30/01/2022
ಶ್ರೀ ವಿಶ್ವಕರ್ಮ ಯುವ ವೃಂದ ಹೆಬ್ರಿ ಇವರ ನೇತೃತ್ವದಲ್ಲಿ , ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಹೆಬ್ರಿ, ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಸಹಯೋಗದೊಂದಿಗೆ 17 ನೇ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ಮೂಡಿಬಂತು.
ಶ್ರೀ ಸತ್ಯನಾರಾಯಣ ಪೂಜೆಯು ಶ್ರೀ ರವೀಂದ್ರ ಪುರೋಹಿತರವರ ನೇತೃತ್ವದಲ್ಲಿ ಜರುಗಿತು.
ನಂತರ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಮಹಾಮಂಗಳಾರತಿ ನಡೆದ ನಂತರ ಅನ್ನಸಂತರ್ಪಣೆ ಪ್ರಸಾದ ವಿತರಿಸಲಾಯಿತು.
ಮಧ್ಯಾಹ್ನ ನಂತರ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆರಂಭವಾಯಿತು.
ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವೃಂದದ ಅಧ್ಯಕ್ಷರಾದ ಶ್ರೀ ರಘುವೀರ್ ಆಚಾರ್ಯರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಲ್ಪಿ ಶ್ರೀ ರಾಮಚಂದ್ರ ಆಚಾರ್ಯ, ಅತ್ತೂರು, ಹಾಗೂ ಶ್ರೀ ವಿಶ್ವನಾಥ ಆಚಾರ್ಯ ಕಲ್ಗೋಳಿ, ಅಧ್ಯಕ್ಷರು, ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಕೊಕ್ಕರ್ಣೆ ವೇದಿಕೆಯಲ್ಲಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ ರತ್ನಾಕರ ಆಚಾರ್ಯ, ಅಧ್ಯಕ್ಷರು, ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಹೆಬ್ರಿ, ಶ್ರೀಮತಿ ಕಲಾವತಿ ಶ್ರೀಧರ ಆಚಾರ್ಯ, ಅಧ್ಯಕ್ಷರು , ವಿಶ್ವಕರ್ಮ ವಿಶ್ವಕರ್ಮ ಮಹಿಳಾ ಮಂಡಳಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ ಸೂರ್ಯ ಪುರೋಹಿತ್, ಖ್ಯಾತ ಕಲಾಕಾರರು ಹಾಗೂ ಕು.ಶ್ರದ್ಧಾ ಎಸ್.ಆಚಾರ್ಯ , ಪ್ರತಿಭಾನ್ವಿತ ವಿಧ್ಯಾರ್ಥಿನಿ ಇವರನ್ನು ಸನ್ಮಾನಿಸಲಾಯಿತು.
ಸುಮಾರು 12 ವಿಧ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.
ನಂತರ ಹೊಸ ಪದಾಧಿಕಾರಿಗಳ ತಂಡಕ್ಕೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಸಚಿನ್ ಆಚಾರ್ಯ, ಧನ್ಯವಾದವನ್ನು ಶ್ರೀ ಭುವನೇಂದ್ರ ಆಚಾರ್ಯ, ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಚಂದ್ರಶೇಖರ್ ಆಚಾರ್ಯ ನಿರ್ವಹಿಸಿದರು.
ಶ್ರೀ ರವಿಚಂದ್ರ ಆಚಾರ್ಯ ಇವರು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಶುಚಿ ರುಚಿಯಾಗಿ ಮಾಡಿಕೊಟ್ಟರು.
ಈ ಕಾರ್ಯಕ್ರಮದ ಯಶಸ್ಸಿನ ಎಲ್ಲಾ ಶ್ರೇಯಸ್ಸು ಯುವವೃಂದದ ಒಗ್ಗಟ್ಟಿನ ಸಂಕೇತವಾಗಿದೆ.
ಈ ಸುಂದರ ಕಾರ್ಯಕ್ರಮಕ್ಕೆ ಸಹಕರಿಸಿದ ಶ್ರೀ ವಿಶ್ವಕರ್ಮ ಯುವವೃಂದ, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಹೆಬ್ರಿ, ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಎಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು. 🙏🙏🙏