ಅಖಿಲ ಕರ್ನಾಟಕ ವಿ.ರವಿಚಂದ್ರನ್ ಅಭಿಮಾನಿಗಳ ಸಂಘ

  • Home
  • India
  • Bangalore
  • ಅಖಿಲ ಕರ್ನಾಟಕ ವಿ.ರವಿಚಂದ್ರನ್ ಅಭಿಮಾನಿಗಳ ಸಂಘ

ಅಖಿಲ ಕರ್ನಾಟಕ ವಿ.ರವಿಚಂದ್ರನ್ ಅಭಿಮಾನಿಗಳ ಸಂಘ ಕರುನಾಡ ಕನಸುಗಾರ ವಿ.ರವಿಚಂದ್ರನ್ ಅವರಿಗೆ ?

ವಿ.ರವಿಚಂದ್ರನ್ ಒಬ್ಬ ಭಾರತೀಯ ನಟ. ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರು ಅವರ ತಂದೆ. ತಮ್ಮ ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು.
ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಇನ್ನು ಒಂದು ರೀತಿಯ ಸಂಪ್ರದಾಯ ನಮ್ಮ ಚಿತ್ರರಂಗದಲ್ಲಿತ್ತು. ಯಶಸ್ವಿ ಪರಭಾಷಾ ಚಿತ್ರಗಳ ರಿಮೇಕ್ ಇಲ್ಲವೆ ಡಬ್ಬಿಂಗ್ ಸಂಪ

್ರದಾಯ ಆಗ ನಮ್ಮ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟಿರಲಿಲ್ಲ.
ನಿರ್ದೇಶಕನ ರೂಪದಲ್ಲಿಯ ರವಿಚಂದ್ರನ್ ಅವರನ್ನು ಕಡೆಗಣಿಸಲಿಕ್ಕೆ ಸಾದ್ಯವೇ ಇಲ್ಲ ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು. ಇನ್ನೊಂದು ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಸಂಗೀತ ಪ್ರತಿಯೊಂದು ಚಿತ್ರದಲ್ಲಿ ಹೊಸತು. ಉದಾಹರಣೆಗೆ ಅವು ಮೊದಲ ನಿರ್ಧೇಶನದ ಚಿತ್ರ ಪ್ರೇಮಲೋಕದಿಂದ ಭಾರಿ ಯಶಸ್ಸು ಕಂಡ ರಾಮಾಚಾರಿ ತೆಗೆದುಕೊಳ್ಳಿ. ೮೦ರ ದಶಕದಲ್ಲಿ ಪ್ರೇಮಲೋಕದ ಹಾಡುಗಳು ಚಿತ್ರಿಕರಣ ಕರ್ನಾಟಕದ ಮಟ್ಟಿಗೆ ಮೊದಲ ಪ್ರಯೋಗ ಕಥೆ ಮಾತ್ರ ಸಾಧಾರಣವಾದ ಪ್ರೇಮಕತೆ ಆದರೆ ಅದರಲ್ಲಿನ ಸೃಜನಾತ್ಮಕತೆ ಅಂದಿನ ದಿನಗಳಲ್ಲಿ ಬೆರಗು ಹುಟ್ಟಿಸುವಂತಹದು. ಆಧುನಿಕ ತಂತ್ರಜ್ಞಾನ ವಿದೇಶಗಳಲ್ಲಿ ಹಾಡುಗಳ ಚಿತ್ರಿಕರಣ ಕಾಲ ಪ್ರಾರಂಭವಾದ ಮೇಲೂ ರವಿಚಂದ್ರನ್ ರಾಮಾಚಾರಿಯ ಮೂಲಕ ಹಳ್ಳಿಯ ಸೋಗಡಿಗೆ ತಿರುಗಿ ಸಾಧಾರಣ ಭಾಷಾ ಸಾಹಿತ್ಯದ ಹಾಡುಗಳೊಂದಿಗೆ ಇಡೀ ಕತೆಯನ್ನು ಬಿಡಿಸಿಡುವ ಕಲೆಯಲ್ಲಿ ಅವರೊಬ್ಬರೆ ಪಾರಂಗತ. ಕನಸುಗಾರ, ಏಕಾಂಗಿ,ಮಲ್ಲ, ಮನೆದೇವ್ರು,ರಾಮಾಚಾರಿ,ಸ್ವಾಭಿಮಾನಿ, ಯುಗಪುರುಷ, ಯುದ್ದಕಾಂಡ, ಸ್ವಾಭಿಮಾನ,ಶಾಂತಿಕ್ರಾಂತಿ, ರಣಧೀರ,ಅಂಜದ ಗಂಡು ಪ್ರೇಮಲೋಕ ಮುಂತಾದ ಚಿತ್ರಗಳಲ್ಲಿ ಭಾರಿ ಯಶಸ್ಸು ಅಂದರೆ ಪ್ರೇಮಲೋಕ ಹಾಗೂ ರಾಮಾಚಾರಿಯದ್ದು, ರಣಧೀರ, ಅಂಜದ ಗಂಡು,ಯುಗಪುರುಷ, ಯುದ್ದಕಾಂಡಗಳು ಯಶಸ್ವಿ ಚಿತ್ರಗಳ ಸಾಲಿನಲ್ಲಿ ಸೇರುತ್ತವೆ.
ಈ ಕರುನಾಡ ಕನಸುಗಾರ ವಿ.ರವಿಚಂದ್ರನ್ ಅವರಿಗೆ ಅವರ ಅಭಿಮಾನಿಯೊಬ್ಬನ ಈ ಕನಸು.

Address

DGP. CID Police. Bangaluru
Bangalore
560036

Telephone

9945041021

Website

Alerts

Be the first to know and let us send you an email when ಅಖಿಲ ಕರ್ನಾಟಕ ವಿ.ರವಿಚಂದ್ರನ್ ಅಭಿಮಾನಿಗಳ ಸಂಘ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಅಖಿಲ ಕರ್ನಾಟಕ ವಿ.ರವಿಚಂದ್ರನ್ ಅಭಿಮಾನಿಗಳ ಸಂಘ:

Share