pustaka.prapancha

pustaka.prapancha ಕನ್ನಡ ಪುಸ್ತಕ ಕಣಜ,ಕಥೆ,ಕವನ ಜೀವನಾನುಭವಗಳ?

ಶುಭರಾತ್ರಿ...‌⏬ನಮ್ಮನ್ನು ಫಾಲೋ ಮಾಡಿ Notification on ಮಾಡ್ಕೋಳಿ.FOLLOW 💟 .prapanchaFOLLOW 💟 .prapanchaFOLLOW 💟 .prapancha👆ಈ qu...
24/06/2025

ಶುಭರಾತ್ರಿ...‌


ನಮ್ಮನ್ನು ಫಾಲೋ ಮಾಡಿ Notification on ಮಾಡ್ಕೋಳಿ.
FOLLOW 💟 .prapancha
FOLLOW 💟 .prapancha
FOLLOW 💟 .prapancha
👆ಈ quotes ನಿಮಗೆ ಇಷ್ಟವಾಗಿದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಿ
ಇದೆ ತರಹದ ಮೋಟಿವೇಶನ್ quotes ಮತ್ತು ಜೀವನಾನುಭವಗಳಿಗಾಗಿ ಹಳೆಯ ಪೋಸ್ಟ್ಗಳನ್ನು ಒಮ್ಮೆ ನೋಡಿ, ಪ್ರೋತ್ಸಾಹಿಸಿ 😍🥰

OK
ೂರ್ಣಚಂದ್ರ ಬದುಕು

ಶುಭೋದಯ...‌⏬ನಮ್ಮನ್ನು ಫಾಲೋ ಮಾಡಿ Notification on ಮಾಡ್ಕೋಳಿ.FOLLOW 💟 .prapanchaFOLLOW 💟 .prapanchaFOLLOW 💟 .prapancha👆ಈ quote...
24/06/2025

ಶುಭೋದಯ...‌


ನಮ್ಮನ್ನು ಫಾಲೋ ಮಾಡಿ Notification on ಮಾಡ್ಕೋಳಿ.
FOLLOW 💟 .prapancha
FOLLOW 💟 .prapancha
FOLLOW 💟 .prapancha
👆ಈ quotes ನಿಮಗೆ ಇಷ್ಟವಾಗಿದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಿ
ಇದೆ ತರಹದ ಮೋಟಿವೇಶನ್ quotes ಮತ್ತು ಜೀವನಾನುಭವಗಳಿಗಾಗಿ ಹಳೆಯ ಪೋಸ್ಟ್ಗಳನ್ನು ಒಮ್ಮೆ ನೋಡಿ, ಪ್ರೋತ್ಸಾಹಿಸಿ 😍🥰

OK
ೂರ್ಣಚಂದ್ರ ಬದುಕು

ರಾಜಕಾರಣಿಗಳ ಆಟ, ರೈತರ ಕಣ್ಣೀರು ಮತ್ತು ಒಂದು ಲಕ್ಷ ಕೋಟಿಯ ಪ್ರಶ್ನೆಉತ್ತರ ಕರ್ನಾಟಕದ ಆರು ಜಿಲ್ಲೆಗಳ ಬದುಕನ್ನು ಬದಲಿಸಬಲ್ಲ ಒಂದು ಬೃಹತ್ ಯೋಜನೆ...
23/06/2025

