Jayapriya Medical Foundation

Jayapriya Medical Foundation We are a non-profit organization
to address the eye care needs of the rural and urban communities.

🌟ಉತ್ತಮ ಕಾರ್ಯಕ್ಕೆ - ಅತ್ಯುನ್ನತ ಪ್ರಶಸ್ತಿ.ಜಯಪ್ರಿಯಾ ಆಸ್ಪತ್ರೆಯ ನೆಚ್ಚಿನ ENT ವೈದ್ಯರು ಮತ್ತು ಜಯಪ್ರಿಯಾ ವೃತ್ತಿಪರ ತರಬೇತಿ ಕೇಂದ್ರದ ಮೂಲಕ...
05/05/2026

🌟ಉತ್ತಮ ಕಾರ್ಯಕ್ಕೆ - ಅತ್ಯುನ್ನತ ಪ್ರಶಸ್ತಿ.
ಜಯಪ್ರಿಯಾ ಆಸ್ಪತ್ರೆಯ ನೆಚ್ಚಿನ ENT ವೈದ್ಯರು ಮತ್ತು ಜಯಪ್ರಿಯಾ ವೃತ್ತಿಪರ ತರಬೇತಿ ಕೇಂದ್ರದ ಮೂಲಕ ಮಹಿಳಾ ಸಬಲೀಕರಣದ ಮಹತ್ತರ ಉದ್ದೇಶದೊಂದಿಗೆ ಜನಸೇವೆಯ ಹಾದಿಯಲ್ಲಿ ಸೇವೆ ಸಲ್ಲಿಸುತ್ತಿರುವ
ಡಾ. ಪ್ರಿಯಾ.ವಿ.ಕಟ್ಟಿ ಅವರಿಗೆ, ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ ಲಭಿಸಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.💐🎊🎉
ನಿಮ್ಮ ಸೇವೆ ಎಲ್ಲರಿಗೂ ಪ್ರೇರಣೆಯಾಗಲಿ.✨

ಜಯಪ್ರಿಯಾ ಆಸ್ಪತ್ರೆಯ ಗರಿಮೆ ಹೆಚ್ಚಿಸಿದ ಹೆಮ್ಮೆಯ ಕ್ಷಣ✨ವಂದೇ ಮಾತರಂ ನಾಮಫಲಕದ ಅಡಿಯಲ್ಲಿ ಜಯಪ್ರಿಯಾ ಆಸ್ಪತ್ರೆಯ ವತಿಯಿಂದ ಪ್ರತೀ ತಿಂಗಳ 9ನೇ ತ...
11/04/2026

ಜಯಪ್ರಿಯಾ ಆಸ್ಪತ್ರೆಯ ಗರಿಮೆ ಹೆಚ್ಚಿಸಿದ ಹೆಮ್ಮೆಯ ಕ್ಷಣ✨
ವಂದೇ ಮಾತರಂ ನಾಮಫಲಕದ ಅಡಿಯಲ್ಲಿ ಜಯಪ್ರಿಯಾ ಆಸ್ಪತ್ರೆಯ ವತಿಯಿಂದ ಪ್ರತೀ ತಿಂಗಳ 9ನೇ ತಾರೀಖಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ಕಿವಿ–ಮೂಗು–ಗಂಟಲು ತಪಾಸಣಾ ಶಿಬಿರವನ್ನು ನಿರಂತರವಾಗಿ ನಡೆಸುತ್ತಿರುವ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಅಧ್ಯಕ್ಷೆ ಹಾಗೂ ENT ತಜ್ಞರು, ರೋಗಿ ಕೇಂದ್ರಿತ ಆರೈಕೆಯಲ್ಲಿ ಹೆಸರುವಾಸಿಯಾಗಿರುವ ಡಾ.ಪ್ರಿಯಾ ಕಟ್ಟಿ ಅವರನ್ನು ಇಂದು ಶ್ರೇಯಾ ಜನ ಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷರಾದ ಶ್ರೀ ವಿ. ಜಿ. ಪಾಟೀಲ್ ಅವರು ಸ್ಮರಣಿಕೆಯನ್ನು ನೀಡಿ, ಸನ್ಮಾನಿಸಿ ಶುಭಾಶಯಗಳನ್ನು ತಿಳಿಸಿದರು.

