Billava Samaja Seva Sangha Hubli - Dharwad

Billava Samaja Seva Sangha Hubli - Dharwad ಒಂದೇ ಜಾತಿ, ಒಂದೇ ಮತ, ಒಂದೇ ದೇವರು.

ಕೇರಳ. ರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ 'ನಾರಾಯಣ ಗುರು,' ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, " ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು," ಎಂಬ ಸತ್ಯವಾಕ್ಯವನ್ನು. ಸಂಸ್ಕೃತ ಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆಂದು.

ಬಿಲ್ಲವ ಸಮಾಜ ಸೇವಾ ಸಂಘ (ರಿ)ಹುಬ್ಬಳ್ಳಿ ಧಾರವಾಡ ವತಿಯಿಂದ ದಿನಾಂಕ 31-08-2025 ರಂದು ಹಲಗಣೇಶ ದೇವಸ್ಥಾನ ವಿದ್ಯಾಪೀಠ  ಸಭಾಭವನ, ಶಾಂಭವಿ ನಗರ, ...
01/09/2025

ಬಿಲ್ಲವ ಸಮಾಜ ಸೇವಾ ಸಂಘ (ರಿ)
ಹುಬ್ಬಳ್ಳಿ ಧಾರವಾಡ ವತಿಯಿಂದ ದಿನಾಂಕ 31-08-2025 ರಂದು ಹಲಗಣೇಶ ದೇವಸ್ಥಾನ ವಿದ್ಯಾಪೀಠ ಸಭಾಭವನ, ಶಾಂಭವಿ ನಗರ, ವಿದ್ಯಾಗಿರಿ, ಧಾರವಾಡದಲ್ಲಿ ನಡೆದ ಶ್ರೀ ಸತ್ಯನಾರಾಯಣ ಮಹಾಪೂಜಾ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವ ಮತ್ತು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಧಾರವಾಡದ  ಶ್ರೀ ಸುರೇಶ್ ಪೂಜಾರಿ ಹಾಗೂ ಶ್ರೀಮತಿ ಸವಿತಾ ಪೂಜಾರಿ ದಂಪತಿಗಳ ಮಗಳಾದ ಶ್ರೀ ಪ್ರತಿಕ್ಷಾ ಎಸ್ ಪೂಜಾರಿ ಇವರು ಎಸ್.ಎಸ್.ಎಲ್.ಸಿ  ಪರೀಕ್...
02/05/2025

ಧಾರವಾಡದ ಶ್ರೀ ಸುರೇಶ್ ಪೂಜಾರಿ ಹಾಗೂ ಶ್ರೀಮತಿ ಸವಿತಾ ಪೂಜಾರಿ ದಂಪತಿಗಳ ಮಗಳಾದ ಶ್ರೀ ಪ್ರತಿಕ್ಷಾ ಎಸ್ ಪೂಜಾರಿ ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 587 ಅಂಕಗಳು ಹಾಗೂ ಶೇಕಡಾ 94% ಪಡೆದಿರುತ್ತಾರೆ.ಇವರು Presentation Girls' High School, Dharwad ವಿದ್ಯಾರ್ಥಿನಿ.

ಇವರಿಗೆ ಬಿಲ್ಲವ ಸಂಘ ಹುಬ್ಬಳ್ಳಿ ಧಾರವಾಡದ ವತಿಯಿಂದ ಹಾರ್ಧಿಕ ಅಭಿನಂದನೆಗಳು 💐💐ಹಾಗೂ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುವ ಬಿಲ್ಲವ ಸಮಾಜ ಸೇವಾ ಸಂಘ ಹುಬ್ಬಳ್ಳಿ ಧಾರವಾಡ.

