ಹಿಂದು ಧಾರ್ಮಿಕ ಸೇವಾ ಸಮಿತಿ,ಕನ್ಯಾಡಿ.

  • Home
  • India
  • Dharmasthala
  • ಹಿಂದು ಧಾರ್ಮಿಕ ಸೇವಾ ಸಮಿತಿ,ಕನ್ಯಾಡಿ.

ಹಿಂದು ಧಾರ್ಮಿಕ ಸೇವಾ ಸಮಿತಿ,ಕನ್ಯಾಡಿ. Hindu Dharmika Seva Samithi

*ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಿಂದೂ ಧಾರ್ಮಿಕ ಸೇವಾ ಸಮಿತಿ, ಕನ್ಯಾಡಿ ಯವರಿಂದ ರೂ. 25,000 /- ದೇಣಿಗೆ :*  *ಕನ್ಯಾಡಿ (ಆ .08):* ಕ...
30/08/2025

*ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಿಂದೂ ಧಾರ್ಮಿಕ ಸೇವಾ ಸಮಿತಿ, ಕನ್ಯಾಡಿ ಯವರಿಂದ ರೂ. 25,000 /- ದೇಣಿಗೆ :*

*ಕನ್ಯಾಡಿ (ಆ .08):* ಕನ್ಯಾಡಿಯ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಸದಸ್ಯರು ಕನ್ಯಾಡಿ ಸೇವಾನಿಕೇತನಕ್ಕೆ ಆಗಸ್ಟ್ 08 ರಂದು ಭೇಟಿ ನೀಡಿ. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ ರೂ. 25,000/- ದ ಚೆಕ್ ನೀಡಿ ಕಟ್ಟಡದ ನಿರ್ಮಾಣ ಶೀಘ್ರವಾಗಿ ನೆರವೇರುವಂತೆ ಶುಭಹಾರೈಸಿದರು. ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ ವಿನಾಯಕರಾವ್ ರವರು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಕನ್ಯಾಡಿ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜೇಶ್ ಪಿ, ಕಾರ್ಯದರ್ಶಿ ಶ್ರೀ ಗಣೇಶ್ ಬಜಿಲ, ಉಪಾಧ್ಯಕ್ಷರಾದ ಶ್ರೀ ಅರುಣ್ ನಾಯ್ಕ್, ಸಂಯೋಜಕರಾದ ಶ್ರೀ ರಾಘವ ಕುರ್ಮಾಣಿ, ಸಹಕಾರ್ಯದರ್ಶಿ ಶ್ರೀ ವಿದ್ಯಾಧರ್ ರೈ, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಚೇತನ್ ಗುಡಿಗಾರ್, ಕಾರ್ಯಧ್ಯಕ್ಷರಾದ ಶ್ರೀ ಗೋವಿಂದ ಸುವರ್ಣ ಪೊಂಗರು, ಸದಸ್ಯರಾದ ಶ್ರೀ ಮಹಾಬಲ ನಾಯ್ಕ ಮತ್ತು ಶ್ರೀ ಉಮೇಶ ಆಚಾರ್ಯ ಉಪಸ್ಥಿತರಿದ್ದರು.

*🔴ಕನ್ಯಾಡಿ: ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಿಂದೂ ಧಾರ್ಮಿಕ ಸೇವಾ ಸಮಿತಿ, ಕನ್ಯಾಡಿಯವರಿಂದ ರೂ. 25,000 /- ದೇಣಿಗೆ*https://uplustv...
30/08/2025

*🔴ಕನ್ಯಾಡಿ: ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಿಂದೂ ಧಾರ್ಮಿಕ ಸೇವಾ ಸಮಿತಿ, ಕನ್ಯಾಡಿಯವರಿಂದ ರೂ. 25,000 /- ದೇಣಿಗೆ*

https://uplustv.com/2025/08/08/ಕನ್ಯಾಡಿ-ಸೇವಾಭಾರತಿ-ನೂತನ-ಕಟ್ಟಡ-ನಿರ್ಮಾಣಕ್ಕೆ-ಹಿಂದೂ-ಧಾರ್ಮಿಕ-ಸೇವಾ-ಸಮಿತಿ-ಕನ್ಯಾಡಿಯವರಿಂದ-ರೂ-25000-ದೇಣಿಗೆ

