ಕೆಂಪೇಗೌಡ ಯುವ ಸಮಿತಿ ವೇಮಗಲ್.

  • Home
  • India
  • Kolar
  • ಕೆಂಪೇಗೌಡ ಯುವ ಸಮಿತಿ ವೇಮಗಲ್.

ಕೆಂಪೇಗೌಡ ಯುವ ಸಮಿತಿ ವೇಮಗಲ್. ಕೆಂಪೇಗೌಡರ ಯುವ ಸಮಿತಿ (ರಿ) ವೇಮಗಲ್.

ಕುಲ ಬಂದುಗಳೇ,ಈ ದಿವಸ ಜಾತೀಗಣತಿ ವಿಷಯವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಗಳು ಭಾಗವಹಿಸಿ...
09/09/2025

ಕುಲ ಬಂದುಗಳೇ,
ಈ ದಿವಸ ಜಾತೀಗಣತಿ ವಿಷಯವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಗಳು ಭಾಗವಹಿಸಿದ್ದು ನಮ್ಮ ಸಮಾಜದ ಅನೇಕ ಬಂಧುಗಳು ಬಂದು ಕಾರ್ಯಕ್ರಮವನ್ನು ತುಂಬಾ ಯಶಸ್ವಿಗೊಳಿಸಿದ್ದಕ್ಕೆ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. 👏
ಈ ಕಾರ್ಯಕ್ರಮದ ಕುರಿತು ಏನೆಲ್ಲಾ ಚರ್ಚಿಸಲಾಯಿತು, ಮತ್ತು ಜನಗಣತಿಗೆ ಬಂದಾಗ ನಾವು ಹೇಗೆ ಮತ್ತು ಯಾವ ಮಾಹಿತಿಗಳನ್ನು ನೀಡಬೇಕು ಎಂದು ಎಲ್ಲರಿಗೂ ತಿಳಿಸಲಾಗುತ್ತದೆ.
ನಮ್ಮ ಕೆಂಪೇಗೌಡ ಯುವ ಸಮಿತಿವತಿಯಿಂದ ಗ್ರಾಮ ಸಭೆಗಳನ್ನು ನಾವು ಮೊದಲಿನಿಂದಲೂ ಮಾಡುತ್ತಿದ್ದು, ಮುಂದಿನ ಗ್ರಾಮ ಸಭೆಗಳಲ್ಲಿ ಜನಗಣತಿಯ ವಿಷಯವನ್ನೂ ಅದರಲ್ಲಿ ಸೇರಿಸಿಕೊಂಡು ಗ್ರಾಮ ಸಭೆ ಮಾಡುತ್ತೇವೆ. ಆದರೆ ಕಡಿಮೆ ಸಮಯ ಇರುವುದರಿಂದ ಎಲ್ಲಾ ಗ್ರಾಮಗಳಿಗೆ ಬೇಟಿ ನೀಡಿ ಜನಗಣತಿ ವಿಷಯ ಚರ್ಚಿಸಲು ಹಾಗುವುದಿಲ್ಲ. ಹಾಗಾಗಿ
ನಮ್ಮ ಸಮಾಜದ ಜನರಿಗೆ ವಿಷಯ ಮುಟ್ಟುವಂತೆ ಆಯಾ ಗ್ರಾಮಗಳಲ್ಲಿ ಗ್ರಾಮದವರೇ ಒಂದೊಂದು ಸಭೆ ಮಾಡಿ ವಿಷಯ ಮುಟ್ಟಿಸಬೇಕು.
ಮತ್ತು ಜಾತಿಗಣತಿಗೆ ಬಂದಂತಹ ಸಮಯದಲ್ಲಿ ಮನೆಯ ಒಬ್ಬ ಮುಖ್ಯ ಸದಸ್ಯ ಮನೆಯಲ್ಲಿ ಇದ್ದು ಮಾಹಿತಿ ನೀಡಿ. ಇದು ತುಂಬಾ ಮುಖ್ಯ.
ನಾವು ಈ ಜಾತಿಗಣತಿಯನ್ನು ನಿರ್ಲಕ್ಷಿಸಿದರೆ ಸರ್ಕಾರ ನಮ್ಮ ಜನಾಂಗವನ್ನು ನಿರ್ಲಕ್ಷಿಸುತ್ತದೆ.
ಹಾಗಾಗಿ ಈ ವಿಷಯದಲ್ಲಿ ಯಾರೂ ಮೈ ಮರೆಯಬೇಡಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಗಳು ಹೆಚ್ಚರಿಕೆ ಕೊಟ್ಟಿದ್ದಾರೆ.