ರಾಜಕಾರಣಿಗಳ ಆಟ, ರೈತರ ಕಣ್ಣೀರು ಮತ್ತು ಒಂದು ಲಕ್ಷ ಕೋಟಿಯ ಪ್ರಶ್ನೆ

ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಬದುಕನ್ನು ಬದಲಿಸಬಲ್ಲ ಒಂದು ಬೃಹತ್ ಯೋಜನೆ. ಕೋಟ್ಯಂತರ ಜನರ ಕಣ್ಣಲ್ಲಿ ಭರವಸೆಯ ಬೆಳಕಾಗಬೇಕಿದ್ದ ಒಂದು ಮಹಾನ್ ಕನಸು. ನ್ಯಾಯಮಂಡಳಿಯ ಅಂಗಳದಲ್ಲಿ ಗೆದ್ದು, ರಾಜಕಾರಣದ ಅಂಗಳದಲ್ಲಿ ಸೋತು ಸುಣ್ಣವಾಗಿ ಬಿದ್ದಿರುವ ಒಂದು ದುರಂತ ಕಥೆ. ಇದು ಆಲಮಟ್ಟಿ ಅಣೆಕಟ್ಟಿನ ಎತ್ತರ ಏರಿಕೆಯ ಮುಗಿಯದ ವ್ಯಥೆ. ಒಂದು ದಶಕದಿಂದ ಈ ಯೋಜನೆ ಉತ್ತರ ಕರ್ನಾಟಕದ ಜನರ ಪಾಲಿಗೆ ಭರವಸೆಯಾಗಿಯೇ ಉಳಿದಿದ್ದರೆ, ಆಳುವವರ ಪಾಲಿಗೆ ಅದೊಂದು ಚದುರಂಗದಾಟದ ಕಾಯಿ ಮಾತ್ರವಾಗಿದೆ.

ಒಂದು ನೋಟದಲ್ಲಿ ವಾಸ್ತವ

ಆರ್ಥಿಕ ನಷ್ಟ: ಕಳೆದ 12 ವರ್ಷಗಳ ವಿಳಂಬದಿಂದಾಗಿ, ಯೋಜನೆಯ ವೆಚ್ಚವು ದಿನವೊಂದಕ್ಕೆ ಸರಾಸರಿ ₹18 ಕೋಟಿಯಷ್ಟು ಹೆಚ್ಚಾಗಿದೆ.

ಸಂಗ್ರಹಣಾ ಸಾಮರ್ಥ್ಯ: ಪೂರ್ಣಗೊಂಡಾಗ ಆಲಮಟ್ಟಿಯ ಸಂಗ್ರಹಣಾ ಸಾಮರ್ಥ್ಯ (ಸುಮಾರು 222 ಟಿಎಂಸಿ ಅಡಿ) ಕನ್ನಂಬಾಡಿ ಕಟ್ಟೆ (KRS) ಸಾಮರ್ಥ್ಯದ (49.45 ಟಿಎಂಸಿ ಅಡಿ) ನಾಲ್ಕೂವರೆ ಪಟ್ಟು ಹೆಚ್ಚಾಗಲಿದೆ.

ವ್ಯಾಪ್ತಿ: ಯೋಜನೆಯಿಂದ ಮುಳುಗಡೆಯಾಗಲಿರುವ 1.3 ಲಕ್ಷ ಎಕರೆ ಭೂಮಿಯು, ಬೆಂಗಳೂರು ನಗರದ ಒಟ್ಟು ವಿಸ್ತೀರ್ಣದ ಶೇ. 70ಕ್ಕಿಂತ ಹೆಚ್ಚಾಗಿದೆ.

1. ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ

ಆಲಮಟ್ಟಿ ಎತ್ತರ 524 ಮೀಟರ್‌ಗೆ ಏರಿದ್ದರೆ ಏನಾಗುತ್ತಿತ್ತು?

ಇದು ಕೇವಲ ಅಂಕಿ-ಅಂಶಗಳ ಆಟವಲ್ಲ. ಇದು ಬಾಗಲಕೋಟೆಯ ರೈತನ ಮಗಳ ಮದುವೆಯ ಖರ್ಚು, ರಾಯಚೂರಿನ ಯುವಕನ ಬೆಂಗಳೂರು ವಲಸೆ ತಪ್ಪಿಸುವ ದಾರಿ, ಯಾದಗಿರಿಯ ತಾಯಿಯೊಬ್ಬಳ ಮುಖದಲ್ಲಿ ನಗು ತರಿಸುವ ಭರವಸೆ.

15 ಲಕ್ಷ ಎಕರೆ ಭೂಮಿ ಹಸಿರಾಗುತ್ತಿತ್ತು. ವರ್ಷಕ್ಕೆ ₹20,000 ಕೋಟಿ ಹೊಸ ಸಂಪತ್ತು ಆ ನೆಲದಲ್ಲಿ ಸೃಷ್ಟಿಯಾಗುತ್ತಿತ್ತು. 3 ಲಕ್ಷಕ್ಕೂ ಅಧಿಕ ಯುವಕರಿಗೆ ತಮ್ಮ ಊರಿನಲ್ಲೇ ಉದ್ಯೋಗ ಸಿಗುತ್ತಿತ್ತು. ಉತ್ತರ ಕರ್ನಾಟಕದ ಆರ್ಥಿಕ ಶಕ್ತಿಯೇ ಇಡೀ ರಾಜ್ಯದ ದಿಕ್ಕನ್ನು ಬದಲಿಸುತ್ತಿತ್ತು.

