State Rural Development Committee R Karnataka Ilakala Unit

  • Home
  • India
  • Ilkal
  • State Rural Development Committee R Karnataka Ilakala Unit

State Rural Development Committee R Karnataka Ilakala Unit ಚಿನ್ನಪ್ಪ ಕುಂದರಗಿ
ಸಂಸ್ಥಾಪಕ ರಾಜ್ಯಾಧ್ಯಕ್ಷರು.
ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ( ನೋಂ) ಕರ್ನಾಟಕ

02/10/2022
ಗ್ರಾಮ ಸಭೆ ನಡೆದಾಗ ಮಾತ್ರ ಗ್ರಾಮಗಳು ಸಂಪೂರ್ಣ ಅಭಿವೃದ್ಧಿ ಹೊಂದಲು ಮಾತ್ರ ಸಾಧ್ಯ
01/10/2022

ಗ್ರಾಮ ಸಭೆ ನಡೆದಾಗ ಮಾತ್ರ ಗ್ರಾಮಗಳು ಸಂಪೂರ್ಣ ಅಭಿವೃದ್ಧಿ ಹೊಂದಲು ಮಾತ್ರ ಸಾಧ್ಯ

29/09/2022

ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ನಾವು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ( ನೋಂ) ಕರ್ನಾಟಕ ಅಂತ ಒಂದು ಸಂಘಟನೆ ರಚಿಸಿದ್ದೇವೆ.

ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರ ಮೋಸ ಸುಲಿಗೆ ಅತ್ಯಾಚಾರ, ವಂಚನೆ, ದಬ್ಬಾಳಿಕೆ, ವರದಕ್ಷಿಣೆ ಕಿರುಕುಳ, ಮೂಢನಂಬಿಕೆ, ಜಾತಿ ನಿಂದನೆ, ನಿರುದ್ಯೋಗ, ಬಡತನ, ರೈತರ ಸಮಸ್ಯೆ, ಅನ್ಯಾಯ, ಸರಕಾರಿ ಸೌಲಭ್ಯಗಳು ಸಿಗದೆ ವಂಚಿತರಾಗುವುದು. ಇನ್ನೂ ಅತಿ ಹೆಚ್ಚು ಸಮಸ್ಯೆಗಳಿಂದ ನಮ್ಮ ರಾಜ್ಯದ ಜನ ಬಳಲುತ್ತಿದ್ದಾರೆ ಹಾಗೂ ಕೆಲ ಸಮಸ್ಯೆಗಳನ್ನು ಎದುರಿಸಲಾಗದೆ ಕೆಲ ಕುಟುಂಬಗಳು ಬೀದಿಗೆ ಬಂದಿದ್ದು ಇವೆ. ಈ ಸಮಸ್ಯೆಗಳು ಮತ್ತು ಪಿಡುಗುಗಳನ್ನು ನಿರ್ಮೂಲನೆ ಮಾಡಲು ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ನಮ್ಮ ಸಂಘಟನೆಗೆ ಸೇರ್ಪಡೆಯಾಗಿ.

ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿಯೊಂದು ನಗರ ಹಾಗೂ ಗ್ರಾಮಗಳಿಂದ ಒಂದು ಅಥವಾ ಒಂದಕ್ಕಿಂಥ ಹೆಚ್ಚು ಜನರನ್ನು ಸೇರಿಸಿಕೊಂಡು ಒಂದು ಬಲಿಷ್ಠ ಸಂಘಟನೆಯನ್ನು ರಚಿಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದೇವೆ.ಈ ಸಂಘಟನೆಯು ಭ್ರಷ್ಟಾಚಾರ ನಡೆಸುವ ಪ್ರತಿಯೊಬ್ಬರ ವಿರುದ್ಧವಾಗಿರುತ್ತದೆ.

