14/01/2026
#ಸ್ವಾಮಿ_ವಿವೇಕಾನಂದ_ಜಯಂತಿ 🌺
ನಮ್ಮ #ಚನ್ನು_ಪಾಟೀಲ_ಫೌಂಡೇಶನ್ ವತಿಯಿಂದ #ಮುಶಿಗೇರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಡಿಲ ಸಂತ, ವೀರ ಸನ್ಯಾಸಿ #ಸ್ವಾಮಿ_ವಿವೇಕಾನಂದ_ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಯುವಶಕ್ತಿಗೆ ದಿಕ್ಕು ತೋರಿದ ಮಹಾನ್ ಚಿಂತಕ ಸ್ವಾಮಿ ವಿವೇಕಾನಂದರ ವಿಚಾರಗಳು, ಜೀವನ ಮೌಲ್ಯಗಳು ಮತ್ತು ರಾಷ್ಟ್ರ ನಿರ್ಮಾಣದ ಸಂದೇಶಗಳನ್ನು ವಿದ್ಯಾರ್ಥಿಗಳು ತಮ್ಮ ಭಾಷಣಗಳ ಮೂಲಕ ಅದ್ಭುತವಾಗಿ ವ್ಯಕ್ತಪಡಿಸಿದರು..
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ, ರಾಷ್ಟ್ರಪ್ರೇಮ ಮತ್ತು ನೈತಿಕ ಮೌಲ್ಯಗಳ ಜಾಗೃತಿಗೆ ಪ್ರೇರಣೆಯಾಯಿತು.
ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಮಾನ್ಯ ಪ್ರಾಚಾರ್ಯರು, ಉಪನ್ಯಾಸಕರು, ತೀರ್ಪುಗಾರರು ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಚನ್ನು ಪಾಟೀಲ ಫೌಂಡೇಶನ್ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.
“ಏಳಿ, ಎಚ್ಚರಗೊಳ್ಳಿ, ಗುರಿ ತಲುಪುವವರೆಗೆ ನಿಲ್ಲಬೇಡಿ” – ಸ್ವಾಮಿ ವಿವೇಕಾನಂದ...