ಈ ಕನಸು ನನಸಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ನ್ಯಾಯಾಲಯದ ಅನುಮತಿಯೂ ಇತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಯಾಕೆ?

2. ಇಚ್ಛಾಶಕ್ತಿಯ ಕೊರತೆ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಆಟ ಯಾವುದೇ ದೊಡ್ಡ ಯೋಜನೆ ವಿಫಲವಾಗಲು ಸಂಕೀರ್ಣ ಕಾರಣಗಳಿರುತ್ತವೆ. ಆದರೆ ಆಲಮಟ್ಟಿಯ ವಿಷಯದಲ್ಲಿ, ಕಾರಣಗಳು ಸರಳ ಮತ್ತು ಸ್ಪಷ್ಟ.

ರಾಜಕೀಯ ಚದುರಂಗದಾಟ: ದಶಕದಿಂದೀಚೆಗೆ, ಪ್ರತಿಯೊಂದು ಸರ್ಕಾರವೂ

ಈ ಯೋಜನೆಯನ್ನು ಒಂದು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿತೇ ಹೊರತು, ಅದನ್ನು ಕಾರ್ಯಗತಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ.

ಅಗಾಧ ಆರ್ಥಿಕ ನಷ್ಟ: ಈ ಆಟದ ಅತಿ ದೊಡ್ಡ ದುರಂತವೆಂದರೆ ರಾಜ್ಯದ ಬೊಕ್ಕಸಕ್ಕೆ ಬಿದ್ದ ಹೊರೆ. ಅಂದು ₹17,000 ಕೋಟಿಯಲ್ಲಿ ಆಗಬೇಕಿದ್ದ ಯೋಜನೆಗೆ ಇಂದು ₹1 ಲಕ್ಷ ಕೋಟಿ ಬೇಕು. ಈ ಅಗಾಧ ನಷ್ಟಕ್ಕೆ, ಈ ವಿಳಂಬಕ್ಕೆ ಯಾರು ಹೊಣೆ? ಇದು ಆಡಳಿತ ವ್ಯವಸ್ಥೆಯ ವೈಫಲ್ಯವಲ್ಲದೆ ಮತ್ತೇನು?

ಅತಂತ್ರಗೊಂಡ ಜನರ ಬದುಕು: ಈ ರಾಜಕೀಯ ಆಟದಲ್ಲಿ ನಿಜವಾದ ಬೆಲೆ ತೆತ್ತವರು ಮುಳುಗಡೆ ಪ್ರದೇಶದ 20,000ಕ್ಕೂ ಹೆಚ್ಚು ಕುಟುಂಬಗಳು. ಒಂದು ದಶಕದಿಂದ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದಾರೆ. ಅವರ ಬದುಕಿನ ಸ್ಥಿರತೆಯನ್ನು ಕಸಿದುಕೊಂಡ ಪಾಪ ಯಾರದ್ದು?

ಪುಸ್ತಕದ ಹೆಸರು- ಮಹಮದ್ ಅಲಿ ಜಿನ್ನಾಲೇಖಕರು‌ -ಪ್ರತಾಪ್ ಸಿಂಹ, ಡಾ. ಜಿ.ಬಿ.ಹರೀಶ್
17/06/2025

ಪುಸ್ತಕದ ಹೆಸರು- ಮಹಮದ್ ಅಲಿ ಜಿನ್ನಾ
ಲೇಖಕರು‌ -ಪ್ರತಾಪ್ ಸಿಂಹ, ಡಾ. ಜಿ.ಬಿ.ಹರೀಶ್

ಎಷ್ಟೋ ಜನರಿಗೆ ಈ‌ ಮಹಮದ್ ಅಲಿ ಜಿನ್ನಾ ಯಾರು ಅಂತಾನೆ ಗೊತ್ತ ಇಲ್ಲಾ... ಭಾರತ ಸ್ವಾತಂತ್ರ್ಯಗೊಂಡಾಗ ಪಾಕಿಸ್ತಾನದ ಇಬ್ಬಾಗವಾದಾಗ ಪ್ರಮುಖ ಪಾತ್ರದಾ...
16/06/2025

