State Rural Development Committee Unit Bagalkot

State Rural Development Committee Unit Bagalkot Contact information, map and directions, contact form, opening hours, services, ratings, photos, videos and announcements from State Rural Development Committee Unit Bagalkot, Nonprofit Organization, Jamkhandi.

ಪತ್ರಿಕಾ ಮಿತ್ರರಿಗೆ ಧನ್ಯವಾದಗಳು. 21-09-2022
21/09/2022

ಪತ್ರಿಕಾ ಮಿತ್ರರಿಗೆ ಧನ್ಯವಾದಗಳು. 21-09-2022

21/09/2022
ಪೋಲೀಸ್ ಮತ್ತು ಗ್ರಾಮ ಪಂಚಾಯತಿಗಳ ಸಂಬಂಧ.ನಮ್ಮ ದೇಶದಲ್ಲಿ ಅನಂತಕಾಲದಿಂದ ಗ್ರಾಮ ಪಂಚಾಯತಿಗಳು ರಾಷ್ಟ್ರದ ಏಳಿಗೆಯಲ್ಲಿ ವಿವಿಧ ಪಾತ್ರವನ್ನು ವಹಿಸಿ...
04/08/2022

ಪೋಲೀಸ್ ಮತ್ತು ಗ್ರಾಮ ಪಂಚಾಯತಿಗಳ ಸಂಬಂಧ.

ನಮ್ಮ ದೇಶದಲ್ಲಿ ಅನಂತಕಾಲದಿಂದ ಗ್ರಾಮ ಪಂಚಾಯತಿಗಳು ರಾಷ್ಟ್ರದ ಏಳಿಗೆಯಲ್ಲಿ ವಿವಿಧ ಪಾತ್ರವನ್ನು ವಹಿಸಿವೆ. ಸ್ವಾತಂತ್ರ್ಯದ ನಂತರ ಈ ಗ್ರಾಮ ಪಂಚಾಯತಿಗಳೇ ಹಳ್ಳಿಗಳ ಆಡಳಿತವನ್ನು ನೋಡಿಕೊಳ್ಳುತ್ತಿವೆ. ದಿನೇ ದಿನೇ ಇವು ಬದಲಾಗು
ತಿದ್ದು ಸ್ಥಳೀಯ ಆಡಳಿತ, ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿವೆ.

ಆದ್ದರಿಂದ ಪೋಲೀಸರು ಈ ಗ್ರಾಮ ಪಂಚಾಯತಿಗಳ ಮಹತ್ವವನ್ನು ಅರಿತುಕೊಂಡು ಅವುಗಳ ಅಭಿವೃದ್ಧಿಗೆ ಸಾರ್ವಜನಿಕರು ಶ್ರಮಿಸುವಂತೆ ಮಾಡಿ ತಮ್ಮ ಎಲ್ಲಾ ರೀತಿಯ ಸಹಕಾರವನ್ನು ಪಂಚಾಯತಿಗಳಿಗೆ ನೀಡಬೇಕು.

ಬೀಟ್ ಕಾನ್ಸ್ ಟೇಬಲ್‌ಗಳು ಗ್ರಾಮ ಪಂಚಾಯಿತಿಯೊಡನೆ ಹೆಚ್ಚಿನ ಸಂಬಂಧ ಇಟ್ಟುಕೊಳ್ಳುವುದರ ಮೂಲಕ ಪೋಲೀಸರ ಮತ್ತು ಗ್ರಾಮ ಪಂಚಾಯತಿಯೊಡನೆ (ಗ್ರಾಮ ಜನತೆ) ಸಂಬಂಧ ಹತ್ತಿರ ಬರುತ್ತಿದೆ. ಪೋಲೀಸರ ದೈನಂದಿನ ಕರ್ತವ್ಯಗಳಲ್ಲಿ ಗ್ರಾಮ ಪಂಚಾಯತಿಗಳ ಸಹಕಾರವಾದ ಸುವ್ಯವಸ್ಥಿತ ಆಡಳಿತವನ್ನು ನಡೆಸಿಕೊಂಡು ಹೋಗುವುದು ಕಷ್ಟ. ಅದರಲ್ಲೂ ಈ ಸಂದರ್ಭಗಳಲ್ಲಿ ಗ್ರಾಮ ಪಂಚಾಯತಿಗಳು ಪೋಲೀಸರಿಗೆ ಸಕ್ರಿಯ ನೆರವನ್ನು ಕೊಡದ ಕಾರಣ . ಅಪರಾಧಗಳನ್ನು ತಡೆಗಟ್ಟುವುದು ಬಹಳ ಕಠಿಣವಾದ ಕೆಲಸ, ಆದ್ದರಿಂದ ಸಾರ್ವಜನಿಕರಿಗೆ ಇವೆರಡರ ಹೊಂದಾಣಿಕೆ ಮತ್ತು ಸೇವೆ ಅತ್ಯಗತ್ಯ. ಇದಲ್ಲದೆ ಪೋಲೀಸರ ಕರ್ತವ್ಯಗಳಾದ ಪಾನನಿರೋಧ, ಭ್ರಷ್ಟಾಚಾರ, ಜೂಜಾಡುವಿಕೆ ಮತ್ತು ಕಳ್ಳತನ ಇಂತಹ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವೇ ಇಲ್ಲ.

