಗಿ ಈ‌ ನೆಲ ಇಂದೂ ಕಾಯುತಿದೆ...

#ಭಾರತದ_ದಿವ್ಯತೇಜ
ಭಾರತ ಕಂಡ ಅದ್ವಿತೀಯ ನೇತಾರ...
ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 129 ನೇ ಜಯಂತಿ.
SubhashChandraBhos
One of the greatest patriots to grace the country and continues to inspire millions even today.

ಸರ್ವರಿಗೂ ಮಕರ ಸಂಕ್ರಮಣದ ಹಾರ್ದಿಕ‌ ಶುಭಾಷಯಗಳು   ಸಹೃದಯರೆಲ್ಲರಿಗೂ, ಸಂಕ್ರಾಂತಿ ಹಬ್ಬ ಸುಖ- ಸಂತಸವ ತರಲಿ ಎಂದು ಆಶಿಸುತ್ತೇವೆ . 🙏Team Chira...
14/01/2026

ಸರ್ವರಿಗೂ ಮಕರ ಸಂಕ್ರಮಣದ ಹಾರ್ದಿಕ‌ ಶುಭಾಷಯಗಳು

ಸಹೃದಯರೆಲ್ಲರಿಗೂ, ಸಂಕ್ರಾಂತಿ ಹಬ್ಬ ಸುಖ- ಸಂತಸವ ತರಲಿ ಎಂದು ಆಶಿಸುತ್ತೇವೆ . 🙏

Team Chiranootan ಲಕ್ಷ್ಮೇಶ್ವರ

ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ.ಎಲ್ಲ ಮೌಢ್ಯಗಳನ್ನು ಮೆಟ್ಟಿ ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ.             ...
12/01/2026

ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ.ಎಲ್ಲ ಮೌಢ್ಯಗಳನ್ನು ಮೆಟ್ಟಿ ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ.
- ಶ್ರೀ ಈಶ್ವರ್ ಮೆಡ್ಲೆರಿ.

ಚಿರನೂತನ ವಿವಿದೊದ್ದೇಶಗಳ ಸಂಘ, ಟೀಮ್ ಚಿರನೂತನ ಆಯೋಜಿತ ಸ್ವಾಮಿ ವಿವೇಕಾನಂದರ 163ನೇ ಜಯಂತಿ "ವಿವೇಕ ದರ್ಶನ" ಕಾರ್ಯಕ್ರಮವು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಈಶ್ವರ್ ಮೆಡ್ಲೆರಿ ಚಿರನೂತನ ಕಾರ್ಯ ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಕೆ ರವಿ ತಮ್ಮ ಸಮಾರೋಪ ನುಡಿಯಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ ಮಕ್ಕಳ ಕೌಶಲ್ಯ ವೃದ್ಧಿಗೆ ಸಹಕಾರಿ ಎಂದರಲ್ಲದೆ ಪ್ರತಿವರ್ಷ ಯುವ ದಿನವನ್ನು ತಮ್ಮ ಶಾಲೆಯಲ್ಲಿ ಆಚರಿಸಲು ಟೀಮ್ ಚಿರನೂತನವನ್ನ ಆಹ್ವಾನಿಸಿದರು.
ನಾಗೇಶ್ ನಾವಿ ಪ್ರಸಾವಿಕವಾಗಿ ಮಾತನಾಡಿ ಚಿರನೂತನ ಸಂಸ್ಥೆಯ ಹತ್ತು ವರ್ಷಗಳ ನಿರಂತರ ಕಾರ್ಯಾಚಟುವಟಿಕೆಗಳನ್ನು ವಿವರಿಸಿದರು.
ಕಾರ್ಯದರ್ಶಿ ಷಣ್ಮುಖ ಗಡ್ಡೆಣ್ಣವರ ಮಾತನಾಡಿದರು., ಕಾರ್ಯಧ್ಯಕ್ಷ ಸಿದ್ದು ದುರ್ಗಣ್ಣವರ, ಸದಸ್ಯಮಿತ್ರರಾದ ಚಿದಾನಂದ ನುಚ್ಚಂಬಲಿ, ಆನಂದ ಓದಣ್ಣವರ, ಆದರ್ಶ ಗಾಂಜಿ, ಕಿರಣ್ ನಾಗಲೂಟಿ ಇದ್ದರು.

ಜಯಂತಿ ಅಂಗವಾಗಿ ಏರ್ಪಡಿಸಿದ್ದ ಭಾಷಣ, ಚಿತ್ರಕಲೆ, ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಪ್ರೌಢಶಾಲೆಯ ಎಲ್ಲ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹಸ್ರಾರ್ಜುನ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಪ್ರಭು ಸ್ವಾಗತಿಸಿದರೆ, ವಂದನಾರ್ಪಣೆ ನೀಡಿದ್ದು ದೇವರಾಜ್, ಮತ್ತು ನಾಗರಾಜ್ ಹರಿಜನ್ ಕಾರ್ಯಕ್ರಮ ನಿರ್ವಹಿಸಿ ಯಶಸ್ವಿಗೊಳಿಸಿದರು.

ನಿಮಗಿದೋ ಆತ್ಮೀಯ ಆಮಂತ್ರಣ...ನಮ್ಮ ದಶಮಾನೋತ್ಸವದ ಸಂಭ್ರದೊಂದಿಗೆ..ಬನ್ನಿ ಭಾರತದ ಉದಾತ್ತ ಚಿಂತನೆಗಳನ್ನು ಜಗದಗಲ ಬಿತ್ತಿ ಜ್ಯೋತಿಯಿಂ ಬೆಳಗಿ ತಮ್...
10/01/2026

ನಿಮಗಿದೋ ಆತ್ಮೀಯ ಆಮಂತ್ರಣ...ನಮ್ಮ ದಶಮಾನೋತ್ಸವದ ಸಂಭ್ರದೊಂದಿಗೆ..

ಬನ್ನಿ ಭಾರತದ ಉದಾತ್ತ ಚಿಂತನೆಗಳನ್ನು ಜಗದಗಲ ಬಿತ್ತಿ ಜ್ಯೋತಿಯಿಂ ಬೆಳಗಿ ತಮ್ಮ ಜೀವನ ಮತ್ತು ಸಂದೇಶಗಳಿಂದ ಇಂದಿಗೂ ಬೆಳಕನೀಡುತ್ತಿರುವ ಮಹಾನ ಚೇತನ ಸಿಂಹ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿ.

ಟೀಮ್ ಚಿರನೂತನ ಲಕ್ಷ್ಮೇಶ್ವರ.

Address

Desaibana
Lakshmeshwar
582116

Alerts

Be the first to know and let us send you an email when TeamChiranootan posts news and promotions. Your email address will not be used for any other purpose, and you can unsubscribe at any time.

Contact The Organization

Send a message to TeamChiranootan:

Share