👁️ ದೃಷ್ಟಿ ಸೇವೆಯ ದೀಪ – ಜ್ಞಾನ ಹಂಚುವ ಹಾದಿ 🌿  👁️‍🗨️“Optometry Insights 2026” – ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಒದಗಿಸುವ...
21/03/2026

👁️ ದೃಷ್ಟಿ ಸೇವೆಯ ದೀಪ – ಜ್ಞಾನ ಹಂಚುವ ಹಾದಿ 🌿
👁️‍🗨️“Optometry Insights 2026” – ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಒದಗಿಸುವ ಕುರಿತು, ವಿಚಾರಗೋಷ್ಠಿ ಮತ್ತು ಸಮಾಲೋಚನೆಯ ಒಂದು ದಿನದ CME ಕಾರ್ಯಕ್ರಮ.
📅 ದಿನಾಂಕ: 22 ಮಾರ್ಚ್ 2026, ಭಾನುವಾರ
🕘 ಸಮಯ: ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ
📍 ಸ್ಥಳ: IMA ಹಾಲ್, ಹುಬ್ಬಳ್ಳಿ
Insights #ಕಣ್ಣಿನ ಆರೋಗ್ಯ #ದೃಷ್ಟಿ ರಕ್ಷಣೆ #ಜಯಪ್ರಿಯಾ ಕಣ್ಣಿನ ಆಸ್ಪತ್ರೆ

ಡಾ. ಅಶ್ವಿನಿ ಪಾಟೀಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು✨🎊🎉ನಿಮ್ಮ ಪರಿಶ್ರಮ, ಸೇವಾ ಮನೋಭಾವ ಮತ್ತು ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಅಮೂ...
03/03/2026

ಡಾ. ಅಶ್ವಿನಿ ಪಾಟೀಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು✨🎊🎉

ನಿಮ್ಮ ಪರಿಶ್ರಮ, ಸೇವಾ ಮನೋಭಾವ ಮತ್ತು ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಅಮೂಲ್ಯ ಕೊಡುಗೆಗಾಗಿ "ಕರುನಾಡು ಸೇವಾ ರತ್ನ" ಪ್ರಶಸ್ತಿಯನ್ನು ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಮ್ಮ ಸಾಧನೆಗೆ ಹೃದಯಪೂರ್ವಕ ಧನ್ಯವಾದಗಳು.
ನಿಮ್ಮ ಸೇವಾ ಪಥವು ಇನ್ನಷ್ಟು ಜನರಿಗೆ ಬೆಳಕು ನೀಡಲಿ, ನಿಮ್ಮ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಹಾರೈಕೆ.😊🤝

✨ Celebrating a Proud Milestone ✨  Our Jayapriya Medical Foundation President and ENT specialist Dr. Priya V. Katti has ...
14/02/2026

✨ Celebrating a Proud Milestone ✨
Our Jayapriya Medical Foundation President and ENT specialist Dr. Priya V. Katti has been honored with the Best Women Social Activist Award at the International Conference on Recent Trends in Multidisciplinary Research, Karnataka.
🌸 Mam's dedication to social service and commitment to uplifting the community have earned her this prestigious recognition. We extend our heartfelt congratulations and best wishes for her continued journey of inspiration. 🌸

ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ, ನಿರಂತರ ಸೇವೆ ಸಲ್ಲಿಸುತ್ತಿರುವ ನಿಮಗೆ, ವಿಜಯವಾಣಿಯ ಈ ಗೌರವ, ನಿಜವಾದ ಸಾಧನೆಯ ಸಂಕೇತ. ನೀವು ನಮ್ಮ ಹೆಮ್ಮೆ🙏🏽✨...
01/01/2026

ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ, ನಿರಂತರ ಸೇವೆ ಸಲ್ಲಿಸುತ್ತಿರುವ ನಿಮಗೆ, ವಿಜಯವಾಣಿಯ ಈ ಗೌರವ, ನಿಜವಾದ ಸಾಧನೆಯ ಸಂಕೇತ.
ನೀವು ನಮ್ಮ ಹೆಮ್ಮೆ🙏🏽✨ ಅಭಿನಂದನೆಗಳು ಡಾ. ವೆಂಕಟರಾಮ್ ಕಟ್ಟಿ ಸರ್.

