14/08/2025
🌟 Honouring Excellence, Inspiring the Future 🌟
Yaksh*t Yuva Foundation, under the leadership of its Chairman, Taekwondo Master Shreepada R Rao, proudly felicitated Ms. Laxmi Radaratti, the first Para Taekwondo athlete from Belagavi District, for her remarkable achievement in clinching the Bronze Medal for India in the K-44, Women’s Under 47 kg category at the 10th Asian Para Taekwondo Championships, held from 29 July to 02 August 2025 in Kuching, Malaysia.
Taekwondo Master Rao lauded her perseverance, dedication, and indomitable spirit, and presented her with a scholarship of Rs. 15,000/- from the Foundation to support her continued journey towards sporting excellence. He also extended special appreciation to her coach, Mr. Kiran Pawar of Ecseed Taekwondo Academy, for his unwavering commitment and determination in uplifting athletes to achieve international success.
Ms. Laxmi’s triumph stands as a proud moment for Belagavi, Karnataka, and India, she's a beacon of inspiration for countless aspiring athletes across the nation. 🇮🇳🥋✨
ಜುಲೈ 29 ರಿಂದ ಆಗಸ್ಟ್ 02, 2025 ರವರೆಗೆ ಮಲೇಷ್ಯಾದ ಕುಚಿಂಗ್‌ನಲ್ಲಿ ನಡೆದ 10 ನೇ ಏಷ್ಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ K-44, 47 ಕೆಜಿ ಅಡಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದ ಗಮನಾರ್ಹ ಸಾಧನೆಗಾಗಿ ಬೆಳಗಾವಿ ಜಿಲ್ಲೆಯ ಮೊದಲ ಪ್ಯಾರಾ ಟೇಕ್ವಾಂಡೋ ಕ್ರೀಡಾಪಟು, ಕುಮಾರಿ ಲಕ್ಷ್ಮಿ ರಾಡರಟ್ಟಿಯನ್ನು ಯಕ್ಷಿತ್ ಯುವ ಫೌಂಡೇಶನ್ ಅಧ್ಯಕ್ಷರಾದ ಟೇಕ್ವಾಂಡೋ ಮಾಸ್ಟರ್ ಶ್ರೀಪಾದ ಆರ್. ರಾವ್ ಅವರು ಹೆಮ್ಮೆಯಿಂದ ಸನ್ಮಾನಿಸಿದರು.
ಮಾನ್ಯ ಟೇಕ್ವಾಂಡೋ ಮಾಸ್ಟರ್ ರಾವ್ ಅವರು ಕುಮಾರಿ ಲಕ್ಷ್ಮಿಯ ಪರಿಶ್ರಮ, ಕ್ರೀಡೆಗೆ ಸಮರ್ಪಣೆ ಮತ್ತು ಧೃಡ ಮನೋಭಾವವನ್ನು ಶ್ಲಾಘಿಸಿದರು ಮತ್ತು ಕ್ರೀಡಾ ಶ್ರೇಷ್ಠತೆಯತ್ತ ಲಚ್ಚಿಯ ನಿರಂತರ ಪ್ರಯಾಣವನ್ನು ಬೆಂಬಲಿಸಲು ಫೌಂಡೇಶನ್‌ನಿಂದ ೧೫,೦೦೦/- ರಪಾಯಿಯ ವಿದ್ಯಾರ್ಥಿವೇತನವನ್ನು ನೀಡಿದರು.
ಕುಮಾರಿ ಲಕ್ಷ್ಮಿಯು ಎಕ್ಸೀಡ್ ಟೇಕ್ವಾಂಡೋ ಅಕಾಡೆಮಿಯ ಮುಖ್ಯಸ್ಥರಾದ ಕಿರಣ್ ಪವಾರ್ ಅವರ ಸತತ ಪ್ರಶಿಕ್ಷಣದ ಮೂಲಕ ಈ ಸಾಧನೆ ಮಾಡಿರುವಳು.
ಅಂತರರಾಷ್ಟ್ರೀಯ ಯಶಸ್ಸನ್ನು ಸಾಧಿಸಲು ಕ್ರೀಡಾಪಟುಗಳನ್ನು ಉನ್ನತೀಕರಿಸುವಲ್ಲಿ ಎಕ್ಸೀಡ್ ಟೇಕ್ವಾಂಡೋ ಅಕಾಡೆಮಿಯ ಮುಖ್ಯಸ್ಥರಾದ ಕಿರಣ್ ಪವಾರ್ ಅವರ ಬದ್ಧತೆ ಮತ್ತು ದೃಢಸಂಕಲ್ಪಕ್ಕಾಗಿ ನಮ್ಮ ಮಾನ್ಯ ಅಧ್ಯಕ್ಷರಾದ ಟೇಕ್ವಾಂಡೋ ಮಾಸ್ಟರ್ ರಾವ್ ಅವರು ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕುಮಾರಿ ಲಕ್ಷ್ಮಿಯ ಗೆಲುವು ಬೆಳಗಾವಿ, ಕರ್ನಾಟಕ ಮತ್ತು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ - ದೇಶಾದ್ಯಂತ ಅಸಂಖ್ಯಾತ ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಸ್ಫೂರ್ತಿಯ ದಾರಿದೀಪವಾಗಿದೆ. 🇮🇳🥋✨