30/01/2025
*🌺ಜನವರಿ - 30 ಇಂದು ರಾಷ್ಟ್ರೀಯ ಸ್ವಚ್ಛತಾ ದಿನ: ಸ್ವಚ್ಛ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ*
*ರಾಷ್ಟ್ರೀಯ ಸ್ವಚ್ಛತಾ ದಿನದ ಮಹತ್ವ*
ಇಂದು 'ರಾಷ್ಟ್ರೀಯ ಸ್ವಚ್ಛತಾ ದಿನ'. ಮಹಾತ್ಮ ಗಾಂಧಿ ಕಂಡ ಸ್ವಚ್ಛ ಭಾರತದ ಕನಸು ನನಸು ಮಾಡಲು ಪ್ರತಿಯೊಬ್ಬ ಭಾರತೀಯನೂ ಮುಂದಾಗಬೇಕಿದೆ.
ಭಾರತದಲ್ಲಿ ಪ್ರತಿವರ್ಷ ಜನವರಿ 30 ರಂದು 'ರಾಷ್ಟ್ರೀಯ ಸ್ವಚ್ಛತಾ ದಿನ'ವನ್ನು ಆಚರಿಸಲಾಗುತ್ತದೆ. ಕೆಲಸದ ಸ್ಥಳ, ಮನೆಗಳು ಅಥವಾ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಉದ್ಯಾನವನಗಳು ಇತರ ಸಾರ್ವಜನಿಕ ಸ್ಥಳಗಳಲ್ಲೂ ಸ್ವಚ್ಛತೆ ಕಾಪಾಡಲು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.ಗುರಿ:ಸ್ವಚ್ಛತೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವುದು.ಇತಿಹಾಸ ಮತ್ತು ಮಹತ್ವ:2014 ರಿಂದ, ಪ್ರತಿ ವರ್ಷ ಜನವರಿ 30 ಅನ್ನು ಮಹಾತ್ಮ ಗಾಂಧೀಜಿಯವರ ಹುತಾತ್ಮರಾದ ದಿನದ ನೆನಪಿಗಾಗಿ ರಾಷ್ಟ್ರೀಯ ಸ್ವಚ್ಛತಾ ದಿನವಾಗಿ ಆಚರಿಸಲಾಗುತ್ತದೆ
*ಸ್ವಚ್ಛತೆಯ ಮಹತ್ವ:*
ನಮ್ಮ ದೈನಂದಿನ ಬದುಕಿನಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಪ್ರಮುಖ ಪಾತ್ರ ವಹಿಸುತ್ತವೆ.ಇವು ಡೆಂಗ್ಯೂ, ಟೈಫಾಯಿಡ್, ಹೆಪಟೈಟಿಸ್ ಮತ್ತು ಸೊಳ್ಳೆ ಕಡಿತದಿಂದ ಉಂಟಾಗುವ ಇತರ ಕಾಯಿಲೆಗಳನ್ನು ತಡೆಯುವುದರಿಂದ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ವಿಷಪೂರಿತ ಆಹಾರವನ್ನು ತಿನ್ನುವುದು, ಕಲುಷಿತ ನೀರು ಕುಡಿಯುವುದು ಅಥವಾ ಆರೋಗ್ಯಕರವಲ್ಲದ ವಾತಾವರಣದಲ್ಲಿ ವಾಸಿಸುವುದರಿಂದ ಕಾಮಾಲೆ, ಕಾಲರಾ, ಆಸ್ಕರಿಯಾಸಿಸ್, ಲೆಪ್ಟೊಸ್ಪಿರೋಸಿಸ್, ರಿಂಗ್‌ವರ್ಮ್, ಸ್ಕ್ಯಾಬೀಸ್, ಸ್ಕಿಸ್ಟೊಸೋಮಿಯಾಸಿಸ್, ಟ್ರಾಕೋಮಾ ಮುಂತಾದ ರೋಗಗಳು ಹರಡಬಹುದು. ಸ್ವಚ್ಛತೆ ಕಾಪಾಡದೇ ಹೋದರೆ ಕಸ ಮತ್ತು ಕೊಳಕು ಸಂಗ್ರಹವಾಗುತ್ತದೆ. ಕಸದಿಂದ ಉಂಟಾಗುವ ವಾಸನೆ ಕೂಡ ಸಹಿಸಲಸಾಧ್ಯ.ನೈರ್ಮಲ್ಯಕ್ಕೆ ಸಂಬಂಧಿಸಿದ ಸಂಗತಿಗಳು