ಏನೆಲ್ಲಾ ಅಂಶಗಳು ಮುಖ್ಯವಾಗಿ ನಾವು ನಮೂದಿಸಬೇಕು ಎಂದು ಮುಂದೆ ತಿಳಿಸಲಾಗುವುದು.❤️

08/09/2025

ಆತ್ಮೀಯರೇ ಎಲ್ಲರಿಗೂ ತಿಳಿದಿರುವಂತೆ ನಮ್ಮ ವೇಮಗಲ್ ನ *ಕೆಂಪೇಗೌಡ ಮುಖ್ಯರಸ್ತೆ* (ನರಸಾಪುರ ಮುಖ್ಯ ರಸ್ತೆ) ಪ್ರಸ್ತುತ ವೇಮಗಲ್ ನ ಪ್ರಮುಖ ವಾಣಿಜ್...
05/09/2025

ಆತ್ಮೀಯರೇ

ಎಲ್ಲರಿಗೂ ತಿಳಿದಿರುವಂತೆ ನಮ್ಮ ವೇಮಗಲ್ ನ *ಕೆಂಪೇಗೌಡ ಮುಖ್ಯರಸ್ತೆ* (ನರಸಾಪುರ ಮುಖ್ಯ ರಸ್ತೆ) ಪ್ರಸ್ತುತ ವೇಮಗಲ್ ನ ಪ್ರಮುಖ ವಾಣಿಜ್ಯ ರಸ್ತೆಯಾಗಿದೆ ಮತ್ತು ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿರುವ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಜನ ಸಂದಣಿ ಹೆಚ್ಚಾಗಿರುತ್ತದೆ ಹಾಗೂ ಕೆಲವರ ಅತೀವೇಗ ಮತ್ತು ಬೇಜವಾಬ್ದಾರಿ ಚಾಲನೆಯಿಂದ ಈಗಾಗಲೇ ಈ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಈಗಲೂ ಸಹ ವಾರಕ್ಕೆ 2-3 ಅಪಘಾತಗಳು ನಡೆಯುತ್ತಲೇ ಇವೆ. ಇದನ್ನು ಮನಗಂಡು ನಮ್ಮ *ಕೆಂಪೇಗೌಡರ ಯುವ ಸಮಿತಿ (ರಿ)* ವೇಮಗಲ್ ಪೊಲೀಸ್ ನಿರೀಕ್ಷಕರಾದ ಶ್ರೀ B.P. ಮಂಜು ಸರ್ ರವರ ಬಳಿ ಚರ್ಚಿಸಿ ಸದರಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಬ್ಯಾರಿಕೆಡ್(ತಡೆಗೋಡೆ) ಗಳನ್ನು ಈ ರಸ್ತೆಯ ಎರಡೂ ಬದಿಯಲ್ಲಿ ಇರಿಸಿ ವೇಗ ನಿಯಂತ್ರಿಸಲು ಕೋರಿದ್ದು ಸದರಿ ಬ್ಯಾರಿಕೆಡ್ ಗಳನ್ನು ನಮ್ಮ ಸಮಿತಿಯ ಕಡೆಯಿಂದ ಕೊಡುಗೆಯಾಗಿ ನೀಡಿರುತ್ತೇವೆ.
ಶನಿವಾರ(06/09/2025) ಮದ್ಯಾಹ್ನ 1 ಗಂಟೆಗೆ ಕೆನರಾ ಬ್ಯಾಂಕ್ ಬಳಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಶ್ರೀ ವೆಂಕಟೇಶ್ ಸರ್ ರವರ ಸಮ್ಮುಖದಲ್ಲಿ ಇದನ್ನು ವೇಮಗಲ್ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರಾದ ಶ್ರೀ BP ಮಂಜು ಸರ್ ರವರಿಗೆ ಹಸ್ತಾಂತರಿಸಿ ಲೋಕಾರ್ಪಣೆ ಮಾಡಲು ನಿಶ್ಚಯಿಸಿದ್ದು ಸಾರ್ವಜನಿಕರು ಭಾಗವಹಿಸಲು ಕೋರುತ್ತೇವೆ.