*📡ಯು ಪ್ಲಸ್‌ ಟಿವಿ 🌐*
*📡 U PLUS TV 🌐*

*🪀 JOIN WHATSAPP GROUP*
https://chat.whatsapp.com/F82kSqycNNS3NjHgm89l6e?mode=ac_t

ಕನ್ಯಾಡಿ (ಆ .08): ಕನ್ಯಾಡಿಯ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಸದಸ್ಯರು ಕನ್ಯಾಡಿ ಸೇವಾನಿಕೇತನಕ್ಕೆ ಆಗಸ್ಟ್ 08 ರಂದು ಭೇಟಿ ನೀಡಿ ಬೆನ್ನುಹು...

https://belthangady.suddinews.com/archives/797385
30/08/2025

https://belthangady.suddinews.com/archives/797385

ಕನ್ಯಾಡಿ : ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ ವೈದ್ಯಕೀಯ ವೆಚ್ಚಕ್ಕಾಗಿ ರೂ. 10.000/- ಸಹಕಾರ August 30, 2025 0 FacebookTwitterWhatsApp ಕನ್ಯಾಡಿ: ಕನ್ಯಾಡಿಯ ಹಿಂದೂ...

30/08/2025

ಮಳೆಯನ್ನು ಲೆಕ್ಕಿಸದೆ ವಿಘ್ನನಿವಾರಕನ ಭಕ್ತಿಯಲ್ಲಿ ನಿರತರಾದ ಕನ್ಯಾಡಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಶೋಭಾಯಾತ್ರೆಯಲ್ಲಿ ಭಕ್ತ ಪ್ರಿಯ ಭಜನಾ ಮಂಡಳಿ ಕನ್ಯಾಡಿ ಮತ್ತು ಶ್ರೀ ಷಣ್ಮುಖ ಭಜನಾ ಮಂಡಳಿ ನಾರ್ಯ ಸದಸ್ಯರಿಂದ ಭಜನಾ ಸೇವೆ...🚩🚩🚩

22/08/2025

*ಆತ್ಮೀಯರೇ*,

ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ ೨ ಇದರ ಆಶ್ರಯದಲ್ಲಿ ಆಗಸ್ಟ್ 27 ಬುಧವಾರ ದ0ದು ಕನ್ಯಾಡಿ ಶಾಲೆಯಲ್ಲಿ ನಡೆಯಲಿರುವ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಅಂಗವಾಗಿ *ವಿದ್ಯಾರ್ಥಿಗಳಿಗೆ ಚಿತ್ರ ಕಲಾ ಸ್ಪರ್ಧೆ* ಆಯೋಜಿಸಲಾಗಿದೆ. 1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿರುವ ಈ ಸ್ಪರ್ಧೆಯಲ್ಲಿ, 1ರಿಂದ 6 ಕಿರಿಯ ಮತ್ತು 7ರಿಂದ 10 ಹಿರಿಯ ಹೀಗೆ ಪ್ರತ್ಯೇಕ ವಿಭಾಗ ಮಾಡಲಾಗಿದೆ.
ಆಸಕ್ತರು ಎಂ. ಕೆ ಕನ್ಯಾಡಿ 9481146671 / ಪ್ರಶಾಂತ್ 9844489806 ಮೊಬೈಲ್ ಸಂಖ್ಯೆಗೆ 26 ಮಂಗಳವಾರ 2025ರ ಸಂಜೆ 8 ಗಂಟೆಯೊಳಗೆ ಹೆಸರು ನೋಂದಾಯಿಸಿ ಸಹಕರಿಸುವಂತೆ ಸಮಿತಿ ವಿನಂತಿಸುತ್ತದೆ.

