Shri Kshethra Bangaramakki

Call Directions Website Contact the organization

Shri Kshethra Bangaramakki Shri Kshethra Bangaramakki is a holy place amidst evergreen forests of Western Ghats and on the right

ಶ್ರೀ ದೇವರ ಸುಪ್ರಭಾತದ  ಪೂಜಾ ಅಲಂಕಾರ.... (24-09-2026)
24/09/2026

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.... (24-09-2026)

ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ “ಪಶ್ಚಿಮಘಟ್ಟ ಸಂರಕ್ಷಣಾ ಚಾತುರ್ಮಾಸ್ಯ ವ್ರತ”ದ ಸಂಕಲ್ಪದಂತೆ ಆಯೋಜಿಸಿದ ಸರಣಿ ʼಚಿಂತನ-ಮಂಥನʼ ಕ...
23/09/2026

ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ “ಪಶ್ಚಿಮಘಟ್ಟ ಸಂರಕ್ಷಣಾ ಚಾತುರ್ಮಾಸ್ಯ ವ್ರತ”ದ ಸಂಕಲ್ಪದಂತೆ ಆಯೋಜಿಸಿದ ಸರಣಿ ʼಚಿಂತನ-ಮಂಥನʼ ಕಾರ್ಯಕ್ರಮದ ಭಾಗವಾಗಿ; ಪಶ್ಚಿಮ ಘಟ್ಟಗಳ ಸಂರಕ್ಷಣೆ, ಜೀವವೈವಿಧ್ಯ, ಪರಿಸರ ಸಮತೋಲನ ಹಾಗೂ ಸಹ್ಯಾದ್ರಿ ಪ್ರದೇಶದ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ʼಚಿಂತನ–ಮಂಥನʼ ನಡೆಸುವ ಉದ್ದೇಶದಿಂದ ‘ಸಹ್ಯಾದ್ರಿ ಐಡಿಯಾ ಕಾನ್‌ಕ್ಲೇವ್–2026’ ಎರಡು ದಿನಗಳ ವಿಚಾರ ಸಂಕಿರಣವು ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸೆಪ್ಟೆಂಬರ್ 19 ಮತ್ತು 20ರಂದು ನಡೆಯಿತು. ಈ ಕಾನ್‌ಕ್ಲೇವ್ನಲ್ಲಿ ಪರಿಸರ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಸಹ್ಯಾದ್ರಿಯ ಭವಿಷ್ಯದ ಕುರಿತು ವಿವಿಧ ಕ್ಷೇತ್ರಗಳ ತಜ್ಞರು, ಸಂಶೋಧಕರು, ಪರಿಷರ ಪ್ರೇಮಿಗಳು ಹಾಗೂ ಗಣ್ಯರು ಮತ್ತು ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು, ಡಾ. ಎಂ.ಡಿ. ಸುಭಾಷಚಂದ್ರನ್, ಡಾ. ಪ್ರೀತಿ ಹೆಬ್ಬಾರ್, ಡಾ. ಬಾಲಚಂದ್ರ ಹೆಗಡೆ, ಡಾ. ಸವಿನಯ ಎಂ.ಎಸ್., ಡಾ. ಚೇತನ್ ನಾಗ್ ಕೆ.ಎಸ್., ಡಾ. ಸುಧೀರ ಎಚ್.ಎಸ್., ಡಾ. ರವೀಂದ್ರನಾಥ ಶಾನ್‌ಭಾಗ್ ಹಾಗೂ ಡಾ. ಅರವಿಂದ ಮದ್ಯಸ್ಥ ಡಾ. ಗುರುರಾಜ ಕೆ.ವಿ., ಡಾ. ಕಾರ್ತಿಕ್ ಬಾಲಸುಬ್ರಹ್ಮಣಿಯನ್, ಹಾಗೂ ಶ್ರೀ. ಓಂಕಾರ್ ಪೈ ಸೇರಿದಂತೆ ಹಲವು ಗಣ್ಯರು ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಿದರು.
ಪಶ್ಚಿಮ ಘಟ್ಟಗಳು ದೇಶದ ಪ್ರಮುಖ ನೈಸರ್ಗಿಕ ಸಂಪತ್ತುಗಳಲ್ಲಿ ಒಂದಾಗಿದ್ದು, ಜಲಮೂಲಗಳು, ಅರಣ್ಯ, ಜೀವವೈವಿಧ್ಯ ಹಾಗೂ ಸ್ಥಳೀಯ ಸಮುದಾಯಗಳ ಬದುಕಿನೊಂದಿಗೆ ಅವುಗಳ ಸಂಬಂಧವನ್ನು ಸಮಗ್ರವಾಗಿ ಅರ್ಥೈಸಿಕೊಂಡು ಸಂರಕ್ಷಣೆಯ ಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಅಗತ್ಯವಾದ ಚಿಂತನೆಗಳು, ಸಾಧ್ಯತೆಗಳು ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ಮಾಡಿದರು. ಕಾರ್ಯಕ್ರಮವು ಸಹ್ಯಾದ್ರಿಯ ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವೇದಿಕೆಯಾಗಿಯೂ ಗಮನ ಸೆಳೆಯಿತು.

