Karnataka Organic Growers Association

Karnataka Organic Growers Association Farm Production Practices, Indigenous Inputs Production. Tradition and Culture, Ayurvedic Medicinal Herbs. Farming Knowledge. Integrated Farming. Rural Education.
(1)

Multiple Income Sources. Society Welfare. Women Supportive. Organic Karnataka Farmers Association is a group of active and interested farmers involved in Organic, Natural and Sustainable farming methods and Practices.

09/07/2026

ವ್ಯಾಪಾರಿಗಳು ಎಲ್ಲೆಡೆ ತೆಂಗಿನಕಾಯಿಯ ಒಂದು ಚಿಪ್ಪಿಗೆ ಎರಡು ರೂ. ಕೊಟ್ಟು ಖರೀದಿಸುತ್ತಿದ್ದಾರೆ.

ಕೆಲವರು ಕಿಲೋ ಲೆಕ್ಕದಲ್ಲಿ ತೆಂಗಿನಕಾಯಿ ಚಿಪ್ಪನ್ನು ಖರೀದಿಸುತ್ತಿದ್ದು, ಒಂದು ಕೆಜಿಗೆ 20- 22 ರೂ. ನೀಡುತ್ತಿದ್ದಾರೆ.

ಖರೀದಿಸಿದ ಚಿಪ್ಪನ್ನು ಶೇಖರಣೆ ಮಾಡಿ ತಿಪಟೂರು ಹಾಗೂ ಅರಸೀಕೆರೆ ಸೇರಿದಂತೆ ಇತರ ಭಾಗಗಳಿಗೆ ರವಾನಿಸಲಾಗುತ್ತಿದೆ.

ಚಿಪ್ಪುಗಳನ್ನು ಸಾವಯವ ಇದ್ದಲಿನ ತಯಾರಿಕೆಗೆ ಬಳಸುತ್ತಾರೆ.

ಒಟ್ಟಾರೆ ತೆಂಗು ಕಳೆದ ವರ್ಷದಿಂದ ಮಾರ್ಕೆಟ್ ನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಾರಿ ಸೌಂಡ್ ಮಾಡ್ತಿದೆ.

1. ಭದ್ರಮುಷ್ಟಿ, 2. ನೆಲನೆಲ್ಲಿ, 3. ಹೊನಗೊನ್ನೆ, 4. ಮುಟ್ಟಿದರೆ ಮುನಿ, 5. ಉತ್ತರಾಣೆ, 6.+ಕಾಳಜೀರಿಗೆ, 7. ದೊಡ್ಡಪತ್ರೆ, 8. ತುಳಸಿ, 9. ಲೋಳ...
01/07/2026

1. ಭದ್ರಮುಷ್ಟಿ,
2. ನೆಲನೆಲ್ಲಿ,
3. ಹೊನಗೊನ್ನೆ,
4. ಮುಟ್ಟಿದರೆ ಮುನಿ,
5. ಉತ್ತರಾಣೆ,
6.+ಕಾಳಜೀರಿಗೆ,
7. ದೊಡ್ಡಪತ್ರೆ,
8. ತುಳಸಿ,
9. ಲೋಳೆಸರ,
10. ಚಕ್ರಮುನಿ,
11. ಜಾಜಿ,
12. ಶಂಖಪುಷ್ಪ,
13. ಕರಿಬೇವು,
14. ಗಾಂಧಾರಿ ಸೂಜಿಮೆಣಸು
15. ಕಾಕೆಹಣ್ಣಿನ ಗಿಡ
16. ನೋನಿ
17.ಬೆಟ್ಟದನೆಲ್ಲಿ
18. ಶುಂಠಿ
19. ಮಿಂಟ್ ಗಿಡ
20. ತುಂಬೆ
21. ಸೋಣೆ
22. ಗರಿಕೆ(ದೂರ್ವೆ)
23. ಅಮೃತಬಳ್ಳಿ
24. ಕಸವಿನ ಬಳ್ಳಿ
25. ಪಚ್ಚೆತೆನೆ(ಪಚೋಲಿ)
26. ನಂದಿಬಟ್ಟಲು
27. ಎಲವರಿಗೆ(ಎಲಗುರಿಗೆ)
28. ಇನ್ಸುಲಿನ್ ಗಿಡ
30. ಮಂದಾರ
31. ಕಂಚಿ
32. ನಿಂಬೆ
33. ಮಜ್ಜಿಗೆಗಿಡ/ಹುಳಿಸೊಪ್ಪು
34. ಹೊರಮುನಿ
35. ಬೆಳ್ಳುಳ್ಳಿ ಗಿಡ
36. ಅರಿಶಿನ
37. ತುಂಬೆ...........

ಮನೆಯ ಅಂಗಳದಲ್ಲಿ, ತೋಟದಲ್ಲಿ ಹಾಗೂ ಮನೆಯ ಸುತ್ತಮುತ್ತಲಿನ ಜಾಗದಲ್ಲಿ ಬೆಳೆಯುವ ಗಿಡಗಳಿವು.😍

( * ಸ್ಥಳೀಯವಾಗಿ ನಮ್ಮಲ್ಲಿ ಬಳಕೆ ಇರುವ ಹೆಸರುಗಳು. ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆ ಹೆಸರಿಂದ ಕರೆಯುತ್ತಾರೆ..
ಮತ್ತು ಈ ಗಿಡಗಳ ಔಷಧೀಯ ಗುಣಗಳ ಬಗ್ಗೆ ನಿಖರವಾಗಿ ಗೊತ್ತಿದ್ದವರು ಮಾಹಿತಿ ನೀಡಲು ವಿನಂತಿ.. 🙏🙏🙏🙏

ಸುಸ್ಥಿರ ಮತ್ತು ಸಮಗ್ರ ಕೃಷಿ ಅಬಿವೃದ್ಧಿ ಏಕೆ ಮತ್ತು ಹೇಗೆ?ನಮ್ಮ ಬಹುತೇಕ ರೈತರು ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಬಳಸುತ್ತಿರುದರ...
01/07/2026

ಸುಸ್ಥಿರ ಮತ್ತು ಸಮಗ್ರ ಕೃಷಿ ಅಬಿವೃದ್ಧಿ ಏಕೆ ಮತ್ತು ಹೇಗೆ?

ನಮ್ಮ ಬಹುತೇಕ ರೈತರು ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಬಳಸುತ್ತಿರುದರಿಂದ, ಆಧುನಿಕ ಕಾಲದಲ್ಲಿ ಅಪರಿಮಿತ ಹಣ ಮಾಡುವ ಆಸೆಗೆ ಸಿಲುಕಿ ವಾಣಿಜ್ಯದಾಯಕ ಏಕಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಿರುವದರಿಂದ ಮಣ್ಣಿನ ರಚನೆ ಹದಗೆಟ್ಟು, ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕ್ಷೀಣಗೊಂಡು, ಅವಶ್ಯಕ ಪೋಷಕಾಂಶಗಳ ಕೊರತೆ ಮತ್ತು ಭೂಮಿಯ ಫಲವತ್ತತೆ ಕಡಿಮೆಯಾಗಿ, ಮೇಲ್ಪದರದ ಮಣ್ಣು ಗಡುಸಾಗುತ್ತಿದೆ. ಮಣ್ಣಿನಲ್ಲಿ ನೀರು ಇಂಗದೇ, ಮಣ್ಣು ನೀರನ್ನು ಹಿಡಿದಿಡಲಾಗದ ಸ್ಥಿತಿಯನ್ನು ತಲುಪಿದೆ.

ಇಂತಹ ಮಣ್ಣಿನಲ್ಲಿ ಬೆಳೆ ಮತ್ತು ನಿವ್ವಳ ಆಧಾಯ ಅನಿಶ್ಚತೆಯಿಂದ ಕೂಡಿರುವದರಿಂದ ವ್ಯವಸಾಯದ ಖರ್ಚು ಅಧಿಕವಾಗಿ, ರೈತರು ಸಾಲಭಾಧೆಗೆ ಸಿಲುಕಿಕೊಳ್ಳುತ್ತಿದ್ದಾರೆ.

ಇದರ ಜೊತೆಜೊತೆಗೆ ಪ್ರತಿ ವರ್ಷವೂ ಕೃತಕ ಗೊಬ್ಬರ ಹಾಗೂ ಔಷಧಿಗಳ ದರವೂ ದುಬಾರಿ ಯಾಗುತ್ತಿದೆ.

ಇದಕ್ಕಿರುವ ಸುಲಭ ಪರಿಹಾರ ಸುಸ್ಥಿರ ಮತ್ತು ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವದು.

#ಓನಿಕಾಯೋಜನೆ ಯು ನಿಮ್ಮ ಕೃಷಿಯನ್ನು ಸುಲಭವಾಗಿಸುತ್ತದೆ👍.

1. ಮಣ್ಣು ಮತ್ತು ನೀರನ್ನು ಸಂರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವದು. ಬದುಗಳನ್ನು ನಿರ್ಮಿಸುವದು, ಜಮೀನಿನ ಸುತ್ತ ಹಸಿರೆಲೆ ಗೊಬ್ಬರ ಮತ್ತು ಬಹುಪಯೋಗಿ ಮರಗಿಡಗಳನ್ನು ಬೆಳೆಸುವದು, ಹೊದಿಕೆ ಬೆಳೆಗಳನ್ನು ಬೆಳೆಯುವದು, ಸಾವಯವ ತ್ಯಾಜ್ಯವನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಮೇಲ್ಪದರದಲ್ಲಿ ಹರಡುವದು ಇತ್ಯಾದಿ.

2. ಮಣ್ಣಿನ ಫಲವತ್ತತೆ ಮತ್ತು ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಹಸಿರು ಗೊಬ್ಬರ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ವರ, ಜೈವಿಕ ಗೊಬ್ಬರ, ಎಣ್ಣೆಕಾಳುಗಳ ಹಿಂಡಿ, ಕುರಿ ಗೊಬ್ಬರ ಇತ್ಯಾದಿಗಳನ್ನು ನಿಯಮಿತವಾಗಿ ಕೃಷಿಭೂಮಿಗೆ ಸೇರಿಸಬೇಕು.

