Rashtrotthana Parishat ರಾಷ್ಟ್ರೋತ್ಥಾನ ಪರಿಷತ್

  • Home
  • India
  • Bangalore
  • Rashtrotthana Parishat ರಾಷ್ಟ್ರೋತ್ಥಾನ ಪರಿಷತ್

Rashtrotthana Parishat ರಾಷ್ಟ್ರೋತ್ಥಾನ ಪರಿಷತ್ Voluntary Organization since 1965 to build a healthy & sustainable society
ಸ್ವಯಂಸೇವಾ ಸಂಸ್ಥೆ 1965ರಿಂದ

ರಾಷ್ಟ್ರೋತ್ಥಾನ ಪರಿಷತ್
ಜನಜಾಗೃತಿ, ಜನಶಿಕ್ಷಣ, ಜನಸೇವೆ - ಉದ್ದೇಶದಿಂದ 1965ರಲ್ಲಿ ಪ್ರಾರಂಭಗೊಂಡ ರಾಷ್ಟ್ರೋತ್ಥಾನ ಪರಿಷತ್ , ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ‘ರಾಷ್ಟ್ರ-ಉತ್ಥಾನ’ಕ್ಕೆ ಪೂರಕವಾದ ಅನ್ಯಾನ್ಯ ಕ್ಷೇತ್ರಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಕೌಟುಂಬಿಕ ಮಾಸಪತ್ರಿಕೆ ‘ಉತ್ಥಾನ’ದ ಮೂಲಕ ಶುಭಾರಂಭಗೊಂಡ ಪರಿಷತ್ ಇಂದು ರಾಷ್ಟ್ರೀಯ ವಿಚಾರಧಾರೆಯ ಪುಸ್ತಕ ಪ್ರಕಾಶನ (ರಾಷ್ಟ್ರೋ ತ್ಥಾನ ಸಾಹಿತ್ಯ ಹಾಗೂ ಸಾಹಿತ್ಯ ಸಿಂಧು ಪ್ರಕಾಶನ ); ಸಾಮಾಜಿಕ-ಸಾಂಸ್ಕೃತಿಕ ವಿಕಾಸದ ಗುರಿ ಹೊತ್ತ ರಾಷ್ಟ್ರೋತ್ಥಾನ ಬಳಗಗಳು; ದೇಶದ ಭವಿಷ್ಯದ ದಿಕ್ಪತಗಳನ್ನು ನಿರ್ದರಿಸುವ ಸುಸಂಪನ್ನ ಶಿಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಶಿಕ್ಷಣ ಸಂಸ್ಥೆಗಳು; ಸೇವಾಬಸ್ತಿ (ಸ್ಲಂ, ಕೊಳೆಗೇರಿ)ಗಳ ವಿಕಾಸಕ್ಕಾಗಿ ಅಲ್ಲಿನ ಮಕ್ಕಳನ್ನು ಶಾಲೆಯೆಡೆಗೆ ಕರೆತಂದು , ಅವರನ್ನು ಇತರ ವಿದ್ಯಾರ್ಥಿಗಳಂತೆ ಅಧ್ಯಯನಾಸಕ್ತಿ ಹೆಚ್ಚಿಸಲು ಅವರಿರುವ ಕಡೆಗಳಲ್ಲೇ ಅವರಿಗೆ ‘ವ್ಯಾಸಂಗ ಕೇಂದ್ರಗಳು’; ಆರ್ಥಿಕವಾಗಿ ದುರ್ಬಲ ಕುಟುಂಬದ ವಿದ್ಯಾರ್ಥಿಗಳನ್ನು ಐಐಟಿ-ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೊಳಿಸುವ ‘ತಪಸ್’; ರಕ್ತಚಾಲನಾ ಪರಿಷತ್ ನಿಗದಿಪಡಿಸಿರುವ ತಪಾಸಣಾ ಶುಲ್ಕಕ್ಕಿಂತಲೂ ಕಡಮೆ ಶುಲ್ಕ ಪಡೆದು ಅಗತ್ಯ ಫಲಾನುಭವಿಗಳ ಸೇವೆಗಾಗಿ 24 ಗಂಟೆಯೂ ಕಾರ್ಯ ನಿರ್ವಹಿಸುವ ‘ರಕ್ತನಿಧಿ’; ಆರೋಗ್ಯವಂತ ಸಶಕ್ತ ವ್ಯಕ್ತಿಗಳನ್ನು ರೂಪಿಸುವ ಉದ್ದೇಶದ ‘ಯೋಗಕೇಂದ್ರಗಳು’; ಅವಕಾಶವಂಚಿತ, ಪೋಷಕರಹಿತ ಮಕ್ಕಳ ರಕ್ಷಣೆಗೆ ನಿಂತಿರುವ ‘ನಂದಗೋಕುಲ’; ಗೋ-ಸಂತತಿಯ ರಕ್ಷಣೆಗೆ ‘ಗೋಶಾಲೆ’; - ಹೀಗೆ ಸಾಮಾಜಿಕ ಕಾಳಜಿ ಹಾಗೂ ಬದ್ಧತೆಯ ಸಮಾಜದ ಬಹುಕ್ಷೇತ್ರಗಳಲ್ಲಿ ಕಾರ್ಯೋನ್ಮುಖವಾಗಿರುವ ಹೆಮ್ಮೆ ರಾಷ್ಟ್ರೋತ್ಥಾನ ಪರಿಷತ್ ನದ್ದು. ಇಂತಹ ಬಹುಮುಖೀ ಕಾರ್ಯವ್ಯಾಪ್ತಿಯುಳ್ಳ ಸಂಘಟನೆ ‘ರಾಷ್ಟ್ರೋತ್ಥಾನ ಪರಿಷತ್’.

