Dharwad Taluk Brahmana Sabha - DTBS

Dharwad Taluk Brahmana Sabha - DTBS This group involves information about DTBS. Whoever interested in social service can join this community.

ಧಾರವಾಡ ತಾಲೂಕ ಬ್ರಾಹ್ಮಣ ಸಭಾ  (ಡಿಟಿಬಿಎಸ್) ವತಿಯಿಂದ ದಿನಾಂಕ :8-12-2023 ರಂದು ರಂಗಾಯಣ "ಸಮುಚ್ಚಯ ಭವನದಲ್ಲಿ" ಮಹಿಳೆಯರಿಗಾಗಿ ನಾಡಗೀತೆ ಸ್ಪ...
09/12/2023

ಧಾರವಾಡ ತಾಲೂಕ ಬ್ರಾಹ್ಮಣ ಸಭಾ (ಡಿಟಿಬಿಎಸ್) ವತಿಯಿಂದ ದಿನಾಂಕ :8-12-2023 ರಂದು ರಂಗಾಯಣ "ಸಮುಚ್ಚಯ ಭವನದಲ್ಲಿ" ಮಹಿಳೆಯರಿಗಾಗಿ ನಾಡಗೀತೆ ಸ್ಪರ್ಧೆ ಹಾಗೂ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗಾಗಿ ನಡೆದ ಭಾಷಣ ಸ್ಪರ್ಧೆಯ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆಯಿತು. ಬಹುಮಾನ ವಿತರಣೆ ಮತ್ತು ವೇದಿಕೆ ಕಾರ್ಯಕ್ರಮ ಕುಮಾರಿ ಅಮೃತ ಲಕ್ಷ್ಮಿ ಆಶ್ರೀತ ಇವರ ಶಿವಸ್ತುತಿ ಭರತನಾಟ್ಯದೊಂದಿಗೆ ಪ್ರಾರಂಭವಾಯಿತು.
ಮುಖ್ಯ ಅತಿಥಿಗಳಾಗಿ ಡಾ. ಕೃಷ್ಣ ಕಟ್ಟಿ ಸಾಹಿತಿಗಳು ಆಗಮಿಸಿದ್ದರು. ಅವರು ತಮ್ಮ ಅತಿಥಿ ಭಾಷಣದಲ್ಲಿ ಕನ್ನಡ ನಾಡು, ನುಡಿ ಉಳಿಸಿ ಬೆಳೆಸುವ ಹಾಗೂ ಬೆಳೆಸಿದ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಿದರು
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀಯುತ ಆರ್ ಡಿ ಕುಲಕರ್ಣಿ ಡಿಟಿಬಿಎಸ್ ಸಂಸ್ಥೆಯು ಹುಟ್ಟಿಕೊಂಡ ಉದ್ದೇಶ ಹಾಗೂ ಅದರ ಕಾರ್ಯಗಳ ರೂಪ ರೇಷೆಯನ್ನು ವಿವರವಾಗಿ ವಿವರಿಸಿದರು. ಎಲ್ಲರೂ ಈ ಸಂಸ್ಥೆಯ ಸದಸ್ಯರಾಗಲು ಮನವಿ ಮಾಡಿಕೊಂಡರು. ಧಾರವಾಡ ತಾಲೂಕ ಬ್ರಾಹ್ಮಣ ಸಮಾಜ ಕೇವಲ ಒಂದು ವರ್ಗಕ್ಕೆ ಸೇರದೆ ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು
ಬಹುಮಾನ ವಿತರಣೆ ಹಾಗೂ ವೇದಿಕೆ ಕಾರ್ಯಕ್ರಮ ಕ್ಕೆ ಆಗಮಿಸಿದ ಅತಿಥಿಗಳನ್ನು, ಅಧ್ಯಕ್ಷರನ್ನು ಹಾಗೂ ಗಣ್ಯರನ್ನು ಮತ್ತು ಸಬೀಕರನ್ನು ಶ್ರೀ ರಮೇಶ್ ಭಟ್ ಸ್ವಾಗತಿಸಿದರು.
ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಕೃಷ್ಣ ಕಟ್ಟಿಯವರನ್ನು ಕಾರ್ಯದರ್ಶಿ ರಮೇಶ ಪರ್ವತಿಕರ ಪರಿಚಯಿಸಿದರು.
ಮಹಿಳಾ ಮಂಡಳದವರಿಗಾಗಿ ನಡೆದ ನಾಡಗೀತೆ ಸ್ಪರ್ಧೆಯ ನಿರ್ಣಾಯಕರಾಗಿ ವಿದುಷಿ ಪದ್ಮಜಾ ಮಹಾಜನ ಹಾಗೂ ವಿದುಷಿ ಗೀತಾ ಆಲೂರು ಆಗಮಿಸಿದ್ದರು. ನಿರ್ಣಾಯಕರನ್ನು ಶ್ರೀಮತಿ ರತಿ ಶ್ರೀನಿವಾಸ್ ಪರಿಚಯಿಸಿದರು.
ಭಾಷಣ ಸ್ಪರ್ಧೆಯ ನಿರ್ಣಾಯಕರಾಗಿ ಡಾ. ಶಶಿಧರ ನರೇಂದ್ರ ಹಾಗೂ ಡಾ. ಬಸವರಾಜ ಪಾಟೀಲ ಆಗಮಿಸಿದ್ದರು. ನಿರ್ಣಾಯಕರ ಪರಿಚಯವನ್ನು ಶ್ರೀ ಅರುಣ್ ಪಾಟೀಲ ಕುಲಕರ್ಣಿ ನಡೆಸಿಕೊಟ್ಟರು.
ಇಡಿ ಕಾರ್ಯಕ್ರಮದ ಸಂಚಾಲಕತ್ವ ಹಾಗೂ ನಿರೂಪಣೆಯ ಜವಾಬ್ದಾರಿಯನ್ನು ನಮ್ಮ ಸದಸ್ಯರೇ ಆದ ಶ್ರೀಮತಿ ವಿದ್ಯಾ ಕದರಮಂಡಲಗಿ, ಆರತಿ ಜಾಹಗಿರಾದಾರ, ಜಯಶ್ರೀ ಕರಿಗುದರಿ, ಜಯಶ್ರೀ ಆಶ್ರಿತ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿ ಆಗುವಲ್ಲಿ ಸಹಕರಿಸಿದರು. ಶ್ರೀ ಸಮೀರ ಜೋಶಿ,ಪ್ರಸನ್ನ ಬಿಜಾಪುರ, ಪ್ರಭಾಕರ ಗದ್ರೆ, ಎ. ಸಿ. ಕುಲಕರ್ಣಿ, ಹಾಗೂ ರಾಜುಪಾಟೀಲ-ಕುಲಕರ್ಣಿಉಪಸ್ಥಿತರಿದ್ದರು.
ಡಿ ಟಿ ಬಿ ಎಸ್ ನ ಉಪಾಧ್ಯಕ್ಷರು ಶ್ರೀ ರಂಗಣ್ಣ ಕುಲಕರ್ಣಿಯವರು ವಂದನಾರ್ಪಣೆ ಮಾಡಿದರು.
🙏🙏🙏

Photos of Independence day celebrations on15-08-2023 at DT. B. S. Thanks to all members for ur presence &support. Ur par...
15/08/2023

Photos of Independence day celebrations on15-08-2023 at D
T. B. S. Thanks to all members for ur presence &support. Ur participation is appreciated.👌👍👏👏🌹🌹 DTBS-Dharwad.

19/01/2023

Address

Dharwad

Website

Alerts

Be the first to know and let us send you an email when Dharwad Taluk Brahmana Sabha - DTBS posts news and promotions. Your email address will not be used for any other purpose, and you can unsubscribe at any time.

Share