3. ಬೆಳೆ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವದು

ಏಕಬೆಳೆಯ ಬದಲಿಗೆ ಬಹುಬೆಳೆ ಪದ್ದತಿ (ಅಡಿಕೆ,ತೆಂಗು, ಬಾಳೆ) ಅಕಡಿ ಬೆಳೆ(ಶೇಂಗಾ, ತೊಗರಿ, ಅಲಸಂದೆ, ಹೆಸರು, ರಾಗಿ, ಸಿರಿಧಾನ್ಯ,ಹರಳು) ಅಂತರಬೆಳೆಗಳು(ಈರುಳ್ಳಿ, ಕೊತ್ತಂಬರಿ, ಬೆಂಡೆ, ತೊಗರಿ ಇತ್ಯಾದಿ) ಬದಲಿ ಬೆಳೆ, ಮೋಹಕ ಬೆಳೆ (ಹರಳು, ಚೆಂಡುಹೂ, ಬೆಂಡೆ), ಪರ್ಯಾಯ ಬೆಳೆ(ಕೊರಲೆ, ಕಡಲೆ, ಜೋಳ) ಇತ್ಯಾದಿ ಬೆಳೆಪದ್ದತಿಗಳ ಬಗ್ಗೆ ತಿಳಿದುಕೊಳ್ಳುವದು ಮತ್ತು ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳವದು.

4. ವ್ಯವಸ್ಥಿತ ಮತ್ತು ಸಮರ್ಪಕ ಬೇಸಾಯ

ಪದ್ದತಿಗಳನ್ನು ಅಳವಡಿಸಿಕೊಳ್ಳುವದು
ಉತ್ತಮ ತಳಿ ಮತ್ತು ಬೀಜದ ಆಯ್ಕೆ, ತೇವಾಂಶಕ್ಕನುಗುಣವಾಗಿ ಬಿತ್ತನೆಯ ಸಮಯವನ್ನು ನಿರ್ಧರಿಸುವದು. ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚು ಒತ್ತು ಕೊಡುವದು ಇತ್ಯಾದಿ.

ಹತ್ತಿರದ ಕೃಷಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ

5. ಕೃಷಿ ಅವಲಂಬಿತ ಜಾನುವಾರಗಳನ್ನು ಸಾಕುವದು
ಹಸು, ಕುರಿ, ಕೋಳಿ ಮುಂತಾದ ಜಾನುವಾರಗಳು ಕೃಷಿಗೆ ಪೂರಕ ಮತ್ತು ಹೆಚ್ಚುವರಿ ಆದಾಯ ತರುತ್ತವೆ.

6. ರಾಸಾಯನಿಕವಿಲ್ಲದೆ ಸಾವಯವ ಪದ್ದತಿಗಳಿಂದ ರೋಗ ಮತ್ತು ಕೀಟಗಳನ್ಬು ಹತೋಟಿ ಮಾಡುವದು

7. ಕೃಷಿಸಂಬಂಧಿತ ಉಪಕಸುಬುಗಳನ್ನು ಅಳವಡಿಸಿಕೊಳ್ಳುವದು

8. ರೈತ ಸಂಘಟನೆಗಳನ್ನು ಸೇರುವದು
ತರಭೇತಿ ಮತ್ತು ಮೇಳಗಳಲ್ಲಿ ಭಾಗವಹಿಸುವದು

ಬಹಳಷ್ಟು ಮಾಹಿತಿ ದೊರೆಯುತ್ತದೆ ಮತ್ತು ಪರಸ್ಪರರ ಸಂಪರ್ಕದಿಂದ ಕೆಲಸಗಳು ಸುಲಲಿತವಾಗಿ ಸಾಗುತ್ತವೆ.

9. ಸಮುದಾಯಿಕವಾಗಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ ಮುಂತಾದ ಚಟುವಟಿಕೆಗಳಿಂದ ತಾವು ಬೆಳೆದ ಪದಾರ್ಥಗಳಿಗೆ ದುಪ್ಪಟ್ಟು ಆದಾಯ ಗಳಿಸುವದು. ಇದಕ್ಕಾಗಿ ಸರ್ಕಾರದಿಂದ ದೊರೆಯುವ ಪ್ರೋತ್ಸಾಹಧನವನ್ನು ಸಮರ್ಪಕವಾಗಿ ಬಳಸಿಕೊಳ್ಳುವದು.

#ಸಮಗ್ರಕೃಷಿ ಪದ್ಧತಿ
Integrated Farming System
Multi layer Farming
Sustainable Farming


3 ಸ್ಥರ/5ಸ್ಥರದ ಕೃಷೀ ಪದ್ದತಿಗಳು..‌

ಸಾವಯವದಲ್ಲಿ ಲಾಭ/ಇಳುವರಿ ಕಡಿಮೆ ಎನ್ನುವ ವಾಡಿಕೆಯಿದೆ. ಮೊದಲನೆಯದಾಗಿ ಯಾವ ಕೃಷಿ ಗೊಬ್ಬರ/ಔಷಧಿ/ಟಾನಿಕ್ ಗಳನ್ನು ಉಪಯೋಗಿಸಬೇಕೆಂಬ ಸರಿಯಾದ ಮಾಹಿತಿ ಸಿಗುವದು ಕಷ್ಟಕರ. ಎರಡನೆಯದಾಗಿ ಸುಮಾರು ಅಂದರೇ ಬಹಳಷ್ಟು ಕೃಷಿಕರಿಗೆ ಮೂಲ ಕೃಷಿ ಪರಿಕಲ್ಪನೆ ಮತ್ತು ಪದ್ದತಿಗಳ ಸೂಕ್ತ ಅರಿವಿಲ್ಲಾ.

ಇತ್ತೀಚಿನ ವರ್ಷಗಳಲ್ಲಿ ಮಂಡ್ಯದಲ್ಲೀ ಭತ್ತದ ಜಾಗದಲ್ಲಿ ಕಬ್ಬು ಬೆಳೆಗೆ ಹೆಚ್ಚು ಹೆಚ್ಚು ಆಸಕ್ತಿ ತೋರುತ್ತಿರುವ ಮಾಹಿತಿಯಿದೆ, ಕಾರಣ ಕೃಷಿಕಾರ್ಯಗಳಿಗೆ ಕೆಲಸಗಾರರ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಕಬ್ಬು ಒಮ್ಮೆ ನೆಟ್ಟರೇ ಮುಗಿಯಿತು... ಕಾಲಕಾಲಕ್ಕೆ ನೀರು ಗೊಬ್ಬರವಿದ್ದರೆ ಬೆಳೆಯುತ್ತಾ ಹೋಗುತ್ತದೆ, ಗುತ್ತಿಗೆದಾರರಿಗೆ ಒಪ್ಪಿಸಿದರೆ ಕಟಾವು ಮುಗಿದು ಸಕ್ಕರೆ ಕಾರ್ಖಾನೆ ಸೇರಿಸಿದರೆ ಟನ್ ಗೆ 2300/- ಸಿಕ್ಕರೂ ಎಕರೆಗೆ 40 ಟನ್ ಅಂದರೂ 90000/- ದಿಂದ 1 ಲಕ್ಷ ಕನಿಷ್ಟ ಸಿಗುತ್ತದೆ. ಐದಾರು ಎಕರೆಗಳಿದ್ದರೆ ಐದಾರು ಲಕ್ಷ, ಎಕರೆಗೆ 30000/- ಖರ್ಚು ತೆಗೆದರೂ 3-4 ಲಕ್ಷ ಸಿಗುತ್ತದೆ. ಇದರ ಜೊತೆಗೆ ಬೇರೆಲ್ಲಾ ಮೂಲದ ಆದಾಯ ಸೇರಿಸಿದರೆ, ಹೇಗಾದರೂ 5 ಲಕ್ಷ‌...‌...ಭತ್ತವಾದರೇ ಹೆಚ್ಚು ಕೆಲಸ, ಕಡಿಮೆ ಲಾಭ...
ಮತ್ತೇ ಜಮೀನು ಶುದ್ಧಗೊಳಿಸಿ ಚಿಗುರು ಶುರುವಾದರೆ
ಕಬ್ಬು ಕಟಾವು ಬರುವವರೆಗೆ ಕೆಲಸ ಸಲೀಸು...
ಈ ಅಂಕಿಅಂಶಗಳು ಅಂದಾಜು ಮಾಡಿದ್ದು..‌‌

ಇದೆಲ್ಲಾ ಹೇಳಿದ್ದು ಮೇಲಿನ ಉದಾಹರಣೆಯಲ್ಲಿ ಸಮಗ್ರ ಕೃಷಿ ಪದ್ದತಿಯ ಬಗ್ಗೆ ತಿಳಿಸುವದಕ್ಕಾಗಿ.. ಕಬ್ಬಿನಲ್ಲಿ ಮೊದಲ 3 ತಿಂಗಳು ಅಂತರಬೆಳೆಯಾಗಿ ಹೂ-ತರಕಾರಿಗಳನ್ನು ಬೆಳೆಯಬಹುದು. ಹಸುಕುರಿಗಳನ್ನು ಸಾಕಬಹುದು. ಬಹುಮೂಲದ ಆದಾಯದಿಂದ ವಾರ್ಷಿಕ ವರಮಾನವನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳಬಹುದು ಮತ್ತು ವರ್ಷದ ಎಲ್ಲಾ ತಿಂಗಳಿನಲ್ಲಿ ಆದಾಯವಿರುತ್ತದೆ. ಬರೀ ಟಬ್ಬು ಬೆಳೆದರೆ ವರುಷಕ್ಕೊಮ್ಮೆ ಮಾತ್ರ ಆದಾಯ..ಯಾವುದು ಉತ್ತಮ?👍

ಪ್ರತಿಶತ 60-70 ಭಾಗ ಮುಖ್ಯಬೆಳೆ, 20 ಭಾಗ ಅಂತರಬೆಳೆ, 10ಭಾಗ ಮೇವು, ಕೈತೋಟ ಜೊತೆಗೆ ಪಶುಸಂಗೋಪನೆ ಹೆಚ್ಚು ಸೂಕ್ತವೆನಿಸುತ್ತದೆ.

