ನಮ್ಮ ಸಮಾಜ ಸೇವಕರ ಸಮಿತಿಯ ಬಗ್ಗೆ ಕಿರು ಪರಿಚಯ.
~~~~~~~~~~~~~~~~~
ಸಮಾಜ ಸೇವಕರ ಸಮಿತಿ (ರಿ)
ಪ್ರಾರಂಭ- ಆಗಸ್ಟ್-1,2002
ಉದ್ದೇಶ: ಸಮಾಜದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವವರನ್ನು ಗುರುತಿಸಲು, ಅವರನ್ನು ಉತ್ತೇಜಿಸಲು, ಅವರ ಕೆಲಸವನ್ನು ಇತರ ಯುವ ಸಮೂಹಕ್ಕೆ ಪರಿಚಯಿಸಲು ಮತ್ತು ಅದರಿಂದ ನಮ್ಮ ಬದುಕಿಗೆ ಸ್ವಲ್ಪ ಬೆಳಕು ತಂದುಕೊಳ್ಳವುದು ನಮ್ಮ ಉದ್ದೇಶ. ಭಾರತದಲ್ಲೆ ಮೊಟ್ಟ ಮೊದಲ ಬಾರಿಗೆ ನಮ್ಮ ಸಂಸ್ಥೆಯ ಆರಂಭದ ದಿನ ಆಗಸ್ಟ್ 1 ನ್ನು "ಸಮಾಜ ಸೇವಕರ ದಿನಾಚರಣೆ" ಅಂತ ಘೋಷಿಸ
ಿ ಅಂದು ನಿಸ್ವಾರ್ಥವಾಗಿ ಸಮಾಜದ ಕೆಲಸ ಮಾಡುತ್ತಿರುವವರನ್ನು ಗೌರವಿಸುತ್ತಿದ್ದೇವೆ.
ಯಾರು ಇದರ ಸಂಸ್ಥಾಪಕರು?
7-8 ಜನ Engineering graduates, ಸಮಾನಾಸಕ್ತರು. ವಿಶೇಷವಾಗಿ ಡಿವಿಜಿಯವರ ಅಭಿಮಾನಿಗಳು.
ಧ್ಯೇಯ:
೧. ಗ್ರಾಮೀಣ ಶಿಕ್ಷಣ
೨. ಕನ್ನಡ ಸಾಹಿತ್ಯ ಪ್ರಚಾರ
೩. ಡಿವಿಜಿಯವರ ಸಾಹಿತ್ಯ ಪ್ರಚಾರ
೪. ನಿಸ್ವಾರ್ಥ ಸಮಾಜಸೇವಕರನ್ನು ಗುರುತಿಸಿ ಸನ್ಮಾನ
ಪ್ರಮುಖ ಕೆಲಸಗಳು:
೧) ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ಎರಡು ಉಚಿತ ಶಾಲೆಗಳನ್ನು ಸ್ಥಾಪಿಸಿ ಹಳ್ಳಿಯ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿರುವುದು.
೨)ಇದುವರೆವಿಗೂ ಪ್ರತಿ ಆಗಸ್ಟ್ 1 ರಂದು ಸಮಾಜ ಸೇವಕರ ದಿನ ಅಂತ ಘೋಷಿಸಿ ಸುಮಾರು 30 ನಿಸ್ವಾರ್ಥ ಸಾಧಕರನ್ನ ಗುರುತಿಸಿ ಗೌರವಿಸಿರುವುದು.
೩)ಡಿ.ವಿ.ಜಿ ಯವರ ಜನ್ಮದಿನಾಚರಣೆಯನ್ನು ಮಾರ್ಚ್ 17 ರಂದು ಕಳೆದ 11 ವರ್ಷಗಳಿಂದ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು.
೪)ಮೊಟ್ಟ ಮೊದಲಬಾರಿಗೆ ಕನ್ನಡ ಸಾಹಿತ್ಯವನ್ನು ಟಿ-ಶರ್ಟ್ ಮೇಲೆ ಅಚ್ಚು ಹಾಕಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಪಸರಿಸಿರುವುದು.
೫) ಸಾಹಿತ್ಯ ಸಮ್ಮೇಳನಗಳಲ್ಲಿ ಸದಭಿರುಚಿಯ ಕನ್ನಡ ಪುಸ್ತಕಗಳನ್ನು,ಶುಭಾಶಯ ಪತ್ರಗಳನ್ನು ಮಾರಾಟ ಮಾಡಿರುವುದು.