ಧನ್ಯವಾದಗಳೊಂದಿಗೆ
*ಕೆಂಪೇಗೌಡರ ಯುವ ಸಮಿತಿ*
*ಕಾರ್ಯಕಾರಿಣಿ ಸದಸ್ಯರು*

ಇದೆ ತಿಂಗಳು 8 ನೆ ತಾರೀಖು ಜಾತಿ ಗಣತಿ ಸಮೀಕ್ಷೆ ಕುರಿತು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಯವರ ಸಮ್ಮುಖದಲ್ಲಿ ನಡೆಯಲಿರುವ ಸಭೆಯ...
03/09/2025

ಇದೆ ತಿಂಗಳು 8 ನೆ ತಾರೀಖು ಜಾತಿ ಗಣತಿ ಸಮೀಕ್ಷೆ ಕುರಿತು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಯವರ ಸಮ್ಮುಖದಲ್ಲಿ ನಡೆಯಲಿರುವ ಸಭೆಯ ಪೂರ್ವಭಾವಿ ಸಭೆಯನ್ನು ನಾಳೆ ಅಂದರೆ 04-09-2025 ರಂದು ಶ್ರೀ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿಯವರು ಏರ್ಪಡಿಸಿದ್ದು ಸಮುದಾಯದ ಯುವಕರು ಹಿರಿಯರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡುತ್ತೇವೆ

ಈ ಒಂದು ಸಭೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳ ಅನೇಕ ಒಕ್ಕಲಿಗರ ಪರ ಸಂಘ ಸಂಸ್ಥೆಗಳು ಭಾಗವಹಿಸುತ್ತಿದ್ದು ರಾಜ್ಯ ಸರ್ಕಾರ ಕೈಗೊಂಡಿರುವ ಜಾತ...
15/08/2025

ಈ ಒಂದು ಸಭೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳ ಅನೇಕ ಒಕ್ಕಲಿಗರ ಪರ ಸಂಘ ಸಂಸ್ಥೆಗಳು ಭಾಗವಹಿಸುತ್ತಿದ್ದು ರಾಜ್ಯ ಸರ್ಕಾರ ಕೈಗೊಂಡಿರುವ ಜಾತಿ ಗಣತಿ ಮತ್ತು ಒಕ್ಕಲಿಗ ಒಳ ಪಂಗಡಗಳು ಅದರಿಂದ ನಮ್ಮ ಸಮುದಾಯಕ್ಕಿರುವ ಲಾಭ ನಷ್ಟಗಳ ಕುರಿತು ಚರ್ಚಿಸಲಾಗುವುದು
ಮತ್ತು ಈಗಾಗಲೇ ಒಕ್ಕಲಿಗ ಸಮುದಾಯವನ್ನ OBC ಎಂದು ಪರಿಗಣಿಸಿ ನೀಡುತ್ತಿರುವ ಮಿಸಲಾತಿಗಳ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲದೆ ಅದರ ಸದುಪಯೋಗವಾಗುತ್ತಿಲ್ಲ ಆದ್ದರಿಂದ ಈ ಸಭೆಯಲ್ಲಿ ಯಾವೆಲ್ಲ ಮೀಸಲಾತಿ ಲಭ್ಯವಿದೆ ಮತ್ತು ಅದರ ಪ್ರಯೋಜನಗಳು ಏನು ಮತ್ತು ಮುಂದಿನ ದಿನಗಳಲ್ಲಿ ಒಕ್ಕಲಿಗರ ಪಾತ್ರ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಗುವುದು ಮತ್ತು ಎಲ್ಲರಿಗೂ ಮುಕ್ತವಾಗಿ ಚರ್ಚಿಸಲು ಅವಕಾಶ ಇರುವ ಕಾರಣ ತಮಗೆ ಏನೇ ಸಂದೇಹಗಳಿದ್ದರು ನೀವು ಬಗೆಹರಿಸಿಕೊಳ್ಳಬಹುದು ಮತ್ತು ನಿಯಮಿತ ಆಸನಗಳ ವ್ಯವಸ್ಥೆ ಇರುವ ಕಾರಣ ಆಸಕ್ತಿಯುಳ್ಳ ಕುಲಬಾಂದವರು ಪತ್ರಿಕೆಯಲ್ಲಿ ನೀಡಿರುವ ನಂಬರ್ ಗಳಿಗೆ ಕರೆ ಮಾಡಿ ಇಂದು ಸಂಜೆ ಒಳಗೆ ನಿಮ್ಮ ಬರುವಿಕೆಯನ್ನ ಖಚಿತ ಪಡಿಸಿಕೊಳ್ಳಬೇಕು ಮತ್ತು ಸಭೆಗೆ ಹಾಜರಾಗದೆ ಇರುವವರು ದಯವಿಟ್ಟು ಮುಂದಿನ ದಿನಗಳಲ್ಲಿ ಸಂಘಗಳು ಏನು ಮಾಡುತ್ತಿದೆ ಎಂದು ಪ್ರಶ್ನಿಸಬೇಡಿ 🙏🙏🙏