ಎಷ್ಟೋ ಜನರಿಗೆ ಈ‌ ಮಹಮದ್ ಅಲಿ ಜಿನ್ನಾ ಯಾರು ಅಂತಾನೆ ಗೊತ್ತ ಇಲ್ಲಾ... ಭಾರತ ಸ್ವಾತಂತ್ರ್ಯಗೊಂಡಾಗ ಪಾಕಿಸ್ತಾನದ ಇಬ್ಬಾಗವಾದಾಗ ಪ್ರಮುಖ ಪಾತ್ರದಾರಿ... ಈ ಜಿನ್ನಾ ಆತನ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಪುಸ್ತಕ ಓದಿ...

ಪುಸ್ತಕದ ಹೆಸರು- ಮಹಮದ್ ಅಲಿ ಜಿನ್ನಾ
ಲೇಖಕರು‌ -ಪ್ರತಾಪ್ ಸಿಂಹ, ಡಾ. ಜಿ.ಬಿ.ಹರೀಶ್

ಅಪ್ಪಾ...
15/06/2025

ಅಪ್ಪಾ...

ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!ಹೆರುವವರೆಗು ಹೊರುವ ಅಮ್ಮ, ಹರೆಯದವರೆಗು ಹೊರುವ ಅಪ್ಪ, ಇಬ್ಬರ ಪ್ರೀತಿ ಸಮಾನಾದರು. ಅಪ್ಪ ಏಕೋ ಹಿಂದೆಯೇ ಉಳಿ...
15/06/2025

ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

ಹೆರುವವರೆಗು ಹೊರುವ ಅಮ್ಮ, ಹರೆಯದವರೆಗು ಹೊರುವ ಅಪ್ಪ, ಇಬ್ಬರ ಪ್ರೀತಿ ಸಮಾನಾದರು. ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

ಕುಟುಂಬಕ್ಕಾಗಿ ಸಂಬಳವಿಲ್ಲದೇ ದುಡಿಯುವ ಅಮ್ಮ, ದುಡಿದ ಸಂಬಳವೆಲ್ಲ ಕುಟುಂಬಕ್ಕೆ ನೀಡುವ ಅಪ್ಪ. ಇಬ್ಬರ ಶ್ರಮ ಸಮಾನಾದರು. ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

ಕೇಳಿದ್ದನ್ನು ಮಾಡಿ ಉಣಿಸುವ ಅಮ್ಮ, ಕೇಳಿದ್ದನ್ನು ಇಲ್ಲ ಅನ್ನದೆ ಕೊಡಿಸುವ ಅಪ್ಪ, ಇಬ್ಬರ ಪ್ರೀತಿ ಒಂದೇ ಆದರೂ ಅಮ್ಮನಿಗೆ ದೊರೆತ ಹೆಸರಿನ ಮುಂದೆ, ಅಪ್ಪ ಏಕೋ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಮೊಬೈಲ್ ತೆರೆದಾಗ ಕಾಣುವ ಹೆಸರು ಅಮ್ಮ, ಎಡವಿ ಬಿದ್ದಾಗ ಬರುವ ಕೂಗು ಅಮ್ಮ. ಅವಶ್ಯಕತೆ ಇದ್ದಾಗ ಮಾತ್ರ ನೆನಪಾಗಿ ಮಿಕ್ಕೆಲ್ಲ ಸಮಯದಲ್ಲಿ ಮರೆಯಾಗುವ ಅಪ್ಪ, ಎಂದಾದರೂ ದುಃಖಿಸಿದನೆ. ಇಬ್ಬರ ಪ್ರೀತಿ ಒಂದೇ ಆದರೂ ಮಕ್ಕಳ ಪ್ರೀತಿ ಪಡೆಯಲು ಮಾತ್ರ ತಲಾ ತಲಾಂತರಗಳಿಂದ, ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಕಪಾಟಿನ ತುಂಬಾ ನಮ್ಮ ಮತ್ತು ಅಮ್ಮನ ಬಣ್ಣ‌ ಬಣ್ಣದ ಬಟ್ಟೆಗಳೆ. ಆದರೆ ಅಪ್ಪನ ಬಟ್ಟೆಗಳಿಗೆ ಮಾತ್ರ ಮನೆಯ ಮೂಲೆಯೂ ದೊಡ್ಡದೆ. ತನ್ನ ಬಗ್ಗೆ ತಾನು ಎಂದು ಯೋಚಿಸದ ಅಪ್ಪ, ನಮ್ಮ ಯೋಚನೆಗೆ ಸಿಗದಷ್ಟು ಹಿಂದೆಯೇ ಉಳಿದು ಬಿಟ್ಟ!!!