ಇದರ ಬಗ್ಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳಬಹುದು...

3ಸ್ಥರ/5ಸ್ಥರದ ಸಮಗ್ರ ಕೃಷಿ ಪದ್ದತಿಗಳ ಬಗ್ಗೆ ಕೇಳಿದ್ದೀರಾ?

ಬೆಳೆಗಳ ಅವಧಿ ಮತ್ತು ಬೆಳೆಯುವ ಎತ್ತರ, ಅವು ಬಯಸುವ ಬಿಸಿಲು, ನೆರಳನ್ನು ತಡೆದುಕೊಳ್ಳುವ ಶಕ್ತಿ, ನೆರಳನ್ನು ಬಯಸುವ ಗುಣ, ನೀರಿನ ಅಗತ್ಯಗಳಿಗೆ ಅನುಸಾರ 3ಸ್ಥರ/5ಸ್ಥರ ಪಧ್ದತಿಯನ್ನು ರೂಪಿಸುತ್ತಾರೆ...

ಸಾಮಾನ್ಯವಾಗಿ ಮೊದಲನೆಯ ಸ್ಥರದಲ್ಲಿ ದೀರ್ಘಕಾಲದ ಅಡಿಕೆ/ತೆಂಗು/ನೆರಳಿನ ಗಿಡಗಳನ್ನು ಹೆಚ್ಚಾಗಿ ಕಾಣಬಹುದು.

ಎರಡನೆಯ ಸ್ಥರದಲ್ಲಿ ಬಾಳೆ/ಪಪಾಯ/ಕಾಫಿಗಳನ್ನು ಹೆಚ್ಚಾಗಿ ಕಾಣುತ್ತೇವೆ.

ಈಗ ಮೂರು, ನಾಲ್ಕು ಮತ್ತು ಐದನೆಯ ಸ್ಥರವನ್ನು ಆಯ್ಕೆ ಮಾಡುವಲ್ಲಿ ಹೆಚ್ಚು ನೈಪುಣ್ಯತೆ ಮತ್ತು ಅನುಭವದ ಅವಶ್ಯಕತೆಯಿರುತ್ತದೆ.

ಮೂರು ಅಥವಾ ಐದನೆಯ ಸ್ಥರವು ಭೂಮಿಯ ಒಳಗಿನ ಪದಾರ್ಥಗಳಿಗೆ ಬೇಡಿಕೆಯಿರುವ ಸಿಹಿಗೆಣಸು/ ಮೂಲಂಗೀ/ಅರಿಶಿಣ/ಶುಂಠಿ/ಸೊಪ್ಪು ಇತ್ಯಾದಿಯಾಗಿರಬಹುದು..‌

ನಾಲ್ಕನೆಯ ಸ್ಥರವು ಸಾಮಾನ್ಯವಾಗಿ ಮೊದಲನೇ ಅಥವಾ ಎರಡನೆಯ ಸ್ಥರದ ಗಿಡಗಳ ಆಸರೆಯಲ್ಲಿ ಬೆಳೆಯುವ ಬಳ್ಳಿ ಜಾತಿಯದು ಆಗಿರುತ್ತದೆ . ಕಾಳುಮೆಣಸು, ವೀಳ್ಯದೇಲೆ, ಸೋರೆಕಾಯಿ, ಹೀರೆಕಾಯೀ ಇತ್ಯಾದಿಯಾಗಿ..‌

5ಸ್ಥರದ ಮಾದರಿಯಲ್ಲಿ ಮೂರನೆಯ ಸ್ಥರವು ಮೆಣಸಿನಕಾಯಿ, ಗೋರಿಕಾಯಿ, ಬದನೆಕಾಯಿ, ಮೇವು, ಗ್ಲಿರೀಸಿಡಿಯಾ ಇತ್ಯಾದಿಯಾಗಿರಬಹುದು..

ಆದರೇ ಇದರ ನಿರ್ವಹಣೆಯಲ್ಲಿ ತುಂಬಾ ಜಾಗಾರೂಕತೆಯಿರಬೇಕು... ಇದು ಹೇಳಿದಷ್ಟು ಸುಲಭವಿರುವದಿಲ್ಲಾ, ತಾಳ್ಮೆ, ಶ್ರಮ ಅತ್ಯಗತ್ಯ.... ಇದೇ ಈ ಹೊತ್ತಿನ ಮಾಹಿತಿ...
ಹೆಚ್ಚಿನ ಮಾಹಿತಿಗಾಗಿ... ನೋಂದಣೆ ಮಾಡಿಕೊಳ್ಳಲು ಈ ಲಿಂಕ್ ಬಳಸಿ...
ನಮ್ಮ ಉಪಯುಕ್ತ ಕೃಷಿ ಸಂಬಂಧಿತ ಕೈಪಿಡಿಗಳು ನಿಮ್ಮ ಮೊಬೈಲಿನಲ್ಲಿ ಡೌನ್ಲೋಡ್ ಮಾಡಿಕೊಂಡು ಓದಲು ಈಗಲೇ ಕೆಳಗಿನ ಲಿಂಕ್ ಮೂಲಕ ಫೇ ಮಾಡಿ...

ಇದನ್ನು ಹೆಚ್ಚುಹೆಚ್ಚು ಜನರಿಗೆ ತಲುಪಿಸಲು ಶೇರ್ ಮಾಡಿ


Krishikaipidi
Karnataka Organic Growers Association
#ಕೃಷಿ
#ಕೃಷಿಕ


ONICA Farming (ಓನಿಕಾ ಕೃಷಿ) ಎನ್ನುವುದು ಕರ್ನಾಟಕದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಬೆಂಬಲಿಸಲು ರೂಪಿಸಲಾದ ಒಂದು ಸುಸ್ಥಿರ ಕೃಷಿ ಯ...
27/06/2026

ONICA Farming (ಓನಿಕಾ ಕೃಷಿ) ಎನ್ನುವುದು ಕರ್ನಾಟಕದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಬೆಂಬಲಿಸಲು ರೂಪಿಸಲಾದ ಒಂದು ಸುಸ್ಥಿರ ಕೃಷಿ ಯೋಜನೆಯಾಗಿದೆ.

ಇದನ್ನು ONICA ಕೃಷಿಯ ಸಂಪೂರ್ಣ ವಿವರಣೆ ಮತ್ತು ಅದರ ಮುಖ್ಯ ಪರಿಕಲ್ಪನೆಗಳನ್ನು ತಮ್ಮ ಪುಸ್ತಕಗಳ ಮೂಲಕ ಪರಿಚಯಿಸಿದ್ದಾರೆ.
ಸಾರಾಂಶ ಕೆಳಗೆ ನೀಡಲಾಗಿದೆ:

ONICA ಪೂರ್ಣ ರೂಪ (Full Form)

O - Organic (ಸಾವಯವ)
N - Natural (ನೈಸರ್ಗಿಕ)
I - Integrated (ಸಂಯೋಜಿತ/ಮಿಶ್ರ ಕೃಷಿ)
C - Co-operative (ಸಹಕಾರಿ)
A - Association Agriculture (ಸಂಘಿಕಾ ಕೃಷಿ)

ಮುಖ್ಯ ಪರಿಕಲ್ಪನೆಗಳು (Core Concepts)

ರಾಸಾಯನಿಕ ಮುಕ್ತ ಕೃಷಿ: ಕೃತಕ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಪರಿಸರ ಸ್ನೇಹಿ ಸಾವಯವ ಮತ್ತು ನೈಸರ್ಗಿಕ ಪದ್ಧತಿಗಳನ್ನು ಬಳಸಲಾಗುತ್ತದೆ.

ಸಾವಯವ ಮತ್ತು ನೈಸರ್ಗಿಕ ಕೃಷಿ: ಸಂಪೂರ್ಣವಾಗಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಮುಕ್ತಗೊಳಿಸಿ, ನೈಸರ್ಗಿಕವಾಗಿ ಸಿಗುವ ಜೀವಾಮೃತ, ಕೊಟ್ಟಿಗೆ ಗೊಬ್ಬರ ಮತ್ತು ಕಾಂಪೋಸ್ಟ್ ಬಳಕೆಗೆ ಆದ್ಯತೆ ನೀಡಲಾಗುತ್ತದೆ.

ಸಮಗ್ರ ಸಂಯೋಜಿತ ಕೃಷಿ ವ್ಯವಸ್ಥೆ (Integrated Farming): ಒಂದೇ ಭೂಮಿಯಲ್ಲಿ ಕೇವಲ ಒಂದು ಬೆಳೆ ಬೆಳೆಯುವ ಬದಲು ವೈವಿಧ್ಯಮಯ ವಾರ್ಷಿಕ ಮತ್ತು ಬಹುವಾರ್ಷಿಕ ಬೆಳೆಗಳನ್ನು (Biodiversity) ಒಟ್ಟಿಗೆ ಬೆಳೆಯಲಾಗುತ್ತದೆ. ತರಕಾರಿ, ಹಣ್ಣು, ಧಾನ್ಯಗಳ ಜೊತೆಗೆ ಪಶುಸಂಗೋಪನೆ, ಕೋಳಿ ಸಾಕಣೆ ಮತ್ತು ಜೇನು ಸಾಕಣೆಯನ್ನು ಒಳಗೊಂಡಿರುತ್ತದೆ.