ಹುಬ್ಬಳ್ಳಿಯ  ಶ್ರೀ ರಾಜು ಪೂಜಾರಿ ಹಾಗೂ ಶ್ರೀಮತಿ ಮಮತಾ ಪೂಜಾರಿ ದಂಪತಿಗಳ ಮಗನಾದ ಶ್ರೀ ಸುಮಿತ್ ಪೂಜಾರಿ ಇವರು ದ್ವಿತೀಯ ಪಿಯುಸಿ  ಪರೀಕ್ಷೆಯಲ್ಲಿ...
10/04/2025

ಹುಬ್ಬಳ್ಳಿಯ ಶ್ರೀ ರಾಜು ಪೂಜಾರಿ ಹಾಗೂ ಶ್ರೀಮತಿ ಮಮತಾ ಪೂಜಾರಿ ದಂಪತಿಗಳ ಮಗನಾದ ಶ್ರೀ ಸುಮಿತ್ ಪೂಜಾರಿ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 390 ಅಂಕಗಳು ಹಾಗೂ ಶೇಕಡಾ 65% ಪಡೆದಿರುತ್ತಾರೆ.ಇವರು MEDHA PU SCIENCE COLLEGE, HUBLI ವಿದ್ಯಾರ್ಥಿ.

ಇವರಿಗೆ ಬಿಲ್ಲವ ಸಂಘ ಹುಬ್ಬಳ್ಳಿ ಧಾರವಾಡದ ವತಿಯಿಂದ ಹಾರ್ಧಿಕ ಅಭಿನಂದನೆಗಳು 💐💐ಹಾಗೂ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುವ ಬಿಲ್ಲವ ಸಮಾಜ ಸೇವಾ ಸಂಘ ಹುಬ್ಬಳ್ಳಿ ಧಾರವಾಡ.

ಧಾರವಾಡದ ಶ್ರೀ ಗಿರೀಶ್ ಎಸ್ ಕೋಟ್ಯಾನ್ ಹಾಗೂ ಶ್ರೀಮತಿ ಜ್ಯೋತಿ ಜಿ ಕೋಟ್ಯಾನ್ ದಂಪತಿಗಳ ಮಗನಾದ ಶ್ರೀ ಶ್ರೀಶಾಂತ್ ಜಿ ಕೋಟ್ಯಾನ್ ಇವರು ದ್ವಿತೀಯ ಪ...
10/04/2025

ಧಾರವಾಡದ ಶ್ರೀ ಗಿರೀಶ್ ಎಸ್ ಕೋಟ್ಯಾನ್ ಹಾಗೂ ಶ್ರೀಮತಿ ಜ್ಯೋತಿ ಜಿ ಕೋಟ್ಯಾನ್ ದಂಪತಿಗಳ ಮಗನಾದ ಶ್ರೀ ಶ್ರೀಶಾಂತ್ ಜಿ ಕೋಟ್ಯಾನ್ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 422 ಅಂಕಗಳು ಹಾಗೂ ಶೇಕಡಾ 70% ಪಡೆದಿರುತ್ತಾರೆ.ಇವರು J S S COLLEGE DHARWAD ವಿದ್ಯಾರ್ಥಿ.

ಇವರಿಗೆ ಬಿಲ್ಲವ ಸಂಘ ಹುಬ್ಬಳ್ಳಿ ಧಾರವಾಡದ ವತಿಯಿಂದ ಹಾರ್ಧಿಕ ಅಭಿನಂದನೆಗಳು 💐💐ಹಾಗೂ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುವ ಬಿಲ್ಲವ ಸಮಾಜ ಸೇವಾ ಸಂಘ ಹುಬ್ಬಳ್ಳಿ ಧಾರವಾಡ.

ಧಾರವಾಡದ ಶ್ರೀ ಮೋಹನ್ ಬಿ ಪೂಜಾರಿ ಹಾಗೂ ಶ್ರೀಮತಿ ರೂಪ ಎಂ ಪೂಜಾರಿ ದಂಪತಿಗಳ ಮಗನಾದ ಯಶಸ್ ಪೂಜಾರಿ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞ...
09/04/2025

ಧಾರವಾಡದ ಶ್ರೀ ಮೋಹನ್ ಬಿ ಪೂಜಾರಿ ಹಾಗೂ ಶ್ರೀಮತಿ ರೂಪ ಎಂ ಪೂಜಾರಿ ದಂಪತಿಗಳ ಮಗನಾದ ಯಶಸ್ ಪೂಜಾರಿ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 571 ಅಂಕಗಳು ಹಾಗೂ ಶೇಕಡಾ 95% ಪಡೆದಿರುತ್ತಾರೆ.ಇವರು PRISM
PU SCIENCE COLLEGE DHARWAD ವಿದ್ಯಾರ್ಥಿ.