ವಿಷಯ : ' ಗಣಪತಿ - ನಾ ಕಂಡಂತೆ... '

ನಿಬಂಧನೆಗಳು:-
👉 ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ.
👉 ಕಲರ್ ಬಳಕೆಗೆ ಅವಕಾಶ ಇದೆ.
👉 ಡ್ರಾಯಿಂಗ್ ಹಾಳೆಯನ್ನು ಮಾತ್ರ ಸಮಿತಿ ಒದಗಿಸುತ್ತದೆ.
👉 ಗಣತಿಯ ಚಿತ್ರವನ್ನು ಸ್ಪರ್ಧಾ ಕೊಠಡಿಯೊಳಗೆ ತರಲು ಅವಕಾಶವಿದೆ.
👉 ಸ್ಪರ್ಧೆ ಮುಗಿಯುವವರೆಗೂ ಪೋಷಕರು ಕೊಠಡಿಗೆ ಯಾವುದೇ ಕಾರಣಕ್ಕೂ ಪ್ರವೇಶಿಸುವಂತಿಲ್ಲ.
👉 ಕೊಠಡಿಯೊಳಗೆ ಆಯೋಜಕರು ಹೊರತು ಪಡಿಸಿ ಮೊಬೈಲ್ ಬಳಕೆ ನಿಷೇಧ.
👉 ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿ ಕಡ್ಡಾಯವಾಗಿ ತರ ತಕ್ಕದ್ದು.
👉 ಚೀಟು ಹಾಕಿ ಸ್ಪರ್ಧಾಳುಗಳಿಗೆ ಕ್ರಮ ಸಂಖ್ಯೆ ನೀಡಲಾಗುವುದು.
👉 ಸ್ಪರ್ಧೆ ಬೆಳಗ್ಗೆ 10 ರಿಂದ 11:30ರ ವರೆಗೆ (ಒಂದೂವರೆ ಗಂಟೆ) ನಡೆಯಲಿದೆ. (ಹತ್ತು ನಿಮಿಷ ಮುಂಚಿತವಾಗಿ ಬನ್ನಿ)
👉 ತೀರ್ಪುಗಾರರ ತೀರ್ಮಾನವೇ ಅಂತಿಮ.

22/08/2025
ಕನ್ಯಾಡಿ||: ಡಾ. ಡಿ.ವೀರೇಂದ್ರ ಹೆಗ್ಗಡೆ ಯವರಿಂದ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.ಕನ್ಯಾಡಿ ||: ಹಿಂದೂ...
22/08/2025

ಕನ್ಯಾಡಿ||: ಡಾ. ಡಿ.ವೀರೇಂದ್ರ ಹೆಗ್ಗಡೆ ಯವರಿಂದ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಕನ್ಯಾಡಿ ||: ಹಿಂದೂ ಧಾರ್ಮಿಕ ಸೇವಾ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕನ್ಯಾಡಿ 2 ಇದರ ಆಶ್ರಯದಲ್ಲಿ ಕನ್ಯಾಡಿ ಶಾಲಾ ಆವರಣದಲ್ಲಿ ನಡೆಯುವ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ಪಿ., ಕಾರ್ಯದರ್ಶಿ ಗಣೇಶ್ ಗೌಡ ಬಜಿಲ ಉಪಾಧ್ಯಕ್ಷರಾದ ಅರುಣ್ ನಾಯ್ಕ ನೆಲ್ಲಿಗುಡ್ಡೆ, ಸಹಕಾರ್ಯದರ್ಶಿ ವಿದ್ಯಾಧರ ರೈ ಪಜಿರಡ್ಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಚೇತನ್ ಗುಡಿಗಾರ್ ಅಲೆಕ್ಕಿ, ಕಾರ್ಯಾಧ್ಯಕ್ಷ ಗೋವಿಂದ ಸುವರ್ಣ ಪೊಂಗಾರು, ಉಪಾಧ್ಯಕ್ಷರಾದ ವಸಂತ್ ನಾಯ್ಕ, ಸುಂದರ ಗೌಡ ಬಜಿಲ, ಸಮಿತಿಯ ಪ್ರಮುಖರಾದ ಸುದರ್ಶನ್ ಕನ್ಯಾಡಿ, ಪ್ರಭಾಕರ ಗೌಡ, ರಾಧೇಶ್ ಗೌಡ ಉಪಸ್ಥಿತರಿದ್ದರು.

Address

Kanyady , Near Dharmasthala
Dharmasthala
574216

Telephone

09448441374

Website

Alerts

Be the first to know and let us send you an email when ಹಿಂದು ಧಾರ್ಮಿಕ ಸೇವಾ ಸಮಿತಿ,ಕನ್ಯಾಡಿ. posts news and promotions. Your email address will not be used for any other purpose, and you can unsubscribe at any time.

Share