ಅಮ್ಮನಿಗೆ ಅಲ್ಪ ಸ್ವಲ್ಪ ಬಂಗಾರದ ಒಡವೆ. ಅಪ್ಪನಿಗೆ ಬಂಗಾರದ ಬಣ್ಣದ ರೇಷ್ಮೆ ಪಂಚೆ ಒಂದೇ. ಕುಟುಂಬಕ್ಕೆ ಎಷ್ಟೆ ಮಾಡಿದರು, ಅವರ ಮೆಚ್ಚುಗೆ ಪಡೆಯುವಲ್ಲಿ ಮಾತ್ರ ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ವಯಸ್ಸದ ನಂತರ ಮನೆ ಕೆಲಸಗಳಿಗೆ ನೆರವಾಗುವ ಅಮ್ಮ, ಯಾವುದೇ ಕೆಲಸಕ್ಕೆ ಬಾರದವರು ಎಂದು ನಾವು ನಿದ೯ಶಿಸಿದಗಲೂ, ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಅಪ್ಪ ಈಗೆ ಹಿಂದೆ ಉಳಿಯಲು ಕಾರಣ ಅವರೇ ನಮ್ಮೆಲ್ಲರ ಬೆನ್ನೆಲುಬು. ಬೆನ್ನೆಲುಬು ಹಿಂದಿರುವುದರಿಂದಲೇ ತಾನೇ ನಾವೇಲರೂ ಬೆಟ್ಟದ ಹಾಗೆ ನಿಂತಿರುವುದು. ಆದುದರಿಂದಲೇ ಏನೋ ಅಪ್ಪ ಹಿಂದೆಯೇ ಉಳಿದುಬಿಟ್ಟಿರುವುದು.

ಸಂಗ್ರಹ- ಮಮಶಿ

ಮುಂಗಾರು ಮಳೆಯ ಆಗಮನದೊಂದಿಗೆ ಬರುವ ಕಾರ ಹುಣ್ಣಿಮೆಯ ಹಬ್ಬವು ರೈತರ ಮೊದಲ ಹಬ್ಬವಾಗಿದೆ. ಈ ವರ್ಷ ಮುಂಗಾರು ಮಳೆಯು ಉತ್ತಮವಾಗಿದ್ದು, ರೈತರಲ್ಲಿ ಹರ...
11/06/2025

ಮುಂಗಾರು ಮಳೆಯ ಆಗಮನದೊಂದಿಗೆ ಬರುವ ಕಾರ ಹುಣ್ಣಿಮೆಯ ಹಬ್ಬವು ರೈತರ ಮೊದಲ ಹಬ್ಬವಾಗಿದೆ. ಈ ವರ್ಷ ಮುಂಗಾರು ಮಳೆಯು ಉತ್ತಮವಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. ಗ್ರಾಮೀಣ ಸೊಗಡು ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರಹುಣ್ಣಿಮೆ ಹಬ್ಬವು ಉತ್ತರ ಕರ್ನಾಟಕದ ಪ್ರಮುಖ ಹಬ್ಬ. ಅನ್ನದಾತರ ಕೃಷಿ ಕಾರ್ಯಗಳೆಲ್ಲಾ ಯಶಸ್ವಿಯಾಗಲಿ. ನಾಡು ಸುಭಿಕ್ಷವಾಗಲಿ.

ಎಲ್ಲರಿಗೂ ಕಾರಹುಣ್ಣಿಮೆ ಹಬ್ಬದ ಹಾರ್ದಿಕ ಶುಭಾಶಯಗಳು.

Address

Hubli

Telephone

+919480717243

Website

Alerts

Be the first to know and let us send you an email when pustaka.prapancha posts news and promotions. Your email address will not be used for any other purpose, and you can unsubscribe at any time.

Contact The Organization

Send a message to pustaka.prapancha:

Share