31/05/2025
ಬೀದರ್ ನಲ್ಲಿ ರೈಲ್ವೆ ಅಭಿವೃದ್ಧಿಗೆ ಭೂಮಿ ಪೂಜೆ – ಮಾನ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಆತ್ಮೀಯ ಸ್ವಾಗತ
ನಮ್ಮ ಬೀದರ್ ಜಿಲ್ಲೆಯಲ್ಲಿ ವಿವಿಧ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸುತ್ತಿರುವ ಸನ್ಮಾನ್ಯ ಕೇಂದ್ರ ರಾಜ್ಯ ರೈಲ್ವೆ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಆತ್ಮೀಯ ಸ್ವಾಗತ.
ಬೀದರ್ ನ ರೈಲ್ವೆ ಅಭಿವೃದ್ಧಿಯ ಪ್ರಮುಖ ಯೋಜನೆಗಳು:
🔹 ₹15 ಕೋಟಿ ಗೂಡ್ಸ್ ಶೆಡ್ – ಖಾನಾಪುರ ಜಂಕ್ಷನ್:
ಈ ಯೋಜನೆಯು ಸರಕು ಸಾಗಣೆ ಸುಲಭಗೊಳಿಸಿ, ಕೃಷಿಕರು ಮತ್ತು ವ್ಯಾಪಾರಸ್ಥರಿಗೆ ನೇರ ಲಾಭ, ಉದ್ಯೋಗಾವಕಾಶವೃದ್ದಿ ಹಾಗೂ ಜಿಲ್ಲೆ ಆರ್ಥಿಕತೆಗೆ ಬಲ ನೀಡಲಿದೆ.
🔹 ₹10.80 ಕೋಟಿ ಆರ್.ಯು.ಬಿ (ರೋಡ್ ಅಂಡರ್ ಬ್ರಿಡ್ಜ್):
ಈ ಯೋಜನೆಯು ಸುರಕ್ಷಿತ ಹಾಗೂ ನಿರಂತರ ರಸ್ತೆ – ರೈಲ್ವೆ ಸಂಚಾರ, ಅಪಘಾತ ನಿಲ್ಲಿಸಲು ಪ್ರಯತ್ನ ಹಾಗೂ ಗ್ರಾಮೀಣ ಸಂಪರ್ಕಕ್ಕೆ ಉತ್ತೇಜನ ನೀಡಲಿದೆ.
ರೈಲ್ವೆ ಬಲವರ್ಧನೆಯ ಈ ಮಹತ್ವದ ಹೆಜ್ಜೆಗಳು ಬಡಾವಣೆ ಮತ್ತು ಗ್ರಾಮೀಣ ಪ್ರದೇಶಗಳ ಸಂಪರ್ಕವನ್ನು ಸುಧಾರಿಸಿ, ಆರ್ಥಿಕತೆಯ ಬೆಳವಣಿಗೆಗೆ ದಿಕ್ಕು ತೋರಲಿವೆ. ನಮ್ಮ ಬೀದರ್ ಜಿಲ್ಲೆ ಬೆಳೆಯಲಿ, ಬದಲಾಗಲಿ.