ಬ್ರಹ್ಮಾವರ, ಸ.19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ - ಉಡುಪಿಯ ಸೃಜನೋತ್ಸವದಲ್ಲಿ ಬಾಲೆಯ ಸೃಜನಾತ್ಮಕ ಕನಸಿಗೆ ಕುತೂಹಲದ ಕಣ್ಣಾದರು ರಾಷ್ಟ್ರೋತ್ಥಾ...
19/09/2026

ಬ್ರಹ್ಮಾವರ, ಸ.19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ - ಉಡುಪಿಯ ಸೃಜನೋತ್ಸವದಲ್ಲಿ ಬಾಲೆಯ ಸೃಜನಾತ್ಮಕ ಕನಸಿಗೆ ಕುತೂಹಲದ ಕಣ್ಣಾದರು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳು, ಅಜ್ಜ-ಮೊಮ್ಮಗಳ ಕಥಾಕಾಲಕ್ಷೇಪದ ಮಹಾಲೋಕಕ್ಕೆ ಒಯ್ಯುತ್ತಿರುವಂತೆ...

Learn More: https://udupi.rvkcbse.in/

Bengaluru: Heartiest Congratulations! The Lawn Tennis Team of Rashtrotthana Vidya Kendra – Somanahalli, for securing 1st...
19/09/2026

Bengaluru: Heartiest Congratulations! The Lawn Tennis Team of Rashtrotthana Vidya Kendra – Somanahalli, for securing 1st Place at the Kreeda Bharati National Championships, held in Didwana, Kuchaman District, Rajasthan, from September 11 to 13, and qualifying for the SGFI Nationals.

Learn More: https://sombng.rvkcbse.in/

ಸ.17: ಪ್ರಶಿಕ್ಷಣಭಾರತಿ – ಬೀದರ ಜಿಲ್ಲಾ ಘಟಕದ ವತಿಯಿಂದ 79ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ತಿರಂಗಾ ಯಾತ್ರೆಯನ್ನು ಆಯೋಜಿಸಲ...
19/09/2026

ಸ.17: ಪ್ರಶಿಕ್ಷಣಭಾರತಿ – ಬೀದರ ಜಿಲ್ಲಾ ಘಟಕದ ವತಿಯಿಂದ 79ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ತಿರಂಗಾ ಯಾತ್ರೆಯನ್ನು ಆಯೋಜಿಸಲಾಗಿತ್ತು. ಬಸವತೀರ್ಥ ವಿದ್ಯಾ ಪೀಠ ಹಳ್ಳಿಖೇಡದ 600 ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಯಾತ್ರೆಯು ಹಳ್ಳಿಖೇಡದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗಿನ ಪ್ರಮುಖ ಬೀದಿಗಳಲ್ಲಿ ಸಾಗಿತು.

Learn More: https://www.rashtrotthana.org/

Mysuru: Heartiest Congratulations! Smt. Bhagya Harish of Rashtrotthana Vidya Kendra - Srinagara, has been honored with t...
19/09/2026

Mysuru: Heartiest Congratulations! Smt. Bhagya Harish of Rashtrotthana Vidya Kendra - Srinagara, has been honored with the “Innovative Teaching Excellence Award” by SECT on Sept 11th.

Learn More: https://srimys.rvkcbse.in/

ಅಪ್ಪನೆಂಬ ಸಾಕ್ಷೀಪ್ರಜ್ಞೆ ಚಮಕಿಸುವ ಗುರಿಯ ತಳದಲ್ಲೆಲ್ಲೋ ಗುಳುಗುಳಿಸುತ್ತಿದ್ದ ಕಾಳಜಿಪೂರ್ಣ ಪ್ರಕ್ರಿಯೆಯನ್ನು ಆಸ್ವಾದಿಸಿ, ಆನಂದಿಸಿತು!ಅಗತ್ಯಗ...
19/09/2026

ಅಪ್ಪನೆಂಬ ಸಾಕ್ಷೀಪ್ರಜ್ಞೆ ಚಮಕಿಸುವ ಗುರಿಯ ತಳದಲ್ಲೆಲ್ಲೋ ಗುಳುಗುಳಿಸುತ್ತಿದ್ದ ಕಾಳಜಿಪೂರ್ಣ ಪ್ರಕ್ರಿಯೆಯನ್ನು ಆಸ್ವಾದಿಸಿ, ಆನಂದಿಸಿತು!

