17/01/2026
ತಮಿಳುನಾಡಿನಲ್ಲಿ ತಮ್ಮ ಖಾಸಗಿ ವಾಹನಗಳ ಮೇಲೆ ಕನ್ನಡ ಬಾವುಟವನ್ನು ಅಭಿಮಾನದಿಂದ ಹಾರಿಸಿಕೊಂಡು ಬರ್ತಿದ್ದ ವಾಹನಗಳ ಅಡ್ಡಗಟ್ಟಿ ಹಲ್ಲೆ ಮಾಡ್ತಿದ್ದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಳುವಂತೆ ತಮಿಳುನಾಡು ಗೃಹ ಸಚಿವರಿಗೆ ಸೂಚನೆ ನೀಡುವಂತೆ ನಮ್ಮ ಕರ್ನಾಟಕ ಗೃಹ ಸಚಿವರುDR. G Parameshwara ಅವರಿಗೆ ಯುವ ಕರ್ನಾಟಕ ವೇದಿಕೆ ವತಿಯಿಂದ ಆಗ್ರಹಿಸಲಾಯಿತು..✊💛❤️
ಮಾನ್ಯ ಗೃಹ ಸಚಿವರ ಬಳಿ ಯುಕವೇ ಮನವಿ.. 👇
ಮಾನ್ಯರೆ,
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಕೋರಿಕೊಳ್ಳುವುದೇನೆಂದರೆ ಕರ್ನಾಟಕದಿಂದ ಲಕ್ಷಾಂತರ ಕನ್ನಡಿಗರು ತಮ್ಮ ಖಾಸಗಿ ವಾಹನಗಳಲ್ಲಿ ತಮಿಳುನಾಡು ಮಾರ್ಗವಾಗಿ ಶಬರಿಮಲೆಗೆ ಹೋಗುತ್ತಿದ್ದು,
ಈ ಸಂದರ್ಭದಲ್ಲಿ ನಮ್ಮ ನಾಡಿನ ಕನ್ನಡ ಬಾವುಟವನ್ನು ತಮ್ಮ ಖಾಸಗಿ ವಾಹನದ ಮೇಲೆ ಅಭಿಮಾನದಿಂದ ಹಾರಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಂತಹವರನ್ನು ಗುರಿಯಾಗಿಸಿಕೊಂಡು ಸದರಿ ವಾಹನಗಳನ್ನು ತಡೆಗಟ್ಟಿ ಕನ್ನಡಿಗರ ಅಭಿಮಾನದ ಕನ್ನಡ ಬಾವುಟವನ್ನು ಕಿತ್ತು ಎಸೆಯುವುದಲ್ಲದೆ ಕನ್ನಡ ಚಾಲಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿ ದೈಹಿಕವಾಗಿ ಹಲ್ಲೆಯನ್ನು ಮಾಡಿರುತ್ತಾರೆ.
ಈ ರೀತಿಯ ಘಟನೆಗಳು ಇದೇ ಮೊದಲೆನಲ್ಲ ಬದಲಾಗಿ ಪ್ರತಿ ವರ್ಷವೂ ಕೂಡ ಶಬರಿಮಲೆಗೆ ಹೋಗುವ ಕನ್ನಡಿಗರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಶೋಷಣೆ ಮಾಡುತ್ತಾ ಬರುತ್ತಿರುತ್ತಾರೆ.
ಕನ್ನಡಿಗರು ಕನ್ನಡ ಬಾವುಟವನ್ನು ತಮಿಳುನಾಡಿನ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಹಾರಿಸಿಲ್ಲ ಬದಲಾಗಿ ತಮ್ಮದೇ ಖಾಸಗಿ ವಾಹನದಲ್ಲಿ ಅಭಿಮಾನದಿಂದ ಹಾರಿಸಿಕೊಂಡು ಹೋಗುವ ಸಂದರ್ಭದಲ್ಲಿ ಅಲ್ಲಿನ ಕೆಲವು ಕಿಡಿಗೇಡಿಗಳು ನಡೆಸುತ್ತಿರುವ ಈ ರೀತಿಯ ಕೃತ್ಯಗಳು ಕನ್ನಡಿಗರ ಭಾವನೆಗಳನ್ನು ಕೆರಳಿಸಿದ್ದು,
ಅಲ್ಲಿನ ಕೆಲವರು ಮಾಡುವ ಈ ಪ್ರಚೋದನಾಕಾರಿ ಕೆಲಸದಿಂದ ಕರ್ನಾಟಕದ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಅನ್ಯೋನ್ಯವಾಗಿ ಬದುಕುತ್ತಿರುವ ಕನ್ನಡಿಗರು ಮತ್ತು ತಮಿಳರ ಮಧ್ಯೆ ಸಂಘರ್ಷ ಏರ್ಪಡುವ ಸಾಧ್ಯತೆಗಳು ಇದ್ದು ದಯವಿಟ್ಟು ಕರ್ನಾಟಕದ ಗೃಹ ಮಂತ್ರಿಗಳಾದ ತಾವು ಈ ಕೂಡಲೇ ಈ ವಿಚಾರದ ಗಂಭೀರತೆಯನ್ನು ತಮಿಳುನಾಡು ಸರ್ಕಾರದ ಅಲ್ಲಿನ ಗೃಹ ಮಂತ್ರಿಗಳಿಗೆ ತಿಳಿಸುವ ಮೂಲಕ ಕನ್ನಡಿಗರ ವಾಹನಗಳನ್ನು ತಡೆದು ಕನ್ನಡ ಬಾವುಟವನ್ನು ಕಿತ್ತೆಸೆದು ಕನ್ನಡ ಚಾಲಕರಿಗೆ ಕೆಟ್ಟ ಪದಗಳಿಂದ ನಿಂದನೆ ಮಾಡಿ ದೈಹಿಕವಾಗಿ ಹಲ್ಲೆ ಮಾಡುವ ಸದರಿ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ಯುವ ಕರ್ನಾಟಕ ವೇದಿಕೆ ತಮ್ಮಲ್ಲಿ ಕೇಳಿಕೊಳ್ಳುತ್ತದೆ.
ಧನ್ಯವಾದಗಳು..
#ಯುವಕರ್ನಾಟಕವೇದಿಕೆ