SNEHA SEVA TRUST

SNEHA SEVA TRUST SnehaSeva Trust commenced its activities about 25 years back, pursuing projects in the field of education, basic health care and self-employment

05/08/2026

ಸ್ನೇಹ ಸೇವಾ ಟ್ರಸ್ಟ್ ಸುದ್ದಿ
ಭಾನುವಾರ, 2 ಆಗಸ್ಟ್ 2026
ಸಂಸ್ಕಾರ ಕೇಂದ್ರದ ಚಟುವಟಿಕೆಗಳ ಭಾಗವಾದ 'ನಿತ್ಯ ಪೂಜೆ ನಿತ್ಯ ಧ್ಯಾನ'ದ ಸಂಕಲ್ಪ ಕಾರ್ಯಕ್ರಮವನ್ನು, ಈ ವರ್ಷ ೮ನೇ ತರಗತಿಯಲ್ಲಿ ಓದುತ್ತಿದ್ದು, ಜ್ಞಾನಸಿರಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಮಕ್ಕಳಿಗೆ, ಆಯೋಜಿಸಲಾಗಿತ್ತು.

ಮೊದಲಿಗೆ ಆರ್ಟ್ ಆಫ್ ಲಿವಿಂಗ್-ನ ಶ್ರೀಯುತ ಸುರೇಶ ಮತ್ತು ಶ್ರೀಮತಿ ಸಿಂಧು ಅವರು ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳು ಅತಿ ಉತ್ಸಾಹದಿಂದ ಭಜನೆಯಲ್ಲಿ ಭಾಗವಹಿಸಿದರು.
ನಂತರ ಶ್ರೀಯುತ ಲಕ್ಷ್ಮಿ ನಾರಾಯಣ ಶರ್ಮ ಅವರು ಮಕ್ಕಳಿಗೆ ಪೂಜೆಯ ಮಹತ್ವ ಮತ್ತು ದಿನನಿತ್ಯದ ಜೀವನದಲ್ಲಿ ಪೂಜೆ ಹಾಗೂ ಧ್ಯಾನಕ್ಕೆ ಕೆಲವು ನಿಮಿಷ ಏಕೆ ಮೀಸಲಿಡಬೇಕು ಎಂದು ತಿಳಿಸಿಕೊಟ್ಟು, ಪೂಜಾ ವಿಧಿವಿಧಾನ ಮತ್ತು ಶ್ಲೋಕಗಳನ್ನು ಮಕ್ಕಳಿಗೆ ಉಪದೇಶಿಸಿದರು.

ಹಲವಾರು ಪೋಷಕರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಂತಹ ದೈವೀಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ತಮ್ಮ ಸಂತೋಷ ವ್ಯಕ್ತಪಡಿಸಿದರು.
ನಂತರ, ಎಲ್ಲರೂ ಭೋಜನ ಸ್ವೀಕರಿಸಿ, ನಿತ್ಯ ಪೂಜೆ ಪೂಜೆ ಮಾಡುವ ಸಂಕಲ್ಪದೊಂದಿಗೆ ಮನೆಗಳಿಗೆ ತೆರಳಿದರು.

05/08/2026
05/08/2026
ಸಂಸ್ಕಾರ ಕೇಂದ್ರದ ಉದ್ಘಾಟನಾ ಸಮಾರಂಭ (ಶೈಕ್ಷಣಿಕ ವರ್ಷ 2026-27) ಭಾನುವಾರ 21 ಜೂನ್ 2026 ರಂದು ನೆರವೇರಿತು. ಸಂಸ್ಕಾರ ಕೇಂದ್ರವು ವಾರಕ್ಕೊಮ್ಮ...
24/06/2026