ಅಗತ್ಯಗಳು ಎದುರಾಗಿ; ಅದಕ್ಕೆ ಬೇಕಾದ ಪರಿಕರಗಳನ್ನು ಹೊಂದಿಸಲು ಹಗಲು-ರಾತ್ರಿಗಳನ್ನು ಒಂದು ಮಾಡಿಕೊಂಡು ಯೋಚಿಸುತ್ತಾ, ಸಾಕಷ್ಟು ಹೋಂವರ್ಕ್, ಬೇಕಷ್ಟು ಸಂಶೋಧನೆ, ಮನದಟ್ಟಾಗುವಷ್ಟು ಮಾತುಕತೆ, ತೃಪ್ತಿಯಾಗುವಷ್ಟು ಕ್ಷೇತ್ರಕಾರ್ಯ; ಎಲ್ಲ ಆಗಿ ಪದಾರ್ಥಗಳ ಡಬ್ಬಿಗಳು ಕೈ ಸೇರಿದಾಗ ಅನ್‍ಪ್ಯಾಕ್ ಮಾಡುವುದೇ ಒಂದು ದೊಡ್ಡ ಸಂಭ್ರಮ.

ಪ್ಯಾಕಿನಿಂದ ಹೊರಗೆ ಇಣುಕಿದ್ದನ್ನು ನೋಡಿ, ತಡಕಿ, ಮೂಸಿ, ಎತ್ತಿಕೊಂಡರೂ ಸಮಾಧಾನವಾಗುವುದಿಲ್ಲ. ಅಂದುಕೊಂಡದ್ದೆಲ್ಲ ಒಳಗಿದೆಯೇ, ಕಲ್ಪಿಸದ ಲೋಕಗಳೂ ಬಿಚ್ಚಿಕೊಳ್ಳುತ್ತವೆಯೇ? ಎಂಬ ತಹತಹಗಳು ಒತ್ತರಿಸಿಕೊಳ್ಳುತ್ತಿರುತ್ತವೆ. ಜೊತೆಗೆ ವಿಷಯ ತಜ್ಞರು ಇದು ಹೀಗೆ, ಅದು ಹಾಗೆ ಎಂದು ವಿವರಿಸುತ್ತಿದ್ದರೆ, ಒಂದೇ ಗುಕ್ಕಿನಲ್ಲಿ ಎಲ್ಲವನ್ನೂ ಹೀರಿಕೊಂಡುಬಿಡುವ ಆಸೆಯಾಗುತ್ತದಾದರೂ, ಅದು ಅಷ್ಟು ಸಲೀಸಲ್ಲ ಅಂತಲೂ ಮನದಟ್ಟಾಗಬಹುದು. ಅಂಗಡಿಯಿಂದ ಹೊರಬಿದ್ದರೂ ಅರಗಿಸಿಕೊಂಡುಬಿಡುವ ಕಾತರ ಮನೆಗೆ ತಲುಪುವುದನ್ನೇ ಕಾಯುತ್ತಿರುತ್ತದೆ. ಮನೆಗೆ ವಾಪಸ್ ಆದಾಗ ಮತ್ತೊಮ್ಮೆ ಅನ್‍ಬಾಕ್ಸ್ ಸಂಸ್ಕಾರಕ್ಕೆ ಒಳಗಾಗಿ ಊಟ, ತಿಂಡಿ, ನಿದ್ದೆಯ ಪರಿವೆಯೇ ಇಲ್ಲದೇ ಆ ಪರಿಕರದೊಂದಿಗೆ ಆತ್ಮಸಾತ್‍ ಆಗುವ ಪ್ರಕ್ರಿಯೇ ಸಾಗಿಯೇ ಇರುತ್ತದೆ.

