Sri Matru Mahila Mandali

Sri Matru Mahila Mandali Educate for women and children.

ಮಾತೃ ಮಹಿಳಾ ಮಂಡಳಿ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಬಳ್ಳಾರಿ: ಶ್ರೀ ಮಾತೃ ಮಹಿಳಾ ಮಂಡಳಿ ವತಿಯಿಂದ ನಗರದ ರಾಕ್ ಗಾರ್ಡನ್ ನಲ್ಲಿ ಭಾನ...
01/04/2026

ಮಾತೃ ಮಹಿಳಾ ಮಂಡಳಿ ವತಿಯಿಂದ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಬಳ್ಳಾರಿ: ಶ್ರೀ ಮಾತೃ ಮಹಿಳಾ ಮಂಡಳಿ ವತಿಯಿಂದ ನಗರದ ರಾಕ್ ಗಾರ್ಡನ್ ನಲ್ಲಿ ಭಾನುವಾರ ಆಯೋಜನೆ ಮಾಡಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಾಸ್ಯ ಕಲಾವಿದ ಪ್ರಾಣೇಶ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮೊಬೈಲ್ ಗೆ ಹೆಚ್ಚು ಒತ್ತು ನೀಡದೆ ಪುಸ್ತಕಕ್ಕೆ ಹೆಚ್ಚಿನ ಸಮಯ ಮೀಸಲಿಡಿ, ಪುಸ್ತಕ ಓದುವುದರಿಂದ ನಮ್ಮಲ್ಲಿ ಹೆಚ್ಚು ಜ್ಞಾನ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.

ನಂತರ ಮಾತೃ ಮಹಿಳಾ ಮಂಡಳಿಯ ಅಧ್ಯಕ್ಷರಾದ ಪುಷ್ಪಲತಾ ಚಂದ್ರಶೇಖರ ಅವರು ಮಾತನಾಡಿ, ಮಾತೃ ಮಹಿಳಾ ಮಂಡಳಿ ಸ್ಥಾಪನೆ ಮಾಡಿ ಈ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಕನೆ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿದೆ. ನಮ್ಮ ಈ ಮಂಡಳಿ ಸದಾ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಅನುರಾಧ, ಹಾಸ್ಯ ಕಲಾವಿರಾದ ಬಸವರಾಜ್ ಮಹಾಮನಿ, ಪೋಲಾ ಪದ್ಮಾವತಿ, ಎಲ್ಲನ ಗೌಡ, ಸುನೀತಾ, ಕುಸುಮಾ, ಹೇಮಾ, ದೇವಿ, ಲಕ್ಷ್ಮೀ, ಮೇಮುದಾ ಹಾಗೂ ಮಾತೃ ಮಹಿಳಾ ಮಂಡಳಿ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕೋಮಲಿಕಾ ಮತ್ತು ಕೀರ್ತಿ ನಿರುಪಣೆ ಮಾಡಿದರು.
ಚಂದ್ರಿಕಾ ಚಂದ್ರಕಾಂತ ಅವರು ಸ್ವಾಗತಿಸಿದರು.
ಚಾರುಲತಾ ಅವರು ವಂದನಾರ್ಪಣೆ ಮಾಡಿದರು.
ಗುರು ಡ್ಯಾನ್ಸ್ ಅಕಾಡೆಮಿ ವತಿಯಿಂದ ನೃತ್ಯ ಮಾಡಲಾಯಿತು.
ಪ್ರಸೀದ, ಹಿಂದು ಮತ್ತು ದ್ರಾಕ್ಷಾಯಿಣಿ ಅವರು ನೃತ್ಯ ಮಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ರತ್ನಮ್ಮ ಮತ್ತು ನೀಲಮ್ಮ ಇಬ್ಬರು ಸಮಾಜ ಸೇವಕರಿಗೆ ಸನ್ಮಾನ ಮಾಡಲಾಯಿತು

ಕೊನೆಯಲ್ಲಿ ನೃತ್ಯ ಮತ್ತು ಗೇಮ್ಸ್, ಫ್ಯಾಶನ್ ಷೋ, ಮಾಡಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
.

*ಮೋಕಾದಲ್ಲಿ ಮಹಿಳಾ ದಿನಾಚರಣೆ: ಕೈಮಗ್ಗ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣೆ* ಬಳ್ಳಾರಿ,ಮಾ.31: ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಮೋಕಾ ಗ...
01/04/2026

*ಮೋಕಾದಲ್ಲಿ ಮಹಿಳಾ ದಿನಾಚರಣೆ: ಕೈಮಗ್ಗ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣೆ*