ನಮ್ಮ ಈ ಪ್ರಯತ್ನ ಯಶಸ್ವಿಯಾಗಬೇಕಾದರೆ ಈ ಸಂಘಟನೆಯಲ್ಲಿ ಸೇರುವ ಪ್ರತಿಯೊಬ್ಬರು ಕೂಡ ದೇಶದ ಏಳಿಗೆಗಾಗಿ ಪ್ರಯತ್ನಪಡುವ ವ್ಯಕ್ತಿಗಳಾಗಿರಬೇಕು.

ಬೇರೆ ವ್ಯಕ್ತಿಗಳ ಬಲವಂತವಿಲ್ಲದೇ ಈ ಸಂಘಟನೆಗೆ ಸೇರುವವರಾಗಿರಬೇಕು.

ತಮ್ಮ ತಮ್ಮ ಗ್ರಾಮಗಳಲ್ಲೂ ನಗರಗಳಲ್ಲೂ ನಡೆಯುವ ಭ್ರಷ್ಟಾಚಾರಗಳ ಬಗ್ಗೆ ಗಮನಹರಿಸುವ ವ್ಯಕ್ತಿಗಳಾಗಿರಬೇಕು.

ಇಂತಹಾ ವ್ಯಕ್ತಿಗಳೆಲ್ಲರೂ ಒಗ್ಗಟ್ಟಾಗಿ ಸೇರಿ ಒಂದು ಬಲಿಷ್ಠವಾದ ಸಂಘಟನೆ ರಚನೆಯಾದರೆ ನಮ್ಮ ಜಿಲ್ಲೆ ಹಾಗೂ ನಮ್ಮ ದೇಶವನ್ನು ಭ್ರಷ್ಟಾಚಾರದಿಂದ ದೂರವಿಡಬಹುದು.

ಈಗಾಗಲೇ ಕೆಲವು ಆಸಕ್ತ ಯುವಕರೊಂದಿಗೆ ಈ ವಿಷಯದ ಬಗ್ಗೆ ಹೇಳಿದಾಗ ನಮಗೆ ಬೆಂಬಲ ಸೂಚಿಸಿದ್ದಾರೆ ಹಾಗೂ ಅವರು ಕೂಡ ಈ ರೀತಿಯ ಒಂದು ಸಂಘಟನೆ ರಚಿಸಲು ಪ್ರಯತ್ನ ಪಡುತ್ತಿದ್ದೇವೆ ಎಂದು ಹೇಳಿ ಸಭೆ ಸೇರುವುದಾಗಿ ತಿಳಿಸಿದ್ದಾರೆ.ಇದು ನಮಗೆ ಇನ್ನೂ ಹೆಚ್ಚು ಧೈರ್ಯವನ್ನು ನೀಡಿದೆ.

ಆದ್ದರಿಂದ ಈ ಸಂಘಟನೆ ರಚನೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ರೂಪಿಸಿ ಈ ಸಮಿತಿಗೆ ಚಾಲನೆ ನೀಡಲಾಗಿದೆ ಆದರಿಂದ ಸಂಘಟನೆಗೆ ಸೇರ ಬಯಸುವ ವ್ಯಕ್ತಿಗಳು ನಿಮ್ಮ ನಿಮ್ಮ ತಾಲೂಕ ಅಧ್ಯಕ್ಷರನ್ನು ಸಂಪರ್ಕ ಮಾಡಿ.

ಚಿನ್ನಪ್ಪ ಕುಂದರಗಿ
ಸಂಸ್ಥಾಪಕ ರಾಜ್ಯಾಧ್ಯಕ್ಷರು.
ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ( ನೋಂ) ಕರ್ನಾಟಕ

State Rural Development Committee (R) Karnataka

ಎಲ್ಲರಿಗೂ ಸಾಮಾಜಿಕ ನ್ಯಾಯ
Social Justice for All

Address

Ilkal
587125

Telephone

+919353500060

Website

Alerts

Be the first to know and let us send you an email when State Rural Development Committee R Karnataka Ilakala Unit posts news and promotions. Your email address will not be used for any other purpose, and you can unsubscribe at any time.

Contact The Organization

Send a message to State Rural Development Committee R Karnataka Ilakala Unit:

Share