ಸ್ಥಳೀಯ ಸಂಪನ್ಮೂಲಗಳ ಬಳಕೆ: ಹೊರಗಿನಿಂದ ದುಬಾರಿ ಕೃಷಿ ಪರಿಕರಗಳನ್ನು ಕೊಳ್ಳುವ ಬದಲು, ಹೊಲದಲ್ಲಿಯೇ ಸಿಗುವ ಕಸ-ಕಡ್ಡಿ ಮತ್ತು ದನದ ಮೂತ್ರದಂತಹ ನೈಸರ್ಗಿಕ ಸಂಪನ್ಮೂಲಗಳಿಂದ ಕೃಷಿ ಮಾಡುವುದನ್ನು ಇದು ಕಲಿಸುತ್ತದೆ.

ಸಹಕಾರಿ ಮತ್ತು ಸಾಮೂಹಿಕ ಮಾದರಿ (Co-operative and Association Model ): ರೈತರು ಒಂಟಿಯಾಗಿ ಕೆಲಸ ಮಾಡುವ ಬದಲಿಗೆ, ಗುಂಪುಗಳಾಗಿ ಅಥವಾ ಸಹಕಾರಿ ಸಂಘಗಳಾಗಿ ಒಟ್ಟಿಗೆ ಸೇರಿ ತರಬೇತಿ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಹಂಚಿಕೊಳ್ಳುತ್ತಾರೆ.
ಸಣ್ಣ ಮತ್ತು ಅತಿ ಸಣ್ಣ ರೈತರು ಒಟ್ಟಾಗಿ ಗುಂಪುಗಳನ್ನು ಮಾಡಿಕೊಂಡು, ಒಟ್ಟಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವುದು ಇದರ ಮುಖ್ಯ ಅಂಶವಾಗಿದೆ.

ರೈತರ ಸಮಗ್ರ ಅಭಿವೃದ್ಧಿ: ಇದು ಕೇವಲ ಬೆಳೆ ಬೆಳೆಯುವುದಕ್ಕೆ ಸೀಮಿತವಾಗಿಲ್ಲ. ಗ್ರಾಮೀಣ ಯುವಕರು, ಮಹಿಳೆಯರ ಆದಾಯ ಹೆಚ್ಚಿಸುವುದು, ರೈತರ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಈ ಯೋಜನೆ ಒತ್ತು ನೀಡುತ್ತದೆ.

ಹೆಚ್ಚಿನ ಅಧ್ಯಯನ ಅಥವಾ ಈ ಪರಿಕಲ್ಪನೆಯ ತರಬೇತಿ ಪುಸ್ತಕಗಳಿಗಾಗಿ ನೀವು Amazon ನಲ್ಲಿ ONICA Farming Part 01 ಪುಟವನ್ನು ಪರಿಶೀಲಿಸಬಹುದು.

ಮೊಳಕೆ ಭರಿಸಿರುವ ಕಾಳುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವುದೇ ಆಗಿದ್ದರೂ ಇದರಲ್ಲಿ ಯಾವ ಧಾನ್...
26/06/2026

ಮೊಳಕೆ ಭರಿಸಿರುವ ಕಾಳುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವುದೇ ಆಗಿದ್ದರೂ ಇದರಲ್ಲಿ ಯಾವ ಧಾನ್ಯಗಳನ್ನು ಮೊಳಕೆ ಭರಿಸಿದರೆ ಅದರಿಂದ ದೇಹಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೆಸರು ಕಾಳನ್ನು ಮೊಳಕೆ ಭರಿಸಿ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ.
ಇದರಲ್ಲಿ ಕ್ಯಾಲರಿ ಕಡಿಮೆ ಇದ್ದು, ನಾರಿನಾಂಶ ಮತ್ತು ವಿಟಮಿನ್ ಬಿ ಇದೆ. ಇಷ್ಟು ಮಾತ್ರವಲ್ಲದೆ ವಿಟಮಿನ್ ಸಿ ಹಾಗೂ ಕೆ ಇದೆ. ಆಹಾರ ಕ್ರಮದಲ್ಲಿ ಅಳವಡಿಸಬಹುದಾದ ಅದ್ಭುತ ಆಹಾರ ಇದಾಗಿದೆ. ಪ್ರತೀ ಕಪ್ ಮೊಳಕೆ ಭರಿಸಿರುವ ಹೆಸರು ಕಾಳಿನಲ್ಲಿ 31 ಕ್ಯಾಲರಿ ಇದೆ. ಇದು ತೂಕ ಕಳೆದುಕೊಳ್ಳಲು ಸಹಕಾರಿ. ಇದು ಅಗ್ಗ ಹಾಗೂ ಸುಲಭವಾಗಿ ಲಭ್ಯವಿರುವುದು.

1.ವಿಟಮಿನ್ ಕೆ ಯ ಆಗರ
ವಿಟಮಿನ್ ಕೆ ಯು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಮೂಳೆಯ ಖನಿಜಾಂಶವನ್ನು ನಿಯಂತ್ರಿಸುವುದು ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡುವುದು. ಮೊಳೆಕೆಯುಕ್ತ ಹೆಸರುಬೇಳೆಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಒಂದು ಕಪ್ ನಲ್ಲಿ 34 ಮಿ.ಗ್ರಾಂ.ಇದೆ. ಆರೋಗ್ಯಕರ ದೇಹಕ್ಕೆ ಬೇಕಾಗಿರುವ ದೈನಂದಿನ ಅಗತ್ಯತೆಯ ವಿಟಮಿನ್ ಕೆ ಯನ್ನು ಇದು ಒದಗಿಸುವುದು.

2.ವಿಟಮನ್ ಸಿ ಸಮೃದ್ಧವಾಗಿದೆ
ಮೊಳಕೆಯುಕ್ತ ಹೆಸರುಬೇಳೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಸೋಂಕು ಹಾಗೂ ಕಾಯಿಲೆಗ ವಿರುದ್ಧ ಹೋರಾಡುವುದು. ಒಂದು ಕಪ್ ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ 14 ಮಿ.ಗ್ರಾಂ. ವಿಟಮಿನ್ ಸಿ ಇದೆ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ ಪುರುಷರು 90 ಮಿ.ಗ್ರಾಂ.ನಷ್ಟು ವಿಟಮಿನ್ ಸಿಯನ್ನು ಸೇವಿಸಬೇಕು. ಇದೇ ವೇಳೆ ಮಹಿಳೆಯರು 75 ಮಿ.ಗ್ರಾಂ.ನಷ್ಟು ಸೇವನೆ ಮಾಡಬೇಕು. ವಿಟಮಿನ್ ಸಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಅಂಶವು ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವುದು. ಫ್ರೀ ರ್ಯಾಡಿಕಲ್ ನ್ನು ಆ್ಯಂಟಿಆಕ್ಸಿಡೆಂಟ್ ಗಳು ತಟಸ್ಥಗೊಳಿಸದೆ ಇದ್ದರೆ ಆಗ ಅದು ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡುವುದು. ಇದು ಹಾನಿ ಹಾಗೂ ಉರಿಯೂತ ಉಂಟು ಮಾಡಿ ರೋಗಗಳಿಗೆ ಕಾರಣವಾಗುವುದು. ವಿಟಮಿನ್ ಸಿಯಲ್ಲಿ ಕಾಲಜನ್ ಕೂಡ ಇದ್ದು, ಇದು ಚರ್ಮ, ಅಂಗಾಂಗವನ್ನು ಬಲಗೊಳಿಸುವುದು.

3.ಉನ್ನತ ಮಟ್ಟ ಪ್ರೋಟೀನ್
ಗ್ಲೊಬುಲಿನ್ ಮತ್ತು ಅಲ್ಬುಲಿನ್ ಪ್ರೋಟೀನ್ ನ ಪ್ರಮುಖ ಅಂಶವಾಗಿದೆ. ಮೊಳಕೆಯುಕ್ತ ಹೆಸರುಬೇಳೆಯಲ್ಲಿ ಶೇ.85ರಷ್ಟು ಅಮಿನೋ ಆಮ್ಲವನ್ನು ಇದು ಬಳಸಿಕೊಳ್ಳುವುದು. ಕೋಶಗಳನ್ನು ಬೆಳೆಸಲು ಹಾಗೂ ಸರಿಪಡಿಸಲು ಪ್ರೋಟೀನ್ ಅಗತ್ಯವಾಗಿ ಬೇಕು. ಪ್ರೋಟೀನ್ ನಿಂದ ಮೂಳೆಗಳು, ಸ್ನಾಯುಗಳ, ಚರ್ಮ ಬೆಳೆಯುವುದು.

4.ರಕ್ತಸಂಚಾರ ಸುಗಮಗೊಳಿಸುವುದು
ಮೊಳಕೆಯುಕ್ತ ಹೆಸರುಬೇಳೆ ಕಾಳುಗಳಲ್ಲಿ ಇರುವಂತಹ ಕಬ್ಬಿಣ ಹಾಗೂ ತಾಮ್ರದ ಅಂಶವು ರಕ್ತದಲ್ಲಿನ ಕೆಂಪು ರಕ್ತದ ಕಣಗಳನ್ನು ನಿರ್ವಹಣೆ ಮಾಡಿ ರಕ್ತ ಸಂಚಾರವನ್ನು ಸುಗಮಗೊಳಿಸುವುದು. ಇದರಿಂದ ದೇಹದ ವಿವಿಧ ಅಂಗಾಂಶ ಹಾಗೂ ಕೋಶಗಳಿಗೆ ಆಮ್ಲಜನಕವು ಸರಬರಾಜು ಆಗುವುದು.

