21/07/2026
ಪ್ರತಿಭಾ ಪುರಸ್ಕಾರ 2026 ಹಾಗೂ ಬಾಯ್ಲರ್ ಪಾಕಶಾಲಾ ಉದ್ಘಾಟನಾ ಕಾರ್ಯಕ್ರಮ
2026ರ ಜುಲೈ 19ರಂದು ಕುಮಟಾದ ಹವ್ಯಕ ವಿದ್ಯಾವರ್ಧಕ ಸಂಘ (ರಿ.) ವತಿಯಿಂದ ಪ್ರತಿಭಾ ಪುರಸ್ಕಾರ 2026 ಹಾಗೂ ಬಾಯ್ಲರ್ ಪಾಕಶಾಲಾ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದಯಾನಂದ ಭಟ್ಟ ವಹಿಸಿದ್ದರು. ಶ್ರೀ ಪ್ರಸನ್ನ ಹೆಗಡೆ ಅವರು ಬಾಯ್ಲರ್ ಪಾಕಶಾಲೆಯನ್ನು ಉದ್ಘಾಟಿಸಿದರು. ಶ್ರೀ ಎ. ಎಸ್. ಪಾಟೀಲ, ಡಾ. ವಿನಾಯಕ ಭಟ್ಟ, ಶ್ರೀಮತಿ ಅನಸೂಯಾ ಪೈ ಹಾಗೂ ಶ್ರೀ ಅಕಲಂಕ ಪೈ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸುರಭಿ ಫೌಂಡೇಶನ್ ಟ್ರಸ್ಟ್‌ನ ಸಂಸ್ಥಾಪಕರಾದ ಡಾ. ಎ. ಎಸ್. ಪಾಟೀಲ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶಿಕ್ಷಣದ ಮಹತ್ವವನ್ನು ಹೇಳಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗಿದ್ದು, ಸಂಘದ ಶಿಕ್ಷಣ ಮತ್ತು ಸಮಾಜಸೇವೆಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತವಾಯಿತು.