24/04/2026
ಬೆಂಗಳೂರು ನಗರದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ Raksha Foundation ವತಿಯಿಂದ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ.
ರಕ್ಷಾ ಫೌಂಡೇಷನ್ ಸಂಸ್ಥಾಪಕರು ಹಾಗೂ ಜಯನಗರ ಕ್ಷೇತ್ರದ ಶಾಸಕರಾದ CK Ramamurthy ಅವರ ನೇತೃತ್ವದಲ್ಲಿ ಬಸ್ ನಿಲ್ದಾಣಗಳು, ಕೂಲಿ ಕಾರ್ಮಿಕರು ಇರುವ ಸ್ಥಳಗಳು, ಅಂಗಡಿಗಳ ಪ್ರದೇಶಗಳು ಹಾಗೂ ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಪ್ರತಿದಿನ ಉಚಿತ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ.
ಈ ಕುರಿತು ಮಾತನಾಡಿದ ಶಾಸಕರಾದ ಸಿ. ಕೆ. ರಾಮಮೂರ್ತಿ ಅವರು, ಬಡವರ್ಗದ ಕುಟುಂಬಗಳಿಂದ ಬಂದಿರುವ ಹಲವರು ಕೂಲಿ ಕೆಲಸಗಳ ಮೂಲಕ ಜೀವನ ನಡೆಸುತ್ತಿದ್ದು, ಅವರಿಗೆ ಪ್ರತಿದಿನ ಹಣ ನೀಡಿ ಬಾಟಲ್ ನೀರು ಖರೀದಿಸುವುದು ಕಷ್ಟಕರವಾಗುತ್ತದೆ. ಇಂತಹ ಜನರನ್ನು ಗಮನದಲ್ಲಿಟ್ಟುಕೊಂಡು ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
“ಈ ತೀವ್ರ ಬೇಸಿಗೆಯಲ್ಲಿ ಒಂದು ಹನಿ ನೀರೂ ಒಂದು ಜೀವ ಉಳಿಸಬಲ್ಲದು. ಆದ್ದರಿಂದ ಜನರು ನೀರನ್ನು ವ್ಯರ್ಥ ಮಾಡದೆ, ಮಿತವಾಗಿ ಬಳಸುವ ಅಭ್ಯಾಸ ಬೆಳೆಸಬೇಕು,” ಎಂದು ಅವರು ಮನವಿ ಮಾಡಿದರು.
ಮುಂದೆ ಅವರು ಎಚ್ಚರಿಕೆ ನೀಡುತ್ತಾ, “ನೀರನ್ನು ಅಜಾಗರೂಕವಾಗಿ ಬಳಸದಿದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ತೀವ್ರವಾಗಿ ಉಂಟಾಗಿ ಸಾವು-ನೋವುಗಳಿಗೆ ಕಾರಣವಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ನೀರು ಉಳಿಸುವ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು,” ಎಂದು ಹೇಳಿದರು.
ರಕ್ಷಾ ಫೌಂಡೇಶನ್ ಈ ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ಸಾರ್ವಜನಿಕರ ಆರೋಗ್ಯ ಮತ್ತು ಕಲ್ಯಾಣದತ್ತ ಮಹತ್ವದ ಹೆಜ್ಜೆ ಇಟ್ಟಿದೆ.
#ರಕ್ಷಾಫೌಂಡೇಶನ್ #ಜಯನಗರ