ಇದು ಕೇವಲ ಕಲ್ಪನಾ ಲೋಕದ ವಿಹಾರವಲ್ಲ. ನಿನ್ನೆ ರಾಷ್ಟ್ರೋತ್ಥಾನ ಸ್ಟುಡಿಯೋಕ್ಕೆ ವೀಡಿಯೋ ಕ್ಯಾಮೆರಾ ಪರಿಕರಗಳ ಡೆಲಿವರಿ ಪಡೆಯುತ್ತಿದ್ದಾಗ ಅಂಗಡಿಯ ಮೂಲೆಯೊಂದರಲ್ಲಿ ಕೂತ ಸಾಕ್ಷೀಭಾವವೊಂದು ಸಂಭ್ರಮಿಸುತ್ತಿದ್ದ ರೀತಿಯದು. ಪ್ರಾಯಪ್ರಬುದ್ಧರಾದ ಮಕ್ಕಳು ಅಳೆದು-ತೂಗಿ ಸ್ಮಾರ್ಟ್ ಆಗಿ ವ್ಯವಹರಿಸುವುದನ್ನು ಕಂಡ ಅಪ್ಪನೊಬ್ಬ ಹೆಮ್ಮೆಯ ಆನಂದದೊಳಗೆ ಬೀಗುತ್ತಾ ಅಭಿಮಾನಿಸುವಂತಿತ್ತು ಆ ಸನ್ನಿವೇಶ. ಇಷ್ಟಪಟ್ಟು, ಕಷ್ಟಬಿದ್ದು, ಜೋತಾಡಿ ಖರೀದಿಸಿದ ಬ್ರಾಂಡೆಡ್ ವಾಚು, ಚಪ್ಪಲಿ, ಬಟ್ಟೆ ಏನೇ ಇರಲಿ, ಕಲಾ-ನೈಪುಣ್ಯವನ್ನು ಆಸ್ವಾದಿಸುತ್ತ, ಬಾಕ್ಸನ್ನು ಅಂಗಡಿಯವರಿಗೇ ಕೊಟ್ಟು, ಅನ್-ಬಾಕ್ಸ್ಡ್ ಪದಾರ್ಥದ ಆನಂದವನ್ನು ಮೈಗೇರಿಸಿಕೊಂಡು ಹೊರಟೇ ಬಿಡುವುದು ಆ ಅಪ್ಪನ ಖಯಾಲಿ.

ಅಂತಿಪ್ಪ ಆ ಅಪ್ಪನೆಂಬ ಸಾಕ್ಷೀಭಾವ ಬುಡದಿಂದಲೂ ನೋಡುತ್ತ, ಒಳೊಳಗೇ ಖುಷಿಯ ಬುಗ್ಗೆಗಳೊಂದಿಗೆ ನಲಿಯುತ್ತಲೇ ಇತ್ತು.

ರಾಷ್ಟ್ರೋತ್ಥಾನದ ಕೇಂದ್ರ ಕಚೇರಿ, ಕೇಶವಶಿಲ್ಪದಲ್ಲಿ ಸ್ಟುಡಿಯೋ ನಿರ್ಮಾಣ ಆಗಬೇಕು, ಆಗಬೇಕು ಅಂತ ಎರಡು-ಮೂರು ವರ್ಷಗಳಿಂದ ಅಂದುಕೊಳ್ಳುತ್ತಾ, ಮುಂದೆಹಾಕುತ್ತಾ, ಅಂತೂ ನಾಲ್ಕು ಗೋಡೆಗಳು, ನೆಲ, ಮೇಲು ಹಾಸುಗಳು, ಶಬ್ದ ನಿಯಂತ್ರಣ, ಗ್ರೀನ್‍ ಸ್ಕ್ರೀನ್, ಕಪ್ಪು ಪರದೆ, ಲೈಟಿಂಗ್, ಎಸಿ, ದಪ್ಪ-ದಪ್ಪದ ಮೂರು ಬಾಗಿಲುಗಳು, ಮತ್ತುಳಿದ ಅಗತ್ಯ ಪರಿಕರಗಳೊಂದಿಗೆ ಎದ್ದುನಿಂತೇಬಿಟ್ಟಿತು. ರಾಷ್ಟ್ರೋತ್ಥಾನದ ಇಡಿಯ ಸಮೂಹದ ಮಟ್ಟಿಗೆ ಸ್ಟುಡಿಯೋ ಎಂಬ ಈ ವ್ಯವಸ್ಥೆ ಮೊದಲನೆಯದ್ದೇ. ಎಷ್ಟು ಮಾಡಿದರೆ ಹೆಚ್ಚು, ಎಷ್ಟು ಮಾಡಿದರೆ ಕಡಿಮೆ, ಖರ್ಚು ಜುಡೀಷಿಯಸ್ ಹೌದೋ, ಅಲ್ಲವೋ ಎಂದು ಕೊರೆಯುತ್ತಲೇ ಇತ್ತು. ಈ ಭಯದ ಬೆಂಗಾವಲಿನಲ್ಲಿಯೇ ಸ್ಟುಡಿಯೋ ಬಳಕೆಯ ಯೋಜನೆಯೊಟ್ಟೊಟ್ಟಿಗೆ ಗರಿಷ್ಠ ಪ್ರಮಾಣದಲ್ಲಿ ಘನಿಷ್ಠ ಮಟ್ಟದ ಸದ್ವಿನಿಯೋಗಕ್ಕೆ ಒಡ್ಡಿಕೊಳ್ಳಲಿ ಎಂಬುದು ಅನುಕ್ಷಣದ ಪ್ರಾರ್ಥನೆ ಕೂಡ ಆಗಿದೆ.