ಒಂದು ಸಣ್ಣ ವಿರುವ ಪೊಲೀಸ್ ಠಾಣೆಯ ದಳಕ್ಕೆ ಎಲ್ಲಾ ಹಳ್ಳಿಗಳಲ್ಲೂ ಈ ಎಲ್ಲಾ ಕೇಸುಗಳನ್ನು ಗ್ರಾಮ ಪಂಚಾಯತಿಗಳ ನೆರವಿಲ್ಲದೆ ಮಾಡುವುದು ಸಾಧ್ಯವೆ ? ಆದ್ದರಿಂದ ಪೋಲೀಸ್ ಠಾಣೆಯ ಮಟ್ಟದಲ್ಲಿ ಸರಿಯಾಗಿ ಅಪರಾಧ್ಯಾತಕ ನ್ಯಾಯದ ಆಡಳಿತ ವರ್ಗದವರ ಪಂಚಾಯತಿಗಳ ಆಡಳಿತ ವರ್ಗದವರ ಸೌಹಾರ್ದ ಸಂಬಂಧ ಅನಿವಾರ್ಯ, ಪೋಲಿಸ್ ಠಾಣೆಯ ಎಲ್ಲಾ ವರ್ಗದ ಅಧಿಕಾರಿಗಳು ಪಂಚಾಯತಿಯವರು ಯಾವ ಕಾಲದಲ್ಲಿ ಯಾವುದೇ ರೀತಿಯ ನೆರವನ್ನು ಕೇಳಿದರೂ ಪೋಲೀಸರು ಅಂತಹ ಸಹಾಯ ವನ್ನು ಮಾಡಲು ಸಿದ್ಧರಿರಬೇಕು,

ಗ್ರಾಮ ಪಂಚಾಯತಿಗಳ ಸ್ಥಳೀಯ ಗ್ರಾಮಸ್ಥರನ್ನು, ಪೋಲೀಸಿನವರಿಗೆ ಇವರು ಸಕಾಲದಲ್ಲಿ ನೀಡಬೇಕಾದ ಸಹಕಾರವನ್ನು ಕುರಿತು ಶಿಕ್ಷಣ ನೀಡಿ ಪೋಲೀಸರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸಬೇಕು.

ಗ್ರಾಮದ ಪ್ರಜೆಗಳು ಪೋಲೀಸರನ್ನು ಸಮಾಜದ ಹಿತೈಷಿಗಳು, ಸ್ನೇಹಿತರೆಂದು ಕಾಣಬೇಕು. ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ಭೇಟಿಯಾದಾಗ
ಅವರು ಗ್ರಾಮ ಪಂಚಾಯತಿಗಳ ಎಲ್ಲಾ ಸದಸ್ಯರೊಡನೆ ವ್ಯವಹರಿಸಿ ಅವರ ಕುಂದು ಕೊರತೆಗಳನ್ನು ವಿಚಾರಿಸಿ ಸುವ್ಯವಸ್ಥಿತ ಪೋಲೀಸ್ ಆಡಳಿತಕ್ಕೆ ದಾರಿ ಮಾಡಬೇಕು.

ಇದರಿಂದ ಗ್ರಾಮ ಪಂಚಾಯತಿಗಳ ಸದಸ್ಯರುಗಳೂ ಸಹ ಪೋಲಿಸರ ಮೇಲೆ ಅಭಿಮಾನವಿಟ್ಟು ಕೊಂಡು ಅವರ ನಿರಂತರ ಸಹಕಾರವನ್ನು ಇನ್ನೂ ಹೆಚ್ಚಿಸುತ್ತಾ ಹೋಗುತ್ತಾರೆ. ಇದರಿಂದ ಪೋಲೀಸರು ಗ್ರಾಮಾಂತರ ಪ್ರದೇಶಗಳಲ್ಲಿ ಸುಲಭವಾಗಿ ಜನಪ್ರಿಯರಾಗಿ ಪೋಲಿಸರ ಮೇಲಿರತಕ್ಕ ಕೆಟ್ಟ ಭಾವನೆಗಳನೆಲ್ಲಾ ತೊಡೆದು ಹಾಕಬಹುದು.

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ( ನೋಂ) ಕರ್ನಾಟಕ

State Rural Development Committee (R) Karnataka

ಎಲ್ಲರಿಗೂ ಸಾಮಾಜಿಕ ನ್ಯಾಯ
Social Justice for All

Address

Jamkhandi

Website

Alerts

Be the first to know and let us send you an email when State Rural Development Committee Unit Bagalkot posts news and promotions. Your email address will not be used for any other purpose, and you can unsubscribe at any time.

Contact The Organization

Send a message to State Rural Development Committee Unit Bagalkot:

Share