5.ಜೀರ್ಣಕ್ರಿಯೆಗೆ ನೆರವಾಗುವುದು
ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ ಉನ್ನತ ಮಟ್ಟದ ಕಿಣ್ವಗಳು ಇರುವುದು. ಈ ಕಿಣ್ವಗಳು ದೇಹದಲ್ಲಿ ಚಯಾಪಚಯ ಕ್ರಿಯೆ ವೃದ್ಧಿಸಿ, ದೇಹದಲ್ಲಿ ರಾಸಾಯನಿಕ ಪ್ರತಿಕ್ರಿಯೆಯನ್ನು ವೃದ್ಧಿಸಿ, ಜೀರ್ಣಕ್ರಿಯೆಗೆ ನೆರವಾಗುವುದು. ಕಿಣ್ವಗಳು ಆಹಾರವನ್ನು ವಿಘಟಿಸುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಜೀರ್ಣಕ್ರಿಯೆಯನ್ನು ನಿಯಂತ್ರಿಸುವುದು.

6.ತೂಕ ಇಳಿಸಲು ಸಹಕಾರಿ
ಮೊಳಕೆ ಭರಿಸಿದ ಹೆಸರುಬೇಳೆ ಕಾಳುಗಳು ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ ಆಹಾರ. ಇದರಲ್ಲಿ ಪೋಷಕಾಂಶಗಳು ಉನ್ನತ ಮಟ್ಟದಲ್ಲಿದೆ. ಆದರೆ ಕ್ಯಾಲರಿ ತುಂಬಾ ಕಡಿಮೆಯಿರುವ ಕಾರಣದಿಂದಾಗಿ ತೂಕ ಇಳಿಸಿಕೊಳ್ಳುವ ಆಹಾರ ಕ್ರಮದಲ್ಲಿ ಇದನ್ನು ಚಿಂತೆಯಿಲ್ಲದೆ ಬಳಸಿಕೊಳ್ಳಬಹುದು. ಇದರಲ್ಲಿ ಇರುವಂತಹ ನಾರಿನಾಂಶವು ದೀರ್ಘಕಾಲದ ತನಕ ಹಸಿವಾಗದಂತೆ ನೋಡಿಕೊಳ್ಳುವುದು. ಹೆಚ್ಚು ತಿನ್ನಬೇಕು ಎಂದು ಮೆದುಳಿಗೆ ಹೇಳುವ ಗ್ರೆಲಿನ್ ಹಾರ್ಮೋನು ಬಿಡುಗಡೆಯನ್ನು ಇದು ತಡೆಯುವುದು.

7.ವಿಟಮಿನ್ ಗಳು ಮತ್ತು ಖನಿಜಾಂಶಗಳ ಆಗರ
ಒಂದು ಕಪ್ ಮೊಳಕೆ ಭರಿಸಿದ ಹೆಸರುಬೇಳೆ ಯಲ್ಲಿ ಶೇ.100ರಷ್ಟು ದೈನಂದಿನ ಅಗತ್ಯತೆಗೆ ಬೇಕಾಗಿರುವಂತಹ ಫಾಲಟೆ ಇದೆ. ಫಾಲಟೆಯನ್ನು ವಿಟಮಿನ್ ಬಿ9 ಎಂದು ಕರೆಯಲಾಗುತ್ತದೆ. ಇದು ಡಿಎನ್ ಎ ಸಂಶ್ಲೇಷಣೆ, ಅಂಗಾಂಶ ಮತ್ತು ಕೋಶಗಳ ಬೆಳವಣಿಗೆ, ಹಾರ್ಮೋನು ಸಮತೋಲನ, ನರಗಳ ಕಾರ್ಯ ಮತ್ತು ಸಂತಾನೋತ್ಪತ್ತಿಗೆ ಕೂಡ ಅಗತ್ಯವಿದೆ. ಗರ್ಭಧಾರಣೆ ವೇಳೆ ಫಾಲಟೆ ಸೇವನೆ ಮಾಡುವುದು ಅತೀ ಅಗತ್ಯ. ಯಾಕೆಂದರೆ ಇದರಿಂದ ಅಕಾಲಿಕ ಹೆರಿಗೆ ತಡೆಯಬಹುದು. ವಯಸ್ಕ ಮಹಿಳೆಗೆ ಬೇಕಾಗಿರುವ ಶೇ. 36ರಷ್ಟು ಮೆಗ್ನಿಶಿಯಂ ಅಂಶವನ್ನು ಮೊಳಕೆಯುಕ್ತ ಹೆಸರುಬೇಳೆಯು ಒದಗಿಸುವುದು. ಹೆಚ್ಚಿನ ವಯಸ್ಕ ಮಹಿಳೆಯರಲ್ಲಿ ಮೆಗ್ನಿಶಿಯಂನ ಕೊರತೆಯು ಕಂಡುಬರುವುದು. ಇದು ತುಂಬಾ ದುರಾದೃಷ್ಟ. ಒತ್ತಡದ ಮಟ್ಟ ಮತ್ತು ನೋವನ್ನು ಕಡಿಮೆ ಮಾಡಿಕೊಳ್ಳಲು ಮೆಗ್ನಿಶಿಯಂನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಅತೀ ಅಗತ್ಯ. ಜೀರ್ಣಕ್ರಿಯೆ ಆರೋಗ್ಯ, ಹೃದಯ ಸರಿಯಾಗಿ ಕಾರ್ಯನಿರ್ವಹಿಸಲು, ಸ್ನಾಯುಗಳ ಕೋಶ ಸರಿಪಡಿಸಲು ಮತ್ತು ನರವ್ಯವಸ್ಥೆಗೆ ಇದು ಅಗತ್ಯವಾಗಿ ಬೇಕು.

8.ರಕ್ತ ಕಣಗಳನ್ನು ಹೆಚ್ಚಿಸುವುದು
ಹೆಸರು ಕಾಳಿನಲ್ಲಿ ಫೋಲೇಟ್, ವಿಟಮಿನ್ ಬಿ9 ಸಮೃದ್ಧವಾಗಿವೆ. ಇವು ದೇಹದಲ್ಲಿ ಹೊಸ ರಕ್ತಕಣಗಳ ಸೃಷ್ಟಿಗೆ ಸಹಾಯ ಮಾಡುತ್ತವೆ. ಅದರಲ್ಲೂ ಕೆಂಪು ರಕ್ತ ಕಣಗಳನ್ನು ಹೆಚ್ಚುವಂತೆ ಮಾಡುವುದು. ಹಾಗಾಗಿ ಗರ್ಭಿಣಿಯರಿಗೆ ಅತ್ಯುತ್ತಮವಾದದ್ದು. ಯಾರು ಗರ್ಭಾವಸ್ಥೆಯನ್ನು ಹೊಂದಲು ಯೋಜನೆ ಮಾಡುವರೋ ಅಂತಹವರು ಸಹ ತಮ್ಮ ಆಹಾರದಲ್ಲಿ ಹೆಸರು ಕಳನ್ನು ಸೇರಿಸಿಕೊಳ್ಳಬಹುದು. ಆರೋಗ್ಯಕರ ರಕ್ತಕಣಗಳಿಂದಾಗಿ ಮಗುವಿನ ಬೆಳವಣಿಗೆಯು ಉತ್ತಮವಾಗುವುದು. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು. ಗರ್ಭಾವಸ್ಥೆಯಲ್ಲಿ ಇರುವವರು ಹೆಸರು ಕಾಳಿನ ದೋಸೆಯನ್ನು ಸೇವಿಸಬಹುದು.

9.ಹೃದಯದ ಆರೋಗ್ಯಕ್ಕೆ ಉತ್ತಮ
ಹೆಸರು ಕಾಳಿನಲ್ಲಿ ಫ್ಲೋವೊನೈಡ್ ಆಂಟಿ ಆಕ್ಸಿಡೆಂಟ್ ಅಧಿಕವಾಗಿದೆ. ಇದು ಸ್ವತಂತ್ರ ರಾಡಿಕಲ್ಸನಿಂದ ಉಂಟಾದ ಹಾನಿಯನ್ನು ಸುಲಭವಾಗಿ ತಡೆಯುವುದು. ಜೊತೆಗೆ ಸ್ವತಂತ್ರ ರಾಡಿಕಲ್ಸಗಳನ್ನು ನಿಯಂತ್ರಣದಲ್ಲಿ ಇಡುವುದು. ರಕ್ತವು ಆರೋಗ್ಯಕರ ಸ್ಥಿರತೆಯನ್ನು ಕಾಯ್ದುಕೊಂಡು, ದೇಹದಲ್ಲಿ ಉತ್ತಮ ಸಂಚಾರವನ್ನು ಒಳಗೊಳ್ಳುವಂತೆ ಮಾಡುವುದು. ಇದರಲ್ಲಿ ಇರುವ ವಿಟಮಿನ್ ಬಿ ಗುಣವು ಸಾಮಾನ್ಯ ಹೃದಯ ಬಡಿತದಿಂದ ಕೂಡಿರುವಂತೆ ಮಾಡುವುದು. ಇದರಲ್ಲಿ ಇರುವ ಮ್ಯಾಗ್ನಿಸಿಯಮ್ ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಅಡೆತಡೆಯನ್ನು ನಿವಾರಿಸುವುದು. ಅನಾರೋಗ್ಯಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್‍ಗಳನ್ನು ತಡೆಯಲು ಸಹಾಯ ಮಾಡುವುದು
ಅಧಿಕ ಪ್ರೋಟೀನ್‍ಗಳನ್ನು ಒಳಗೊಂಡಿದೆ

10.ಒಂದು ಕಪ್ ಹೆಸರುಕಾಳಿನಲ್ಲಿ ಶೇ 28ರಷ್ಟು ಪ್ರೋಟಿನ್‍ಗಳಿರುತ್ತವೆ. ದೇಹದಲ್ಲಿ ಪ್ರೋಟೀನ್‍ಗಳ ಕೊರತೆ ಉಂಟಾದಾಗ ಸಾಕಷ್ಟು ಅನಾರೋಗ್ಯಗಳು ಕಾಣಿಸಿಕೊಳ್ಳುತವೆ. ನಿತ್ಯದ ಆಹಾರದಲ್ಲಿ ಹೆಸರು ಕಾಳನ್ನು ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತಕಣಗಳ ಉತ್ಪತ್ತಿ ಮತ್ತು ಮೂಳೆಗಳು ಬಲಗೊಳ್ಳುವುದು. ಜೊತೆಗೆ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅದಕ್ಕಾಗಿ ನೀವು ಮೊಳಕೆ ಬರಿಸಿದ ಹೆಸರುಕಾಳನ್ನು ಸಲಡ್‍ಗಳ ರೀತಿಯಲ್ಲಿ ಸೇವಿಸುವುದು, ಅಥವಾ ಮೊಳಕೆ ಬರಿಸಿದ ಕಾಳುಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು.
ಅನಗತ್ಯ ತೂಕ ಇಳಿಸಲು ಉತ್ತಮ