✨ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ಹೊಸ ಹೆಜ್ಜೆ🎊ಇಂದು, ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ 11ನೆಯ ದೃಷ್ಟಿ ಕೇಂದ್ರ "ರಾಹಿ" ದೃಷ್ಟಿ ಕೇಂದ್ರವನ್ನು, ಧಾರ...
19/12/2025

✨ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ಹೊಸ ಹೆಜ್ಜೆ🎊
ಇಂದು, ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ 11ನೆಯ ದೃಷ್ಟಿ ಕೇಂದ್ರ "ರಾಹಿ" ದೃಷ್ಟಿ ಕೇಂದ್ರವನ್ನು, ಧಾರವಾಡದ ಕೋಟೂರಿನ ಮುಲ್ಲಾ ಧಾಬಾದಲ್ಲಿ ಡಾ.ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಲಾಯಿತು. ಇದು ವಿಶೇಷವಾಗಿ ಟ್ರಕ್ ಚಾಲಕರ ಕಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ, ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ, ಉಚಿತ ಬಿಪಿ ತಪಾಸಣೆ ಸೇವೆಯನ್ನು ಒದಗಿಸುವ ಧ್ಯೇಯದೊಂದಿಗೆ ಈ "ರಾಹಿ" ದೃಷ್ಟಿಕೇಂದ್ರವನ್ನು ತೆರೆಯಲಾಗಿದೆ.

💡 Empower. Connect. Serve.  🎓 BSW & MSW Conference 2025 – One Day CME Programme  🗓️ Monday, 17 November | 10 AM – 5 PM  ...
11/11/2025

💡 Empower. Connect. Serve.
🎓 BSW & MSW Conference 2025 – One Day CME Programme
🗓️ Monday, 17 November | 10 AM – 5 PM
Jayapriya Eye Hospital, Medical Foundation & Vocational Training Centre invite all passionate social workers to a transformative day of learning and collaboration. Let’s build bridges between hospitals and communities for better eye health across Karnataka.
✅ Free Registration (Compulsory)
🎖️ Participation Certificate for All Delegates
📞 : 0836-2002121 / 90355 07047
🌐 www.jayapriyaeyehospital.com
programme ,MSW conference
matters
Eye Hospital

🎉 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಡೆದ ಗೌರವ ಸಮಾರಂಭದಲ್ಲಿ, ನಮ್ಮ ✨ ಜಯಪ್ರಿಯಾ ಕಣ್ಣಿನ ಆಸ...
04/11/2025

