The objective of Janadani is to create awareness in the society about sexual harassment, r**e and unnatural sexual behaviour and act to prevent them. Smt Jayalaxmi Patil, a noted Kannada TV and theatre artist and a writer, gave a call to act against this social evil, after the national outrage that followed the brutal r**e of Nirbhaya in a moving bus in New Delhi on 16 Dec 2012. A few of her frien
ds on Facebook, responded to her call and supported her efforts in forming JANADANI. Janadani was formalized in August 2015 by registering itself as a Charitable Trust with six trustees. Janadani organises awareness programs, about its objective, in play homes and primary schools for the parents of the children; in high schools and colleges for students, in orphanages for their inmates and in any private or public organization for all; and in fact for all the people in every home in the country. Janadani has already started its campaign in the right earnest. Those who want to invite Janadani to organize awareness programs have to inform Janadani at least fifteen days in advance. A three hour slot needs be reserved for each such program.
“Let us change the System for well-being of the society within and outside our homes” is the motto of JANADANI.
*
ಜನದನಿಯ ಆಶಯಗಳು:
ಅತ್ಯಾಚಾರಗಳ, ಲೈಂಗಿಕ ದೌರ್ಜನ್ಯಗಳ ಹಾಗೂ ಲೈಂಗಿಕ ಆಸಕ್ತಿಯನ್ನು ಬಿಂಬಿಸುವ ಅಸಹಜ ನಡವಳಿಕೆಗಳ ಕಾರಣಗಳ ಬಗ್ಗೆ, ಇಂಥವು ಆಗದಿರುವಂತೆ ತಡೆಯುವ ಬಗ್ಗೆ, ಸಮಾಜದಲ್ಲಿನ ಎಲ್ಲಾ ವರ್ಗದ ಜನರಲ್ಲಿ, ಜಾಗೃತಿ ಮೂಡಿಸುವುದು.
ಪ್ಲೇ ಹೋಂ, ನರ್ಸರಿ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರು, ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು, ಅನಾಥಾಲಯಗಳಲ್ಲಿನ ಮಕ್ಕಳು, ಭೂಮಿಯ ಮೇಲಿನ ಪ್ರತಿಯೊಂದು ಮನೆಯ ಜನರಲ್ಲಿ ಜಾಗೃತಿ ಮೂಡಿಸುವುದನ್ನು ಗುರಿಯಾಗಿಟ್ಟುಕೊಂಡು ಜನದನಿ ಕಾರ್ಯಪ್ರವೃತ್ತವಾಗಿರುತ್ತದೆ. ಯಾವುದೇ ಸಂಘ ಸಂಸ್ಥೆಗಳೂ, ಸರಕಾರಿ ಮತ್ತು ಖಾಸಗಿ ಕಾರ್ಯಾಲಯಗಳೂ ಸಹ ಇದಕ್ಕೆ ಒಳಪಟ್ಟಿವೆ.
ಈ ಬಗ್ಗೆ ಗುಂಪಿನ ಸದಸ್ಯರನ್ನು ತಯಾರು ಮಾಡುವ ನಿಟ್ಟಿನಲ್ಲಿ ಒಂದು ದಿನದ ಕಾರ್ಯಾಗಾರವನ್ನು ೨೦೧೪ರ ಸೆಪ್ಟಂಬರ್ ಮಾಸದಲ್ಲಿ ಒಮ್ಮೆ ೨೦೧೫ ಆಗಸ್ಟ್ ೦೯ರಂದು ಇನ್ನೊಮ್ಮೆ ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು.
ಮುಂಜಾನೆಯಿಂದ ಸಾಯಂಕಾಲದವರೆಗಿನ ಆ ಕಾರ್ಯಾಗಾರದಲ್ಲಿ, ಮನೋವಿಜ್ಞಾನಿ, ನ್ಯಾಯವಾದಿ, ವೈದ್ಯೆ ಹಾಗೂ ನಿವೃತ್ತ ಪೋಲೀಸ್ ಅಧಿಕಾರಿಯಿಂದ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿರುತ್ತೇವೆ.
ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಕುರಿತು ಕಾನೂನಿನಲ್ಲಿರುವ ಕಾಯಿದೆ ಕುರಿತು ಜನರಿಗೆ ತಿಳಿಯುವಂತೆ ಮಾಡಲು ಅನೇಕ ಭಿತ್ತಿಪತ್ರಗಳನ್ನು ತಯಾರಿಸಿ ಪ್ರಚಾರ ಮಾಡುತ್ತಿದ್ದೇವೆ.
ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ಕಿರುಚಿತ್ರಗಳನ್ನು ನಿರ್ಮಿಸಿದ್ದೇವೆ ಹಾಗೂ ನಿರ್ಮಿಸುತ್ತಿದ್ದೇವೆ.
ಇದೆಲ್ಲವೂ ಅಲ್ಲದೇ ಇನ್ನೂ ಹಲವಾರು ಯೋಜನೆಗಳು ಕಾರ್ಯಗತಗೊಳ್ಳಲಿವೆ.
ಈಗಾಗಲೇ ಕೇವಲ ಬೆಂಗಳೂರಿನಲ್ಲಿ ಅನೇಕ ಕಡೆ ಮಾತ್ರವಲ್ಲದೆ ಉಡುಪಿ, ಚಿತ್ರದುರ್ಗ, ವಿಜಯಪುರ ಮತ್ತು ಮಣಿಪಾಲದ ಹತ್ತಿರದಲ್ಲಿರುವ ಪರೀಕದಲ್ಲಿಯೂ ಸಹ ಜನದನಿ ತನ್ನ ಜಾಗೃತಿ ಕಾರ್ಯಕ್ರಮವನ್ನು ನೀಡಿದೆ.
ಕನಿಷ್ಠ ಇಪ್ಪತೈದು ಜನರಿರುವಲ್ಲಿ ಯಾರೇ ಕರೆದರೂ ನಾವಲ್ಲಿಗೆ ಹೋಗಿ ಅವೇರ್ನೆಸ್ ಪ್ರೋಗ್ರಾಂ ಕೊಡ್ತೀವಿ. ಇದಕ್ಕೆ ನಮಗೆ ೨ವರೆ ಗಂಟೆಗಳು ಬೇಕು.