11.ಹೆಸರು ಕಾಳಿನಲ್ಲಿ ಕಡಿಮೆ ಪ್ರಮಾಣದ ಕೊಬ್ಬು ಮತ್ತು ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಹಾಗೂ ನಾರಿನಂಶಗಳನ್ನು ಒಳಗೊಂಡಿರುತ್ತವೆ. ನಿತ್ಯದ ಆಹಾರದಲ್ಲಿ ಅಥವಾ ಯೋಜನಾ ಬದ್ಧ ಆಹಾರ ಕ್ರಮದಲ್ಲಿ ಹೆಸರು ಕಾಳನ್ನು ಸೇರಿಸಿಕೊಂಡರೆ ದೇಹದಲ್ಲಿ ಇರುವ ಅನಗತ್ಯ ಕೊಬ್ಬಿನಂಶವು ಕರಗುವುದು. ಇದು ತೂಕ ಇಳಿಸಲು ಅತ್ಯಂತ ಸಹಾಯಕಾರಿ ಎಂದು ವೈದ್ಯರು ಅಭಿಪ್ರಾಯಿಸುತ್ತಾರೆ. ಅಧಿಕ ಸಮಯಗಳ ಕಾಲ ಹಸಿವನ್ನು ತಡೆ ಹಿಡಿಯುವ ಶಕ್ತಿಯನ್ನು ಪಡೆದುಕೊಂಡಿದೆ. ಮೊಳಕೆ ಭರಿಸಿದ ಹೆಸರುಕಾಳು ಹಾಗೂ ಈರುಳ್ಳಿಯ ಮಿಶ್ರಣದಲ್ಲಿ ತಯಾರಿಸಲಾಗುವ ಟಿಕ್ಕಿಯನ್ನು ಸೇವಿಸಬಹುದು. ಕೆಲವು ಅಧ್ಯಯನಗಳ ಪ್ರಕಾರ ಇದು ರಕ್ತದಲ್ಲಿ ಇರುವ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿ ಇರುವಂತೆ ಮಾಡುವುದು. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ನಿಯಂತ್ರಣದಲ್ಲಿ ಇಡುವುದು

12.​ಕಡಿಮೆ ರಕ್ತದೊತ್ತಡ
ಬೇಳೆ ಕಾಳುಗಳು ಸಾಮಾನ್ಯವಾಗಿ ಆಂಟಿ ಆಕ್ಸಿಡೆಂಟ್‍ಗಳನ್ನು ಸಮೃದ್ಧವಾಗಿ ಪಡೆದುಕೊಂಡಿರುತ್ತವೆ. ಅವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹೆಸರು ಕಾಳು ಎಲ್ ಡಿಎಲ್ ಆಕ್ಸಿಡೀಕರಣವನ್ನು ನಿಯಂತ್ರಣದಲ್ಲಿ ಇಡುವುದು. ಜೊತೆಗೆ ರಕ್ತದ ಉತ್ತಮ ಹರಿವಿಗೆ ಪ್ರಚೋದನೆ ನೀಡುವುದು. ಇದಲ್ಲಿ ಇರುವ ಸಮೃದ್ಧವಾದ ಪೊಟ್ಯಾಸಿಯಮ್ ರಕ್ತದಲ್ಲಿ ಇರುವ ಅನಗತ್ಯ ಸೋಡಿಯಮ್ ಅನ್ನು ನಿವಾರಿಸುವುದು. ಜೊತೆಗೆ ಕಡಿಮೆ ಪ್ರಮಾಣದ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದಂತಹ ಯಾವ ಸಮಸ್ಯೆ ಇದ್ದರೂ ಅದನ್ನು ನಿಯಂತ್ರಿಸುವುದು. ನಿತ್ಯದ ಆಹಾರದಲ್ಲಿ ಹೆಸರುಕಾಳನ್ನು ಇತರ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳುವುದು ಅಥವಾ ಮೊಳಕೆ ಬರಿಸಿ, ಸಲಾಡ್ ರೀತಿಯಲ್ಲಿ ಸೇವಿಸಬಹುದು.

13.​ಹಾರ್ಮೋನ್‍ಗಳ ಸಮಸ್ಯೆಗೆ ಪರಿಹಾರ
ಹೆಸರು ಕಾಳು ಜಿಂಕ್ ಅಂಶವನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವುದು. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಮೆಟಾಬೊಲಿಸಮ್ ಶಕ್ತಿಯನ್ನು ಹೆಚ್ಚಿಸುವುದು. ಅಲ್ಲದೆ ಮಹಿಳೆಯರಿಗೆ ಮತ್ತು ಪುರುಷರಿಗೆ ಲೈಂಗಿಕ ಕ್ರಿಯೆಗೆ ಅನುವು ಮಾಡುವ ಹಾರ್ಮೋನ್‍ಗಳ ಸಮಸ್ಯೆಗಳನ್ನು ನಿವಾರಿಸುವುದು.ಮೋದಿ ಬ್ರಿಗೇಡ್ಸ್ ವಾಟ್ಸ್ ಅಪ್ ಗ್ರೋಪ್ ಮಂಗಳೂರ್ ಮಹಿಳೆಯರಲ್ಲಿ ಆರೋಗ್ಯಕರ ಅಂಡಾಶಯದ ಮೊಟ್ಟೆ ಬಿಡುಗಡೆ ಮಾಡಲು ಸಹಾಯ ಮಾಡುವುದು. ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಗುಜರಾತಿ ಆಹಾರವಾದ ಹೆಸರುಕಾಳಿನ ಸುಖ ಮೂಂಗ್ ಆಹಾರ ಅಥವಾ ಚಪಾತಿಯೊಂದಿಗೆ ಹೆಸರುಕಾಳಿನ ಪಲ್ಯ, ಬಾಜಿಗಳನ್ನು ಸೇವಿಸಬಹುದು.

14.ಉತ್ತಮ ದೃಷ್ಟಿಗೆ ಸಹಾಯ
ಬೇಳೆ ಕಾಳುಗಳಲ್ಲಿ ಇರುಳುಗಣ್ಣು ಸಮಸ್ಯೆಯನ್ನು ನಿವಾರಿಸುವ ಶಕ್ತಿಯಿರುತ್ತದೆ. ಹೆಸರು ಕಾಳಿನಲ್ಲಿ ಇರುವ ಜಿಂಕ್ ಅಂಶವು ವಿಟಮಿನ್ ಎ ಉತ್ಪಾದನೆಗೆ ಸಹಾಯ ಮಾಡುವುದು. ದೇಹದಲ್ಲಿ ಅಗತ್ಯವಾದ ವಿಟಮಿನ್ ಎ ಪ್ರಮಾಣವು ಸಮತೋಲನದಲ್ಲಿ ಇದ್ದಾಗ ರಾತ್ರಿ ಕುರುಡು ನಿವಾರಣೆಯಾಗುವುದು. ಹೆಸರು ಕಾಳನ್ನು ಪಾಲಕ್ ಸೊಪ್ಪುಗಳೊಂದಿಗೆ ಬೆರೆಸಿ ಆಹಾರವನ್ನು ತಯಾರಿಸಿದರೆ ಅದರ ಶಕ್ತಿಯು ದ್ವಿಗುಣವಾಗುವುದು. ಇಲ್ಲವೇ ಮೊಳಕೆ ಬರಿಸಿದ ಹೆಸರುಕಾಳನ್ನು ಸೇವಿಸಬಹುದು.

ಸಸ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಟಗಳ ಲಕ್ಷಣಗಳು
23/06/2026

ಸಸ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಟಗಳ ಲಕ್ಷಣಗಳು

ನಮ್ಮ ಹೊಲ ನಮ್ಮ ಗ್ರಾಮ ನಮ್ಮ ಹೆಮ್ಮೆಶಾಲೆಯಲ್ಲಿ ಶಿಕ್ಷಕರು ಪಠ್ಯಪುಸ್ತಕಗಳನ್ನು ಮೇಜಿನ ಮೇಲೆ ಇರಿಸಿದರೆ ಮತ್ತು ಎಲ್ಲವನ್ನೂ ತಾವಾಗಿಯೇ ಕಲಿಯಲು ಮ...
20/06/2026

ನಮ್ಮ ಹೊಲ ನಮ್ಮ ಗ್ರಾಮ ನಮ್ಮ ಹೆಮ್ಮೆ

ಶಾಲೆಯಲ್ಲಿ ಶಿಕ್ಷಕರು ಪಠ್ಯಪುಸ್ತಕಗಳನ್ನು ಮೇಜಿನ ಮೇಲೆ ಇರಿಸಿದರೆ ಮತ್ತು ಎಲ್ಲವನ್ನೂ ತಾವಾಗಿಯೇ ಕಲಿಯಲು ಮಗುವನ್ನು ಕೇಳಿದರೆ ಊಹಿಸಿ!

ಶಿಕ್ಷಕನ ಸಹಾಯವಿಲ್ಲದೆ ಮಗು ಸ್ವತಃ ಪುಸ್ತಕವನ್ನು ಓದುತ್ತದೆ, ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಮುಂದೆ ಹೇಗೆ ಹೋಗಬೇಕೆಂದು ತಿಳಿಯುತ್ತದೆ ಎಂದು ನೀವು ಭಾವಿಸುತ್ತೀರಾ?