🎉 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಡೆದ ಗೌರವ ಸಮಾರಂಭದಲ್ಲಿ, ನಮ್ಮ ✨ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಮತ್ತು 👁️ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಹುಬ್ಬಳ್ಳಿ ಅವರ ಸೇವೆ ಗುರುತಿಸಲ್ಪಟ್ಟಿದೆ! 🏆
ಸಮಾಜಸೇವೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೀಡಿದ ನಿಸ್ವಾರ್ಥ ಸೇವೆಗಾಗಿ, ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಪರವಾಗಿ ನಮ್ಮ ನೇತ್ರತಜ್ಞರಾದ ಡಾ. ಅನುಜಾ ದೇಸಾಯಿ ಅವರಿಗೆ “ಧೀಮಂತ ಪ್ರಶಸ್ತಿ” ಕೊಟ್ಟು ಗೌರವಿಸಲಾಗಿದೆ. 🙏 ಅವರು ಇದುವರೆಗೆ 25,000 ಕ್ಕಿಂತ ಹೆಚ್ಚು ಕಣ್ಣಿನ ಪೊರೆ, ಗ್ಲೋಕೋಮಾ, ಚಿಕ್ಕ ಮಕ್ಕಳ ಕಣ್ಣಿನ ಪೊರೆ, IPCL, RLE ಮುಂತಾದ ಕಣ್ಣಿನ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ನಮ್ಮ ಸಂಸ್ಥೆಯು 2,000ಕ್ಕೂ ಹೆಚ್ಚು ಕಣ್ಣಿನ ಶಿಬಿರಗಳು, 11 ಲಕ್ಷಕ್ಕೂ ಹೆಚ್ಚು ಜನರ ತಪಾಸಣೆ, 80,000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು — ಇದು ನಮ್ಮ ಜನಸೇವೆಯ ನಿಷ್ಠೆ ಮತ್ತು ಬದ್ಧತೆಯ ಪ್ರತೀಕ.
ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು — ನಿಮ್ಮ ಪ್ರೋತ್ಸಾಹವೇ ನಮ್ಮ ಶಕ್ತಿ! 🌟
“ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದು ನಮ್ಮ ಕನಸು.” 🌿

👁️ ವಿಶ್ವ ದೃಷ್ಟಿ ದಿನ – ನಿಮ್ಮ ಕಣ್ಣನ್ನು ಪ್ರೀತಿಸಿ  "ಈ ಜಗತ್ತಿನಲ್ಲಿ ನೋಡುವುದಕ್ಕೆ ಎಷ್ಟೋ ಸುಂದರತೆ ಇದೆ. ಆದರೆ, ಅದನ್ನು ಅನುಭವಿಸಲು ನಿಮ್...
09/10/2025

👁️ ವಿಶ್ವ ದೃಷ್ಟಿ ದಿನ – ನಿಮ್ಮ ಕಣ್ಣನ್ನು ಪ್ರೀತಿಸಿ
"ಈ ಜಗತ್ತಿನಲ್ಲಿ ನೋಡುವುದಕ್ಕೆ ಎಷ್ಟೋ ಸುಂದರತೆ ಇದೆ. ಆದರೆ, ಅದನ್ನು ಅನುಭವಿಸಲು ನಿಮ್ಮ ಕಣ್ಣುಗಳು ಆರೋಗ್ಯವಾಗಿರಬೇಕು.ನಿಮ್ಮ ದೃಷ್ಟಿಯು ನಿಮ್ಮ ಜೀವನದ ಬೆಳಕು. ಅದನ್ನು ಕಾಪಾಡಿ, ಪ್ರೀತಿಸಿ, ಸಂರಕ್ಷಿಸಿ.🩵
📞 0836 - 2251767
🌐 www.jayapriyahospitalhubli.org
🏥 ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಬೈಲಪ್ಪನವರ್ ನಗರ, ಹುಬ್ಬಳ್ಳಿ.
#ವಿಶ್ವ ದೃಷ್ಟಿ ದಿನ #ಕಣ್ಣಿನ ಆರೋಗ್ಯ
#ಸ್ಪಷ್ಟ ದೃಷ್ಟಿ #ದೃಷ್ಟಿ ರಕ್ಷಣೆ
#ಜಯಪ್ರಿಯಾ ಕಣ್ಣಿನ ಆಸ್ಪತ್ರೆ

Address

Jayapriya Hospital, Deshpande Nagar Rd, Near Canara Bank Circle Office, Bailappanavar Nagar, Vidya Nagar, Hubballi
Hubli
580029

Opening Hours

Monday 9am - 8pm
Tuesday 9am - 8pm
Wednesday 9am - 8pm
Thursday 9am - 8pm
Friday 9am - 8pm
Saturday 9am - 8pm

Alerts

Be the first to know and let us send you an email when Jayapriya Medical Foundation posts news and promotions. Your email address will not be used for any other purpose, and you can unsubscribe at any time.

Share