ಇವರಿಗೆ ಬಿಲ್ಲವ ಸಂಘ ಹುಬ್ಬಳ್ಳಿ ಧಾರವಾಡದ ವತಿಯಿಂದ ಹಾರ್ಧಿಕ ಅಭಿನಂದನೆಗಳು 💐💐 ಹಾಗೂ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುವ ಬಿಲ್ಲವ ಸಮಾಜ ಸೇವಾ ಸಂಘ ಹುಬ್ಬಳ್ಳಿ ಧಾರವಾಡ.

22/08/2024

170 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಪ್ರಯುಕ್ತ ಧಾರವಾಡದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ನಡೆದ
ವಿಶೇಷ ಉಪನ್ಯಾಸ ಶ್ರೀ ರತ್ನಾಕರ ಪೂಜಾರಿ

ಧಾರವಾಡ: ಬ್ರಹ್ಮಶ್ರೀ ನಾರಾಯಣ ಗುರು ಅವರು ಸಮಾಜದಲ್ಲಿನ ತಾರತಮ್ಯಗಳನ್ನು ನಿವಾರಿಸಲು ಜೀವನಪೂರ್ತಿ ಶ್ರಮಿಸಿದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ...
21/08/2024

ಧಾರವಾಡ: ಬ್ರಹ್ಮಶ್ರೀ ನಾರಾಯಣ ಗುರು ಅವರು ಸಮಾಜದಲ್ಲಿನ ತಾರತಮ್ಯಗಳನ್ನು ನಿವಾರಿಸಲು ಜೀವನಪೂರ್ತಿ ಶ್ರಮಿಸಿದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತೊತ್ಸವದಲ್ಲಿ ಅವರು ಮಾತನಾಡಿದರು. ನಾರಾಯಣ ಗುರು ಅವರು ಜಾತಿ ಪದ್ಧತಿ ನಿರ್ಮೂಲನೆಗೆ, ಸಮಾಜ ಸುಧಾರಣೆಗೆ ಶ್ರಮಿಸಿದರು. ಎಲ್ಲರೂ ಸಮಾನರು ಎಂದು ಅವರು ಪ್ರತಿಪಾದಿಸಿದರು. ಅವರು ಮಹಾಮಾನವತಾವಾದಿ ಎಂದರು.
ಮೇಯರ್ ರಾಮಪ್ಪ ಬಡಿಗೇರ ಮಾತನಾಡಿ, ನಾರಾಯಣಗುರು ಅವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ತತ್ವ ಚಿಂತನೆಗಳನ್ನು ಪಾಲಿಸಬೇಕು ಎಂದು ಹೇಳಿದರು.
ಹುಬ್ಬಳ್ಳಿಯ ರೇವಡಿಹಾಳದ ದಯಾನಂದ ವಿದ್ಯಾರಣ್ಯ ಭಾರತಿ ಶಾಲೆಯ ಆಡಳಿತ ಅಧಿಕಾರಿ ರತ್ನಾಕರ ಪೂಜಾರಿ ಅವರು ನಾರಾಯಣ ಗುರು ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಆರ್ಯ ಈಡಿಗ ಸಂಘದ ಜಿಲ್ಲಾ
ಘಟಕದ ಅಧ್ಯಕ್ಷ ಚಂದ್ರಶೇಖರ ಢವಳಗಿ, ಹುಬ್ಬಳ್ಳಿ-ಧಾರವಾಡ ಹಿತವರ್ಧಕ ಸಂಘದ ಅಧ್ಯಕ್ಷ ತಿಮ್ಮಪ್ಪ. ಡಿ ನಾಯ್ಕ, ಹುಬ್ಬಳ್ಳಿ ಧಾರವಾಡ ಬಿಲ್ಲವ ಸಂಘದ ಸಲಹಾ ಮಂಡಳಿ ಹಿರಿಯ ಸದಸ್ಯರಾದ ಶಂಕರ ಕೋಟ್ಯಾನ್, ಬಸವರಾಜ ಈಳಗೇರ್, ಮಂಜುನಾಥ ಈಳಗೇರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೇರಿ, ಆರತಿ ದೇವಶಿಕಾಮಣಿ ಪಾಲ್ಗೊಂಡಿದ್ದರು.