ಇದನ್ನು ಮಾಡಬಲ್ಲ ಅತ್ಯಂತ ಕಡಿಮೆ ಸಂಖ್ಯೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿರಬಹುದು, ಆದರೆ ಅವರಲ್ಲಿ ಹೆಚ್ಚಿನವರು ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಕಲ್ಪನೆಯನ್ನು ಹೊಂದಿರುವುದಿಲ್ಲ ಎಂದು ನನಗೆ ಖಾತ್ರಿಯಿದೆ!

ಶಾಲೆಯಲ್ಲಿ, ನಮ್ಮ ಶಿಕ್ಷಕರು ನಮಗೆ ವಿವರಣೆ, ಕಥೆ ಹೇಳುವಿಕೆ, ಚಿತ್ರಗಳು, ವಿವರಣೆಗಳೊಂದಿಗೆ ಕಲಿಸಬೇಕು, ಇದರಿಂದ ನಾವು ಪಾಠಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬಹುದು.

ಹೆಚ್ಚಿನ ಸಂದರ್ಭಗಳಲ್ಲಿ, ಉನ್ನತ ಶ್ರೇಣಿಯನ್ನು ಪಡೆಯಲು ಮತ್ತು ಅತ್ಯುತ್ತಮ ಅಂಕಗಳೊಂದಿಗೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಹೆಚ್ಚುವರಿ ಕೋಚಿಂಗ್ ತರಗತಿಗಳು ಮತ್ತು ಟ್ಯೂಷನ್‌ಗಳಿಗೆ ಹಾಜರಾಗುತ್ತೇವೆ.

ಅಂತೆಯೇ, ತರಬೇತುದಾರರು ಮತ್ತು ಮಾರ್ಗದರ್ಶಕರು ಶಿಕ್ಷಕರು ಮತ್ತು ಬೋಧಕರು, ಯಾವುದೇ ಅಪಾಯವಿಲ್ಲದೆ ನೀವು ಬಯಸಿದ ಗುರಿಯನ್ನು ಸುಲಭವಾಗಿ ಸಾಧಿಸಲು ನೀವೇ ಆಯ್ಕೆ ಮಾಡಿಕೊಳ್ಳುತ್ತೀರಿ. ನಿಮ್ಮನ್ನು ಕರೆದೊಯ್ಯಲು ಮತ್ತು ಹಂತ ಹಂತವಾಗಿ ಹೇಗೆ ಮಾಡಬೇಕೆಂದು ನಿಖರವಾದ ಮಾರ್ಗವನ್ನು ತೋರಿಸಲು ನೀವು ಯಾರನ್ನಾದರೂ ತರಬೇತುದಾರರು ಮತ್ತು ಮಾರ್ಗದರ್ಶಕರು ಹೊಂದಿರುವಾಗ ಅದು ಉತ್ತಮ ಭಾವನೆ ಮತ್ತು ದೊಡ್ಡ ವ್ಯತ್ಯಾಸವನ್ನು ನೀಡುತ್ತದೆ.

ನಾನು ಕಲಿಯಲು ಪ್ರಾರಂಭಿಸಿದಾಗ ನನಗೆ ನೆನಪಿದೆ, ಕೋರ್ಸ್‌ಗಳನ್ನು ಹೇಗೆ ಹೊಂದಿಸುವುದು, ನನ್ನ ಕೋರ್ಸ್‌ಗಳನ್ನು ಖರೀದಿಸಲು ಮತ್ತು ನನ್ನ ಆನ್‌ಲೈನ್ ತರಬೇತಿ ತರಗತಿಗಳಿಗೆ ಹಾಜರಾಗಲು ಜನರಿಗೆ ಮನವರಿಕೆ ಮಾಡುವುದು ಹೇಗೆ ಎಂಬುದರ ಕುರಿತು ನಾನು ಹೆಚ್ಚು ಯಶಸ್ವಿಯಾಗಲಿಲ್ಲ. ನನಗೆ ಕಲಿಸಲು ಮತ್ತು ನಾನು ಏನು ಮಾಡುತ್ತಿದ್ದೇನೆ ಎಂದು ನೋಡುವ ಮತ್ತು ನಾನು ಏನು ತಪ್ಪು ಮಾಡುತ್ತಿದ್ದೇನೆ ಎಂಬುದನ್ನು ನಿಖರವಾಗಿ ಪಿನ್ ಮಾಡುವ ಸರಿಯಾದ ದಿಕ್ಕಿನಲ್ಲಿ ನನಗೆ ಮಾರ್ಗದರ್ಶನ ನೀಡುವ ಉತ್ತಮ ಮಾರ್ಗದರ್ಶಕನನ್ನು ನಾನು ಕಂಡುಕೊಳ್ಳುವವರೆಗೂ ನಾನು ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದೇನೆ ಎಂದು ನಾನು ಯೋಚಿಸುತ್ತಿದ್ದೆ. ನೀವು ಇದನ್ನು ಅರ್ಥಮಾಡಿಕೊಂಡರೆ, ಇದು ಖಂಡಿತವಾಗಿಯೂ ವ್ಯತ್ಯಾಸವನ್ನುಂಟು ಮಾಡುತ್ತದೆ.

ಅದು ಮಾರ್ಗದರ್ಶನದ ಶಕ್ತಿಯಾಗಿದೆ, ಅಲ್ಲಿ ಯಾರಾದರೂ ಅವರು ಅದನ್ನು ಹೇಗೆ ಮಾಡಿದ್ದಾರೆ ಮತ್ತು ನೀವು ಅದನ್ನು ಹೇಗೆ ಪರಿಪೂರ್ಣವಾಗಿ ಮಾಡಬಹುದು ಎಂಬುದನ್ನು ತೋರಿಸುತ್ತಾರೆ. ನೀವು ಟ್ರ್ಯಾಕ್‌ನಿಂದ ಹೊರಗುಳಿಯದಂತೆ ಅವರು ಖಚಿತಪಡಿಸಿಕೊಳ್ಳುತ್ತಾರೆ.

ನೀವು ಕೋರ್ಸ್ ಅನ್ನು ಪ್ರಾರಂಭಿಸಿದ್ದೀರಿ ಮತ್ತು ಗೊಂದಲಕ್ಕೊಳಗಾಗಿದ್ದೀರಿ ಎಂದು ಕಲ್ಪಿಸಿಕೊಳ್ಳಿ, ಹತಾಶೆ ಮತ್ತು ಗೊಂದಲಕ್ಕೊಳಗಾಗುವ ಬದಲು, ಸಂದೇಶವನ್ನು ಕಳುಹಿಸಲು ಮತ್ತು ತಕ್ಷಣವೇ ಬೆಂಬಲ ಪ್ರತಿಕ್ರಿಯೆಯನ್ನು ಪಡೆಯಲು ನೀವು ಯಾರನ್ನಾದರೂ ಹೊಂದಿದ್ದೀರಿ. ಅದು ಉತ್ತಮ ವ್ಯತ್ಯಾಸವನ್ನು ಮತ್ತು ವಿಭಿನ್ನ ಭಾವನೆಯನ್ನು ಉಂಟುಮಾಡುತ್ತದೆಯೇ?

ಆದ್ದರಿಂದ ನಿಮ್ಮಲ್ಲಿ ಹೂಡಿಕೆ ಮಾಡಿ.
ಮಾರ್ಗದರ್ಶಕರನ್ನು ಹುಡುಕಿ, ಯಾರು ನಿಮಗೆ ದಾರಿ ತೋರಿಸಬಹುದು!
ತದನಂತರ ನೀವು ಕ್ರಮ ಕೈಗೊಂಡಾಗ,
ನೀವು ಅದನ್ನು ಸಾಧಿಸುವಿರಿ ಎಂದು ನಿಮಗೆ ತಿಳಿದಿದೆ.
ಆದಾಗ್ಯೂ, ಈ ಮಾರ್ಗದರ್ಶನ ಎಲ್ಲರಿಗೂ ಅಲ್ಲ.
ಇದಕ್ಕೆ ನಿಮ್ಮ ಸಮಯ, ಬದ್ಧತೆ ಮತ್ತು ಕಠಿಣ ಪರಿಶ್ರಮದ ಹೂಡಿಕೆಯ ಅಗತ್ಯವಿರುತ್ತದೆ.
ಜೀವನದಲ್ಲಿ ಶಾರ್ಟ್‌ಕಟ್‌ಗಳಿಲ್ಲ.
ಒಮ್ಮೆ ನೀವು ಸಾಕಷ್ಟು ಕೌಶಲ್ಯಗಳನ್ನು ಹೊಂದಿದ್ದರೆ, ನಂತರ ನೀವು ಜೀವಮಾನದ ಸ್ವಾತಂತ್ರ್ಯವನ್ನು ಹೊಂದಿರುತ್ತೀರಿ.

ಆದ್ದರಿಂದ ನಿಮ್ಮ ಜೀವನದ ಜವಾಬ್ದಾರಿಯನ್ನು ತೆಗೆದುಕೊಳ್ಳಿ, ಏಕೆಂದರೆ ನೀವು ಮಾಡದಿದ್ದರೆ, ಬೇರೆಯವರು ತೆಗೆದುಕೊಳ್ಳುತ್ತಾರೆ.
ಆ ಶಕ್ತಿಯನ್ನು ಅನುಭವಿಸಲು ಕೇವಲ ಹತ್ತು ರೂಪಾಯಿಗಳನ್ನು ಹೂಡಿಕೆ ಮಾಡಿ.
Upi ID-BHUSRESTA@KOTAK.
WhatsApp after payment to 099454 45138

ಈ ವೇದಿಕೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ತೊಡಗಿಸಿಕೊಳ್ಳಲು, ಕೃಷಿಕೈಪಿಡಿ ಡಿಜಿಟಲ್‌ಗೆ ಚಂದಾದಾರರಾಗಿ.