ಅಸುರಕ್ಷಿತ ನೈರ್ಮಲ್ಯದಿಂದ ಪ್ರತಿವರ್ಷ 775,000 ಸಾವಿಗೆ ಕಾರಣವಾಗಿದೆ ಕಡಿಮೆ ಆದಾಯವುಳ್ಳ ದೇಶಗಳಲ್ಲಿ ಕಳಪೆ ನೈರ್ಮಲ್ಯವು 5% ಸಾವುಗಳಿಗೆ ಕಾರಣವಾಗಿದೆ.2.4 ಬಿಲಿಯನ್ ಜನರಿಗೆ (ವಿಶ್ವದ ಮೂರನೇ ಒಂದು ಭಾಗದಷ್ಟು) ನೈರ್ಮಲ್ಯದ ಬಗ್ಗೆ ಅರಿವೇ ಇಲ್ಲ 4.5 ಬಿಲಿಯನ್ ಜನರಿಗೆ (ವಿಶ್ವದ 60%) ಸುರಕ್ಷಿತವಾಗಿ ನಿರ್ವಹಿಸಲಾದ ನೈರ್ಮಲ್ಯಬಗ್ಗೆ ತಿಳಿದಿಲ್ಲ.ವಿಶ್ವದ 15% ಜನರು ಇನ್ನೂ ವಿಶ್ವದ 15% ಈಗಲೂ ಬಯಲು ಶೌಚ ಬಳಸುತ್ತಾರೆ .ವಿಶ್ವದ 40% ಜನರಿಗೆ ಕೈ ತೊಳೆಯುವ ಸೌಲಭ್ಯ ಸಹ ಇಲ್ಲಅಸುರಕ್ಷಿತ ನೈರ್ಮಲ್ಯವು ಬಾಲ್ಯದ ಬೆಳವಣಿಗೆ ಮೇಲೆ ಗಮನಾರ್ಹ ಪರಿಣಾಮ ಬೀರಿ ಬೆಳವಣಿಗೆ ಕುಂಠಿತಕ್ಕೆ ಕಾರಣವಾಗುತ್ತದೆ.ಸ್ವಚ್ಛತೆ ಕುರಿತಾದ ಗಾಂಧಿವಾದಿ ಆಲೋಚನೆಗಳು:ಗಾಂಧೀಜಿಯವರ ನೇತೃತ್ವದಲ್ಲಿ ಭಾರತೀಯರು ಸ್ವಾತಂತ್ರ್ಯ ಪಡೆದರು. ಆದರೆ ಅವರ 'ಸ್ವಚ್ಛ ಭಾರತ'ದ ಕನಸು ಇನ್ನೂ ಈಡೇರಿಲ್ಲ. ಮಹಾತ್ಮ ಗಾಂಧಿ "ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯ ಮುಖ್ಯ" ಎಂದು ಹೇಳಿದ್ದರು. ಸ್ವಚ್ಛತೆ ಮತ್ತು ನೈರ್ಮಲ್ಯ ಜೀವನದ ಅವಿಭಾಜ್ಯ ಅಂಗ ಎಂದೇ ಗಾಂಧೀಜಿ ನಂಬಿದ್ದರು. ದೈಹಿಕ ಯೋಗಕ್ಷೇಮ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸ್ವಚ್ಛತೆ ಬಹುಮುಖ್ಯ ಎಂದು ಗಾಂಧೀಜಿ ಹೇಳುತ್ತಿದ್ದರು.ಚಿಕ್ಕ ವಯಸ್ಸಿನಲ್ಲಿಯೇ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರೆ ಅದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದಿದ್ದರು ಗಾಂಧೀಜಿ. ಊಟಕ್ಕೆ ಮುಂಚಿತವಾಗಿ ಕೈ ತೊಳೆಯುವುದು, ನಿಯಮಿತವಾಗಿ ಹಲ್ಲುಜ್ಜುವುದು, ಮತ್ತು ಚಿಕ್ಕ ವಯಸ್ಸಿನಿಂದಲೇ ದಿನವೂ ಸ್ನಾನ ಮಾಡುವುದು ಮುಂತಾದ ಕೆಲವು ಅಭ್ಯಾಸಗಳನ್ನು ನಾವು ಬೆಳೆಸಿಕೊಂಡರೂ ಸಹ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. "ಯಾರನ್ನೂ ಅವರ ಕೊಳಕು ಪಾದಗಳಿಂದ ನನ್ನ ಮನಸ್ಸಿನಲ್ಲಿ ನಡೆಯಲು ನಾನು ಬಿಡುವುದಿಲ್ಲ"ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು.ಎಲ್ಲೆಂದರಲ್ಲಿ ಯಾರೂ ಉಗುಳಬಾರದು. ಕೆಲವು ಸಂದರ್ಭಗಳಲ್ಲಿ ನಮ್ಮ ಕಫವು ಎಷ್ಟು ಹಾನಿಕಾರಕವಾಗಿದೆಯೆಂದರೆ ಅದರಲ್ಲಿನ ರೋಗಾಣುಗಳು ಇತರರಿಗೆ ಸೋಂಕು ತರುತ್ತವೆ. ಕೆಲವು ದೇಶಗಳಲ್ಲಿ ರಸ್ತೆಯಲ್ಲಿ ಉಗುಳುವುದು ಕ್ರಿಮಿನಲ್ ಅಪರಾಧ. ಎಲೆ ಅಡಿಕೆ ಮತ್ತು ತಂಬಾಕನ್ನುಅಗಿದು ಉಗುಳುವವರು ಇತರರ ಬಗ್ಗೆ ಯೋಚಿಸುವುದಿಲ್ಲ ಇದೇ ನಮ್ಮ ದೇಶದ ದೊಡ್ಡ ದುರಂತ.