ಹುಬ್ಬಳ್ಳಿ ತಹಶೀಲ್ದಾ‌ರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತ ವತಿಯಿಂದ 170 ನೇ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮವನ್ನು ಬ್ರ...
21/08/2024

ಹುಬ್ಬಳ್ಳಿ ತಹಶೀಲ್ದಾ‌ರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತ ವತಿಯಿಂದ 170 ನೇ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಿ, ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಅಪರ ತಹಶೀಲ್ದಾರ್ ಜಿ.ವಿ. ಪಾಟೀಲ ವಹಿಸಿದ್ದರು. ಅಪರ ತಹಶೀಲ್ದಾರ್ ಶಿವಾನಂದ ಹುಬ್ಬಳ್ಳಿ, ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ಸಿ.ಆ‌ರ್.ಡವಳಗಿ,ಹುಬ್ಬಳ್ಳಿ ಧಾರವಾಡ ನಾಮಧಾರಿ ಹಿತವರ್ಧಕ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ನಾಯ್ಕ್,
ಹುಬ್ಬಳ್ಳಿ ಧಾರವಾಡ ಬಿಲ್ಲವ ಸಂಘದ ಉಪಾಧ್ಯಕ್ಷರಾದ ವಿಜಯ ಪೂಜಾರಿ, ಹಾಗೂ ಉದಯ ನಾಯ್ಕ, ಕೃಷ್ಣ ಪೂಜಾರಿ, ಮಂಜುನಾಥ ಈಳಿಗೇರ, ವಿವೇಕ ಪೂಜಾರಿ, ರೇಖಾ ಈಳಿಗೇರ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ದಿನಾಂಕ 20-08-2024 ರ ಮಂಗಳವಾರದಂದು ಸರ್ಕಾರದ ವತಿಯಿಂದ ಬ್ರಹ್ಮಶ್ರೀ ನಾರಾಯಣ  ಗುರುಗಳ 170 ನೇ ಜಯಂತೋತ್ಸವವನ್ನು ಧಾರವಾಡದ ಕರ್ನಾಟಕ ಕುಲಪುರೋಹ...
16/08/2024

ದಿನಾಂಕ 20-08-2024 ರ ಮಂಗಳವಾರದಂದು ಸರ್ಕಾರದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತೋತ್ಸವವನ್ನು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆದುದರಿಂದ ಸಮಸ್ತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿಸುತ್ತೇನೆ.

ಅಧ್ಯಕ್ಷರು
ಬಿಲ್ಲವ ಸಮಾಜ ಸೇವಾ ಸಂಘ
ಹುಬ್ಬಳ್ಳಿ-ಧಾರವಾಡ

ಅಭಿನಂದನೆಗಳು 💐💐ಧ್ಯಾನ್ ಪೂಜಾರಿ
11/05/2024

ಅಭಿನಂದನೆಗಳು 💐💐
ಧ್ಯಾನ್ ಪೂಜಾರಿ

ಅಭಿನಂದನೆಗಳು 💐💐ದೀಪಿಕಾ ವಿಜಯ ಪೂಜಾರಿ
11/05/2024

ಅಭಿನಂದನೆಗಳು 💐💐
ದೀಪಿಕಾ ವಿಜಯ ಪೂಜಾರಿ

Address

Hubli

Website

Alerts

Be the first to know and let us send you an email when Billava Samaja Seva Sangha Hubli - Dharwad posts news and promotions. Your email address will not be used for any other purpose, and you can unsubscribe at any time.

Contact The Organization

Send a message to Billava Samaja Seva Sangha Hubli - Dharwad:

Share