ನಿಮ್ಮ ಉನ್ನತ ಮತ್ತು ಶ್ರೇಷ್ಠ ಅಭಿಮಾನಿ

Krishikaipidi i ONICA India Organic Karnataka Farmers Association

Hey YA, WARM WELCOME!

Imagine in School, if teachers would just place the textbooks on the desk and expect the child to learn everything on their own!
DO you think child will read the book themselves without the help of the teacher, understand the contents and capable of knowing how to go further?
May be very small number of brilliant pupil who can do that, but I’m sure majority of them will not a clue how to handle those situation!
In school, our teacher has to TEACH us with explanation, storytelling, pictures, illustrations so that we could the understand the lessons exactly it meant to be and pass the exams in flying color.

In most cases, even we attend extra coaching classes and tuitions to make sure to secure higher ranking and passing the exams with best score.
Similarly, Trainers and Mentors are the TEACHERS AND TUITORS, you chose yourself to attain your desired goal easily without any risk. It makes a sense of good feel and huge difference when you have someone to take you and show you the exact way how to do it step by step.

I remember when I started learning, I was not getting much success about how to set up the platform, convince the people to buy my courses and attend my online training classes. I was thinking that I was doing everything right until I found a good mentor to teach me and guide me in the right direction who looked at what I was doing and exactly pin pointed what I was doing wrong. It definitely makes a difference. That’s the POWER OF MENTORSHIP where someone will show you the way how they have done it and how you can do it as well. They make sure that you donot fall out of track.
Imagine you started and struck up somewhere in between, instead of getting frustrated and confused, you have someone to message and get a supportive response immediately. Wouldnot that make a great difference and different feeling!
So invest in yourself.
FIND A MENTOR, who can show you the way!
And then when you take action,
You know you are going to achieve that.
However this mentorship is not for everyone.
It requires your investment of time, commitment and hardwork.
There is no shortcuts in life.
Once you have the enough skills, you have independence.
So take charge of your life, because if you don’t, somebody else will take over.
Invest just Rs 10 to feel that POWER.

UPI ID-BHUSRESTA@KOTAK.
Whatsapp after payment - 099454 45138

To know about this platform and get involved, Subscribe to Krishikaipidi DIGITAL.

Your’s Greatest and No.1 Fan,

Krishikaipidi



#ಕೃಷಿಕೈಪಿಡಿ

ಬೆಂಗಳೂರಿನಂತಹ ನಗರದಲ್ಲಿ ಬೆಳಗ್ಗೆ ರಾತ್ರಿ ಮಧ್ಯರಾತ್ರಿ ಅನ್ನದೇ ದುಡ್ಡು ಬಿತ್ತಿ ದುಡ್ಡು ಬೆಳೆವ ದುಡ್ಡಿಗಾಗಿ ಬದುಕುವ ನಗರ ಜನರ ನಡುವೆ ಇವರ ರಾ...
20/06/2026

ಬೆಂಗಳೂರಿನಂತಹ ನಗರದಲ್ಲಿ ಬೆಳಗ್ಗೆ ರಾತ್ರಿ ಮಧ್ಯರಾತ್ರಿ ಅನ್ನದೇ ದುಡ್ಡು ಬಿತ್ತಿ ದುಡ್ಡು ಬೆಳೆವ ದುಡ್ಡಿಗಾಗಿ ಬದುಕುವ ನಗರ ಜನರ ನಡುವೆ ಇವರ ರಾಗಿ ಪ್ರೀತಿ ದೊಡ್ಡದು.

ಹಳ್ಳಿಗಳಲ್ಲಿ ನೇಪಿಯೆರ್ ಆಡಿಕೆಯ ತರ ಆರ್ಥಿಕ ಬೆಳೆ ಬೆಳೆದು ಆಹಾರ ಬೆಳೆಗಳನ್ನು ಮಾರ್ಕೆಟ್ ಇಂದ ಖರೀದಿಸಿ ತಿನ್ನುವ ಜನರಿಗೆ ಇವರು ಮಾದರಿ.

ಇದನ್ನೇ ನಾವು ಸ್ವಾ ಕುಟುಂಬದ ಆಹಾರ ಭದ್ರತೆ ಎನ್ನುವುದು.

ಇವರ ಹೊಲ ಇರುವುದು ಚಿಕ್ಕಬಾಣಾವರ ರೈಲ್ವೆ ನಿಲ್ದಾಣದ ಎದುರಿಗೆ..

ಇವರ ರಾಗಿ ಪ್ರೀತಿಗೆ ನಮ್ಮದೊಂದು ಬಿಗ್ ಸಲ್ಯೂಟ್..

ಜೀವಾಮೃತವನ್ನು,  ಒಟ್ಟು 3500 ಲೀಟರ್ ತಯಾರಿಸಿ,  ತೋಟಕ್ಕೆ ನೀರು ಹರಿಸುವ ವಿಧಾನವನ್ನು ನಮ್ಮ ತೋಟದಲ್ಲಿ ಅಳವಡಿಸಲಾಗಿದೆ. ಇದಕ್ಕಾಗಿ 1000ಲೀಟರ್ ...
20/06/2026

ಜೀವಾಮೃತವನ್ನು, ಒಟ್ಟು 3500 ಲೀಟರ್ ತಯಾರಿಸಿ, ತೋಟಕ್ಕೆ ನೀರು ಹರಿಸುವ ವಿಧಾನವನ್ನು ನಮ್ಮ ತೋಟದಲ್ಲಿ ಅಳವಡಿಸಲಾಗಿದೆ.

ಇದಕ್ಕಾಗಿ 1000ಲೀಟರ್ 3 ಟ್ಯಾಂಕ್ ಮತ್ತು 500 ಲೀಟರ್ ಒಂದು ಹೇಳೇ ಟ್ಯಾಂಕ್ ನ್ನೂ ಬಳಿಸಿಕೊಳ್ಳಲಾಗಿದೆ.

ಒಂದು 0.5HP ಪಂಪನ್ನು ಜೀವಾಮೃತವನ್ನು ಗಿಡಗಳಿಗೆ ನೀರು ಹೋಗುವ ಸಂದರ್ಭದಲ್ಲಿ ಮುಖ್ಯ ಪೈಪೆಗೆ ಜೋಡಿಸಲಾಗಿದೆ. ಏನೂ ತೊಂದರೆ ಇಲ್ಲದೆ ಮುಖ್ಯ ಪೈಪೆಗೆ ಜೀವಾಮೃತವನ್ನು ಸೇರಿಸಲಾಗುತ್ತದೆ.

1000ಲೀಟರ್ 35 ನಿಮಿಷದಲ್ಲಿ ನೀರಿನ ಜೊತೆ ಸೇರಿಸಲಾಗಿದೆ. ಈ ರೀತಿ ಮಾಡುತ್ತ ಹೋದಲ್ಲಿ ನಮ್ಮ ತೋಟಕ್ಕೆ 3 ವಾರಕ್ಕೆ ಒಮ್ಮೆ ಜೀವಾಮೃತವನ್ನು ಕೊಡಲು ಸಾಧ್ಯವಾಗುತ್ತಿದೆ. ಮತ್ತು ಇನ್ನೊಂದು ವಾರ ಅಥವಾ 2 ವಾರ ಇತರ ಬೆಲೆಗಳಿಗೆ ನೀರಿನ ಜೊತೆ ಹರಿಸಲು ಸಾಧ್ಯವಾಗುತ್ತದೆ.
ಅದರಂತೆ ಪ್ರತಿ ಭಾನುವಾರ ಇದನ್ನು ಮಾಡಬಹುದು. ಬೀಸಲು ಬೀಳದಂತೆ ಒಂದು ಎರಡು ಶೀಟ್ ಹಾಕಿಸಲಾಗಿದೆ. ಅಲ್ಲದೆ ಗಿಡದ ನೆರಳು ಇದಕ್ಕೆ ಇರಲು ಗಿಡದ ಕೆಳಗೆ ಮಾಡಲಾಗಿದೆ. ನೀರಿನ ಜೊತೆ ಜೀವಾಮೃತವನ್ನು ಜೋಡಿಸಿ ಕೊಟ್ಟು ಪ್ರತಿ ಗಿಡದ ಹತ್ತಿರ ವಾಸಿನೆ ನೋಡಲಾಗಿ ಎಲ್ಲಾ ಕಡೆ ಹೋಗಿದೆ. ಸಣ್ಣತೋಟ ಆದರೆ ಡ್ರಂ ನಲ್ಲಿ ತಯಾರಿಸಿ ಕೈಲಿಂದಲೇ ಕೊಡಬಹುದು ದೊಡ್ಡ ತೋಟ ಆದರೆ ಕಷ್ಟ ಅದಕ್ಕೆ ಈ ರೀತಿ ತಯಾರಿಸಲಾಗಿದೆ.

ಸ್ವಲ್ಪ ಬಿನ್ನಾಬಿಪ್ರಾಯವಿದ್ದರೂ ಕೆಲಸ ಸುಲಭ ಮಾಡಿಕೊಳ್ಳಲು ಮತ್ತೆ ಇದೇ ಟ್ಯಾಂಕ್ ಗೆ ನೀರು ತುಂಬಲು ಸುಲಭ ಮಾಡಿ ಕೊಳ್ಳಲಾಗಿದೆ.

ಒಂದು 6 ತಿಂಗಳು ಈ ರೀತಿ ಕೊಡುತ್ತಾ ಹೋದಲ್ಲಿ ಬದಲಾವಣೆ ನೋಡಬಹುದು ಎಂದು ನನ್ನ ನಂಬಿಕೆ.

ತಮ್ಮ ಅಭಿಪ್ರಾಯ ಇದ್ದರೆ ದಯಮಾಡಿ ತಿಳಿಸಿರಿ.
ಸಿ ರಘುನಾಥ್-94481 42122.

Address

Shankar Nagara
Bangalore
560096

Alerts

Be the first to know and let us send you an email when Karnataka Organic Growers Association posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Organic Growers Association:

Shortcuts

Share