08/06/2026
ದಿವ್ಯಾಂಗರಿಗೆ ಮನೆಯಿಂದಲೇ ರಿಯಾಯಿತಿ ರೈಲು ಟಿಕೆಟ್ ಬುಕ್ಕಿಂಗ್ ಸೌಲಭ್ಯ.
ಹೊಸ ವ್ಯವಸ್ಥೆಯಿಂದ ದೇಶದ ಸುಮಾರು 1.5 ಕೋಟಿ ದಿವ್ಯಾಂಗ ನಾಗರಿಕರ ಪ್ರಯಾಣ ಸುಲಭವಾಗಲಿದೆ. ಟಿಕೆಟ್ ಕೌಂಟರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಉದ್ದ ಸಾಲುಗಳು ಕೂಡ ಅಂತ್ಯಗೊಳ್ಳಲಿವೆ.
ನವದೆಹಲಿ: ದಿವ್ಯಾಂಗ ಪ್ರಯಾಣಿಕರು ರಿಯಾಯಿತಿ ರೈಲು ಟಿಕೆಟ್ ಪಡೆಯಲು ರೈಲು ನಿಲ್ದಾಣದ ಕೌಂಟರ್‌ಗಳಿಗೆ ಮತ್ತೆ ಮತ್ತೆ ಹೋಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇನ್ನು ಮುಂದೆ ಇರುವುದಿಲ್ಲ. ರೈಲ್ವೆಯು ಹೊಸ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ದಿವ್ಯಾಂಗರು ತಮ್ಮ ಮನೆಗಳಲ್ಲೇ ಕುಳಿತು ಆನ್‌ಲೈನ್ ಮೂಲಕ ರಿಯಾಯಿತಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಈ ಹೊಸ ನಿಯಮ ಜೂನ್ 1ರಿಂದ ಜಾರಿಗೆ ಬಂದಿದೆ. ರೈಲ್ವೆ ಮಂಡಳಿಯು ಈ ಕುರಿತು ಎಲ್ಲಾ ವಲಯ ರೈಲ್ವೆಗಳಿಗೆ ಆದೇಶ ಹೊರಡಿಸಿದೆ.
ಹೊಸ ವ್ಯವಸ್ಥೆಯಲ್ಲಿ ದಿವ್ಯಾಂಗರ ಯುಡಿಐಡಿ (UDID – Unique Disability ID) ಕಾರ್ಡ್ ಅನ್ನು ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ (PRS) ಹಾಗೂ ಐಆರ್‌ಸಿಟಿಸಿ (IRCTC) ದತ್ತಾಂಶಗಳೊಂದಿಗೆ ಜೋಡಿಸಲಾಗಿದೆ. ಇದರಿಂದ ಪ್ರತ್ಯೇಕ ಫೋಟೋ ಗುರುತಿನ ಚೀಟಿ (Railway Pass) ಪಡೆಯುವ ಅಗತ್ಯ ಇರುವುದಿಲ್ಲ.
ರಿಯಾಯಿತಿ ವಿವರಗಳು
ಸ್ಲೀಪರ್, 3ನೇ ಎಸಿ (3A) ಮತ್ತು ಎಸಿ ಚೇರ್ ಕಾರ್ಗಳಲ್ಲಿ ದಿವ್ಯಾಂಗ ಪ್ರಯಾಣಿಕರು ಹಾಗೂ ಅವರ ಸಹಾಯಕರಿಗೆ 75% ರಿಯಾಯಿತಿ. 1ನೇ ಎಸಿ ಮತ್ತು 2ನೇ ಎಸಿಯಲ್ಲಿ 50% ರಿಯಾಯಿತಿ. ರಾಜಧಾನಿ, ಶತಾಬ್ದಿ, ದೂರಂತೋ, ವಂದೇ ಭಾರತ್ ಮುಂತಾದ ಪ್ರೀಮಿಯಂ ರೈಲುಗಳ ಚೇರ್ ಕಾರ್ ಅಥವಾ ಎಸಿ-3 ವರ್ಗಗಳಲ್ಲಿ 25% ರಿಯಾಯಿತಿ. ಅಮೃತ ಭಾರತ್ ರೈಲುಗಳ ಸ್ಲೀಪರ್ ಮತ್ತು ಸಾಮಾನ್ಯ (ಜನರಲ್) ವರ್ಗಗಳಲ್ಲಿ ಸಹ 75% ರಿಯಾಯಿತಿ ಲಭ್ಯ. ಪ್ರೀಮಿಯಂ ರೈಲುಗಳ 1ನೇ ಮತ್ತು 2ನೇ ಎಸಿ ವರ್ಗಗಳಲ್ಲಿ ರಿಯಾಯಿತಿ ಲಭ್ಯವಿರುವುದಿಲ್ಲ.
ಯಾರಿಗೆ ಪ್ರಯೋಜನ?
40% ಅಥವಾ ಅದಕ್ಕಿಂತ ಹೆಚ್ಚು ಶಾಶ್ವತ ಅಥವಾ ತಾತ್ಕಾಲಿಕ ಅಂಗವೈಕಲ್ಯ ಹೊಂದಿರುವ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆಯಲಿದೆ.
ಇದರಲ್ಲಿ: ದೈಹಿಕ ಅಂಗವೈಕಲ್ಯ ಹೊಂದಿರುವವರು, ಸಂಪೂರ್ಣ ದೃಷ್ಟಿಹೀನರು, ಬೌದ್ಧಿಕ ಅಸಮರ್ಥತೆ ಹೊಂದಿರುವವರು, ಮೂಕ-ಬಧಿರರು, ಹಿರಿಯ ನಾಗರಿಕ ದಿವ್ಯಾಂಗರು,
ಪ್ರಮುಖ ಮಾಹಿತಿ
ರೈಲ್ವೆ ವ್ಯವಸ್ಥೆಯಲ್ಲಿ ದಿವ್ಯಾಂಗರಿಗಾಗಿ ಪ್ರತ್ಯೇಕ ಬುಕ್ಕಿಂಗ್ ಕೋಟಾ ಈಗಾಗಲೇ ಇದೆ. ಟಿಕೆಟ್ ಬುಕ್ಕಿಂಗ್ ವೇಳೆ ಯುಡಿಐಡಿ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ.
ಸಹಾಯಕ (Es**rt) ಜೊತೆಗೆ ಪ್ರಯಾಣಿಸುವ ದಿವ್ಯಾಂಗರಿಗೂ ಇದೇ ಸೌಲಭ್ಯ ದೊರೆಯುತ್ತದೆ.
Gajanana Sabannavar
President Lokpriya Janseva Sanstha Belagavi