ಗೋಡೆ ಕಟ್ಟುವಾಗ ಅಷ್ಟೊಂದು ಅನಿಸಲಿಲ್ಲ. ಅನುಭವದ ಊಟೆ ಬೆನ್ನಿಗಿತ್ತು, ವಿಶ್ವಾಸ ಮಂಡೆಯೊಳಗಿತ್ತು. ವೀಡಿಯೋ ಕ್ಯಾಮೆರಾ, ಆಡಿಯೋ ವ್ಯವಸ್ಥೆಯನ್ನು ಹೊಂದಿಸಿಕೊಳ್ಳುವುದೇ ಸ್ವಲ್ಪ ಸವಾಲಾಯಿತು.

ಕಾರ್ಯಕ್ರಮಗಳಲ್ಲಿ ಕ್ಯಾಮೆರಾ ಬಳಸಿದ್ದು ಬಿಟ್ಟರೆ, ಈ ಉದ್ದೇಶಕ್ಕೆ ಇದೇ ಕ್ಯಾಮೆರಾ ಆಗಬೇಕು ಎಂದು ತೀರ್ಮಾನಿಸುವಷ್ಟು ಮಾಗಿರಲಿಲ್ಲ ನಮ್ಮ ಅಂತರಂಗದ ವ್ಯವಸ್ಥೆ. ಮಾಗಿದ ಒಬ್ಬೊಬ್ಬ ತಜ್ಞರದ್ದು ಒಂದೊಂದು ಸಲಹೆ. ಒಬ್ಬರು PTZ (ಬಿಗ್‍ಬಾಸ್‍ನಲ್ಲಿ ಬಳಸುವಂಥದ್ದು) ಅಂದರು, ಮತ್ತೊಬ್ಬರು Cinema Line, ಮಗದೊಬ್ಬರು Sony series, Canon family, ಎಂಬ ಬಗೆಗೆ ಸಾಧ್ಯತೆಗಳನ್ನು ಹೇಳುತ್ತಿದ್ದರೆ, ತಲೆ ಕೆಟ್ಟು ಕೆರವಾಯಿತು.

ಅಷ್ಟಾದರೂ ನಮ್ಮ ಹುಡುಗರು ಬಿಡಲಿಲ್ಲ. ನಮಗೇನು ಬೇಕು, ನಮಲ್ಲೆಷ್ಟು ಜಾಗ ಇದೆ, NGO ಆದ ರಾಷ್ಟ್ರೋತ್ಥಾನಕ್ಕೆ ಹೆಚ್ಚು ಭಾರ ಆಗದೇ ಮುಂದುವರೆಯುವುದು ಹೇಗೆ, ಈಗ ಕೊಂಡ ಕ್ಯಾಮೆರಾದ ಭವಿಷ್ಯ ಹೇಗೆ, ಸದಾ ಬೆಳವಣಿಗೆಯಲ್ಲಿರುವ ತಾಂತ್ರಿಕತೆಗೆ ಹೊಂದಿಸಿಕೊಳ್ಳುವ ಸಾಧ್ಯತೆಗಳ ಹೋಂವರ್ಕ್ ಕೂತಲ್ಲಿ, ನಿಂತಲ್ಲಿ ನಡೆಯುತ್ತಿತ್ತು. ಅದೆಷ್ಟು AI ಮಾಹಿತಿಗಳನ್ನು ತಡಕಾಡಿದರೋ, ಸ್ಪಷ್ಟೀಕರಣಗಳನ್ನು ಕೇಳಿದರೋ, ಒಂದಕ್ಕೊಂದು ತಾಳೆ ಮಾಡಿಕೊಂಡು ಅಭ್ಯಾಸ ಮಾಡಿದರೋ, ತಜ್ಞರನ್ನು ಅದೆಷ್ಟು ಕಿರಿಕಿರಿಯಾಗುವಷ್ಟರ ಮಟ್ಟಿಗೆ ಕೇಳಿದರೋ, ಸ್ಟುಡಿಯೋ ಕ್ಷೇತ್ರದರ್ಶನ ಮಾಡಿದರೋ, ಗೊತ್ತಿಲ್ಲ! ತುದಿಯಿಂದ ಬುಡದವರೆಗೆ ಕಂಡದ್ದು ಒಂದೇ, ಕಣ್ಣಲ್ಲೊಂದು ಹೊಳಪು ಮತ್ತು ನನ್ನದೇ ಕೆಲಸವೆಂಬ ಅಭಿಮಾನದ ಬಿಸುಪು.

