19/09/2025
ಇವತ್ತು ' #ಕ್ಷಮಾದಿನ'ವಂತೆ. ಕೇಳಲು ಎಷ್ಟು #ಸೊಗಸಾಗಿದೆ. ನನಗೂ ಗೊತ್ತಿರಲಿಲ್ಲ. ಇಲ್ಲಿಯವರೆಗೂ #ಆಚರಿಸಿದ ಎಲ್ಲಾ ದಿನಗಳಿಗಿಂತಲೂ ಇದು ನಿಜಕ್ಕೂ #ಅರ್ಥಪೂರ್ಣ ದಿನ ಅನಿಸುತ್ತದೆ. ಎಷ್ಟೋ #ಸಂಬಂಧಗಳನ್ನು ನಮ್ಮ #ಅಹಂಕಾರದಿಂದಲೇ ಕಳೆದುಕೊಳ್ಳುತ್ತೇವೆ. ಆಧುನಿಕ ಜೀವನಶೈಲಿ, ಧಾವಂತದ ಬದುಕಿನ ಮಧ್ಯೆ, ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ,ತಮ್ಮ, ಸಂಬಂಧಿಕರು, ಮಿತ್ರರು ಹೀಗೆ ನಮ್ಮ ಬದುಕಿನ #ಬಹುಮುಖ್ಯ ಸಂಬಂಧಗಳನ್ನು #ಕಡೆಗಾಣಿಸುತ್ತಿದ್ದೇವೆ. #ಕ್ಷಮೆ ಕೇಳುವ ಮೂಲಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳೋಣ.
ದೊಡ್ಡವರು ಹೇಳಿದ ಮಾತು.
#ಧೈರ್ಯವಂತ ಮಾತ್ರ ಕ್ಷಮೆ ಕೇಳುತ್ತಾನೆ, #ಹೃದಯವಂತನಿಗೆ ಮಾತ್ರವೇ ಕ್ಷಮಿಸುವ ಗುಣವಿರುತ್ತೆ..
* #ಕ್ಷಮಾ_ದಿನದ_ಮಂತ್ರ*
ತಿಳಿದೊ, ತಿಳಿಯದೆಯೋ, #ನಾನು ಯಾರನ್ನಾದರೊ, ಯಾರಿಗಾದರೂ, ಮನ ನೋಯಿಸಿದ್ದರೆ #ಕ್ಷಮೆಯಿರಲಿ 🙏🙏🙏