ಸಂಸ್ಕಾರ ಕೇಂದ್ರದ ಉದ್ಘಾಟನಾ ಸಮಾರಂಭ (ಶೈಕ್ಷಣಿಕ ವರ್ಷ 2026-27) ಭಾನುವಾರ 21 ಜೂನ್ 2026 ರಂದು ನೆರವೇರಿತು.
ಸಂಸ್ಕಾರ ಕೇಂದ್ರವು ವಾರಕ್ಕೊಮ್ಮೆ (ಭಾನುವಾರ) ನಡೆಯಲಿದ್ದು , ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಮತ್ತು ಭಾಷಣ ಕಲೆ, ಸಮಯ ನಿರ್ವಹಣೆಯಂತಹ ಕೌಶಲ್ಯವನ್ನು (soft skills ) ಮಕ್ಕಳಿಗೆ ಕಲಿಸುವ ಒಂದು ಮುಖ್ಯ ಪ್ರಕಲ್ಪವಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಶ್ರೀಮತಿ ರಶ್ಮಿ (ಆಧ್ಯಾತ್ಮಿಕ ಮಾರ್ಗದರ್ಶಿ ಸಂಸ್ಥೆಯ ಹಿರಿಯ ಅಧಿಕಾರಿ) ಮನುಷ್ಯನಲ್ಲಿ ಉತ್ತಮ ಸಂಸ್ಕಾರಗಳು ನೆಲೆಸಿರಬೇಕು. ಜ್ಞಾನವನ್ನು ಅರಸುವ ಹಂಬಲ ಸದಾ ಜೀವಂತವಾಗಿರಬೇಕು. ಜೀವನದಲ್ಲಿ ಸತ್ಯ, ಧರ್ಮ ಮತ್ತು ಒಳ್ಳೆಯದನ್ನು ಆಯ್ಕೆ ಮಾಡುವ ವಿವೇಕಶಕ್ತಿ, ಗುರಿ ಸಾಧನೆಗೆ ನಿರಂತರ ಪ್ರಾಮಾಣಿಕ ಪ್ರಯತ್ನ ಹಾಗೂ ಭಗವಂತನ ಭಕ್ತಿಪೂರ್ವಕ ಆರಾಧನೆ ಅವಶ್ಯಕ, ಎಂದು ಮಕ್ಕಳಿಗೆ ತಿಳಿಸಿದರು.
ನಾವು ಜೀವನದಲ್ಲಿ ಏನು ಮಾಡಬೇಕು, ಏಕೆ ಮಾಡಬೇಕು ಎಂಬ ಸ್ಪಷ್ಟ ಅರಿವು ಹೊಂದಿರಬೇಕು. ಇಂತಹ ಅರಿವು ಮತ್ತು ವಿವೇಕವುಳ್ಳ ಜೀವನವೇ ಸಾರ್ಥಕ ಜೀವನ. ಆ ಅರಿವಿನೊಂದಿಗೆ ಬದುಕಿದಾಗ ಸಚ್ಚಿದಾನಂದ ಪರಮಾತ್ಮನ ಕೃಪೆ ಸದಾ ನಮ್ಮ ಮೇಲೆ ನೆಲೆಸಿರುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಬಿ. ಕೃಷ್ಣಕುಮಾರ್ (ಮಹೇಂದ್ರ ಪೆರ್ಫ್ಯೂಮರಿ ವರ್ಕ್ಸ್ ಮಾಲೀಕರು) ಅವರು ಮಾತನಾಡಿ. ಎಲ್ಲರಲ್ಲೂ ಹನುಮಂತನ ಶಕ್ತಿ ಇರುತ್ತದೆ. ಆ ಶಕ್ತಿಯನ್ನು ಉತ್ತೇಜಿಸಿ ಗುರಿ ಸಾಧಿಸಲು , ಪೂರ್ಣ ಸಮರ್ಪಣೆಯೊಂದಿಗೆ ಶ್ರದ್ದಾಭಾವದಿಂದ, ನಿಷ್ಠೆಯಿಂದ ಮಾಡಬೇಕು ಎಂದು ಹೇಳಿದರು.
ಶ್ರೀ ಡಿ.ಪಿ. ಶೋಭನ್ ಬಾಬು (ಮಾಲೀಕರು ಸಂದೇಶ್ ಅಗರಬತ್ತಿ) ಅವರು ಮಾತನಾಡಿ ಕಣ್ಣಲ್ಲಿ ಸಾವಿರಾರು ಕನಸುಗಳಿರಲಿ, ನಿರ್ದಿಷ್ಟ ಧ್ಯೇಯವನ್ನು ಇಟ್ಟುಕೊಂಡು , ಗುರಿ ಸಾಧಿಸುವ ತುಡಿತ, ನಿಷ್ಠೆಯ ಪ್ರಯತ್ನವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.

ಈ ಚಿಕ್ಕ ಚೊಕ್ಕ ಸಮಾರಂಭವನ್ನು ದೇವಸ್ಥಾನದ ಆವರಣದಲ್ಲಿ ನಡೆಸಲು ಮತ್ತು ಸಮಾರಂಭದ ನಂತರ ಮಕ್ಕಳಿಗೆ ಭೋಜನ ಪ್ರಸಾದವನ್ನು ವಿತರಿಸಿದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಸ್ನೇಹ ಸೇವಾ ಟ್ರಸ್ಟಿನ ಪರವಾಗಿ ಧನ್ಯವಾದಗಳು.

Address

#51, 1st Main Road, New Timberyard Layout, Mysore Road
Bangalore
560026

Alerts

Be the first to know and let us send you an email when SNEHA SEVA TRUST posts news and promotions. Your email address will not be used for any other purpose, and you can unsubscribe at any time.

Contact The Organization

Send a message to SNEHA SEVA TRUST:

Shortcuts

Share