ಕೊನೆಯಲ್ಲಿ, ಹಲವು ವರ್ಷಗಳಿಂದ Canonನ ಸಂತುಷ್ಟ ಕುಟುಂಬದ್ದೇ ಭಾಗವಾಗಿರುವ ರಾಷ್ಟ್ರೋತ್ಥಾನ ಅದರೊಂದಿಗೇ ಮುಂದುವರೆಯುವ ತೀರ್ಮಾನ ಮಾಡಿ, ಎರಡು ಬ್ರೈನ್‍ಗಳು (Canon C50, Canon R6V), ಎರಡು ಲೆನ್ಸ್-ಗಳನ್ನು (28-70mm F2.8 STM IS, 85mm Macro F2 STM) ತನ್ನ ಮಡಿಲಿಗೆ ಹಾಕಿಕೊಂಡಿತು.

ಮಡಿಲಿಗೆ ಬರುವ ಮುನ್ನ ಪರಿಕರಗಳ ಮುಡಿಯಲ್ಲಿ ಕಂಗೊಳಿಸಿದ ಒಂದಷ್ಟು ಅಂಶಗಳು…
• ಸದ್ಯ, 4K ಗುಣಮಟ್ಟದಲ್ಲೇ ಚಿತ್ರೀಕರಿಸಲಾಗುತ್ತಿದ್ದರೂ 7K ಚಿತ್ರೀಕರಣಕ್ಕೆ ಏರುವ ಸಾಧ್ಯತೆ
• Full Frame Sensor
• Open Gate Technology
• In Body Image Stabilisation (IBIS)
• Bokeh ಎಫೆಕ್ಟ್ (ಫೋಕಸ್ ಆದ ಪದಾರ್ಥವನ್ನು ಬಿಟ್ಟು ಹಿನ್ನೆಲೆಯ/ ಅಕ್ಕ-ಪಕ್ಕದ ಉಳಿದ ಅಂಶಗಳನ್ನು ಅಸ್ಪಷ್ಟ ಮಾಡುವ ಸ್ವಭಾವ)
• XLR ಹ್ಯಾಂಡಲ್
• ಡೈರೆಕ್ಟ್ ಪವರ್
• 4:2:2 ಕಲರ್-ಗ್ರೇಡ್ 10 ಬಿಟ್
• ಡೈನಾಮಿಕ್ ರೇಂಜ್ 15 Stops (ಫೋಕಸ್ ಆದ ಪದಾರ್ಥದ ಚಿತ್ರದ ಹಿನ್ನೆಲೆಯಲ್ಲಿನ ಅತಿ ಬೆಳಕಿನ ನಿಯಂತ್ರಣ)
• NETFLIX ಅಪ್ರೂವಲ್, ಹೀಟಿಂಗ್, ಫ್ಯಾನ್ ಸೌಲಭ್ಯ

ಎಷ್ಟೇ ತಾಂತ್ರಿಕತೆ, ಸೌಲಭ್ಯ ಅಂತ ಯೋಚಿಸಿದರೂ ಇವಿಷ್ಟೂ ನಮಗೆ ಬೇಕೇ? ಈ ಸೌಲಭ್ಯಗಳಿಗೆ ನ್ಯಾಯ ಒದಗಿಸಲು ಸಾಧ್ಯವೇ? ಅತಿಯಾದ ಬಜೆಟ್‍ ಕಡೆಗೆ ವಾಲುತ್ತಿದೆಯೇ? ಎಂಬ ಪ್ರಶ‍್ನೆಗಳನ್ನು ಹಂತಹಂತದಲ್ಲಿ ಹಾಕಿಕೊಂಡು ಕಾರ್ಯಸಾಧು ವರದಿಯನ್ನು ರಾಷ್ಟ್ರೋತ್ಥಾನ ಆಡಳಿತ ಮಂಡಳಿಗೆ ಅಂತಿಮವಾಗಿ ಕೊಡಲಾಯಿತು.

ಆಡಳಿತ ಮಂಡಳಿಯವರೂ ಹಾಗೇ ಬಿಡಲಿಲ್ಲ. ಅಳೆದು-ಸುರಿದು, ಬಗೆಬಗೆಯಾಗಿ ಪ್ರಶ್ನಿಸಿ, ಹಿತೈಷಿಗಳ ತೀರ್ಮಾನವನ್ನು ಸಂಗ್ರಹಿಸಿದ ನಂತರದಲ್ಲಿಯೇ ಅಸ್ತು ಅಂದಿದ್ದು. ಪ್ರಕ್ರಿಯೆಗೆ ಒಂದೆರಡು ತಿಂಗಳು ಹಿಡಿದರೂ ಸಮಾಧಾನದ ಮನೋವ್ಯಾಪಾರವಾಗಿ ಸಂದೇಹದ ಕೊಸರೇ ಉಳಿಯಲಿಲ್ಲ.