23/09/2026
ಶ್ರೀ ದೇವರ ಸುಪ್ರಭಾತದ  ಪೂಜಾ ಅಲಂಕಾರ.... (23-09-2026)
23/09/2026

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.... (23-09-2026)

ಶ್ರೀ ದೇವರ ಸುಪ್ರಭಾತದ  ಪೂಜಾ ಅಲಂಕಾರ.... (22-09-2026)
22/09/2026

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.... (22-09-2026)

ಶ್ರೀ ದೇವರ ಸುಪ್ರಭಾತದ  ಪೂಜಾ ಅಲಂಕಾರ.... (21-09-2026)
21/09/2026

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.... (21-09-2026)

ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಿಲೆಕ್ಟ್‌ ಫೌಂಡೇಶನ್‌ (ರಿ.) ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ  ವತಿಯಿಂದ ಸೆಪ್ಟ...
20/09/2026

ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಿಲೆಕ್ಟ್‌ ಫೌಂಡೇಶನ್‌ (ರಿ.) ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಸೆಪ್ಟೆಂಬರ್. 17 ರಿಂದ 30ರವರೆಗೆ ಆಯೋಜಿಸಿರುವ 14 ದಿನಗಳ ಉಚಿತ ಕೃತಕ ಆಭರಣ ತಯಾರಿಕೆ ತರಬೇತಿ ಕಾರ್ಯಕ್ರಮಕ್ಕೆವನ್ನು ಶ್ರೀಕ್ಷೇತ್ರದ ಬಂಗಾರಮಕ್ಕಿಯ ಧರ್ಮಾಧಿಕಾರಿಗಳು ಹಾಗೂ ಸಿಲೆಕ್ಟ್‌ ಫೌಂಡೇಶನ್‌ (ರಿ.) ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರೂಜಿಯವರು, ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಲು ಕೌಶಲ್ಯಾಧಾರಿತ ತರಬೇತಿಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು. ಇಂತಹ ಉಚಿತ ತರಬೇತಿ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ ಸ್ವಾವಲಂಬನೆಯತ್ತ ಮುನ್ನಡೆಯಲು ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್‌ಸಿಟಿ ನಿರ್ದೇಶಕರಾದ ಶ್ರೀ ಹರೀಶ್, ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಕುಮಾರಿ ಪದ್ಮಾವತಿ ಗೌಡ ಹಾಗೂ ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕರಾದ ಶ್ರೀಮತಿ ಮೇಘನಾ ಭಟ್ಟ, ಶ್ರೀ ಗೌರೀಶ್ ಹಾಗೂ ತರಬೇತಿ ಪಡೆಯಲು ಬಂದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಶ್ರೀ ದೇವರ ಸುಪ್ರಭಾತದ  ಪೂಜಾ ಅಲಂಕಾರ.... (20-09-2026)
20/09/2026

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.... (20-09-2026)

ಶ್ರೀ ದೇವರ ಸುಪ್ರಭಾತದ  ಪೂಜಾ ಅಲಂಕಾರ.... (19-09-2026)
19/09/2026

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.... (19-09-2026)

Address

Gerasoppa
Honnavar
581384

Alerts

Be the first to know and let us send you an email when Shri Kshethra Bangaramakki posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shri Kshethra Bangaramakki:

Shortcuts

Share