೬) ಡಿ.ವಿ.ಜಿಯವರನ್ನು ಕುರಿತ ಸಾಕ್ಷ್ಯಚಿತ್ರದ ನಿರ್ಮಾಣ
೭) ಅನೇಕ ವೈವಿಧ್ಯಮಯ ಸ್ಪರ್ಧೆಗಳನ್ನು ಏರ್ಪಡಿಸಿರುವುದು
೮) ಪುಸ್ತಕ ಪ್ರಕಟಣೆ, ಡಿವಿಜಿಯವರ ಮರುಳಮುನಿಯನ ಕಗ್ಗಕ್ಕೆ ವಿವರಣೆ ಹಾಗೂ 'DVG on polity and politics' ಪುಸ್ತಕ ಪ್ರಕಟಣೆ
೯)ಅನೇಕ ಖ್ಯಾತ ಸಂಗೀತಗಾರರ ಕಛೇರಿಗಳ ಆಯೋಜನೆ.
೧೦) ಡಿವಿಜಿಯವರ ಹಲವು ಕೃತಿಗಳ ರಂಗರೂಪ, ರೂಪಕ
ಸರ್ಕಾರ ಹೊರತುಪಡಿಸಿ ಒಂದು ಸಂಸ್ಥೆಯಾಗಿ ಯುವಜನತೆಗೆ ಡಿವಿಜಿ ಅವರ ಬದುಕು-ಬರಹ ತಲುಪಿಸುವ ಉದ್ದೇಶದಿಂದ 'ಡಿವಿಜಿ ಕುರಿತ ಸಾಕ್ಷ್ಯ ಚಿತ್ರ' ಮಾಡಿದ್ದೇವೆ. ಸುಮಾರು 15 ತಾಸು ಅದಕ್ಕಾಗಿ ಚಿತ್ರೀಕರಣ ಮಾಡಿದ್ದೇವೆ. ಡಿವಿಜಿಯವರ ಹತ್ತಿರದ ಒಡನಾಡಿಗಳು, ಮಿತ್ರರು, ಶಿಷ್ಯರು, ಕುಟುಂಬದವರು ಅದರಲ್ಲಿ ಡಿವಿಜಿ ಕುರಿತು ಮಾತನಾಡಿದ್ದಾರೆ. ಅದರ ಸಿ.ಡಿ 2016- ಡಿವಿಜಿ ಜನ್ಮದಿನ ಕಾರ್ಯಕ್ರಮದಲ್ಲಿ ಬಿಡುಗಡೆ ಆಗುತ್ತಿದೆ.
ನಮ್ಮಲ್ಲಿ ಯಾವುದೇ ಅಧ್ಯಕ್ಷ ಕಾರ್ಯದರ್ಶಿ ಹುದ್ದೆಗಳಿಲ್ಲ. ಪ್ರಚಾರ ಪ್ರಸಿದ್ದಿ ಹಂಬಲಗಳಿಲ್ಲ. ಡಿವಿಜಿಯವರ ಬದುಕು ಬರಹವೇ ನಮಗೆ ಆದರ್ಶ. ಸಮಾಜದ ಬಗ್ಗೆ ಕಾಳಜಿ ಕಳಕಳಿ ಇರುವವರೆಲ್ಲಾ ನಮ್ಮ ಸದಸ್ಯರೇ. ನಮ್ಮ ಕಛೇರಿ ಬಸವನಗುಡಿ ನೆಟ್ಟಕಲ್ಲಪ್ಪ ವೃತ್ತದಲ್ಲಿದೆ. ನೀವೂ ನಮ್ಮ ಜತೆ ಕೈಜೋಡಿಸಬಹುದು.
ನಮ್ಮ ನಂಬಿಕೆ:
'ಜೀವನ ಸಾರ್ಥಕ ಆಗಲು ಸಮಾಜಸೇವೆಯೇ ಪೂರಕ'
ನಿಮ್ಮ ಹಾರೈಕೆ, ಬೆಂಬಲ, ಸಹಕಾರ ಸದಾ ನಮ್ಮೊಂದಿಗಿರಲಿ. ನಮಸ್ಕಾರ .