ಮುಂದೆ ಉಳಿದಿರುವುದು ಆಡಿಯೋ ವ್ಯವಸ್ಥೆ. ಅದಕ್ಕೂ ಅದೇ ಮಟ್ಟದ ಶ್ರಮ ಹಿನ್ನೆಲೆಯಲ್ಲಿ ಬೆವರಾಗಿ ಹರಿದಿದೆ. ಕೆಲವೇ ದಿನಗಳಲ್ಲಿ ಅದರ ಸಾಕಾರವೂ ಆಗಿ, ಈ ನವರಾತ್ರಿಗೆ ರಾಷ್ಟ್ರೋತ್ಥಾನ ಸ್ಟುಡಿಯೋ ಲೋಕಮುಖಕ್ಕೆ ತೆರೆದುಕೊಳ್ಳಲಿದೆ.

ಶ್ರಮ ಫಲ ಕೊಡುತ್ತಿದೆ ಎಂಬ ಸಂತೋಷ ಇದ್ದೇಇದೆ. ಆ ಶ್ರಮಕ್ಕೊಂದು ಶ್ರದ್ಧೆಯ ಪ್ರಕ್ರಿಯಾ ಸುಗಂಧ ಹತ್ತಿಕೊಂಡಾಗ ಅಂತಿಮ ಫಲ ಕೈಗೆ ಸಿಗುವುದರೊಳಗೇ ಸುಫಲಗಳು ಕಂಗೊಳಿಸಲು ಶುರುವಿಟ್ಟುಕೊಳ್ಳುತ್ತವೆ. ಗುರಿಯೆಡೆಗಿನ ದಾರಿಯೇ ಹೀಗಾದಾಗ ಆ ಗುರಿ ಗುರುತರವಾಗುತ್ತದೆ, ಮತ್ತದರ ಪುರನಾವರ್ತನೆಗೂ ಮನಸ್ಸು ಅಂಜದಾಗುತ್ತದೆ. ಇದನ್ನೆಲ್ಲ ಆಗುಮಾಡುತ್ತಿರುವ ರಾಷ್ಟ್ರೋತ್ಥಾನದ ಕಾರ್ತೀಕ, ಸಿದ್ಧಾರ್ಥ್; Foto Circleನ ಕೇಶವ್; Canonನ ಬಾಲುಂಕೇಶ್ವರ್ (Balunkeswar Jena); Insync Studiosನ ವಿಕ್ರಂ ವಸಿಷ್ಠ ಹಾಗೂ ಇನ್ನೂ ಅನೇಕರಿಗೆ ಪ್ರೀತಿಯ ಪ್ರಶಂಸೆಗಳು ಹಾಗೂ ಹೃದಯ ತುಂಬಿದ ಧನ್ಯವಾದಗಳು!

19/09/2026

ರಾಷ್ಟ್ರಸೇವೆಯಲ್ಲಿ ರಾಷ್ಟ್ರೋತ್ಥಾನ 133: (ರಾಷ್ಟ್ರೋತ್ಥಾನ ವಿದ್ಯಾಲಯ) ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಕೃತಜ್ಞತೆ ಸಲ್ಲಿಸಿದ್ದು ಹೀಗೆ...
Rashtrotthana in Rashtraseva 133: (Rashtrotthana Vidyalaya) This is how the Senior Students expressed their Gratitude to the School...

ರಾಷ್ಟ್ರೋತ್ಥಾನದ 60ರ ಸಂಭ್ರಮದಲ್ಲಿ ರಾಷ್ಟ್ರಸೇವೆಯಲ್ಲಿ ರಾಷ್ಟ್ರೋತ್ಥಾನ ವೀಡಿಯೋ ಸರಣಿ: ಸಾಧನೆ, ಪ್ರಭಾವ, ಪ್ರೇರಣಾದಾಯಿ ಅಂಶಗಳೊಂದಿಗೆ

On the occasion of the 60th Anniversary of Rashtrotthana, Rashtrotthana in Rashtraseva Video Series: With the elements of Achievement, Influence, Motivation

Learn More: https://rashtrotthana.org/
#ರಾಷ್ಟ್ರೋತ್ಥಾನ60

ಅಖಿಲ ಭಾರತ ಭೂಸೇನಾ ಸೈನಿಕ ಶಿಬಿರದಲ್ಲಿ RVK - ಅರ್ಕಾವತಿಯ NCC SGT ಗುರುಚರಣ್ Bengaluru: It’s a proud moment for Rashtrotthana Vidy...
19/09/2026

ಅಖಿಲ ಭಾರತ ಭೂಸೇನಾ ಸೈನಿಕ ಶಿಬಿರದಲ್ಲಿ RVK - ಅರ್ಕಾವತಿಯ NCC SGT ಗುರುಚರಣ್

Bengaluru: It’s a proud moment for Rashtrotthana Vidya Kendra – Arkavathy. NCC SGT Gurucharan took part in the prestigious All India Thal Sainik Camp (Firing) held in Delhi from Sept 1 to 12.

Learn More: https://arkbng.rvkcbse.in/

ಚಿಕ್ಕಮಗಳೂರು, ಸ.15: ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ “ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು-ನೆನಪು” ಕೃತ...
19/09/2026

ಚಿಕ್ಕಮಗಳೂರು, ಸ.15: ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ “ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು-ನೆನಪು” ಕೃತಿಯನ್ನು ಬಿಡುಗಡೆ ಮಾಡಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಸನ ವಿಭಾಗ ಚಾಲಕರಾದ ಶ್ರೀ ಮಲ್ಲಿಕಾರ್ಜುನರಾವ್, ಹಿಂದೂ ಮಹಾಗಣಪತಿ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಸದಾಶಿವಪ್ಪ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಶೃಂಗೇರಿ ವಿಭಾಗ ಸಂಯೋಜಕರಾದ ಶ್ರೀ ಪ್ರಭುಲಿಂಗ ಶಾಸ್ತ್ರೀ, ರಾಷ್ಟ್ರೋತ್ಥಾನ ಬಳಗದ ಶ್ರೀ ವೀರೇಶ್ ಮೊದಲಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.

ಪುಸ್ತಕ ಖರೀದಿ ಕೊಂಡಿ: https://sahityabooks.com/product/avishranta-dhyeyajeevi-mc-jayadeva-biography/

ಇವರೇನು ಮನುಷ್ಯರಾ? ದೇವರಾ?ಮೊನ್ನೆ ಗೌರೀ-ಗಣೇಶ ಒಂದೇ ದಿನ ಬಂತು. ಅಂದು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಆಂಧ್ರ ಜಗತ್ತಿಗೆಲ್ಲ ರಜಾ, ಹಬ್ಬದ ಮಜಾ....
18/09/2026

ಇವರೇನು ಮನುಷ್ಯರಾ? ದೇವರಾ?

ಮೊನ್ನೆ ಗೌರೀ-ಗಣೇಶ ಒಂದೇ ದಿನ ಬಂತು. ಅಂದು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಆಂಧ್ರ ಜಗತ್ತಿಗೆಲ್ಲ ರಜಾ, ಹಬ್ಬದ ಮಜಾ. ಅದರ ಮಧ್ಯದಲ್ಲೂ ನಮ್ಮ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಲ್ಲಿ ಕೆಲವಾರು ಸಿಬ್ಬಂದಿಗಳು ಜಮಾಯಿಸಿ, ಗಣಪತಿ ಬಪ್ಪಾ ಮೋರಯಾ ಮಾಡಿ; ಅದೇ ಸಂಜೆ ವಿಸರ್ಜಿಸುವ ಗಡಬಡೆಗೆ ಬೀಳದೇ, ಎರಡು-ಮೂರು ದಿನ ಉತ್ಸವಾಚರಣೆ, ಪೂಜೆಪುನಸ್ಕಾರ, ನೈವೇದ್ಯ ಮಾಡಿ, ಪನಿವಾರಗಳನ್ನು ಹಂಚಿ, ಬಾಜಾಭಜಂತ್ರಿ, ಢೋಲು, ಹುಲಿವೇಶಗಳೊಂದಿಗೆ ಭರ್ಜರಿ ಉತ್ಸವದಲ್ಲಿ ಕುಣಿದು ಕುಪ್ಪಳಿಸುತ್ತ; ಚಿಕ್‍ ಕೆರೇಲಿ ಬಿದ್ದ, ದೊಡ್ಡ್ ಕೆರೇಲಿ ಎದ್ದ ಎಂದೆನ್ನುತ್ತ ಅವರವರ ಶಕ್ತ್ಯಾನುಸಾರ ಬಕೆಟ್, ಡ್ರಮ್, ಕೆರೆಯಲ್ಲಿ ಗೌರೀ-ಗಣೇಶರನ್ನು ಕಳುಹಿಸಿಕೊಟ್ಟರು.

ರಜೆಯ ಮಜದಲ್ಲಿ ನಿಷ್ಠೆ, ಶ್ರದ್ಧೆ, ಭಕ್ತಿಗಳು ಮಂಕಾಗದ ಇವರೇನು ಮನುಷ್ಯರಾ? ಅಥವಾ ದೇವರಾ? ಎಂದು ಸಮಾಜದ ಹತ್ತುಸಮಸ್ತರು ಕೇಳಿದರೂ ಆಶ್ಚರ್ಯವಿಲ್ಲ.

Learn More: https://rvkcbse.in/

Address

Keshava Shilpa, Kempegowda Nagar
Bangalore
560004

Opening Hours

Monday 9am - 5:30pm
Tuesday 9am - 5:30pm
Wednesday 9am - 5:30pm
Thursday 9am - 5:30pm
Friday 9am - 5:30pm
Saturday 9am - 5:30pm

Telephone

+919448284602

Alerts

Be the first to know and let us send you an email when Rashtrotthana Parishat ರಾಷ್ಟ್ರೋತ್ಥಾನ ಪರಿಷತ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rashtrotthana Parishat ರಾಷ್ಟ್ರೋತ್ಥಾನ ಪರಿಷತ್:

Shortcuts

Share