26/10/2024
#ಶ್ರೀಮಂತರು ಪುಸ್ತಕ ಓದುವಷ್ಟು, #ಅಧ್ಯಯನ ಮಾಡುವಷ್ಟು ಬಡವರು ಮಾಡೋದಿಲ್ಲಾ, ಬಡವರು TV ನೋಡೋದು, ಆಟಗಳ ನೊಡೋದು ಜಾಸ್ತಿ. ಬಡವರ ಕೈಗೆ ಸಿಗೋ #ಪುಸ್ತಕಗಳೇ ಬೇರೆ, ಶ್ರೀಮಂತರ ಕೈಗೆ #ಸಿಗೋ ಪುಸ್ತಕಗಳೇ ಬೇರೆ. ಅದಕ್ಕೆ ಶ್ರೀಮಂತರದ್ದೆ ಬೇರೆ Mentality. ಬಡವರದ್ದೆ ಬೇರೆ Mentality.
ಮನುಷ್ಯನ ಜೀವನವನ್ನು define ಮಾಡುವುದು 3.
1. ಸೈಕಾಲಜಿ.
2. Emotions.
3. Money.
#ಮನುಷ್ಯ ಮನುಷ್ಯರ ನಡುವಿನ ವ್ಯತ್ಯಾಸವನ್ನು ಈ ಮೂರು ವಿಷಯಗಳಿಂದ ತಿಳಿಯಬಹುದು. ಇವಾಗ ಸಮಾಜದಲ್ಲಿ ಪ್ರತಿಯೊಂದು ಸಹ ಈ ಮೂರು ವಿಷಯಗಳ ಮೇಲೆ ನಿರ್ಧರಿತವಾಗುತ್ತವೆ. ಶೇರು ಮಾರುಕಟ್ಟೆ ಇರಬಹುದು, ರಾಜಕೀಯ ಆಯ್ಕೆ ಇರಬಹುದು, #ಯುದ್ಧ ಶುರುವಾಗೋದು ಇಲ್ಲಾ ನಿಲ್ಲೋದಿರಬಹುದು.
ಶ್ರೀಮಂತರ ಕೈಗೆ ಅವುಗಳನ್ನು ಚೆನ್ನಾಗಿ ಅರ್ಥಮಾಡಿಸಿ, ಅವುಗಳನ್ನು ಬಳಸಿ ತಮ್ಮ wealth, power and influence ಹೇಗೆ #ಹೆಚ್ಚಿಸಿಕೊಳ್ಳಬಹುದು, ಯಾರ ಸ್ನೇಹ ಬೆಳೆಸಿಕೊಳ್ಳಬೇಕು? ಯಾರ ಜೊತೆಗೆ ಒಡನಾಟ ಇಟ್ಟುಕೊಳ್ಳಬೇಕು? ಯಾರ ಜೊತೆಗೆ ಹೇಗೆ ವ್ಯವಹರಿಸಬೇಕು? ಯಾರನ್ನು ತಮ್ಮ ಬ್ಯುಸಿನೆಸ್'ಗಳಿಗೆ ಅನುಕೂಲವಾಗುವಂತೆ ಬಳಸಿಕೊಳ್ಳಬೇಕು? ಯಾರಿಂದ ಹೇಗೆ ಉಪಯೋಗ ಪಡೆದುಕೊಳ್ಳಬೇಕು? ಎಂಬ ಮಾಹಿತಿಯುಳ್ಳ ಪುಸ್ತಕಗಳು ಸಿಕ್ಕಿದರೆ, ಬಡವರ ಕೈಗೆ ತಮ್ಮ mindset ಹೇಗೆ ಭಾವನೆಗಳ ಆಧಾರದಲ್ಲಿ ನಿರ್ಮಿಸಿಕೊಳ್ಳಬೇಕು? ಯಾರಿಗೆ ಅನುಯಾಯಿಯಾಗಬೇಕು? ಯಾರನ್ನು ದ್ವೇಷಿಸಬೇಕು? ಯಾರಿಗೆ ಸಪೋರ್ಟ್ ಮಾಡಬೇಕು? ಜೀವನದ ಉದ್ದೇಶವನ್ನು ಹೇಗೆ ಬಗೆಬಗೆಯ ಗುಲಾಮಗಿರಿಯ ಸುತ್ತಲೇ #ನಿರ್ಮಿಸಿಕೊಳ್ಳಬೇಕು? ಅಗತ್ಯಬಿದ್ದರೆ ಹೇಗೆ ತಮ್ಮ ಭಾವನೆಗಳಿಗಾಗಿ ತ್ಯಾಗ ಮಾಡಲು, ಸಾಯಲು ಸಿದ್ಧರಾಗಬೇಕು? ಎಂಬ ಮನಸ್ಥಿತಿಯ ನಿರ್ಮಾಣ ಮಾಡುವ ಪುಸ್ತಕಗಳು ಬಡವರ ತಲುಪುತ್ತವೆ.
#ಕಳೆದ ಇಪ್ಪತ್ತು ವರ್ಷಗಳಲ್ಲಿ ಅತಿಹೆಚ್ಚಾಗಿ ಇತಿಹಾಸದ ಮತ್ತು ರಾಜಕೀಯದ ವಿಷಯವಾಗಿ ಬಂದಂತಹ 99% ಪುಸ್ತಕಗಳು ಬಡವರ ಗುಲಾಮಗಿರಿಗೆ ತಳ್ಳುವಂತಹವು ಆಗಿವೆ. ಇನ್ನು ಭಾವನೆಗಳ ಬಾವಿಗೆ #ಬಿಂದಿಗೆ ಬಿಟ್ಟು ಪ್ರೀತಿ-ಪ್ರೇಮದ ಕಪ್ಪೆ ಹಿಡಿಯುವ ಕಥಾವಸ್ತುಗಳ ಕಥೆ, ಕವನ, #ಕಾದಂಬರಿಗಳು ಬಡವರಿಗಾಗಿಯೇ ನಿರ್ಮಾಣವಾದವು.