01/08/2025

ಸಮುದಾಯದ ಹಿತಾಸಕ್ತಿಗಳ ರಕ್ಷಣೆ ಮತ್ತು ಒಗ್ಗಟ್ಟಿಗಾಗಿ ಪ್ರಮುಖ ಸಭೆ

ಜಿಲ್ಲೆಯ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ, ಜಿಲ್ಲಾ ಪ್ರವಾಸ ಮತ್ತು ಜಿಲ್ಲಾ ಒಕ್ಕಲಿಗ ಸಮುದಾಯದ ಸಮಾನ ಮನಸ್ಕರ ವೇದಿಕೆ (ಸಮನ್ವಯ ವೇದಿಕೆ) ನಿಯೋಜಿಸಲಾಗುತ್ತಿದೆ. ಇದರ ಭಾಗವಾಗಿ, ಜಿಲ್ಲೆಯಾದ್ಯಂತ ಕೆಂಪೇಗೌಡ ಯುವ ಸಮಿತಿ ಮತ್ತು ಒಕ್ಕಲಿಗರ ಮಹಾ ಒಕ್ಕೂಟ ರಚನೆ ಹಾಗೂ ಪ್ರತಿ ತಾಲೂಕಿನ ಎಲ್ಲಾ ಒಕ್ಕಲಿಗರ ಸಂಘಗಳ ಪರಿಚಯ ಮತ್ತು ಪಾಲ್ಗೊಳ್ಳುವಿಕೆಗೆ ವೇದಿಕೆ ಕಲ್ಪಿಸಲಾಗುವುದು.

ಕೋಲಾರ ಜಿಲ್ಲಾ ಒಕ್ಕಲಿಗರ ಸಂಘವು ಹಿರಿಯರ ಮತ್ತು ಎಲ್ಲರ ಮಾರ್ಗದರ್ಶನದಲ್ಲಿ ಈಗಾಗಲೇ ಪ್ರಮುಖ ಪಾತ್ರ ವಹಿಸುತ್ತಿದ್ದು, ಸದ್ಯಕ್ಕೆ ಕೋಲಾರ ತಾಲೂಕಿಗೆ ಸೀಮಿತವಾದ ಚಟುವಟಿಕೆಗಳನ್ನು ನಿಯೋಜಿಸುವ ಕುರಿತು ಚಿಂತಿಸಲಾಗುವುದು. ಸಮಗ್ರ ಸಮಾನ ಮನಸ್ಕ ಒಕ್ಕಲಿಗರ ಜಾಗೃತಿ ಕಾರ್ಯಕ್ರಮಗಳ ರಚನೆ ಕುರಿತು ಪೂರ್ವಭಾವಿ ವಿಮರ್ಶೆ ನಡೆಸಿ, ನಿಮ್ಮ ಪ್ರಬುದ್ಧ ಸೂಚನೆ ಮತ್ತು ಸಲಹೆಗಳನ್ನು ಸ್ವೀಕರಿಸಿ, ಎಲ್ಲರ ಒಮ್ಮತದಿಂದ ಮುಂದಿನ ಚಟುವಟಿಕೆಗಳನ್ನು ನಿಗದಿಪಡಿಸಿ, ಮಾಧ್ಯಮಗಳಿಗೆ ಮಾಹಿತಿ ನೀಡಿ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು.

