26/01/2026
ಇಂದು ನಮ್ಮ #ಒಡೆಯರ್_ಆಂಗ್ಲ_ಮಧ್ಯಮ_ಪಬ್ಲಿಕ್_ಶಾಲೆ_ಜಾಲಗೇರಿಯಲ್ಲಿ #77ನೇ #ಗಣರಾಜ್ಯೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ #ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ #ಶ್ರೀ_ಪರಮೇಶ್ವರ_ಒಡೆಯರ್ ರವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ #ಶ್ರೀಯುತ_ಕರಿಯಪ್ಪ_ಆಸಂಗಿಯವರು ಭೂಸೇನಾ ಅಭಿವೃದ್ದಿ ನಿಗಮ ವ್ಯವಸ್ಥಾಪಕ ಇಲಾಖೆಯ ಕೊಡಗು ಜಿಲ್ಲಾ ವ್ಯವಸ್ಥಾಪಕರು ಮತ್ತು ವಿಜಯಪುರ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಮತ್ತು #ಘೋಡಕೆ_ಫೌಂಡೇಷನ್ ಸಂಸ್ಥಾಪಕರು ಆದ #ಶ್ರೀಯುತ_ರೇವಣಸಿದ್ದ_ಆರ್_ಘೋಡಕೆಯವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಶ್ರೀಯುತ ರೇವಣಸಿದ್ದ ಘೋಡಕೆಯವರು ಮತ್ತು ಶ್ರೀಯುತ ಬಸವರಾಜ ಒಡೆಯರ್ ರವರು ಪೂಜೆ ಸಲ್ಲಿಸಿದರು.
ನಂತರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶ್ರೀಯುತ ಕರಿಯಪ್ಪ ಆಸಂಗಿಯವರು "ಗ್ರಾಮೀಣ ಮಟ್ಟದಲ್ಲಿ ಇಂತಹ ಶಿಕ್ಷಣ ಸಂಸ್ಥೆಗಳು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನು ವೃದ್ದಿಸುವಂತಹ ಕಾರ್ಯಗಳನ್ನು ಮಾಡುತ್ತವೆ. ಅಂತಹ ಸಂಸ್ಥೆಗಳಲ್ಲಿ #ಒಡೆಯರ್_ಶಿಕ್ಷಣ_ಸಂಸ್ಥೆ ಯು ಉತ್ತುಂಗದಲ್ಲಿರಬೇಕು, ಅಲ್ಲದೇ ಇಂತಹ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆಗೈದ ಒಡೆಯರ್ ಶಿಕ್ಷಣ ಸಂಸ್ಥೆ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ" ಎಂದು ಹಾರೈಸಿದರು, ನಂತರ ಮಾತನಾಡಿದ ಶ್ರೀಯುತ ರೇವಣಸಿದ್ದ ಆರ್ ಘೋಡಕೆಯವರು "ಶಿಕ್ಷಣ ಎನ್ನುವದು ಮನುಷ್ಯ ಜೀವನದ ಅವಿಭಾಜ್ಯ ಅಂಗ ಅದನ್ನು ನಾವು ಅತ್ಯಂತ ಜಾಗರೂಕತೆಯಿಂದ ಸ್ವೀಕರಿಸುವ ಜೊತೆಗೆ ಹುಟ್ಟಿದ ಮನೆಗೆ, ಕಲಿತ ಶಾಲೆಗೆ, ಕಲಿಸಿದ ಗುರುಗಳಿಗೆ, ಮತ್ತು ಬೆಳೆದ ಊರಿಗೆ ಕೀರ್ತಿ ತರುವಂಥಹ ಕಾರ್ಯವನ್ನು ಇಂದಿನ ವಿಧ್ಯಾರ್ಥಿಗಳು ಮಾಡಬೇಕು, ಮುಂದಿನ ದಿನಗಳಲ್ಲಿ ನಾವು ಒಡೆಯರ್ ಸಂಸ್ಥೆಯೊಂದಿಗೆ ವಿಜಯಪುರ ಜಿಲ್ಲೆಯಯಾದ್ಯಂತ ನಮ್ಮ ಘೋಡಕೆ ಫೌಂಡೇಷನ್ ವತಿಯಿಂದ ಕೆಎಸ್, ಐಎಎಸ್ ಪರೀಕ್ಷೆಯಲ್ಲಿ ಪಾಸಾದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಹೇಳಿದರು
ನಂತರ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿಧ್ಯಾರ್ಥಿಗಳಿಗೆ ಮತ್ರು ಕ್ಲಸ್ಟರ್ ಮಟ್ಟದ, ತಾಲೂಕಾ ಮಟ್ಟದ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಅಧ್ಯಕ್ಷರ ಮತ್ತು ಅತಿಥಿಗಳ ಮತ್ತು ಊರಿನ ಹಿರಿಯರ ಮತ್ತು ಪಾಲಕರ ಸಮ್ಮುಖದಲ್ಲಿ ಪ್ರಶಸ್ತಿ ಪತ್ರವನ್ನು ಪ್ರಧಾನಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಾಲಗೇರಿ ಗ್ರಾಮದ ಪ್ರಮುಖರಾದ ಗಜಾನಂದ ಶಿರಾಳಶೆಟ್ಟಿ (ನಿವೃತ್ತ ಭಾರತೀಯ ಯೋಧರು) ಕೋಮು ಜಾಧವ್, ನಿಂಗಪ್ಪ ಗಾಡವೆ, ಸಂತೋಷ ವೇಣು ಲಮಾಣಿ, ಶ್ರೀಕಾಂತ್ ಚವ್ಹಾಣ, ಸಿದರಾಯ ಬಿರಾದರ, ಸುನೀಲ್ ರಾಠೋಡ್, ಪಾಪು ರಾಠೋಡ್, ಆನಂದ ಪವಾರ, ಮಲ್ಲೆಶ್ವರ ರಾಠೋಡ್, ಉತ್ತಮ ಜಾಧವ, ಕಲ್ಲುಗೌಢ ಬಿರಾದಾರ, ಉತ್ತಮ ಜಾಧವ್, ರವಿ ಪವಾರ್ ಮುಂತಾದ ಪ್ರಮುಖರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.