ಬಳ್ಳಾರಿ,ಮಾ.31: ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಮೋಕಾ ಗ್ರಾಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕೈಮಗ್ಗ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದ ಭವನದಲ್ಲಿ ಶ್ರೀ ಮಾತೃ ಮಹಿಳಾ ಮಂಡಳಿ ಹಾಗೂ ಮಹರ್ಷಿ ರೂರಲ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಪುಷ್ಪಲತಾ ಚಂದ್ರಶೇಖರ್ ಹಾಗೂ ಕೊಳ್ಳಿ ವಿಜಯ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಟೆಕ್ಸ್ಟೈಲ್ ಇಲಾಖೆಯ ಉಪ ನಿರ್ದೇಶಕರಾದ ಮಹಾಂತೇಶ್ ಕಂತಿಮಠ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಬಳ್ಳಾರಿ-ವಿಜಯನಗರ ಜಿಲ್ಲಾಧ್ಯಕ್ಷ ಕೆ.ರಾಜಣ್ಣ ಅವರು ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ಕರೆ ನೀಡಿದರು. ಸರ್ಕಾರ ಮಹಿಳೆಯರಿಗಾಗಿ ವಿವಿಧ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಕೈಮಗ್ಗ, ಟೈಲರಿಂಗ್, ಬ್ಯೂಟಿ ಪಾರ್ಲರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತರಬೇತಿ ಪಡೆದು ಸ್ವಂತ ಉದ್ಯಮ ಆರಂಭಿಸುವ ಅವಕಾಶಗಳಿವೆ ಎಂದು ತಿಳಿಸಿದರು. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಲು ಇಚ್ಛಿಸಿದರೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ನೆರವಾಗುತ್ತೇವೆ ಎಂದು ಭರವಸೆ ನೀಡಿದರು.

ಕೈಮಗ್ಗ ತರಬೇತಿ ಪಡೆದಿರುವುದು ಮಹಿಳೆಯರಿಗೆ ಹೊಸ ಅವಕಾಶಗಳನ್ನು ತೆರೆದಿಡುತ್ತದೆ. ಹಳ್ಳಿಯ ಮಟ್ಟದಲ್ಲೇ ಬಟ್ಟೆಗಳನ್ನು ತಯಾರಿಸಿ, ಖರೀದಿ ಹಾಗೂ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯವೆಂದು ಹೇಳಿದರು.

ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ಸಂಘದ ಅಧ್ಯಕ್ಷರಾದ ಪುಷ್ಪಲತಾ ಚಂದ್ರಶೇಖರ್, ವಿಜಯ್ ಕುಮಾರ್ ಹಾಗೂ ಅವರ ತಂಡದ ಸೇವೆಯನ್ನು ಗಣ್ಯರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸಹ ಇದೇ ರೀತಿಯ ಕಾರ್ಯಕ್ರಮಗಳು ಇನ್ನಷ್ಟು ಮಹಿಳೆಯರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಕೊನೆಯಲ್ಲಿ ಮಹಿಳೆಯರಿಗೆ ಕೈಮಗ್ಗ ತರಬೇತಿ ನೀಡಿದಂತ ಶಿಕ್ಷಕರಾದ ಭಾಗ್ಯಲಕ್ಷ್ಮಿ, ಪೂಜಾ ಮತ್ತು ಮುಮ್ತಾಜ್ ಅವರಿಗೆ ಹಾಗೂ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ಮಗು ಸ್ತ್ರೀಯ ಪಾಟೀಲ್ ಹಾಗೂ ತನುಶ್ರೀ ಪಾಟೀಲ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ, ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಅನುಸೂಯ, ಮೋಕಾ ಪಂಚಾಯತಿ ಪಿಡಿಒ ಸಿದ್ದಲಿಂಗಪ್ಪ, ಕೆಎಸ್‌ಜೆ ಯೂನಿಯನ್ ಜಿಲ್ಲಾಧ್ಯಕ್ಷ ಎರಗುಡಿ ರಮೇಶ್, ರೈತ ಸೇವಾ ಸಂಘದ ಕೃಷ್ಣಪ್ಪ, ಉಮಾಪತಿ, ಸಮಾಜ ಸೇವಕ ಎರಗುಡಿ ಚಂದ್ರಪ್ಪ, ಕರವೇ ಪದಾಧಿಕಾರಿ ಶ್ರೀಶೈಲ ಉಮಾಮಹೇಶ್ವರ, ರಾಜಕುಮಾರ್, ಮಲ್ಲಿಕಾರ್ಜುನ, ಊರಿನ ಮುಖಂಡರಾದ ರಾಜಣ್ಣ ಸೇರಿದಂತೆ ಮಹಿಳೆಯರು ಗ್ರಾಮಸ್ಥರು ಮತ್ತು ಮುಂತಾದವರು ಉಪಸ್ಥಿತರಿದ್ದರು.

Three months free magam work classes was conducted by our ngo in rural area 150 women's in moka village. Bellary.Women a...
28/12/2025

Three months free magam work classes was conducted by our ngo in rural area 150 women's in moka village. Bellary.
Women and child department DD Ramakrishna sir distributed certificates to all trained womens, gram pachayat president venkatesha, vice president ramanji, vijay Kumar, Raj kumara, ramesh, mallayanna, gangadhar, chandrashekar, and president pushpa nayak was present

Sri Mathru Mahila Mandali Bellary Conducted health camps in all the hostels and colleges.Given awarness on several probl...
28/12/2025

Sri Mathru Mahila Mandali Bellary
Conducted health camps in all the hostels and colleges.
Given awarness on several problems.

International women's day celebration
05/08/2025

International women's day celebration

Nomanition opens
28/02/2025

Nomanition opens

27/02/2025
27/02/2025
Come and enjoy the day friends
18/02/2025

Come and enjoy the day friends

On occasion of guru poornami, program was organized in allipur anadha ashrama given importance of the day and distribute...
26/07/2024

On occasion of guru poornami, program was organized in allipur anadha ashrama given importance of the day and distributed water bottles to all the students

Address

Patel Nagar
Bellari
583101

Alerts

Be the first to know and let us send you an email when Sri Matru Mahila Mandali posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sri Matru Mahila Mandali:

Share