20/03/2026
“ಸೇವೆವೇ ಸರ್ವೋತ್ತಮ ಪೂಜೆ”
ಯುಗಾದಿ ಹಬ್ಬದ ಪವಿತ್ರ ಸಂದರ್ಭದಲ್ಲಿ, ವಿ ಎ ಕೆ ಫೌಂಡೇಶನ್ ವತಿಯಿಂದ ಮಾನವೀಯತೆ ಮತ್ತು ಸೇವಾಭಾವದ ಸುಂದರ ಸ್ಪರ್ಶ ಮೂಡಿಸಲಾಯಿತು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಪ್ರೀತಿಯೊಂದಿಗೆ ಪಲಾವ ವಿತರಿಸಿ, ಅವರ ಮುಖಗಳಲ್ಲಿ ನಗು ಮೂಡಿಸಲಾಯಿತು.
ನಂತರ ವಿದ್ಯಾನಗರದ ಬಿ.ವಿ.ಬಿ ಕಾಲೇಜ್ ಸುತ್ತಮುತ್ತಲಿನ ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಸಹ ಅನ್ನಸಂತರ್ಪಣೆ ಮಾಡಿ, ಹಬ್ಬದ ಸಿಹಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಾಯಿತು.
ಈ ಸೇವಾ ಕಾರ್ಯವು ಕೇವಲ ಆಹಾರ ವಿತರಣೆಯಲ್ಲ, ಯುಗಾದಿಯ ಸಾರ್ಥಕತೆಯನ್ನು ತೋರಿಸುವ ಮಾನವೀಯತೆಯ ಹಬ್ಬವಾಗಿದ್ದು, “ಸೇವೆವೇ ಸರ್ವೋತ್ತಮ ಪೂಜೆ” ಎಂಬ ಸಂದೇಶವನ್ನು ಜೀವಂತಗೊಳಿಸಿದೆ.
ವೆಂಕಟೇಶ್ ಕಾಟವೆ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯವು ಯುಗಾದಿಯ ಹಬ್ಬವನ್ನು ಮತ್ತಷ್ಟು ಅರ್ಥಪೂರ್ಣ ಹಾಗೂ ಅದ್ಭುತವಾಗಿಸಿದೆ. 🌿