ಈ ಪ್ರಕ್ರಿಯೆಯಲ್ಲಿ, ನಮ್ಮ ಸಂಪರ್ಕದಲ್ಲಿರುವ ಹಾಗೂ ಜಿಲ್ಲೆಯ ಎಲ್ಲಾ ಅಸಂಘಟಿತ ಮತ್ತು ಸಂಘಟಿತ ಸಮಾನ ಮನಸ್ಕರನ್ನು ಆಹ್ವಾನಿಸಿ, ಐಕ್ಯತೆಯಿಂದ ಮುನ್ನಡೆಯಲು ಸಹಕರಿಸಬೇಕೆಂದು ಕೋರುತ್ತೇವೆ.

ಇಂತಿ
ಕೆಂಪೇಗೌಡರ ಯುವ ಸಮಿತಿ (ರಿ)
ಒಕ್ಕಲಿಗರ ಮಹಾ ಒಕ್ಕೂಟ (ರಿ)

ಸಂಘಟನೆಗಳು ಬಲಗೊಳ್ಳುವುದು ಜನ ಸಾಮಾನ್ಯರ ಬೆಂಬಲದಿಂದ ಆದರೆ ಜನ ಸಾಮಾನ್ಯರು ನಮನ್ನ ಬೆಂಬಲಿಸುವುದು ಸಂಘಟನೆಯ ಚಿಂತನೆ ಮತ್ತು ಉದ್ದೇಶಗಳನ್ನ ಅವಲೋಕ...
20/07/2025

ಸಂಘಟನೆಗಳು ಬಲಗೊಳ್ಳುವುದು ಜನ ಸಾಮಾನ್ಯರ ಬೆಂಬಲದಿಂದ ಆದರೆ ಜನ ಸಾಮಾನ್ಯರು ನಮನ್ನ ಬೆಂಬಲಿಸುವುದು ಸಂಘಟನೆಯ ಚಿಂತನೆ ಮತ್ತು ಉದ್ದೇಶಗಳನ್ನ ಅವಲೋಕಿಸಿ ಇದಕ್ಕೆ ಒಂದು ಉತ್ತಮ ನಿದರ್ಶನ ನಮ್ಮ ಹೋಬಳಿಯ *ಮಠಪುರ* ಗ್ರಾಮದ ಸಮುದಾಯದ ಬಂಧುಗಳು💪🏻💪🏻💪🏻 ಹೌದು ಗ್ರಾಮದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂದು *ನಾಡಪ್ರಭು ಕೆಂಪೇಗೌಡ* ರ ಜಯಂತಿ ಆಚರಣೆ ಮಾಡಲಾಯಿತು ಕಳೆದ ಕೆಲವು ದಿನಗಳ ಹಿಂದೆ ಇದೇ ಗ್ರಾಮದಲ್ಲಿ *ಕೆಂಪೇಗೌಡರ ಯುವ ಸಮಿತಿ* ವತಿಯಿಂದ ಗ್ರಾಮಸಭೆ ಹಮ್ಮಿಕೊಂಡಾಗ ಗ್ರಾಮದ ಹಿರಿಯರು ಯುವಕರ ಜೊತೆ ಚರ್ಚಿಸಿ ಕಾರ್ಯಕ್ರಮ ನಡೆಸಲು ಕೋರಿದಾಗ ತುಂಬು ಹೃದಯದಿಂದ ಒಪ್ಪಿಕೊಂಡು ಇಂದು ಕಾರ್ಯಕ್ರಮವನ್ನು ನಡೆಸಿಕೊಟ್ಟ ಸಮಸ್ತ ಮಠಪುರ ಗ್ರಾಮಸ್ಥರಿಗೆ ಹೃದಯ ತುಂಬು ಧನ್ಯವಾದಗಳು
😊😊🙏🙏💪🏻💪🏻