ಶ್ರೀಮಂತರ ಅಧ್ಯಯನ ಮಾಡಿ, ಶ್ರೀಮಂತರು ಏನು ಓದುತ್ತಾರೆ, ಸಮಾಜವನ್ನು, ರಾಜಕೀಯವನ್ನು, ಜೀವನವನ್ನು ಅವರು ನೋಡುವ ಬಗೆ ಹೇಗೆ? ಹಣಕಾಸನ್ನು ಹೇಗೆ ನಿರ್ವಹಿಸುತ್ತಾರೆ? Generational wealth ಹೇಗೆ ಕ್ರಿಯೆಟ್ ಮಾಡುತ್ತಾರೆ. ಯಾವುದೇ ಸಂಧರ್ಭದಲ್ಲೂ, ಎಂತಹ ಪರಿಸ್ಥಿತಿಯಲ್ಲೂ ತಮ್ಮ Power, pleasure, purpose and influence ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ಅಧ್ಯಯನ ಮಾಡಿ ಅದರಂತೆ ನಾವು ಸಹ ಅಳವಡಿಸಿಕೊಳ್ಳಬೇಕಿದೆಯೇ ಹೊರತು ನಮ್ಮನ್ನು ಮತ್ತಷ್ಟು Dumb, lazy, stupid, arrogant, broke and poor ಮಾಡುವ ಪುಸ್ತಕಗಳನ್ನಲ್ಲಾ.
ಇಷ್ಟೆಲ್ಲಾ ಏಕೆ ಬರೆಯಬೇಕಾಯ್ತು ಅಂದ್ರೆ ಅಮೇರಿಕಾದ #ರಾಜಕಾರಣವನ್ನು ಹೇಗೆ ಮಾಫಿಯಾದವರು ಕಂಟ್ರೋಲ್ ಮಾಡುತ್ತಿದ್ದಾರೆ, ಮಾಡಿದರು ಎಂದು ಸವಿಸ್ತಾರವಾಗಿ ತಿಳಿಸುವ Mafia democracy ಎನ್ನುವ ಪುಸ್ತಕ ಅಮೇರಿಕಾದ elites ಕೈಸೇರುತ್ತಿದೆ. #ಭಾರತದಲ್ಲಿನ ಯನ್ನೂ ಸಹ ಕ್ರಿಮಿನಲ್'ಗಳು, ಅಧಿಕಾರಶಾಹಿಗಳು, ಬೇರೆ ಬೇರೆ ಮಾಫಿಯಾದವರು ಕಂಟ್ರೋಲ್ ಮಾಡುತ್ತಿದ್ದಾರೆ, ನಮ್ಮ ಸರ್ಕಾರಗಳೆ ಒಂದು ಬಗೆಯ ಮಾಫಿಯಾಗಳು, ಅವುಗಳನ್ನು ಬಿಡಿಸಿ ಹೇಳುವವರನ್ನು ಮುಗಿಸಿಬಿಡುತ್ತಾರೆ. ಈಗ ವಾರದ ಹಿಂದಿನ 31 ಲಕ್ಷಕೋಟಿ ಶೇರ್ ಮಾರ್ಕೆಟ್ ಹಗರಣ ಯಾರಿಗೂ ತಿಳಿಯೋದೆ ಇಲ್ಲಾ. Exit poll manipulate ಮಾಡಿ, ಹೂಡಿಕೆದಾರರ ಹಣ 31 ಲಕ್ಷಕೋಟಿ ಹಂಗೆ #ಕರಗಿಹೋಯ್ತು! ಅದು ಹೋದದ್ದೆಲ್ಲಿಗೆ? ಯಾರಿಗೆ ತಲುಪಿತು? ಯಾರ ಖಾತೆಗೆ ಜಮಾ ಆಯ್ತು? ಗೊತ್ತಿಲ್ಲಾ. ಅದೇ ಮಾಫಿಯಾ, ಜನರಿಗೆ ಕಾಣಿಸೋದು ಬರಿ ತತ್ವ-ಸಿದ್ಧಾಂತಗಳು, ಆ ವಿಷಯವಾಗಿ ಬಡವರು ಬಡಿದಾಲೇ ಇರೋದು. ಅದೇ ಬಡವರ ಜೀವನಧ್ಯೇಯ ಎಂದು ಅವರಲ್ಲಿ ನಿರಂತರವಾಗಿ ಬರಹ, #ಭಾಷಣಗಳು ಮುಖಾಂತರವಾಗಿ "Faith" ಹುಟ್ಟುಹಾಕಲಾಗಿದೆ. ಅದಕ್ಕೆ ಅಪ್ಪಂದಿರು ಯಾರು ಅಂತ ಬಡವರಿಗೆ ಇನ್ನೂ ತಿಳಿಯುತ್ತಿಲ್ಲಾ. ಏಕೆಂದರೆ ತಿಳಿಯುವ, ತಿಳಿಸುವ ಪುಸ್ತಕ ಅವರ ಕೈ ಸೆರೋದಿಲ್ಲಾ.
ನಿಮ್ಮ ಬದುಕನ್ನು ಶ್ರೀಮಂತವಾಗಿ ರೂಪಿಸುವ ಪುಸ್ತಕಗಳ ಓದಿ. ....