ಇಂತಿ
ಕಾರ್ಯಕಾರಿಣಿ ಸದಸ್ಯರು
ಕೆಂಪೇಗೌಡರ ಯುವ ಸಮಿತಿ (ರಿ)
ವೇಮಗಲ್ ಕೋಲಾರ ಜಿಲ್ಲೆ

ಶ್ರೀ ಶ್ರೀ ಶ್ರೀ ಪರಮಪೂಜ್ಯ ಆದಿಚುಂಚನಗಿರಿ ಸಂಸ್ಥಾನ ಪೀಠ  ಶ್ರೀ ಜಗದ್ಗುರು ಡಾ|| ನಿರ್ಮಲಾನಂದನಾಥ ಮಹಸ್ವಾಮೀಜಿ ರವರಿಗೆ ಸಮಸ್ತ ವೇಮಗಲ್ ಹೋಬಳಿ ...
20/07/2025

ಶ್ರೀ ಶ್ರೀ ಶ್ರೀ ಪರಮಪೂಜ್ಯ ಆದಿಚುಂಚನಗಿರಿ ಸಂಸ್ಥಾನ ಪೀಠ ಶ್ರೀ ಜಗದ್ಗುರು ಡಾ|| ನಿರ್ಮಲಾನಂದನಾಥ ಮಹಸ್ವಾಮೀಜಿ ರವರಿಗೆ ಸಮಸ್ತ ವೇಮಗಲ್ ಹೋಬಳಿ ಜನತೆ ಹಾಗು ಕೆಂಪೇಗೌಡರ ಯುವ ಸಮಿತಿ (ರಿ) ವೇಮಗಲ್ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು.

ಕೆಂಪೇಗೌಡರ ಯುವ ಸಮಿತಿ(ರಿ) ವೇಮಗಲ್. ಕೋಲಾರ




ದಿನಾಂಕ 17-07-2025 ರಂದು ನಮ್ಮ ಕೆಂಪೇಗೌಡರ ಯುವ ಸಮಿತಿ ವತಿಯಿಂದ ಆದಿಚುಂಚನಗಿರಿ ಶಾಖಾ ಮಠ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ...
18/07/2025

ದಿನಾಂಕ 17-07-2025 ರಂದು ನಮ್ಮ ಕೆಂಪೇಗೌಡರ ಯುವ ಸಮಿತಿ ವತಿಯಿಂದ ಆದಿಚುಂಚನಗಿರಿ ಶಾಖಾ ಮಠ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಮಂಗಳನಾಥ ಸ್ವಾಮಿಜಿಯವರನ್ನು ಭೇಟಿ ಮಾಡಿ ಸಮಿತಿಯ ನೂತನ ಪದಾಧಿಕಾರಿಗಳ ಪರಿಚಯ ಮಾಡಿಸಿ ಆಶೀರ್ವಾದ ಪಡೆಯಲಾಯಿತು.🙏🙏🙏ಮತ್ತು ಸುದೀರ್ಘ ಚರ್ಚೆಯಲ್ಲಿ ನಮ್ಮ ಸಮಿತಿಯ ಸಮುದಾಯದ ಪರ ಸಾಮಾಜಿಕ ಪರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಸಲಹೆಗಳನ್ನು ಪಡೆಯಲಾಯಿತು ಶ್ರೀಗಳು ಮತ್ತು ಶ್ರೀ ಮಠ ಸದಾ ಕಾಲ ನಮ್ಮ ಸಮಿತಿಯ ಎಲ್ಲಾ ಕಾರ್ಯಾಕ್ರಮಗಳ ಜೊತೆ ನಿಲ್ಲುವ ಭರವಸೆ ನೀಡಿದರು

ಇಂತಿ
ಕೆಂಪೇಗೌಡರ ಯುವ ಸಮಿತಿ(ರಿ)
ಕಾರ್ಯಕಾರಿಣಿ ಸದಸ್ಯರು



Address

Kolar
563102

Website

Alerts

Be the first to know and let us send you an email when ಕೆಂಪೇಗೌಡ ಯುವ ಸಮಿತಿ ವೇಮಗಲ್. posts news and promotions. Your email address will not be used for any other purpose, and you can unsubscribe at any time.

Share